Udayavni Special

ನಿನ್ನ ಪ್ರೀತಿ ಸಿಕ್ಕಿದ್ದಕ್ಕೆ ಜಂಭ ಬಂದಿದೆ!


Team Udayavani, Jul 3, 2018, 6:00 AM IST

x-11.jpg

ಜಂಭದ ಹುಡುಗಿ, ಜಂಭದ ಕೋಳಿ ಎಂದೆಲ್ಲಾ ಹುಡುಗರಿಂದ ಕರೆಸಿಕೊಂಡವಳು ನಾನು. ಅಂಥ ನನ್ನನ್ನೇ ಮೋಡಿ ಮಾಡಿ ಪ್ರೀತಿಯ ಬಲೆಗೆ ಕೆಡವಿಕೊಂಡೆಯಲ್ಲ; ನೀನು ಮಾಯ್ಕರ ಕಣೋ…

ಹಾಯ್‌ ಒಲವ ಹೂವೆ,
ಮುದ್ದು ಮೂಗಿನ ಚೆಲುವ… ಎಸ್ಟ್ ದಿನ ಆಯಿತು ನಿನ್ನ ನೋಡಿ? ಅದೇನೋ ತಾಳಲಾರದ ಚಡಪಡಿಕೆ, ತಿಳಿಯಲಾರದ ಹಂಬಲ ನಿನ್ನ ಬಳಿ ಮಾತನಾಡಲು. ಒಲವ ಸುಧೆಯನ್ನೇ ಈ ಬಡಪಾಯಿ ಹುಡುಗಿಯ ಮಡಿಲಿಗೆ ಸುರಿದೆಯಲ್ಲೋ ಹುಡುಗ. 

ನಿಷ್ಕಲ್ಮಶ ಪ್ರೀತಿ ಪಡೆಯಲು ಅಪಾರ ಪುಣ್ಯ ಮಾಡಿರಬೇಕಂತೆ. ಆದ್ರೆ, ನಾನೇನೂ ಅಂಥ ಘನಂದಾರಿ ಕೆಲಸ ಮಾಡಿಲ್ಲ. ಆದ್ರೂ ನಿನ್ನ ಪ್ರೀತಿಯನ್ನು ಕರುಣಿಸಿರುವ ಆ ದೇವರಿಗೆ ಧನ್ಯವಾದ. ಅದೆಷ್ಟೇ ಬಿಕ್ಕಳಿಸುವ ನೋವುಗಳಿರಲಿ, ನಿನ್ನ ಅಗಾಧ ಪ್ರೀತಿಯ ಪರಿ ನೆನೆದಾಗ ಎಲ್ಲಾ ದುಃಖವೂ ಮೈ ಮರೆತು ಹೋಗುತ್ತೆ. ಅಂಥಾ ಮೋಡಿಗಾರ ನೀನು. ಮತ್ತೇನು ಬೇಕು ಈ ಅಶಾಶ್ವತ ಜೀವನಕ್ಕೆ? 

ನಿನ್ನದು ಹುಚ್ಚು ಪ್ರೀತಿ ಎನಿಸಿದರೂ, ಕೊನೆ ಉಸಿರಿರೋವರೆಗೂ ಆ ಪ್ರೀತಿ ಮಳೆ ನನ್ನೆದೆಯಲ್ಲಿ ಸುರಿಯುತ್ತಿರಬೇಕು. ಇಷ್ಟೇ ಸಾಂದ್ರತೆಯ ಅನುರಾಗ ಜೀವನದುದ್ದಕ್ಕೂ ಬೇಕೆನಿಸುತ್ತದೆ. ನಿನ್ನ ಒಲವನ್ನು ಯಾರಿಗೂ ಬಿಟ್ಟು ಕೊಡಬಾರದೆಂಬ ಸ್ವಾರ್ಥ, ಇವನಿದ್ದ ಮೇಲೆ ನನಗೇಕೆ ಭಯ ಎಂದು ಯಾರಿಗೂ ಹೆದರದಷ್ಟು ಧೈರ್ಯ ಬಂದಿದೆ. ಅಷ್ಟೇ ಅಲ್ಲ, ನೀನು ಸಿಕ್ಕಿದ್ದರಿಂದ ವಿಪರೀತ ಎನಿಸುವಷ್ಟು ಕೊಬ್ಬೂ ಬಂದಿದೆ.  

  ಜಂಬದ ಹುಡುಗಿ ಅಂತ ಹುಡುಗರಿಂದ ನಾಮಕರಣಗೊಂಡ ನನ್ನನ್ನೇ ಪಳಗಿಸಿ ಪ್ರೀತ್ಸೋ ಹಾಗೆ ಮಾಡಿಕೊಂಡೆಯಲ್ಲ?! ಎಂದಿಗೂ ಸೋಲೊಪ್ಪದ ನನ್ನ ಅಚಲವಾದ ಕೆಲವು ನಿಲುವುಗಳನ್ನು ಬದಲಿಸಿ ನಿನ್ನಲ್ಲಿ ಬೀಳುವ ಹಾಗೆ ಮಾಡಿಕೊಂಡೆಯಲ್ಲ; ಏನಿದರ ಗುಟ್ಟು? ಹೇಳ್ಳೋ… ನಿನ್ನ ಅಂತಃಕರಣದ ನೈಜ ಪ್ರೀತಿಗೆ ನನ್ನೆಲ್ಲ ಹಮ್ಮು ಬಿಮ್ಮುಗಳೂ ಕರಗಿ ಹೋದವು. ಸೋತಿದ್ದಕ್ಕೆ ನನಗೇನೂ ಬೇಜಾರಿಲ್ಲ ಬಿಡು. ನಿನ್ನ ಪ್ರೀತಿ ದಕ್ಕಿತು ನೋಡು; ಅದೇ ಕಾರಣಕ್ಕೆ ನನ್ನ ಜಂಬ ಮತ್ತಷ್ಟು ಹೆಚ್ಚಿದೆ. ನನ್ನೆಲ್ಲಾ ತಪ್ಪುಗಳನ್ನು ಕ್ಷಮಿಸಿ ಮನಸ್ಸಿನಲ್ಲಿ ಜಾಗ ನೀಡಿದ್ದಕ್ಕೆ ನಿನಗೆ ಮತ್ತೂಮ್ಮೆ ತುಂಬಾ ಥ್ಯಾಂಕ್ಸ್‌. 

ಇಂತಿ ನಿನ್ನ
ಲಂಬು

ಪಲ್ಲವಿ ಎಡೆಯೂರು

ಟಾಪ್ ನ್ಯೂಸ್

shambo shiva shankara kannada film

ಮಾತಿನ ಮನೆಯಲ್ಲಿ ‘ಶಂಭೋ ಶಿವಶಂಕರ’

07

ನಟಿ ಮಿನಿಶಾ ಮೇಲೆ ಹಣ ಕಳುವು ಆರೋಪ ಕೇಳಿ ಬಂದಿತ್ತು: ಅಷ್ಟಕ್ಕೂ ಅಂದು ನಡೆದಿದ್ದೇನು ?

ಕುಲಹಳ್ಳಿಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ವಶ: ಬನಹಟ್ಟಿ ಪೊಲೀಸರಿಂದ ಇಬ್ಬರ ಬಂಧನ

ಕುಲಹಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ವಶ: ಇಬ್ಬರ ಬಂಧನ

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಸಿ.ಪಿ.ಯೋಗೇಶ್ವರ್

ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕೆ ಕಾಯೋಣ: ಬಿಜೆಪಿ ಬೆಳವಣಿಗೆ ಬಗ್ಗೆ ಯೋಗೇಶ್ವರ್

ಕಲಿಕಾ ನಿರಂತರತೆಗೆ ಕಾರ್ಯಪಡೆ ರಚನೆ: ಸಚಿವ ಸುರೇಶ್ ಕುಮಾರ್

ಕಲಿಕಾ ನಿರಂತರತೆಗೆ ಕಾರ್ಯಪಡೆ ರಚನೆ: ಸಚಿವ ಸುರೇಶ್ ಕುಮಾರ್

cpy

ಮುಂದಿನ ವಾರದಿಂದ ಪ್ರವಾಸೋದ್ಯಮಕ್ಕೆ ಅವಕಾಶ: ಸಚಿವ ಯೋಗೇಶ್ವರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

ಹೊಸ ಸೇರ್ಪಡೆ

rಗಹಗರ್ಗನಬಗ್ನಹಗ್

ಸಚಿವರ ವಿರುದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ

shambo shiva shankara kannada film

ಮಾತಿನ ಮನೆಯಲ್ಲಿ ‘ಶಂಭೋ ಶಿವಶಂಕರ’

07

ನಟಿ ಮಿನಿಶಾ ಮೇಲೆ ಹಣ ಕಳುವು ಆರೋಪ ಕೇಳಿ ಬಂದಿತ್ತು: ಅಷ್ಟಕ್ಕೂ ಅಂದು ನಡೆದಿದ್ದೇನು ?

ಕುಲಹಳ್ಳಿಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ವಶ: ಬನಹಟ್ಟಿ ಪೊಲೀಸರಿಂದ ಇಬ್ಬರ ಬಂಧನ

ಕುಲಹಳ್ಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ವಶ: ಇಬ್ಬರ ಬಂಧನ

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ: ಡಿ.ಕೆ. ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.