Udayavni Special

“ಹಲೋ’ ನಾನ್‌ ಬಂದೆ…


Team Udayavani, May 22, 2018, 6:00 AM IST

12.jpg

ಯುವ ಸಮುದಾಯವನ್ನು ಮಾಯೆಯಂತೆ ಆವರಿಸಿಕೊಂಡಿರುವ ಸಾಮಾಜಿಕ ಜಾಲತಾಣ- ಫೇಸ್‌ಬುಕ್‌. ಇದೀಗ, ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲು “ಹಲೋ’ ಎಂಬ ಹೊಸದೊಂದು ಜಾಲತಾಣವೂ ಆರಂಭವಾಗಿದೆ. ಈ ಎರಡೂ ಜಾಲತಾಣಗಳ ನಡುವೆ ಇರುವ ವ್ಯತ್ಯಾಸವೇನು? “ಹಲೋ’ದ ಹಾವಳಿಯಿಂದ ಫೇಸ್‌ಬುಕ್‌ಗೆ ಏನಾದರೂ ತೊಂದರೆ ಆಗಬಹುದೆ? ಫೇಸ್‌ಬುಕ್‌ ಎಂಬ ಮೋಹದಿಂದ ಯುವಜನತೆ ಪಾರಾಗುವ ಸಾಧ್ಯತೆಗಳು ಇವೆಯೆ…ಇಂಥವೇ ಅನುಮಾನಗಳಿಗೆ ಇಲ್ಲಿ ಉತ್ತರವಿದೆ…

ಇದು ಇಂಟರ್ನೆಟ್‌ ಯುಗ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಯುಗ. ದೇಶ, ಭಾಷೆಯ ಗಡಿ ಸೀಮೆಗಳನ್ನೂ ದಾಟಿ ನಡೆಯುವ ಇಲ್ಲಿನ ಸಂವಹನಗಳಿಂದಾಗಿ ಇವು ಮಾಧ್ಯಮಗಳಿಗೆ ಪರ್ಯಾಯವಾಗಿ ಮತ್ತು ಸರಿಸಾಟಿಯಾಗಿ ಕೆಲಸ ಮಾಡುವಂತಾಗಿವೆ. ನಮ್ಮಲ್ಲಿ ಸಾಮಾಜಿಕ ಜಾಲತಾಣ ಎಂದರೆ ಸಾಕು; ತಕ್ಷಣ ನೆನಪಾಗುವುದು ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸಾಪ್‌. ಈ ಮೂರೂ, ಭಾರತದಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಸಾಮಾಜಿಕ ಜಾಲತಾಣಗಳು. ಅದರಲ್ಲೂ ಜನ ಸಾಮಾನ್ಯರ ನಾಡಿ ಮಿಡಿತವಾಗಿರುವುದು ಫೇಸ್‌ಬುಕ್‌. ಇದಕ್ಕೆ ಸಡ್ಡು ಹೊಡೆಯಲೆಂದೇ ಭಾರತಕ್ಕೆ ಕಾಲಿಟ್ಟಿರುವ ಮತ್ತೂಂದು ಜಾಲತಾಣ, “ಹಲೋ’. 

ಹತ್ತು ವರ್ಷಗಳ ಹಿಂದೆ ಇಂಟರ್ನೆಟ್‌ನಲ್ಲಿ ಗೂಡು ಕಟ್ಟುತ್ತಿದ್ದವರಿಗೆಲ್ಲ “ಆರ್ಕುಟ್‌’ ಎಂಬ ಸಾಮಾಜಿಕ ಜಾಲತಾಣದ ಪರಿಚಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅವತ್ತಿನ ಸಂದರ್ಭದಲ್ಲಿ ಭಾರತೀಯರಿಗೆ ತಮ್ಮ ಸ್ನೇಹಿತರೊಂದಿಗೆ ಏಕಕಾಲದಲ್ಲಿ ಹಿಡಿಯಷ್ಟು ಭಾವನೆಗಳನ್ನು ಹಂಚಿಕೊಳ್ಳಲು ಇದ್ದಿದ್ದು ಅದೊಂದೇ ಜನಪ್ರಿಯ ಸಾಮಾಜಿಕ ಜಾಲತಾಣ. ಆದರೆ, ಯಾವಾಗ ಟ್ವಿಟರ್‌, ಫೇಸ್‌ಬುಕ್‌ ಭಾರತಕ್ಕೆ ಕಾಲಿಟ್ಟವೋ, ಯಾವಾಗ ಸ್ಮಾರ್ಟ್‌ ಫೋನ್‌ ರಂಗದಲ್ಲಿ ದೊಡ್ಡ ಕ್ರಾಂತಿಯಾಗಿ ಎಲ್ಲರ ಕೈಗಳಿಗೆ ಸ್ಮಾರ್ಟ್‌ ಫೋನ್‌ಗಳು ಲಗ್ಗೆಯಿಟ್ಟವೋ, ಆ ಕ್ಷಣದಿಂದಲೇ ಆರ್ಕುಟ್‌ ಭಾರತದಿಂದ ಕಾಲೆ¤ಗೆಯುವುದು ಅನಿವಾರ್ಯವಾಯಿತು. 

ಆದರೀಗ, ಅದೇ ಆರ್ಕುಟ್‌ ನಿರ್ಮಾತೃ ಆರ್ಕುಟ್‌ ಬೈಯುಕೋಕ್ಟನ್‌, “ಹಲೋ’ ಎಂಬ ಹೊಸದೊಂದು ಸಾಮಾಜಿಕ ಜಾಲತಾಣದ ಮೂಲಕ ಭಾರತಕ್ಕೆ ಪುನಃ ಕಾಲಿಟ್ಟಿದ್ದಾರೆ. ಹಿಂದಿನ ತಮ್ಮ ಚಾರ್ಮ್ ಅನ್ನು ಮರಳಿ ಪಡೆಯುವ ಉತ್ಸಾಹದಲ್ಲಿದ್ದಾರೆ. ಮತ್ತೂಂದೆಡೆ,  ಫೇಸ್‌ಬುಕ್‌ ಮಾಹಿತಿ ಸೋರಿಕೆ ವಿವಾದ ಉದ್ಭವವಾದ ಹೊತ್ತಿನಲ್ಲೇ “ಹಲೋ’ ಭಾರತ ಪ್ರವೇಶಿಸಿದ್ದು, ಇದನ್ನು ಫೇಸ್‌ಬುಕ್‌ಗೆ ಪರ್ಯಾಯ ಎಂದೂ ಹೇಳಲಾಗುತ್ತಿದೆ. ಈ ಅಂದಾಜು ನಿಜವಾಗುತ್ತದೆಯೇ? “ಹಲೋ’ ಎಂಬ ಹೊಸ ಕುದುರೆಗೆ ಮರುಳಾದ ಗ್ರಾಹಕ, ಫೇಸ್‌ಬುಕ್‌ ಎಂಬ ಚೆಂದುಳ್ಳಿ ರಥವನ್ನು ಮರೆಯುತ್ತಾನಾ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. 

ಈ ನಿಟ್ಟಿನಲ್ಲಿ ನಾವೇ ಯೋಚಿಸುವುದಾದರೆ, ಫೇಸ್‌ಬುಕ್‌ಗೆ ಇನ್ನಿಲ್ಲದಂತೆ ಮರುಳಾಗಿರುವ, ಅಡಿಕ್ಟ್ ಆಗಿರುವ ಗ್ರಾಹಕರನ್ನು “ಹಲೋ’ ತನ್ನತ್ತ ಸೆಳೆಯುತ್ತದೆಯೇ, ಇದು ಎಷ್ಟರಮಟ್ಟಿಗೆ ಬಳಕೆದಾರ ಸ್ನೇಹಿಯಾಗಿದೆ, ಫೇಸ್‌ಬುಕ್‌ಗೂ ಹಾಗೂ “ಹಲೋ’ ನಡುವಿನ ತಾಂತ್ರಿಕ ವ್ಯತ್ಯಾಸಗಳೇನು ಎಂಬಿತ್ಯಾದಿ ವಿಚಾರಗಳೇ “ಹಲೋ’ಗೆ ಸಿಗಬಹುದಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾದರೆ, “ಹಲೋ’ ಹೇಗಿದೆ,  ಅದರ ಕಾರ್ಯ ವಿಧಾನ ಎಂಥದ್ದು ಎಂಬಿತ್ಯಾದಿ ವಿಷಯಗಳ ಕುರಿತ ವಾರೆ ನೋಟ ಇಲ್ಲಿದೆ. 

ನೋ ಲೈಕ್ಸ್‌, ನೋ ಷೇರ್ಸ್‌!
ಫೇಸ್‌ಬುಕ್‌ ಬಳಕೆದಾರರಿಗೆ ಅಥವಾ ಅದರ ಹುಚ್ಚು ಹಿಡಿಸಿಕೊಂಡವರಿಗೆ ಇದು ಜೀರ್ಣವಾಗದ ವಿಚಾರ. ಫೇಸ್‌ಬುಕ್‌ನಲ್ಲಿ ನಮ್ಮ ಸ್ನೇಹಿತರ, ಬಳಗದವರ ಪೋಸ್ಟ್‌ಗಳಿಗೆ ಲೈಕ್‌ ಒತ್ತಿ ಒತ್ತಿ, ಷೇರ್‌ ಮಾಡಿ ಮಾಡಿ ಅದರಲ್ಲೇ ಮುಳುಗೇಳುವವರಿಗೆ “ಹಲೋ’ ಸಾಮಾಜಿಕ ಜಾಲತಾಣದಲ್ಲಿ ಅಂಥ ಸೌಲಭ್ಯವಿಲ್ಲ. ಇನ್ನು, ಸ್ವಂತ ಅಕೌಂಟ್‌ ಕ್ರಿಯೇಟ್‌ ಮಾಡುವ ಮುನ್ನವೇ ತಮ್ಮ ಆಯ್ಕೆಯ ರಂಗಗಳನ್ನು (ಸಿನಿಮಾ, ಕ್ರಿಕೆಟ್‌, ಬಾಲಿವುಡ್‌ ಇತ್ಯಾದಿ) ಆಯ್ಕೆ ಮಾಡಿಕೊಳ್ಳಬೇಕು. ಹಾಗಂತ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸುವುದು, ಅವರು ಅದನ್ನು ಅನುಮೋದಿಸುವುದು, ಅದನ್ನು ನೋಡಿ ನಾವು ಹಿರಿಹಿರಿ ಹಿಗ್ಗುವುದು ಇತ್ಯಾದಿ ಇಲ್ಲಿಲ್ಲ! ಹಾಗಾದರೆ ಏನಿದೆ ಇಲ್ಲಿ? 

ಇಲ್ಲೇ ಇರೋದು ಸ್ವಾರಸ್ಯ. ನಿಮ್ಮ ಪ್ರೊಫೈಲ್‌ ಅಥವಾ ಅಕೌಂಟ್‌ ಕ್ರಿಯೇಟ್‌ ಮಾಡುವಾಗ ನೀವು ಆಯ್ಕೆ ಮಾಡುವ ಕಮ್ಯೂನಿಟಿಗಳ (ಇದಕ್ಕೆ ಪರ್ಸೊನಾಸ್‌ ಎಂದು ಹೆಸರಿಡಲಾಗಿದೆ) ಆಧಾರದ ಮೇಲೆ ಇಡೀ ಜಗತ್ತಿನಾದ್ಯಂತ ಇರುವ, ನಿಮ್ಮದೇ ಅಭಿರುಚಿ ಹೊಂದಿರುವ ವ್ಯಕ್ತಿಗಳನ್ನು ನಿಮಗೆ ಲಿಂಕ್‌ ಮಾಡುತ್ತದೆ “ಹಲೋ’. ಆ ಮೂಲಕ ಹಲವಾರು ಅಪರಿಚಿತರ ನಡುವೆ ನಿಮ್ಮ ಸಂವಹನ ಆರಂಭವಾಗುತ್ತದೆ ಇಲ್ಲಿ. ಅದೇ ನಿಮಗೆ ಹೊಸ ಜಗತ್ತನ್ನು ಪರಿಚಯಿಸುತ್ತದೆ. 

ಅಷ್ಟೇ ಅಲ್ಲ, ನೀವು ಇಲ್ಲಿ ಅಪ್ಲೋಡ್‌ ಮಾಡುವ ಪ್ರತಿಯೊಂದು ಫೋಟೋ, ವಿಡಿಯೋ, ಯುಆರ್‌ಎಲ್‌ ಲಿಂಕ್‌ ಅಥವಾ ಬರಹಗಳು ಯಾವ ಸಮುದಾಯಕ್ಕೆ ತಲುಪಬೇಕೆಂಬುವುದನ್ನು ನೀವು ಆಯ್ಕೆ ಮಾಡಿದ ನಂತರವಷ್ಟೇ ಅದು ಅಪ್ಲೋಡ್‌ ಆಗುತ್ತೆ. ಅಲ್ಲಿಯವರೆಗೂ ಅದು ಅಪ್ಲೋಡ್‌ ಆಯ್ಕೆಯನ್ನು ಹೈಲೈಟ್‌ ಮಾಡುವುದೇ ಇಲ್ಲ. ಅಂದರೆ, ಫೇಸ್‌ಬುಕ್‌ನಲ್ಲಿ ನೀವು ಪೋಸ್ಟ್‌ ಹಾಕಿದ ಮರುಕ್ಷಣವೇ ನಿಮ್ಮ ಎಲ್ಲಾ ಮಿತ್ರ ಮಂಡಳಿಗೂ ಹೋಗಿ ರೀಚ್‌ ಆದಂತೆ ಇಲ್ಲಿ ಆಗುವುದಿಲ್ಲ. ಇಲ್ಲಿ ನಿಮ್ಮ ಪೋಸ್ಟ್‌ (“ಹಲೋ’ನಲ್ಲಿ ಪೋಸ್ಟ್‌ ಅನ್ನು ಜೋಟ್‌ ಎನ್ನಲಾಗುತ್ತೆ) ನಿಗದಿತ ಸಮುದಾಯಕ್ಕಷ್ಟೇ ಸೀಮಿತ. ಫೇಸ್‌ಬುಕ್‌ಗೆ ಹೋಲಿಸಿದರೆ ಹಲವಾರು ಲಿಮಿಟೇಷನ್‌ಗಳಿರುವ ಸೋಷಿಯಲ್‌ ಮೀಡಿಯಾ ಇದು. ಅಂದಹಾಗೆ, ಇದು ಡೆಸ್ಕ್ಟಾಪ್‌ನಲ್ಲಿ ಸಿಗೋದಿಲ್ಲ, ಮೊಬೈಲ್‌ ಆ್ಯಪ್‌ನಲ್ಲಿ ಮಾತ್ರ ಲಭ್ಯ. 

ಏಕೆ ಹೀಗೆ? 
ಈ ವ್ಯತ್ಯಾಸಗಳ ಬಗ್ಗೆ ಆರ್ಕುಟ್‌ ಮಾಲೀಕ ಬೈಯುಕೋಕ್ಟನ್‌ ಅವರೇ ಉತ್ತರ ಕೊಟ್ಟಿದ್ದಾರೆ. ತಂತ್ರಜ್ಞಾನದ ಮೂಲಕ ಒಂದೇ ಅಭಿರುಚಿಯಿರುವ ವ್ಯಕ್ತಿಗಳನ್ನು ಬೆಸೆಯುವುದು ಅವರ ಕನಸಂತೆ. ಹಾಗಾಗಿ, ಕೋಟಿ ಎಲ್ಲೆಯ ದಾಟಿ ಜಗತ್ತಿನ ನಾನಾ ವ್ಯಕ್ತಿಗಳ ಜತೆ ನಮ್ಮನ್ನು ನಾವು ಗುರುತಿಸಿಕೊಳ್ಳಲು “ಹಲೋ’ ಸಹಾಯ ಮಾಡುತ್ತದೆ ಎನ್ನುತ್ತಾರೆ ಅವರು. ಫೇಸ್‌ಬುಕ್‌, ವಾಟ್ಸಾಪ್‌ ಇತ್ಯಾದಿಗಳು ನಮ್ಮನ್ನು ಬಾವಿಯ ಕಪ್ಪೆಗಳನ್ನಾಗಿಸಿದರೆ, “ಹಲೋ’ ನಮ್ಮನ್ನು ಸಮುದ್ರ ಜೀವಿಗಳನ್ನಾಗಿಸುತ್ತದೆ ಎಂಬುದು ಅವರ ಮಾತು. ಹೊಸ ವ್ಯಕ್ತಿಗಳನ್ನು ನಾವು ವೈಯಕ್ತಿಕವಾಗಿ ಪರಿಚಯ ಮಾಡಿಕೊಂಡಾಗ ನಮ್ಮಲ್ಲಿ ಅವರ ಮೇಲೆ ನಂಬಿಕೆ ಇರುವುದಿಲ್ಲ. ಆದರೆ, ಮತ್ತೆ ಮತ್ತೆ ಭೇಟಿಯಾದಾಗ ಅವರ ಮೇಲೆ ನಂಬಿಕೆ ಬಂದು, ಅದು ಗಾಢವಾದರೆ ಆಪ್ತ ಸ್ನೇಹಿತರಾಗುತ್ತೇವಲ್ಲವೇ? “ಹಲೋ’ನಲ್ಲೂ ಹಾಗೇ ಆಗುತ್ತದೆ ಎನ್ನುತ್ತಾರೆ ಅವರು. 

“ಕರ್ಮ’ ರಿವಾರ್ಡ್‌
“ಹಲೋ’ ಬಗ್ಗೆ ಇಷ್ಟೆಲ್ಲಾ ಹೇಳಿದ ಮೇಲೆ, ಈ ಆ್ಯಪ್‌ನಲ್ಲಿರುವ ಒಂದು ವಿಶೇಷ ವಿಚಾರವನ್ನು ಹಂಚಿಕೊಳ್ಳಲೇಬೇಕು. ಅದೇನೆಂದರೆ, “ಕರ್ಮ’ ಫೀಚರ್‌. ಅಂದರೆ, ನೀವು ಎಷ್ಟು ಈ ಜಾಲತಾಣದಲ್ಲಿ ಆ್ಯಕ್ಟಿವ್‌ ಆಗಿರುತ್ತೀರಿ, ಎಷ್ಟೆಷ್ಟು ಪೋಸ್ಟ್‌ ಮಾಡುತ್ತೀರಿ, ಎಷ್ಟು ನಿಮಗೆ ಪ್ರತಿಕ್ರಿಯೆಗಳು ಬರುತ್ತವೆ ಎಂಬುದರ ಮೇಲೆ ನಿಮಗೆ “ಕರ್ಮ’ ಪಾಯಿಂಟ್ಸ್‌ ಸಿಗುತ್ತವೆ. ಅಲ್ಲದೆ, ನಿಮ್ಮ ನಿತ್ಯ ಚಟುವಟಿಕೆಯ ಆಧಾರದ ಮೇಲೂ ಒಂದೊಂದು ಲೆವೆಲ್‌ ನೀಡಲಾಗುತ್ತದೆ ಹಾಗೂ ಆ ಮೂಲಕ ನಿಮಗೆ ರಿವಾರ್ಡ್‌ ಪಾಯಿಂಟ್ಸ್‌ ಸಿಗುತ್ತವೆ. 

ಅದು ಅದೇ, ಇದು ಇದೇ!
ಅದೇನೇ ಇರಲಿ. ಒಂದೇ ಮಾತಿನಲ್ಲಿ ಹೇಳುವುದಾದರೆ, ಹಲೋ ಎಂಬ ಈ ಹೊಸ ಸಾಮಾಜಿಕ ಜಾಲತಾಣ, ಫೇಸ್‌ಬುಕ್‌ನ ಪರ್ಯಾಯವಲ್ಲ. ಹೀಗೆ, ಟ್ವಿಟರ್‌ ಮತ್ತು ಫೇಸ್‌ಬುಕ್‌ಗಳ ನಡುವೆ ಅಗಾಧ ವ್ಯತ್ಯಾಸಗಳಿವೆಯೋ, ಹಾಗೆಯೇ ಫೇಸ್‌ಬುಕ್‌ ಹಾಗೂ ಹಲೋಗಳ ನಡುವೆಯೂ ವ್ಯತ್ಯಾಸವಿದೆ. ಹಾಗಾಗಿ, ಈಗ ಸದ್ಯಕ್ಕಿರುವ ಇನ್‌ಸ್ಟಾ ಗ್ರಾಂ, ಹೈಪ್‌, ಸ್ನಾಪ್‌ ಚಾಟ್‌ ಮಾದರಿಯಲ್ಲೇ ಇದು ಭಾರತೀಯ ಸಾಮಾಜಿಕ ಜಾಲತಾಣಗಳ ಲೋಕಕ್ಕೆ ಹೊಸತಾಗಿ ಸೇರ್ಪಡೆಗೊಂಡ ಜಾಲತಾಣ ಎಂದಷ್ಟೇ ಹೇಳಬಹುದು. 

ಚೇತನ್‌ ಓ.ಆರ್‌.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ

ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ

ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?

ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?

50ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ನಾಯಿ : ನಾಯಿಯನ್ನು ಅಟ್ಟಾಡಿಸಿ ಕೊಂದ ಸಾರ್ವಜನಿಕರು

50ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ನಾಯಿ : ನಾಯಿಯನ್ನು ಅಟ್ಟಾಡಿಸಿ ಕೊಂದ ಸಾರ್ವಜನಿಕರು

ಚೊಚ್ಚಲ ಅಂಬಾರಿ ಹೊರಲು ನಾನು ರೆಡಿ: ಅಭಿಮನ್ಯು

ಚೊಚ್ಚಲ ಅಂಬಾರಿ ಹೊರಲು ನಾನು ರೆಡಿ: ಅಭಿಮನ್ಯು

ನ.4ರಿಂದ 9ರವರೆಗೆ ಯುಎಇನಲ್ಲಿ ನಡೆಯಲಿದೆ ಕಿರು ಮಹಿಳಾ ಐಪಿಎಲ್‌

ನ.4ರಿಂದ 9ರವರೆಗೆ ಯುಎಇನಲ್ಲಿ ನಡೆಯಲಿದೆ ಕಿರು ಮಹಿಳಾ ಐಪಿಎಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-3

ಮಳೆಗಾಲದ ಸಂಜೆ ಮತ್ತು ಬಿಸಿಬಿಸಿ ಬೋಂಡಾ…

Josh-tdy-2

ಬಾರೋ ಸಾಧಕರ ಕೇರಿಗೆ: ಕಡೆಯ ಕೋರಿಕೆ

ಶ್ಶ್…ಮಿಸ್‌ ಬಂದ್ರು…

ಶ್ಶ್…ಮಿಸ್‌ ಬಂದ್ರು…

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

MUST WATCH

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆಹೊಸ ಸೇರ್ಪಡೆ

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ : ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಅಳಲು

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ : ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಅಳಲು

ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ

ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ

ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?

ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.