Udayavni Special

ಗುಲ್‌ಮೊಹರ್‌ ಹೂವಿನ ಗಜಲ್ಲು


Team Udayavani, Aug 29, 2017, 6:40 AM IST

EXTRA4.jpg

ಸೈಕಲ್‌ ಇದ್ದರೂ ನಾನೇ ಚಕ್ರದ ಗಾಳಿ ತೆಗೆದು ನಿನ್ನ ಜೊತೆ ಮಾತಾಡುತ್ತಾ ಬರುತ್ತಿದ್ದೆ. ಆಮೇಲೆ ನೀನೂ ನಿಮ್ಮ ಅಪ್ಪನನ್ನು ಕಾಡಿ, ಬೇಡಿ ಸೈಕಲ್‌ ತೆಗೆಸಿಕೊಂಡೆ…

ಇಳಿಸಂಜೆಯಲ್ಲಿ ಭೂಮಿಯನ್ನು ಅಗಲಿ ಸೂರ್ಯ ಬೇಸರದಿಂದ ಮರೆಯಾಗುತ್ತಿರುವಾಗ ನೆನಪಿನ ಬುತ್ತಿಯ ಗಂಟು ಬಿಚ್ಚಿಕೊಂಡಿತು. ಮನದ ಗೋಡೆಯ ಮೇಲೆ ಹೈಸ್ಕೂಲ್‌ ಗೆಳತಿಯ ಕಿರುಚಿತ್ರ ಅಸ್ಪಷ್ಟವಾಗಿ ಮೂಡಿ, ಹೃದಯವನ್ನು ರಂಗೇರಿಸಿತು. ಎಲ್ಲರ ಜೀವನದಲ್ಲೂ ಒಂದೊಂದು ಕರಾಳ ದಿನ ಇದ್ದೇ ಇರುತ್ತೆ. ನೀನು ನನ್ನನ್ನು ಬಿಟ್ಟು ಹೋದೆಯಲ್ಲ ಹುಡುಗೀ, ಅದೇ ನನ್ನ ಜೀವನದ  ಕರಾಳ ದಿವಸ.

ಮನದ ಗೋಡೆಯ ಮೇಲೆ ನಮ್ಮಿಬ್ಬರ ಮೊದಲ ಪುಟ ಮೂಡಿತ್ತು. ನನಗೆ ಸೈಕಲ್‌ ಮೇಲೆ ಶಾಲೆಗೆ ಹೋಗುವುದು ಅಂದ್ರೆ ತುಂಬಾ ಇಷ್ಟ. ಅದರಲ್ಲೂ, ಮಳೆಗಾಲದಲ್ಲಿ ಸೈಕಲ್‌ ತುಳಿಯೋದು ಅಂದ್ರೆ ಎಲ್ಲಿಲ್ಲದ ಸಂತಸ. ಆದರೆ, ತುಂತುರು ಮಳೆಯ ಆ ದಿನ ನನ್ನ ಸೈಕಲ್‌ ಪಂಕ್ಚರ್‌ ಆಗಿತ್ತು. ನಾನು ಮಳೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ಆಗ ನೀನು ಹೆಗಲಿಗೆ ಬ್ಯಾಗ್‌ ಹಾಕಿಕೊಂಡು, ಪಿಂಕ್‌ ಕಲರಿನ ಕೊಡೆ ಹಿಡಿದುಕೊಂಡು ದೇವರಗಿ ಕ್ರಾಸ್‌ನಿಂದ ಮುಖ್ಯ ರಸ್ತೆಗೆ ಬಂದು, ಅಲ್ಲಿಂದ ಸೀದಾ ಶಾಲೆಗೇ ಹೋಗಿಬಿಟ್ಟೆ. 

ಆ ನಿನ್ನ ಹಂಸದ ನಡಿಗೆ ನವಿಲು ಕೂಡ ನಾಚುವಂತಿತ್ತು. ಆ ದೃಶ್ಯವನ್ನೇ ಮತ್ತೆ ಮತ್ತೆ ನೆನೆಯುತ್ತಾ ಕುತೂಹಲದಿಂದಲೇ ಶಾಲೆಗೆ ಬಂದಾಗ ಗೊತ್ತಾಯಿತು ನೀನು ನಮ್ಮ ಶಾಲೆಗೆ ಹೊಸಬಳೆಂದು. ಅಂದಿನಿಂದ ದಿನವೂ ನಿನ್ನನ್ನು ನೋಡಲು ಬೇಗ ಬರಲು ಶುರು ಮಾಡಿದೆ. ಸೈಕಲ್‌ ಇದ್ದರೂ ನಾನೇ ಚಕ್ರದ ಗಾಳಿ ತೆಗೆದು ನಿನ್ನ ಜೊತೆ ಮಾತಾಡುತ್ತಾ ಬರುತ್ತಿದ್ದೆ. ಆಮೇಲೆ ನೀನೂ ನಿಮ್ಮ ಅಪ್ಪನನ್ನು ಕಾಡಿ, ಬೇಡಿ ಸೈಕಲ್‌ ತೆಗೆಸಿಕೊಂಡೆ. ನೆನಪಿದೆಯಾ ನಿನಗೆ? ನಾವಿಬ್ಬರೂ ದಿನವೂ ಒಟ್ಟಿಗೆ ಸೈಕಲ್‌ ಮೇಲೆ ಶಾಲೆಗೆ ಹೋಗುತ್ತಿದ್ದಿದ್ದು?

ನಾನು ನಿನ್ನ ಪರವಾಗಿ ಜಗಳವಾಡಿ ಯಾರಿಂದಲೋ ಬಡಿಸಿಕೊಂಡು ಬಂದಾಗ ನಿನ್ನ ಕೈವಸ್ತ್ರದಿಂದ ಗಾಯಕ್ಕೆ ಪಟ್ಟಿ ಕಟ್ಟಿದೆ. ಮಮತೆಯ ರೂಪ ತಾಳಿ ನನ್ನ ನೋವು ನುಂಗಿದೆ. ಇಡೀ ದಿನ ಜೊತೆಗಿದ್ದು ನನಗೆ ಸಮಾಧಾನ ಹೇಳಿದ್ದೆ. ನನ್ನ ಪರವಾಗಿ ಮಾತಾಡಿದ್ದಕ್ಕೆ ಹೀಗೆಲ್ಲಾ ಆಯ್ತು. ಸಾರಿ ಕಣೋ, ಅಂದಿದ್ದೆ. 

ಗೆಳತಿ ಆ ಎಲ್ಲಾ ನೆನಪುಗಳು ನಡುರಾತ್ರಿಯಲ್ಲೂ ನನ್ನನ್ನು ಬಡಿದು ಎಬ್ಬಿಸುತ್ತಿವೆ ಈಗ. ನೀನು ಮುನಿಸಿಕೊಂಡಾಗ ಗುಲ್‌ಮೊಹರ್‌ ಹೂವಿನಂತೆ ಕಾಣುತ್ತಿದ್ದೆ. ನಿನ್ನ ಕೋಪವನ್ನು ತಣಿಸಲು ನಾನು ನಿನ್ನ ಇಷ್ಟದ ನೆಲ್ಲಿಕಾಯಿ ತಂದುಕೊಡುತ್ತಿದ್ದೆ. ಆಗ ನಗುಮೊಗದಿಂದ ನನಗೆ ಮುತ್ತಿಟ್ಟು ನೀನು ಓಡಿ ಹೋಗುತ್ತಿದ್ದೆ. ಏನೂ ಅರಿಯದ ವಯಸ್ಸಿನಲ್ಲಿ ಹುಟ್ಟಿದ ಈ ಪ್ರೀತಿಗೆ ಏನೆಂದು ಹೆಸರಿಡಲಿ ಹೇಳು? ನಿನ್ನ ತಂದೆಗೆ ಬೇರೆ ಕಡೆ ವರ್ಗಾವಣೆ ಆಗಿದೆ ಎಂದು ಅಳುತ್ತಾ ಬಂದು, ಕೊನೆಯ ಸಾರಿ ಕೆನ್ನೆಗೆ ಸಿಹಿ ಮುತ್ತಿಟ್ಟು, ನನ್ನ ಬಿಟ್ಟು ಹೋದೆ. ಅಂದಿನಿಂದ ನಾನು ಮೌನಿಯಾಗಿದ್ದೇನೆ. ಯಾವುದೋ ನೆಪದಲ್ಲಿ ಇವತ್ತಲ್ಲ ನಾಳೆ ನೀನು ನನ್ನನ್ನು ಹುಡುಕಿಕೊಂಡು ಬರುತ್ತೀಯ ಎಂದು ಕಾಯುವುದೇ ಈಗ ನನ್ನ ಖಯಾಲಿಯಾಗಿದೆ.

– ಎ.ಆರ್‌. ಆರೀಫ್ ವಾಲೀಕಾರ, ಬೆಳಗಾವಿ 

ಟಾಪ್ ನ್ಯೂಸ್

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

rain

ಉತ್ತರಾಖಂಡದಲ್ಲಿ ಭಾರಿ ಮಳೆ ಎಚ್ಚರಿಕೆ : ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆ

ಹಣಕಾಸು ಸಚಿವಾಲಯ ಸರ್ಕಾರಿ ಆಸ್ತಿಗಳ ಮೋನಿಟೈಷೇಶನ್ ಗಾಗಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಿದೆ

ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

ಹೊಸ ಸೇರ್ಪಡೆ

fdkllkjhgfds

ಮುಂದಿನ ಚುನಾವಣೆಗೆ ಬೊಮ್ಮಾಯಿ ನೇತೃತ್ವ

jjkjhgfdsa

ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ : ಪಾಟೀಲ

gjhgfds

ಗ್ರಾಮಗಳ ಸ್ಥಳಾಂತರವೇ ಪರಿವಾರವಲ್ಲ

gtjhgfdswq

ಕುಮಾರಿಯರಿಗೆ ಉಡಿ ತುಂಬಿದ ನಾಲವಾರ ಶ್ರೀ

hfghftytr

ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.