ದೇವರನ್ನು ನೋಡಿದ್ದೀರಾ?

ವಿಂಡೋ ಸೀಟು

Team Udayavani, Apr 16, 2019, 6:00 AM IST

ತಪ್ಪು ಮಾಡೋದು ಸಹಜ ಕಣೋ… ತಿದ್ದಿ ನಡೆಯೋನು ಮನುಜ ಕಣೋ ಎಂದು “ಮನೆದೇವ್ರು’ ಸಿನಿಮಾದಲ್ಲಿ ಹಂಸಲೇಖ ಬರೆದಿದ್ದರು. ಭೂಮಿ ಮೇಲಿನ ಅಂಥ ಮನುಜರಲ್ಲಿ ಒಬ್ಬ ಮಿಜೋರಾಂನ ಡೆರೆಕ್‌. ವಯಸ್ಸು ಬರೀ 6. ರಸ್ತೆ ಮೇಲೆ ಹಿಟ್‌ ಅಂಡ್ ರನ್‌ ಮಾಡುವವರು ಗಾಯಾಳುಗಳಿಗೆ ಸಹಾಯ ಮಾಡದೆ ಹಾಗೆಯೇ ಓಡಿಹೋಗುತ್ತಾರೆ. ಆದರೆ, ಓಡಿ ಹೋಗದೆ ಗಾಯಾಳುವಿನ ಜವಾಬ್ದಾರಿ ತೆಗೆದುಕೊಂಡಿದ್ದು ಡೆರೆಕ್‌ನ ಹೆಚ್ಚುಗಾರಿಕೆ. ಹಿಟ್‌ ಮಾಡಿದ ಮೇಲೆ ಆತ ನಡೆದುಕೊಂಡ ರೀತಿ ಇಂಟರ್‌ನೆಟ್ಟಿಗರ ಹುಚ್ಚೆಬ್ಬಿಸುತ್ತಿದೆ. 6ನೇ ವಯಸ್ಸಿಗೇ ಅದ್ಯಾವ ವಾಹನ ಚಾಲನೆ ಮಾಡುತ್ತಾನಪ್ಪ ಎಂದುಕೊಳ್ಳುತ್ತಿದ್ದೀರಾ. ಆತ ವಾಹನ ಚಾಲನೆ ಮಾಡುತ್ತಿರಲಿಲ್ಲ. ಮನೆ ಹತ್ತಿರ ಓಡಿ ಬರುತ್ತಿದ್ದಾಗ ಒಂದು ಕೋಳಿಮರಿಯ ಮೇಲೆ ಕಾಲಿಟ್ಟು ಬಿಟ್ಟಿದ್ದ. ಜೀವನದಲ್ಲಿ ಇರುವೆಗೂ ನೋವು ನೀಡದ ಡೆರೆಕ್‌ಗೆ ತನ್ನ ಕೃತ್ಯದಿಂದ ಅಳುಬಂತು. ಅಳುತ್ತಲೇ ಕೋಳಿ ಮರಿಯನ್ನೆತ್ತಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಬಂದವನೇ ವೈದ್ಯರ ಮುಂದೆ ತಾನು ಕಷ್ಟಪಟ್ಟು ಕೂಡಿಟ್ಟ ಹತ್ತು ರುಪಾಯಿಯನ್ನೇ ವೈದ್ಯರ ಮುಂದೆ ಹಿಡಿದು ಹೇಗಾದರೂ ಮಾಡಿ ಕೋಳಿಮರಿಯನ್ನು ಹುಷಾರು ಮಾಡಿ ಎಂದು ಅಲವತ್ತುಕೊಂಡಿದ್ದಾನೆ. ಆಗ ತೆಗೆದ ಫೋಟೋನೇ ಈಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವುದು. ಈ ಹುಡುಗನ ಅಂತಃಕರಣಕ್ಕೆ ಒಂದು ಸಲಾಂ ಹೇಳ್ಳೋಣ, ಅಲ್ವಾ?

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪರೀಕ್ಷೆಯ ಸಂದರ್ಭದಲ್ಲಿ, ವಿದ್ಯಾರ್ಥಿಗಳಿಗೆ ಒಂದಿಷ್ಟು ಟಿಪ್ಸ್‌ ಕೊಡಬೇಕು. ಆ ಮೂಲಕ, ಪರೀಕ್ಷೆ ಎದುರಿಸಲು ಸಜ್ಜುಗೊಳಿಸಬೇಕು ಎಂಬ ಸದಾಶಯದಿಂದ ಆರಂಭವಾದದ್ದು...

  • ಜೀವನದ ಹಾದಿ ಬಗ್ಗೆ ಒಂದಿನಿತೂ ಆಲೋಚನೆ ಮಾಡದ ಯುವಕ- ಯುವತಿಯರು ರಜೆ ವಿಚಾರದಲ್ಲಿ ಯಾವತ್ತೂ ಪಕ್ಕಾ ಪ್ಲಾನ್ಡ್. ಮಜವಾಗಿ ಕಳೆಯುವುದರ ಜೊತೆಗೆ , ಭವಿಷ್ಯಕ್ಕೊಂದು...

  • ಆಫೀಸಿನ ಚೇರಿನ ಮೇಲೆ ಕುಳಿತರೆ ಬಗ್ಗೊಕೆ ಆಗೋಲ್ಲ, ಕಂಪ್ಯೂಟರ್‌ ಮಣೆ ನೇರವಾಗಿ ಹೊಟ್ಟೆಗೆ ಬಂದು ಬಡಿಯುತ್ತದೆ. ಏನಾದರೂ ಮಾಡಿ ಹೊಟ್ಟೆ ಕರಗಿಸಬೇಕಲ್ಲ ಅಂತ ಅಂದುಕೊಂಡರೂ...

  • ಅತ್ಯಂತ ಹಿರಿಯರು, ತುಂಬು ಜೀವನ ನಡೆಸಿದ ವ್ಯಕ್ತಿ ಹತ್ತಿರ ಒಂದಿಬ್ಬರು ಸಮಸ್ಯೆಗೆ ಪರಿಹಾರ ಕೇಳಲು ಬರುತ್ತಿದ್ದರು. ಆ ಹಿರಿಯರು ತಮ್ಮ ಅನುಭವವನ್ನೆಲ್ಲಾ ಸೇರಿಸಿ...

  • ಹಲವು ಪತ್ನಿಯರನ್ನು ಹೊಂದುವುದು ಭಾರತೀಯ ಪರಂಪರೆಯಲ್ಲಿ ದೊಡ್ಡ ವಿಷಯವೇನಲ್ಲ. ಒಬ್ಬೊಬ್ಬ ರಾಜರಿಗೂ ಹತ್ತಾರು ಪತ್ನಿಯರು ಮಾಮೂಲಿ. ಹಲವು ಪತ್ನಿಯರನ್ನು ಹೊಂದುವುದು...

ಹೊಸ ಸೇರ್ಪಡೆ