Udayavni Special

ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ?

Team Udayavani, Aug 11, 2020, 3:54 PM IST

ಏನೆಂದು ಹೆಸರಿಡಲಿ, ಈ ಚೆಂದ ಅನುಭವಕೆ?

ಕನಸಲ್ಲಿ ಕಂಡ ಕನಸಿನ ಹುಡುಗನೇ, ನಿನ್ನಾಗಮನದ ಆ ಕನಸುಗಳು ಬರೀ ಕನಸಾಗಿ ಉಳಿಯುವುದು ನನಗಿಷ್ಟವಿಲ್ಲ. ಹೃದಯವೆಂಬ ಖಾಲಿ ಡಬ್ಬದಲ್ಲಿ ನಿನ್ನ ಮೇಲಿರುವ ಅಷ್ಟೂ ಪ್ರೀತಿಯ ತುಂಬಿರುವೆ. ಈಗ ಆ ಪ್ರೀತಿಯ ಪ್ರಮಾಣ ವಿಪರೀತ ಹೆಚ್ಚಿ, ಅದು ಡಬ್ಬಿಯಿಂದ ಆಚೆಗೂ ಚೆಲ್ಲತೊಡಗಿದೆ.

ಅದು ವ್ಯರ್ಥವಾಗದಂತೆ, ಚೆಲ್ಲಿ ಹೋಗದಂತೆ, ನಮ್ಮ ಪ್ರೇಮದ ರೀತಿ ಮತ್ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳಬೇಕಾದವನು, ಆಗಾಗ ನನ್ನನ್ನು ಸಮಾಧಾನಿಸುತ್ತಾ, ಪ್ರೀತಿಯ ಮಾತುಗಳಿಂದ ಧೈರ್ಯ ಹೇಳುತ್ತಾ ಕೈ ಹಿಡಿದು ನಡೆಸಬೇಕಿರುವವನು ನೀನು. ಇದೆಲ್ಲಾ ನಿನಗೆ ಗೊತ್ತಿಲ್ಲವಾ? ಇಂಥ ಸಂಗತಿಗಳು ನಿನಗೆ ಬೇಗ ಅರ್ಥವಾಗುವುದಿಲ್ಲವಾ? ಅಥವಾ, ಎಲ್ಲಾ ಅರ್ಥವಾದರೂ ಏನೂ ಮಾತಾಡದೆ ಇದ್ದುಬಿಡುವುದೇ ನಿನಗೆ ಇಷ್ಟವಾ? ತಂಪು ಗಾಳಿಗೆ ಇಂಪಾಗಿ ನರ್ತಿಸುವ ನನ್ನ ಮುಂಗುರುಳ ನರ್ತನಕೆ ಮನಸೋತು ನೀನು ಮಂದಹಾಸ ಬೀರಿ, ನನ್ನ ಮೊಗವ ನಿನ್ನ ಬೊಗಸೆಯಲ್ಲಿ ಹಿಡಿಯುತ್ತೀಯಲ್ಲ; ಆ ಕ್ಷಣದಲ್ಲಿ ನನಗೆ ಆಗುವ ಖುಷಿಯನ್ನು ಏನೆಂದು ಬಣ್ಣಿಸಲಿ? ನಾನು ಮಾತು ಹೊರಡದೆ, ಹೇಳಲಾರೆನು ತಾಳಲಾರೆನು ಎಂದು ನಿಂತುಕೊಂಡರೆ- ಅದೇ ಸಮಯಕ್ಕೆ ನೀನೂ ಸೈಲೆಂಟಾಗಿ ನಿಲ್ಲುವುದಾ? ಕಳ್ಳ ನೀನು, ನಿನ್ನಂದ, ಮಾತು, ಕೃತಿಗಳಿಂದ ನನ್ನ ಮನ ಕದ್ದೆ. ಕೊಲೆಗಾರ ನೀನು- ನಾ ಅಳುವಾಗ ನಿನ್ನ ಚಾಣಾಕ್ಷತನದಿಂದ ನನ್ನಲ್ಲಿನ ದುಃಖವನ್ನು ಕೊಂದೆ. ನನ್ನ ನಗಿಸಿ, ಆ ನಗುವಿನಲ್ಲಿ ನಿನ್ನ ಸಂತೋಷ ಕಂಡುಕೊಂಡೆ. ಜಿಪುಣ ನೀನು- ಎಂದೆಂದಿಗೂ ನನ್ನ ಬಿಟ್ಟುಕೊಡಲಿಲ್ಲ. ಜಾಣ ನೀನು, ಯಾರ ಬಲೆಗೂ ಬೀಳದ, ಭದ್ರ ಬೀಗ ಹಾಕಿದ್ದ ನನ್ನ ಹೃದಯಕ್ಕೆ ಸದ್ದಿಲ್ಲದೇ ಬೀಗದ ಕೈ ಕದ್ದು ಒಳಗೆ ಬಂದು ಕುಳಿತು, ಒಲವಿನ ರಾಗ ಹೇಳಿಕೊಡಲು ಪ್ರಾರಂಭಿಸಿದೆ.

ಕೋಟಿಕೋಟಿ ಕನಸುಗಳ ಹೊತ್ತುತಂದ ಗೆಳೆಯನೇ, ನನಗೊಂದು ಪ್ರೀತಿಯ ಹೆಸರಿಟ್ಟು, ನೀನು ಮಾತ್ರ ಆ ಹೆಸರಿನಿಂದ ಕರೆಯುವಾಗ, ಅದೇನೋ ಖುಷಿ ನನಗೆ. ಅದೇ ಹೆಸರನ್ನು ನೀನು ಮತ್ತೂಮ್ಮೆ, ಮಗದೊಮ್ಮೆ ಕರೆಯಲಿ ಎಂಬ ಆಸೆಯಿಂದ, ನೀನು ಕರೆದದ್ದು ಕೇಳಿಸಲೇ ಇಲ್ಲ ಅನ್ನುವಂತೆ ಆಗಾಗ ನಟಿಸುತ್ತಲೇ ಇರುತ್ತೇನೆ ನಾನು. ಈ ಸತ್ಯ ಗೊತ್ತಿದ್ದರೂ ಗೊತ್ತಿಲ್ಲದಂತೆ, ನೀನೂ ನಟಿಸುತ್ತಿರುವೆ. ಇದೇ ಅಲ್ಲವೇ ಪ್ರೀತಿ ಎಂದರೆ? ನಮ್ಮಿಬ್ಬರ ಪ್ರೀತಿಯ ತೊರೆಗೆ ಅಡ್ಡಗಾಲಿಕ್ಕಲು ಯಾರೂ ಮಧ್ಯೆ ಬಾರದಿರಲಿ. ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ ನಮ್ಮ ಪ್ರೀತಿಯ ಮೇಲೆ…

-ಸೌಮ್ಯಶ್ರೀ ಸುದರ್ಶನ್‌ ಹಿರೇಮಠ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಹಂಪಿ ಪ್ರಾಧಿಕಾರದ ವ್ಯಾಪ್ತಿಯ ಮಲ್ಲಾಪೂರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ

ಹಂಪಿ ಪ್ರಾಧಿಕಾರದ ವ್ಯಾಪ್ತಿಯ ಮಲ್ಲಾಪೂರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ

whatsapp-web

ವಾಟ್ಸಾಪ್ ವೆಬ್ ಗಾಗಿ QR Code Scan ಮಾಡಿ ಬೇಸತ್ತಿದ್ದೀರಾ ? ಬರುತ್ತಿದೆ ಹೊಸ ಫೀಚರ್ !

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

96

ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Store‌ನಲ್ಲಿ ಪ್ರತ್ಯಕ್ಷವಾದ Paytm !

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಲ್ತ್‌ ಟಿಪ್ಸ್‌ : ಕಿತ್ತಳೆಯ ಉಪಯೋಗ

ಹೆಲ್ತ್‌ ಟಿಪ್ಸ್‌ : ಕಿತ್ತಳೆಯ ಉಪಯೋಗ

ಕಾಗೆಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ!

ಕಾಗೆಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ!

ಖುಷಿ ಪಡುವ ಕ್ಷಣಗಳು ಬೇಗ ಬರಲಿ..

ಖುಷಿ ಪಡುವ ಕ್ಷಣಗಳು ಬೇಗ ಬರಲಿ..

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

ಫೋಟೋ ಇದ್ದ ಕವರ್‌ಗೆ ಅರಿಶಿನ ಕುಂಕುಮ ಹಚ್ಚಿದರು!

ಫೋಟೋ ಇದ್ದ ಕವರ್‌ಗೆ ಅರಿಶಿನ ಕುಂಕುಮ ಹಚ್ಚಿದರು!

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಬಾಗಲಕೋಟೆ: 206 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ ; 112 ಸೋಂಕಿತರು ಗುಣಮುಖ

ಬಾಗಲಕೋಟೆ: 206 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆ ; 112 ಸೋಂಕಿತರು ಗುಣಮುಖ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಹಂಪಿ ಪ್ರಾಧಿಕಾರದ ವ್ಯಾಪ್ತಿಯ ಮಲ್ಲಾಪೂರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ

ಹಂಪಿ ಪ್ರಾಧಿಕಾರದ ವ್ಯಾಪ್ತಿಯ ಮಲ್ಲಾಪೂರದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ

ಪ್ರಗತಿ ಪರಿಶೀಲನ ಸಭೆ: “ಕೊಲ್ಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ರಾನ್‌’

ಪ್ರಗತಿ ಪರಿಶೀಲನ ಸಭೆ: “ಕೊಲ್ಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್’

ನಿಧಾನಗತಿಯಲ್ಲಿದ್ದ ಕಾಮಗಾರಿಗಳಿಗೆ ವೇಗ: ಸಂಸದೆ ಶೋಭಾ

ನಿಧಾನಗತಿಯಲ್ಲಿದ್ದ ಕಾಮಗಾರಿಗಳಿಗೆ ವೇಗ: ಸಂಸದೆ ಶೋಭಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.