ಆ ಮಧ್ಯರಾತ್ರಿ ದೇವರಂತೆ ಬಂದ…

Team Udayavani, Dec 17, 2019, 6:03 AM IST

ಅಂದು ರಾತ್ರಿ ಸುಮಾರು 2 ಗಂಟೆ 15 ನಿಮಿಷ ಇರಬಹುದು. ನಾನು ಮೈಸೂರಿನ ಮೂವಿ ಮಲ್ಟಿಪ್ಲೆಕ್ಸ್‌ ಡಿಆರ್‌ಸಿ ಸಿನಿಮಾಸ್‌ನಲ್ಲಿ ಅಸೋಸಿಯೇಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ, ನನ್ನ ಕೆಲಸದ ವೇಳೆ ಪ್ರತಿದಿನ ಸಂಜೆ 4 ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಇರುತ್ತಿತ್ತು. ಆ ದಿನ ಕೆಲಸ ಮುಗಿಯು­ವುದು ಸ್ವಲ್ಪ ತಡವಾಯಿತು. ನಾನು ಮಲ್ಟಿಪ್ಲೆಕ್ಸ್‌ನಿಂದ ಹೊರಟಾಗ ಸಮಯ 2 ಗಂಟೆ ಆಗಿತ್ತು. ಕೆಲಸ ಮಾಡುವ ಆಫೀಸಿನಿಂದ ನಮ್ಮ ಮನೆ 8ಮೈಲಿ ದೂರವಿದೆ. ನನ್ನ ಬಳಿ ದ್ವಿಚಕ್ರ ವಾಹನವಿತ್ತು.

ಅಂದು ಕೆಲಸ ಮುಗಿಸಿ ಮನೆಗೆ ಹೋಗುವಾಗ, ಸರಿಯಾಗಿ ಬಂಕ್‌ ಮುಂದೆಯೇ ಬೈಕ್‌ನ ಪೆಟ್ರೋಲ್‌ ಖಾಲಿಯಾಗಿ ಬಿಡುವುದೇ? ತಿಂಗಳ ಕೊನೆ. ಜೇಬಿನಲ್ಲಿ ಹಣವಿಲ್ಲ…ಸರಿ, ಇನ್ನೇನು ಮಾಡೋದು? ಇನ್ನು 5ಮೈಲಿ ಬೈಕ್‌ನ ತಳ್ಳಿಕೊಂಡೇ ಮನೆ ಸೇರೋಣ ಅಂಥ ನಿರ್ಧರಿಸಿ, ಬೈಕ್‌ ಅನ್ನು 200 ಮೀಟರ್‌ ದೂರ ತಳ್ಳಿಕೊಂಡೇ ಹೋದೆ. ಪುಣ್ಯಾತ್ಮ ಎಲ್ಲಿದ್ದನೋ ಕಾಣೆ ಎಕ್ಸೆಲ್‌ ಗಾಡಿಯಲ್ಲಿ ಬಂದ ಒಬ್ಬ ವ್ಯಕ್ತಿ ಏನಾಯಿತು ಸಾರ್‌ ? ಎಂದರು. ನಾನು ವಿಷಯ ಹೇಳಿದೆ.

ಅದಕ್ಕೆ ಅವರು, “ಇಲ್ಲೇ ಹಿಂದೆ ಪೆಟ್ರೋಲ್‌ ಬಂಕ್‌ ಇದ್ಯಲ್ಲ ಸಾರ್‌, ಅಲ್ಲೇ ಪೆಟ್ರೋಲ್‌ ಹಾಕಿಸಿºಡಿ’ ಅಂದರು. ನಾನು ಸಂಕೋಚದಿಂದಲೇ  -“ಪರ್ವಾಗಿಲ್ಲ ಸಾರ್‌, ನನ್ನ ಹತ್ತಿರ ಸಧ್ಯಕ್ಕೆ ಪೆಟ್ರೋಲ್‌ ಹಾಕಿಸೋಕೆ ದುಡ್ಡು ಇಲ್ಲ’ ಅಂದೆ. ಅದಕ್ಕೆ ಅವರು, “ಅಯ್ಯೋ ಮಧ್ಯರಾತ್ರಿ ಬೇರೆ. ತಗೊಳ್ಳಿ ಈ 50 ರೂನ. ಪೆಟ್ರೋಲ್‌ ಹಾಕಿಸಿಕೊಂಡು ಮನೆ ಸೇರಿಕೊಳ್ಳಿ’ ಅಂದರು.

ಅವರ ಆ ಮಾತು ಕೇಳಿ ನನ್ನ ಕಣ್ಣಾಲಿ ತುಂಬಿ ಬಂತು. ಮರು ಮಾತನಾಡದೆ ಆ ದೇವರೇ ನನ್ನ ಸಹಾಯಕ್ಕೆ ಬಂದಿರಬೇಕೆಂದು ಭಾವಿಸಿ, “ಸಾರ್‌, ನಿಮ್ಮ ನಂಬರ್‌ ಕೊಡಿ. ಈ ದುಡ್ಡನ್ನು ನಿಮಗೆ ನಾಳೆಯೇ ಹಿಂದಿರುಗಿಸುತ್ತೀನಿ’ ಅಂದೆ. ಅದಕ್ಕೆ ಅವರು ಮನುಷ್ಯ ಮನುಷ್ಯನಿಗಲ್ಲದೆ ಮತ್ತಿನ್ಯಾರಿಗೆ ಸಹಾಯ ಮಾಡಲು ಸಾಧ್ಯ ಹೇಳಿ..! ಪರವಾಗಿಲ್ಲ, ನೀವು ಹಿಂದಿರುಗಿಸುವ ಅವಶ್ಯಕತೆ ಏನಿಲ್ಲ’ ಎಂದು ಹೇಳಿದರು.

ನಾನು ಪೆಟ್ರೋಲ್‌ ಹಾಕಿಸಲು ಬಂಕ್‌ ನ ಬಳಿ ಬಂದೆ. ನಂತರ ನೆನಪಾಯಿತು; ನಾನು ಅವರ ಹೆಸರನ್ನೇ ಕೇಳುವುದನ್ನೇ ಮರೆತಿದ್ದೆ ಎಂದು. ಈಗಲೂ, ಬೈಕ್‌ನ ಪೆಟ್ರೋಲ್‌ ಖಾಲಿ ಆದಾಗೆಲ್ಲಾ ಈ ವ್ಯಕ್ತಿ ಕಣ್ಣ ಮುಂದೇ ಬಂದು ಹೋಗುತ್ತಾರೆ… ಆ ವ್ಯಕ್ತಿ ಎಲ್ಲೇ ಇದ್ದರೂ ಆ ದೇವರು ಆ ನಿಷ್ಕಲ್ಮಶ ಮನಿಸ್ಸಿನ ವ್ಯಕ್ತಿಗೆ ಒಳ್ಳೆಯದನ್ನ ಮಾಡಲಿ, ಆರೋಗ್ಯ ಕೊಟ್ಟು ಕಾಪಾಡಲಿ.

* ಹೇಮಂತ್‌ ರಾಜ್‌ .ಆರ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇವತ್ತು ನಮ್ಮ ಸಮಾಜ ಹೇಗಿದೆ ಅಂದರೆ, 99 ಅಂಕ ಪಡೆದವರನ್ನು ಬಹಳ ಚೆನ್ನಾಗಿ ಆದರಿಸುತ್ತದೆ. 50 ಅಂಕ ಪಡೆದವರನ್ನು ಕ್ಯಾರೇ ಅನ್ನೋದಿಲ್ಲ. 90 ಅಂಕ ಪಡೆದ ವಿದ್ಯಾರ್ಥಿಗೆ...

  • ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫ‌ಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ...

  • ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸೇವಾ ಉದ್ಯಮವೆಂದರೆ ಆರೋಗ್ಯ ಸೇವಾ ಉದ್ಯಮ. ಅರ್ಥಾತ್‌ ಆಸ್ಪತ್ರೆ, ರೋಗ ಶುಶ್ರೂಷೆ. ಕೇವಲ ಕಟ್ಟಡ, ಉಪಕರಣ, ದಾದಿಯರು...

  • ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗೆ ಹೆಗಲು ಕೊಡುವ ಶಹಾಪುರದ ಈಶ್ವರ್‌, ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ವಿಶ್ರಾಂತಿ ತೆಗೆದುಕೊಳ್ಳುವಂತೆ ಏರ್ಪಾಟು...

  • ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು. . ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ...

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...