ನೆನಪೆಂಬ ಮುಳ್ಳಿನಿಂದ ಹೃದಯಕ್ಕೆ ಚುಚ್ಚಿಬಿಟ್ಟೆ…


Team Udayavani, Jan 22, 2019, 3:23 AM IST

93.jpg

ನಾನು ಯಾರನ್ನೂ ಸುಮ್ಮನೆ ದೂರ ಮಾಡಿಕೊಳ್ಳುವವಳಲ್ಲ. ಆದರೆ, ನೀನು ನನ್ನಿಂದ ತುಂಬಾ ದೂರ ಹೋಗಿಬಿಟ್ಟಿದ್ದೀಯ. ಸುಮ್ಮನೆ ಹೋಗಲಿಲ್ಲ, ಕಾಯ್ತಾ ಇರು ಬರಿನಿ ಅಂತ ಸುಳ್ಳು ಹೇಳಿ ದೂರ ಹೋಗಿಬಿಟ್ಟೆ. 

ಇಂದಲ್ಲ ನಾಳೆ ನೀನು ಬಂದೇ ಬರ್ತೀಯ, ನನ್ನ ಕರೆದುಕೊಂಡು ಹೋಗ್ತಿಯ ಅಂತ ನಿನ್ನನ್ನೇ ಎದುರು ನೋಡುತ್ತಿದ್ದ ನನ್ನ ಅಳಲನ್ನು ತಿರುಗಿಯೂ ನೋಡದೆ, ನಮ್ಮ ಪ್ರೀತಿಗೆ ಮಸಣದ ಹಾದಿ ತೋರಿಸಿಬಿಟ್ಟೆ ನೀನು. ನನ್ನ ಅಂತರಾಳದ ಭಾವನೆಗಳಿಗೆ ಬರಹ ರೂಪ ನೀಡಿ ನಿನಗೆ ತಿಳಿಸಲು ಪ್ರಯತ್ನಿಸಿದೆ. ಆದರೆ ಅದು ಕೇವಲ ನಿನ್‌ ಕಣ್‌ ತಲುಪಿತೇ ಹೊರತು ಮನಸ್ಸನ್ನು ತಟ್ಟಲಿಲ್ಲ.

ನಿನ್ನನ್ನು ನಂಬಿ ಕೂತ ಹೃದಯ ಇಂದೇಕೋ ಮರುಗುತ್ತಿದೆ. ನೀನಿಲ್ಲದ ನಾಳೆಯ ಪಯಣಕೆ ಮೌನದಲ್ಲೇ ಸಜ್ಜಾಗುತ್ತಿದೆ. ನಾನು ಯಾರನ್ನೂ ಸುಮ್ಮನೆ ದೂರ ಮಾಡಿಕೊಳ್ಳುವವಳಲ್ಲ. ಆದರೆ, ನೀನು ನನ್ನಿಂದ ತುಂಬಾ ದೂರ ಹೋಗಿಬಿಟ್ಟಿದ್ದೀಯ. ಸುಮ್ಮನೆ ಹೋಗಲಿಲ್ಲ, ಕಾಯ್ತಾ ಇರು ಬರಿ¤àನಿ ಅಂತ ಸುಳ್ಳು ಹೇಳಿ ದೂರ ಹೋಗಿಬಿಟ್ಟೆ. 

ಆಗ ತಾನೇ ನನ್ನ ಕನಸುಗಳು ಚಿಗುರುತ್ತಿದ್ದವು. ಅವಿನ್ನೂ ಪುಟ್ಟ ಮಗುವಿನಂತಿದ್ದವು. ಆದರೆ ಅವನ್ನೆಲ್ಲ ಒಂದೇ ಮಾತಲ್ಲಿ ಕೊಂದುಬಿಟ್ಟೆ ನೀನು. ತಪ್ಪು ತಿಳಿಯಬೇಡ, ನಾನು ನಿನ್ನನ್ನು ದೂರುತ್ತಿಲ್ಲ. ಬದಲಿಗೆ ಕೇಳ್ತಾ ಇದ್ದೀನಿ, ಯಾಕೆ ಹೀಗೆಲ್ಲ ಮಾಡಿದೆ ಅಂತ. ಒಂದಂತೂ ಅರ್ಥ ಆಗಿದೆ. ನಾನಿಲ್ದೆ ಇದ್ರೂ ನೀನು ಚೆನ್ನಾಗಿಯೇ ಇದ್ದೀಯ ಅಂತ ..

ನನಗೆ ಗೊತ್ತು, ನಿನಗೂ ನಾನಂದ್ರೆ ಇಷ್ಟ ಅಂತ. ಆದರೆ ಇಷ್ಟಾನೇ ಪ್ರೀತಿ ಆಗಲಿಕ್ಕೆ ಸಾಧ್ಯ ಇಲ್ಲ ಅನ್ನೋದನ್ನ ತಿಳಿಸಿಕೊಟ್ಟೆ. ನೀನು ಕೊನೆಗೂ ನನ್‌ ಪ್ರೀತೀನ ಉಳಿಸಿಕೊಳ್ಳಲಿಲ್ಲ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ನೀನೇ ನನಗೆ ನೋವು ಕೊಟ್ಟೆ. ನೆನಪೆಂಬ ಮುಳ್ಳಿನಿಂದ ನನ್‌ ಹೃದಯಾನ ಚುಚ್ಚಿಬಿಟ್ಟೆ.

ಆ ಪ್ರೀತಿಯ ಕ್ಷಣಗಳು ನಿನಗೆ ನೆನಪಾಗ್ತಾ ಇಲ್ವಾ? ಒಂದು ಗಳಿಗೆ ನಾನೇನಾದರೂ ನಿನ್ನನ್ನು ಮರೆತೆನೆಂದರೆ, ಮರುಗಳಿಗೆಯೇ ನನಗೆ  ಮರಣ. ಒಳಗೊಳಗೇ ಕೊರಗಿ ಕನಸುಗಳಿಗೆ ಘೋರಿ ಕಟ್ಟುತ್ತಿದ್ದೇನೆ. 

ಹಾಗಂತ ಜೀವನ ಪೂರ್ತಿ ನಿನಗೆ ಶಾಪ ಹಾಕಲ್ಲ. ಯಾಕಂದ್ರೆ ನೀನು ನನ್ನ ಪ್ರತಿರೂಪ. ನಿನಗೆ ಕಿಂಚಿತ್‌ ನೋವಾದರೂ ನನ್ನ ಜೀವ ಹೋದ ಹಾಗೇ. ಏನೇ ಆಗಲಿ, ನೀನೂ ಒಂದು ಹೊಸ ಜೀವನ ರೂಪಿಸಿಕೊಂಡಿದ್ದೀಯ. ಅದು ಸುಖಕರವಾಗಿರಲಿ ಅಷ್ಟೇ ಸಾಕು. ನನ್ನ ಬಾಳ ಪಯಣದಲ್ಲಿ ಯಾರು ಇರ್ತಾರೋ, ಇಲ್ಲವೋ ಗೊತ್ತಿಲ್ಲ. ನಿನ್ನ ನೆನಪು ಸದಾ ಇರುತ್ತೆ.

ಹೇಳ್ಳೋಕೆ ಏನೂ ಉಳಿದಿಲ್ಲ ಅನ್ನಿಸ್ತಿದೆ. ನನ್ನ ಪ್ರಾಣಾನೇ ಪಣ ಇಟ್ಟು ನಿನ್ನ ಕಾದಿದ್ದೆ. ಇದೇ ಅಲ್ವ ನಿಜವಾದ ಪ್ರೀತಿ? ಆದರೂ ಅದರ ಅರಿವು ನಿನಗಾಗಲಿಲ್ಲ. ಇರಲಿ ಬಿಡು. ಎಲ್ಲೇ ಇದ್ದರೂ ಚೆನ್ನಾಗಿರು ಎಂಬುದಷ್ಟೇ ಹಾರೈಕೆ.

ನಿನ್ನದೇ ನೆನಪಲ್ಲಿ

ಮಂಜುಳಾ. ಎನ್‌ ಶಿಕಾರಿಪುರ

ಟಾಪ್ ನ್ಯೂಸ್

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಕೊಹ್ಲಿ ಆಗಮನ; ಎದುರಾಗಿದೆ ಪ್ರತಿಕೂಲ ಹವಾಮಾನ

ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ

ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.