ನೀನು ತಲೆ ಮೇಲೆ ಮೊಟಕಿದಾಗ ಧನ್ಯವಾಯ್ತು ಜೀವನ!


Team Udayavani, Apr 2, 2019, 6:00 AM IST

a-11

ದೇವಿ ದರ್ಶನಕ್ಕೆಂದು ಸರತಿಯಲ್ಲಿ ನಿಂತಿರೋ ಭಕ್ತನ ಎದುರು ದಿಢೀರ್‌ ಅಂತ ದೇವಿಯೇ ಪ್ರತ್ಯಕ್ಷಳಾದರೆ ಎಷ್ಟು ಖುಷಿಯಾಗಬಹುದೋ, ಅಷ್ಟು ಖುಷಿಯಾಯ್ತು ನಂಗೆ.

ಎರಡೂರು ತಿಂಗಳುಗಳ ನಂತರ ಊರಿನತ್ತ ಪ್ರಯಾಣ ಬೆಳೆಸಿದ್ದೆ. ನೆಪ ಸಿಕ್ಕಿದಾಗೆಲ್ಲಾ ಊರಿಗೆ ಓಡಿ ಬರಲು ಮುಖ್ಯ ಕಾರಣ ನೀನು ಅಂತ ಬಿಡಿಸಿ ಹೇಳುವುದು ಬೇಡ ತಾನೇ? ಪರೀಕ್ಷೆ ಮುಗಿದಿದ್ದೇ ತಡ, ನಿನ್ನನ್ನು ನೋಡಲು ಓಡೋಡಿ ಬಂದಿದ್ದೆ.

ಯಾವಾಗ ನಿನ್ನನ್ನೊಮ್ಮೆ ನೋಡುತ್ತೇನೋ ಅಂತ ಕಾದಿದ್ದವನನ್ನು ನೀನು ಹಾಗಾ ಸತಾಯಿಸೋದು? ಊರಿಗೆ ಬಂದು ವಾರ ಕಳೆದರೂ ನಿನ್ನ ಪತ್ತೆಯೇ ಇಲ್ಲ. ಕಾಲ್‌ಗೆ ಉತ್ತರಿಸಲಿಲ್ಲ. ಮೆಸೇಜ್‌ ಕಳಿಸಿದರೂ ನಿನ್ನಿಂದ ಹಾಂ, ಹೂಂ.. ಏನೂ ಬರಲಿಲ್ಲ. ಆಗ ನನಗೆಷ್ಟು ಗಾಬರಿಯಾಯ್ತು ಗೊತ್ತಾ? ರಜೆ ಕೂಡಾ ಮುಗಿಯುತ್ತಾ ಬಂದಿತ್ತು. ನಿನ್ನನ್ನು ನೋಡದೇ ವಾಪಸ್‌ ಹೋಗಬೇಕಾಗುತ್ತೇನೋ ಅಂದುಕೊಂಡಿದ್ದೆ.

ದೇವರ ದಯೆ, ಕೊನೆಗೂ ನಿನ್ನಿಂದ ಸಂದೇಶ ಬಂತು. “ಕಾಲೇಜಲ್ಲಿ ಇದೀನಿ ಕಣೋ. ನೀನೆಲ್ಲಿದ್ದಿ?’ ಅಂತ ಕೇಳಿದ್ದಕ್ಕೆ, “ಊರಿಗೆ ಬಂದಿದೀನಿ. ನಿನ್ನನ್ನು ಇವತ್ತೇ ಮೀಟ್‌ ಮಾಡ್ಬೇಕು. ಹೇಳು, ಎಲ್ಲಿಗೆ ಬರಲಿ?’ ಅಂತ ಒಂದೇ ಉಸಿರಲ್ಲಿ ಎಲ್ಲವನ್ನೂ ಹೇಳಿ ನಿರಾಳನಾದೆ.

“ನಂಗೀಗ ಎಕ್ಸಾಂ ನಡೀತಿದೆ. ಸಿಗೋದಿಕ್ಕೆ ಆಗಲ್ಲ, ಸಾರಿ’ ಅಂದುಬಿಟ್ಟೆ. ನಿನ್ನ ಮಾತು ಕೇಳಿ ತುಂಬಾ ಬೇಜಾರಾಯ್ತು. ಆದರೆ, ಪರಿಸ್ಥಿತಿ ನನಗೂ ಅರ್ಥವಾಯ್ತು. ಪರೀಕ್ಷೆ ಸಮಯದಲ್ಲಿ ನೀನು ಮೊಬೈಲ್‌ ಬಳಸೋದಿಲ್ಲ. ಇನ್ನು ನನ್ನನ್ನು ಮೀಟ್‌ ಆಗೋಕೆ ಬರೋದು ಕೂಡ ನಿಂಗೆ ಕಷ್ಟವಾಗುತ್ತೆ ಅಂತ, ಮಾರನೇದಿನ ನಿನ್ನ ಕಾಲೇಜು ಬಳಿ ಬಂದಿದ್ದೆ. ಮೊದಲೇ ಹೇಳಿದರೆ ನೀನು ಬರಬೇಡ ಅಂದುಬಿಟ್ರೆ ಅಂತ ನಿಂಗೆ ಹೇಳಿರಲಿಲ್ಲ.

ಕಾಲೇಜು ಗೇಟ್‌ನ ಬಳಿ ಕಾದು ಕಾದು ನೀನು ಸಿಗದೇ ಇದ್ದಾಗ, ನಿನಗೆ ಕಾಲ್‌ ಮಾಡಿದೆ. ನೀನು ಉತ್ತರಿಸಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಅಂತ ಕಾಲೆಳೆಯುತ್ತಾ, ಬಸ್‌ಸ್ಟಾಂಡ್‌ ಕಡೆ ಹೋದೆ. ಇನ್ನೇನು ನಮ್ಮೂರಿನ ಬಸ್‌ ಬರಬೇಕು, ಅಷ್ಟರಲ್ಲಿ ನೀನು ಕಾಲ್‌ ಮಾಡಿದೆ. “ಬಸ್‌ಸ್ಟಾಂಡ್‌ನ‌ಲ್ಲಿದ್ದೀನಿ, ಬೇಗ ಬಾ’ ಅಂತ ಹೇಳಿ ಮುಗಿಸುವುದರೊಳಗೆ ನನ್ನೆದುರು ಬಂದು ನಿಂತಿದ್ದೆ.

ಅಬ್ಟಾ, ದೇವಿ ದರ್ಶನಕ್ಕೆಂದು ಸರತಿಯಲ್ಲಿ ನಿಂತಿರೋ ಭಕ್ತನ ಎದುರು ದಿಢೀರ್‌ ಅಂತ ದೇವಿಯೇ ಪ್ರತ್ಯಕ್ಷಳಾದರೆ ಎಷ್ಟು ಖುಷಿಯಾಗಬಹುದೋ, ಅಷ್ಟು ಖುಷಿಯಾಯ್ತು ನಂಗೆ. “ಸದ್ಯ ತಮ್ಮ ದರ್ಶನವಾಯ್ತಲ್ಲ’ ಅಂದಾಗ, ತಲೆ ಮೇಲೊಂದು ಮೊಟಕಿದೆಯಲ್ಲ, ಧನ್ಯವಾಯ್ತು ಜೀವನ. ಮುಂದಿನ ಸಲ ಊರಿಗೆ ಬಂದಾಗ ಇಷ್ಟು ಸತಾಯಿಸಬೇಡ ಹುಡುಗಿ.

ಇಂತಿ ನಿನ್ನ ಕಾಯುವಿಕೆಯಲ್ಲೇ ಖುಷಿ ಕಾಣುವ

ಮಲಿಕ್‌ ಜಮಾದಾರ್‌

ಟಾಪ್ ನ್ಯೂಸ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

1-dsds

ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

hdk

ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ : ಹೆಚ್ ಡಿಕೆ ಹೇಳಿದ್ದೇನು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 77 ಅಂಕ ಇಳಿಕೆ; ಲಾಭಗಳಿಸಿದ ಐಟಿಸಿ ಷೇರು

1-sdsads

ಗೋವಾದಲ್ಲಿ ಡಿ.ಕೆ.ಶಿವಕುಮಾರ್ ಪ್ರಚಾರ: ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

ಹೊಸ ಸೇರ್ಪಡೆ

ಸಂವಿಧಾನ-ಲೋಕಸಭೆ ಪರಿಕಲ್ಪನೆ ನೀಡಿದ್ದ ಶರಣರು

ಸಂವಿಧಾನ-ಲೋಕಸಭೆ ಪರಿಕಲ್ಪನೆ ನೀಡಿದ್ದ ಶರಣರು

26bus

ಬಸ್‌ ಸೇವೆ ಆರಂಭ-ಹರ್ಷ

ಶಿಕ್ಷಣ ಪಡೆಯಬೇಕೆಂಬ ಛಲ ಇರಲಿ: ನ್ಯಾಮಗೌಡ

ಶಿಕ್ಷಣ ಪಡೆಯಬೇಕೆಂಬ ಛಲ ಇರಲಿ: ನ್ಯಾಮಗೌಡ

25protest

ಸಚಿವರಿಂದ ರೈತರ ಅವಮಾನ ಖಂಡಿಸಿ ಪ್ರತಿಭಟನೆ

5.60 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡನೆ

5.60 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.