ಬಿಸಿ ಕಾಫಿಯ ಬೆಚ್ಚನೆ ಗೂಡು

Team Udayavani, Jan 23, 2018, 12:36 PM IST

23-22.jpg

ಮೈಸೂರು ವಿವಿ ಹೇಗೆ ಪ್ರಸಿದ್ಧಿಯೋ, ಇಲ್ಲಿನ ಕ್ಯಾಂಟೀನ್‌ ಕೂಡಾ. ಈ ಕಟ್ಟಡ ತನ್ನ ಗುಂಡಗಿನ ಆಕಾರದಿಂದಲೋ ಏನೋ ಯೂನಿವರ್ಸಿಟಿ ಕ್ಯಾಂಟೀನ್‌ಗೆ “ರೌಂಡ್‌ ಕ್ಯಾಂಟೀನ್‌’ ಎಂಬ ನಾಮಧೇಯ. ರೌಂಡ್‌ ಕ್ಯಾಂಟೀನ್‌ನ ದೋಸೆ ಅಂದ್ರೆ ಮೈಸೂರಿನ ಅನೇಕರ ಬಾಯಿಂದ ನೀರೂರುತ್ತೆ…

ಇದ್ದ ಸ್ಥಳದಲ್ಲೇ ಯಾರಿಗೂ ಜ್ಞಾನೋದಯ ಆಗುವುದಿಲ್ಲ. ಲುಂಬಿಣಿಯಲ್ಲಿ ಹುಟ್ಟಿದ ಬುದ್ಧ, ಜ್ಞಾನೋದಯಕ್ಕಾಗಿ ಗಯಾಕ್ಕೆ ಬಂದಹಾಗೆ, ಕಾಲೇಜು ವಿದ್ಯಾರ್ಥಿಗಳ ನಮಗೂ ಅಂಥದ್ದೇ ಅವಸ್ಥೆ ಕಣ್ರೀ. ಆಗೆಲ್ಲ ನಾವು ಕ್ಲಾಸ್‌ರೂಮ್‌ ತೊರೆದು ಓಡುವುದು ಕ್ಯಾಂಟೀನ್‌ಗೆ. ಅದೇನೋ ಗೊತ್ತಿಲ್ಲ, ಆ ಬೆಚ್ಚಗಿನ ಕಾಫಿಯ ಮುಂದೆ ಕುಳಿತರೆ, ತಲೆಯೊಳಗೆ ಐನ್‌ಸ್ಟಿàನ್‌, ವಿಶ್ವೇಶ್ವರಯ್ಯ ಕೈಕೈ ಹಿಡಿದು ಓಡಾಡಿದ ಹಾಗೆ, ಏನೋ ಹೊಸತನ್ನು ಚರ್ಚಿಸುತ್ತಿರುವ ಹಾಗೆ ಫೀಲ್‌ ಹುಟ್ಟುತ್ತದೆ. ಕ್ಲಾಸಿನ ಕೋಣೆಯಲ್ಲಿ ಮಂಡೆಬಿಸಿ ಮಾಡಿದ್ದ ಫಾರ್ಮುಲಾ, ಪ್ರಶ್ನೆಗಳಿಗೆಲ್ಲ ಕ್ಯಾಂಟೀನ್‌ನಲ್ಲಿ ಥಟ್ಟನೆ ಉತ್ತರ ಹೊಳೆದದ್ದೂ ಇದೆ.

ನಮ್ಮ ಮೈಸೂರು ವಿವಿಯ ಕ್ಯಾಂಟೀನ್‌, ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಹೊರಗಿನವರಿಗೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮೈಸೂರಿನ ಜನ ಮೊದಲೇ ರುಚಿರುಚಿಯಾಗಿ ಉಣ್ಣಲು ಒಂದು ಕೈ ಮೇಲೆ. ಮೈಸೂರು ಪಾಕ್‌, ಮೈಸೂರು ಮಸಾಲೆ ದೋಸೆ, ಮೈಸೂರು ಸ್ಪೆಷಲ್‌ ಚುರುಮುರಿ, ಕೊಬ್ಬರಿ ಮಿಠಾಯಿ, ಒಬ್ಬಟ್ಟು, ಮೊಸರನ್ನ, ಬಿಸಿಬೇಳೆ ಬಾತ್‌, ರೈಸ್‌ಬಾತ್‌, ಕಾಫಿ… ಹೀಗೆ ಇನ್ನೂ ಹಲವು ತಿನಿಸು- ಪೇಯಗಳಿಗೆ ಖ್ಯಾತವಾದ ಮೈಸೂರಿನಲ್ಲಿ ಭಕ್ಷಗಳನ್ನು ಸವಿಯುವುದೇ ಒಂದು ವಿಶೇಷ ಅನುಭವ. ಆ ಎಲ್ಲ ಅನುಭವವನ್ನೂ ನಮ್ಮೊಳಗೆ ಕಟ್ಟಿಕೊಟ್ಟಿದ್ದು, ಈ ಕ್ಯಾಂಟೀನ್‌.

ಮೈಸೂರು ವಿವಿ ಹೇಗೆ ಪ್ರಸಿದ್ಧಿಯೋ, ಇಲ್ಲಿನ ಕ್ಯಾಂಟೀನ್‌ ಕೂಡಾ. ಈ ಕಟ್ಟಡ ತನ್ನ ಗುಂಡಗಿನ ಆಕಾರದಿಂದಲೋ ಏನೋ ಯೂನಿವರ್ಸಿಟಿ ಕ್ಯಾಂಟೀನ್‌ಗೆ “ರೌಂಡ್‌ ಕ್ಯಾಂಟೀನ್‌’ ಎಂಬ ನಾಮಧೇಯ. ರೌಂಡ್‌ ಕ್ಯಾಂಟೀನ್‌ನ ದೋಸೆ ಅಂದ್ರೆ ಮೈಸೂರಿನ ಅನೇಕರ ಬಾಯಿಂದ ನೀರೂರುತ್ತೆ. ದೋಸೆಯೇನು, ಇಲ್ಲಿನ ಬೇರೆ ಖಾದ್ಯಗಳ ಗಮ್ಮತ್ತೇ ಬೇರೆ. ಮೈಸೂರು ವಿವಿ ವಿದ್ಯಾರ್ಥಿಗಳು ಮಾತ್ರವಲ್ಲ, ಹೊರಗಿನ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ಬಂದು ಮೆನು ಬೋರ್ಡ್‌ ಮುಂದೆ ಹೊತ್ತಾನುಗಟ್ಟಲೆ ನಿಂತು, ಏನು ಆರ್ಡರ್‌ ಮಾಡೋಣವೆಂದು “ಹೊಂಚು’ ಹಾಕುತ್ತಿರುತ್ತಾರೆ. ರುಚಿಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ರಾಜಿ ಮಾಡಿಕೊಳ್ಳದೇ ಪ್ರತಿನಿತ್ಯ ಹಳೇ- ಹೊಸ ಮುಖಗಳನ್ನು ನೋಡುತ್ತಾ ಬಂದಿರುವ ರೌಂಡ್‌ ಕ್ಯಾಂಟೀನ್‌ ನಮ್ಮೆಲ್ಲರ ಫೇವರಿಟ್ ಅಡ್ಡಾ!

ಅದೆಷ್ಟೇ ರಶ್‌Ï ಇರಲಿ, “ನಮ್ಮ ವಿವಿ, ನಮ್ಮ ಕ್ಯಾಂಟೀನ್‌’ ಎಂಬ ಹಕ್ಕು ನಮ್ಮೊಳಗಿಂದ ನುಗ್ಗಿ ಬಂದು, ಇಲ್ಲಿನ ಕಾಫಿ ಟೇಬಲ್ಲಿನ ಮುಂದೆ ನಿಲ್ಲಿಸುತ್ತದೆ. ನಮ್ಮ ಎಂ.ಟೆಕ್‌ ಗ್ಯಾಂಗ್‌ ಗಂಟೆಗಟ್ಟಲೆ ಹರಟೆ ಹೊಡೆಯೋದು ಕೂಡ ಇಲ್ಲಿಯೇ. ಮಾತು, ಕತೆ, ಹರಟೆ, ನಗು, ಅಳು, ಗಾಸಿಪ್‌, ಪರದೂಷಣೆ… ಎಲ್ಲದಕ್ಕೂ ಸಾಕ್ಷಿ, ಇಲ್ಲಿನ ಗಾಜಿನ ಕಾಫಿ ಲೋಟಗಳು. ಬೆಳ್‌ಬೆಳಗ್ಗೆಯೇ ಒಂದು ಕಾಫಿ ಆರ್ಡರ್‌ ಮಾಡಿ, ಅಲ್ಲೇ ಮರಗಳ ಕೆಳಗಿನ ಸೀಟು ಹಿಡಿದು ಕುಳಿತು ಕಾಲೇಜು ಕೆಲಸಗಳನ್ನು ಶುರುಹಚ್ಚಿಕೊಂಡರೆ, ಮಧ್ಯಾಹ್ನ ಮೊಸರನ್ನ, ಬಿಸಿಬೇಳೆ ಬಾತ್‌ ಮಿಕ್ಸ್‌ ಊಟದೊಂದಿಗೆ ಸಂಪನ್ನಗೊಳ್ಳುತ್ತವೆ. ಆಗಾಗ್ಗೆ ನಡೆಯುವ ಸಣ್ಣಪುಟ್ಟ ಟ್ರೀಟ್‌ಗಳಿಗೂ ಇದೇ ನೆಚ್ಚಿನ ತಾಣ.

ಥರಗುಟ್ಟಿಸುವ ಚಳಿಯಲ್ಲೂ ತರಗತಿಯೊಳಗೆ ಫ್ಯಾನ್‌ ಬೇಕೇಬೇಕಾದಾಗ, ನಾವೆಲ್ಲ ಕಟ ಕಟನೆ ಹಲ್ಲು ಕಡಿಯುತ್ತಾ ಹೊರಬಂದು, ರೌಂಡ್‌ ಕ್ಯಾಂಟೀನ್‌ಗೆ ಸವಾರಿ ಮಾಡುತ್ತೇವೆ. ಎಲ್ಲದ್ದಕ್ಕಿಂತ ಇಲ್ಲಿನ ಕಾಫಿ ನಮ್ಮ ಮನಸುಗಳನ್ನು ಹೈಜಾಕ್‌ ಮಾಡಿದೆ. ಪ್ರತಿ ಬಾರಿಯೂ, ಕಾಫಿ ಮಾಡುವ ಹುಡುಗ ರುಚಿ ಹೆಚ್ಚಿಸಲು ಬೇರೇನನ್ನಾದರೂ ಬೆರೆಸುತ್ತಾನಾ ಅಂತ ಕಣ್ಣನ್ನು ಮುಚ್ಚದೆ, ನೋಡುತ್ತಿರುತ್ತೇವೆ.

– ಶ್ರುತಿ ಶರ್ಮಾ ಎಂ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.