ಗ್ರೂಪ್‌ ಸ್ಟಡಿ, ರ್‍ಯಾಂಕ್‌ ಹಿಡಿ

Team Udayavani, Jan 21, 2020, 5:37 AM IST

ಗ್ರೂಪ್‌ಸ್ಟಡಿ ಮಾಡಬೇಕಾ ಬೇಡವಾ? ಈ ಮಕ್ಕಳು ಗ್ರೂಪ್‌ ಸ್ಟಡಿ ಅಂತ ಹೇಳ್ಕೊಂಡು ಏನೂ ಓದಲ್ಲ. ಬೇಡದ್ದೇ ಮಾಡ್ತವೆ ಅನ್ನೋ ಆರೋಪವೂ ಇದೆ. ಇಂಥ ಸಂದರ್ಭದಲ್ಲೇ ಗ್ರೂಪ್‌ ಸ್ಟಡಿ ಮಾಡಿ ಯಶಸ್ಸು ಕಾಣುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ. ಹಾಗೆಯೇ, ಓದಿಗೆ ತಂತ್ರಜ್ಞಾನ ಬಳಸಿಕೊಳ್ಳೋದು ಬಹಳ ಒಳ್ಳೆಯ ಪ್ರಯತ್ನ. ಅದರೆ ಅತಿಯಾದರೆ ಅಮೃತ ಕೂಡ ವಿಷ ಆಗುತ್ತೆ ಅನ್ನೋ ಹಾಗೇ, ಮೊಬೈಲ್‌ ಆ್ಯಪ್‌ಗ್ಳ ಬಳಕೆ ಹೆಚ್ಚಾದರೆ ಫ‌ಲಿತಾಂಶದಲ್ಲಿ ಎಡವಟ್ಟೂ ಆಗುತ್ತದೆ. ಹಾಗಾದರೆ, ಎಂಥಹ ಆ್ಯಪ್‌ಗ್ಳು ಪ್ರಯೋಜನಕಾರಿ ಅನ್ನೋದರ ಮಾಹಿತಿ ಕೂಡ ಇಲ್ಲಿದೆ.

ಇವತ್ತು ಮಾಡಿದ ಪಾಠ ತಲೆಗೆ ಹತ್ತಲಿಲ್ಲಾ, ಈ ಟಾಪಿಕ್‌ ಎಷ್ಟು ಸಲ ಓದಿದರೂ ಅರ್ಥ ಆಗ್ತಾ ಇಲ್ಲಾ, ನನಗೆ ಮ್ಯಾಥ್ಸ್ ಅಂದ್ರೆ ಆಗಲ್ಲ, ಲಾಸ್ಟ್‌ ಪಿರಿಯಡ್‌ಲಿ ನಿದ್ದೆ ಬರತ್ತೆ ಏನ್ಮಾಡ್ಲಿ? ಮನೆಯಲ್ಲಿ ಸ್ಟಡಿ ಮಾಡೋಕೆ ಆಗ್ತಿಲ್ಲ. ಅರ್ಥ ಆಗದೇ ಇರೋ ಟಾಪಿಕ್‌ ಬಗ್ಗೆ ಯಾರನ್ನಾದ್ರೂ ಕೇಳ್ಳೋಣ ಅಂದ್ರೆ ಮುಜುಗರ, ನನಗೂ ಸ್ಕೂಲ್‌ ಟಾಪರ್‌ ಆಗಬೇಕು ಅನ್ಸುತ್ತೆ ಏನು ಮಾಡೋದು…

ಒಬ್ಬರಲ್ಲ ಒಬ್ಬರಿಗೆ ಈ ಥರಹದ ಫೀಲ್‌ಗ‌ಳು ಆಗಿರುತ್ತವೆ ಅಲ್ಲವೇ? ಯಾವುದೇ ಫೀಲ್‌ ಆದರೂ, ನಮಗೆ ಮನಸ್ಸಿನಲ್ಲಿ ಕಾಡೋದು ಒಂದೇ. ಈ ಸಲ ಪರೀಕ್ಷೆಯಲ್ಲಿ ನಾನು ಪಾಸ್‌ ಆಗಬೇಕು. ಅದು ರ್‍ಯಾಂಕ್‌ ಆಗಿರಬಹುದು, ಆಗಿರದೇ ಇರಬಹುದು. ಒಟ್ಟಿನಲ್ಲಿ ಗುಡ್‌ ರಿಸಲ್ಟ್ ಬರಬೇಕು. ಯಾವುದೇ ಕಾರಣಕ್ಕೂ ಫೇಲ್‌ ಆಗಬಾರದು. ಹಾಗಾದರೆ ಏನು ಮಾಡಬೇಕು? ಗ್ರೂಪ್‌ ಸ್ಟಡಿ ಮಾಡೋಣ.

ಒಂದು ವರ್ಷ ಪೂರ್ತಿ ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಕಲಿತು ಏನೇನೆಲ್ಲಾ ಸರ್ಕಸ್‌ ಮಾಡಿದರೂ ಪರೀಕ್ಷೆಯಲ್ಲಿ ಕೆಲವರು ಫೇಲ್‌ ಆಗಿಬಿಡ್ತಾರೆ. ಒಂದು ವಿಷಯ ನೆನಪಿಡಿ: ನಾವು ಪರೀಕ್ಷೆಗಾಗಿ ಓದಿದರೆ ಖಂಡಿತ ಫೇಲ್‌ ಆಗುತ್ತೇವೆ. ತಿಳುವಳಿಕೆಗಾಗಿ ಓದಿದರೆ ಖಂಡಿತ ಪಾಸ್‌ ಆಗುತ್ತೇವೆ. ಈ ತಿಳುವಳಿಕೆ ಎಂಬುದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ತಿಳಿದಿರುವ ವಿಷಯವನ್ನು ಶೇರ್‌ ಮಾಡುವುದಕ್ಕಾಗಿಯೇ ಗ್ರೂಪ್‌ ಸ್ಟಡಿ ಮಾಡಬೇಕು. ಆಗ ಪರೀಕ್ಷೆ ಬರೆದರೆ ಫ‌ಲಿತಾಂಶ ಉತ್ತಮ ರೀತಿಯಲ್ಲಿ ಇರುತ್ತದೆ.

ಒಂದು ಶಾಲೆ ಅಥವಾ ಕಾಲೇಜು ಅಂದಮೇಲೆ, ಅಲ್ಲಿ ಹಲವು ಬ್ಯಾಕ್‌ಗ್ರೌಂಡ್‌ನಿಂದ ಬಂದ ವಿದ್ಯಾರ್ಥಿಗಳು ಇರುತ್ತಾರೆ. ಎಲ್ಲರಿಗೂ ಎಲ್ಲಾ ಸೌಲಭ್ಯಗಳು ಇರುವುದಿಲ್ಲ. ಕೆಲವರು ಶ್ರೀಮಂತರಿರಬಹುದು. ಕೆಲವರು ಬಡವರಿರಬಹುದು. ಆದರೆ, ಎಲ್ಲರಿಗೂ ಸಿಲಬಸ್‌ ಮಾತ್ರ ಒಂದೇ. ತರಗತಿಗಳಲ್ಲಿ ಕಲಿಯಲು ಸಾಧ್ಯವಾಗದೇ ಇರುವುದನ್ನು ಗ್ರೂಪ್‌ ಸ್ಟಡಿಯಲ್ಲಿ ಕಲಿಯಬಹುದು. ನಮ್ಮ ನಮ್ಮ ಗೆಳೆತನ ಗ್ರೂಪ್‌ ಸ್ಟಡಿಯಲ್ಲಿ ಗಟ್ಟಿಗೊಳ್ಳುವುದರ ಜೊತೆಗೆ ಕಲಿಕೆಯೂ ಗಟ್ಟಿಗೊಳ್ಳುತ್ತದೆ. ಶಾಶ್ವತವಾಗಿ ಉಳಿಯುತ್ತದೆ. ಈ ರೀತಿಯ ಕಲಿಕೆ ಖಂಡಿತ ಪರೀಕ್ಷೆಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಎಷ್ಟೋ ಕಠಿಣ ಟಾಪಿಕ್‌ಗಳನ್ನು ಗ್ರೂಪ್‌ ಸ್ಟಡಿ ಸರಳಗೊಳಿಸುತ್ತದೆ. ಹೇಗೆಂದರೆ ತರಗತಿಗಳಲ್ಲಿ ಎದ್ದು ನಿಂತು ಕೇಳಲು ಸಾಧ್ಯವಾಗದ್ದನ್ನ, ಗ್ರಹಿಕೆಗೆ ಕಷ್ಟವಾದ ವಿಷಯಗಳನ್ನ, ಗೊಂದಲ ಉಂಟಾದ ಸಂಗತಿಗಳನ್ನ, ಮಿಸ್‌ ಆದ ಕ್ಲಾಸ್‌ಗಳ ಮಾಹಿತಿಯನ್ನ, ಹಲವು ಡೌಟ್ಸ್‌ ಗಳನ್ನ ಸರಾಗವಾಗಿ ಗ್ರೂಪ್‌ ಸ್ಟಡಿಯಲ್ಲಿ ಬಗೆಹರಿಸಿಕೊಳ್ಳಬಹುದು. ಅಲ್ಲಿ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಚರ್ಚೆ ಮಾಡಬಹುದು. ಹೊಸ ಆವಿಷ್ಕಾರಗಳನ್ನು ನಾವಿಲ್ಲಿ ಸೃಷ್ಟಿಸುವ ಅಗತ್ಯವಿಲ್ಲ. ಇರುವ ಸಿದ್ಧ ಸೂತ್ರಗಳನ್ನು ಅನುಸರಿಸಿದರೆ ಸಾಕು ಗ್ರೂಪ್‌ ಸ್ಟಡಿಯಿಂದ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಬಹುದು.

ಬಹಳ ಉಪಯುಕ್ತ ಅಂಶವೇನೆಂದರೆ ಗ್ರೂಪ್‌ ಸ್ಟಡಿಗಳಲ್ಲಿ ಹಳೆಯ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ವಿಶ್ಲೇಷಿಸುವುದು. ಅವುಗಳಿಗೆ ಉತ್ತರಗಳನ್ನು ಹುಡುಕುವುದು. ಯಾವ ಟಾಪಿಕ್‌ಗಳಿಂದ

ಯಾವ ಪ್ರಶ್ನೆಗಳನ್ನು, ಹೇಗೆ ತೆಗೆದಿದ್ದಾರೆ ಎಂದು ಗುರುತಿಸುವುದು ಗ್ರೂಪ್‌ ಸ್ಟಡಿಯ ಮಹತ್ತರ ಕೆಲಸಗಳಲ್ಲೊಂದು. ಇದರಿಂದ ಪರೀಕ್ಷೆ ಎಂಬುದು ಅಪರಿಚಿತ ಮತ್ತು ಪ್ರಶ್ನೆಗಳು ಆಗಂತುಕ ಎಂಬ ಭಾವ ಹೊರಟು ಹೋಗುತ್ತದೆ. ಪರೀಕ್ಷೆಯೊಂದಿಗೆ ಸಣ್ಣ ನಂಟು ಗ್ರೂಪ್‌ ಸ್ಟಡಿಯಿಂದಲೇ ಆರಂಭವಾಗುತ್ತದೆ. ಇದರಿಂದ ಪರೀಕ್ಷೆ ಎಂದರೆ ಭಯ ಎನ್ನುವವರಿಗೆ ಪರೀಕ್ಷೆ ಎಂದರೆ ಸಂಭ್ರಮ ಎಂಬ ಅರಿವಾಗುತ್ತದೆ. ಗ್ರೂಪ್‌ ಸ್ಟಡಿಗಳಿಂದ ಕಲಿತ ವಿಷಯದ ಪುನರ್‌ಬಲನ ಆಗುತ್ತದೆ. ಪುನರ್‌ಬಲನ ಕ್ರಿಯೆಯಂದ ಉಂಟಾದ ಕಲಿಕೆಯು ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿದು ಪರೀಕ್ಷಾ ಸಮಯದಲ್ಲಿ ನೆರವಿಗೆ ಬರುತ್ತದೆ. ಸೋ ಒನ್ಸ್‌ ಅಗೈನ್‌ ಲೆಟ್ಸ್‌ ಡೂ ಗ್ರೂಪ್‌ ಸ್ಟಡಿ.

ಗ್ರೂಪ್‌ ಸ್ಟಡಿ ಹೇಗಿರಬೇಕು?
ವಿವಿಧ ಬುದ್ಧಿಮತ್ತೆ(ಐ.ಕ್ಯೂ.) ಇರುವವರು ಗ್ರೂಪ್‌ನಲ್ಲಿರಲಿ.
ಹಿಂಜರಿಕೆ, ಮುಜುಗರ ಇಲ್ಲದೆ ತಿಳಿದಿರುವುದನ್ನು ಹಂಚುವಂತಿರಲಿ.
ಈ ಹಿಂದಿನ ತರಗತಿ ಅಥವಾ ಪರೀಕ್ಷೆಗಳಲ್ಲಿ ಉತ್ತಮ ಫ‌ಲಿತಾಂಶ ಪಡೆದವರೊಬ್ಬರು ಗ್ರೂಪಿನಲ್ಲಿರಲಿ.
ಗೊತ್ತಿಲ್ಲದ್ದನ್ನು ಗೊತ್ತಿರುವವರಿಂದ ಕೇಳಿ ತಿಳಿಯುವಂತಿರಲಿ.
ಒಂದು ನಿಗಧಿತ ಸಮಯ ಮತ್ತು ಸ್ಥಳದಲ್ಲಿ ಗ್ರೂಪ್‌ ಸ್ಟಡಿ ನಡೆಯಲಿ.
ಚರ್ಚೆ ಹಾದಿ ತಪ್ಪದಂತೆ ನೋಡಿಕೊಳ್ಳಲು, ಪ್ರತಿ
ಗ್ರೂಪ್‌ಗ್ೂ ಒಬ್ಬರು ಮೇಲ್ವಿಚಾರಕರಿರಲಿ.
ಯಾವ ವಿಷಯದಲ್ಲಿ ಹೆಚ್ಚು ಜನ ಹಿಂದುಳಿದಿದ್ದಾರೋ ಆ ವಿಷಯದ ಬಗ್ಗೆ ಡಿಸ್ಕಸ್‌ ನಡೆಯಲಿ.

-ಕಂಡಕ್ಟರ್‌ ಸೋಮು, ಎಡೆಯೂರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇವತ್ತು ನಮ್ಮ ಸಮಾಜ ಹೇಗಿದೆ ಅಂದರೆ, 99 ಅಂಕ ಪಡೆದವರನ್ನು ಬಹಳ ಚೆನ್ನಾಗಿ ಆದರಿಸುತ್ತದೆ. 50 ಅಂಕ ಪಡೆದವರನ್ನು ಕ್ಯಾರೇ ಅನ್ನೋದಿಲ್ಲ. 90 ಅಂಕ ಪಡೆದ ವಿದ್ಯಾರ್ಥಿಗೆ...

  • ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫ‌ಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ...

  • ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸೇವಾ ಉದ್ಯಮವೆಂದರೆ ಆರೋಗ್ಯ ಸೇವಾ ಉದ್ಯಮ. ಅರ್ಥಾತ್‌ ಆಸ್ಪತ್ರೆ, ರೋಗ ಶುಶ್ರೂಷೆ. ಕೇವಲ ಕಟ್ಟಡ, ಉಪಕರಣ, ದಾದಿಯರು...

  • ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗೆ ಹೆಗಲು ಕೊಡುವ ಶಹಾಪುರದ ಈಶ್ವರ್‌, ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ವಿಶ್ರಾಂತಿ ತೆಗೆದುಕೊಳ್ಳುವಂತೆ ಏರ್ಪಾಟು...

  • ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು. . ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ...

ಹೊಸ ಸೇರ್ಪಡೆ