Udayavni Special

ಐ ಲೈಕ್‌ ದಿಸ್‌ ಅಂದು ಗ್ರೂಪ್‌ನಿಂದ ಹೊರ ಹೋದ….

Team Udayavani, Jul 23, 2019, 5:00 AM IST

i-10

ವ್ಯಾಟ್ಯಾಪ್‌; ನೆನಪಿನ ತೊಟ್ಟಿಲು
ಗ್ರೂಪ್‌ ಅಡ್ಮಿನ್‌ಗಳು; ನಾಗರೆಡ್ಡಿ, ಈರಣ್ಣ

ನಮ್ಮ ವ್ಯಾಟ್ಸಾಪ್‌ ಗ್ರೂಪ್‌ ಹೆಸರು ನೆನಪಿನ ತೊಟ್ಟಿಲು ಅಂತ. ಪ್ರಾರಂಭದಲ್ಲಿ ಪತ್ರಿಕೋದ್ಯಮ ಮಿತ್ರರು ಎಂದು ಇತ್ತು. ಆ ನಂತರ ಇದನ್ನು “ನೆನಪಿನ ತೊಟ್ಟಿಲು’ ಎಂದು ಮರು ನಾಮಕರಣ ಮಾಡಲಾಯಿತು. ಏನೇ ಮಾಡಿದ್ರೂ ಡಿಗ್ರಿ ಜೀವನ ಮರಳಿ ಬರುವುದಿಲ್ಲವಲ್ಲ? ಅದರ ನೆನಪಾದರೂ ಇರಲಿ ಅಂತ ಒಂದು ಗ್ರೂಪ್‌ ಮಾಡಿದೆವು. ಹಾಗಾಗಿ, ಪ್ರತಿದಿನ ನಮ್ಮ ಗುಂಪಿನಲ್ಲಿ ಹಳೆಯ ವಿಷಯಗಳ ಬಗ್ಗೆಯೇ ಚರ್ಚೆ ನಡೆಯುತ್ತಿರುತ್ತದೆ. ಹೀಗೊಂದು ದಿನ ಹರಟೆ ತುಂಬಾ ಜೋರಾಗಿ ನಡೆಯುತ್ತಿರುವಾಗಲೇ, ಸ್ನೇಹಿತನೊಬ್ಬ ಇದೇ ಗ್ರೂಪ್‌ನಲ್ಲಿ ಇರುವ ಹುಡುಗಿಯ ವ್ಯಾಟ್ಸಾಪ್‌ ಡಿಪಿ ಫೋಟೋವನ್ನು ಗ್ರೂಪ್‌ಗೆ ಹಾಕಿದ. ಆಮೇಲೆ “ಈ ಫೋಟೋ ಸೂಪರ್‌. ಐ ಲೈಕ್‌ ಯು’ ಎಂದು ಮೆಸೇಜ್‌ ಮಾಡಿದ. ಅದಕ್ಕೆ ಆ ಹುಡುಗಿ ಥ್ಯಾಂಕ್ಯೂ ಅಂತ ರಿಪ್ಲೇ ಮಾಡಿದಳು. ಆಗ ಅವನ ಖುಷಿಗೆ ಪಾರವೇ ಇರಲಿಲ್ಲ…

ಪರಿಣಾಮ, ಸೀದಾ ಆ ಹುಡುಗಿಯ ಮೊಬೈಲ್‌ಗೆ ಕಾಲ್‌ ಮಾಡಿ¨ªಾನೆ. ಹುಡುಗಿ ರಿಸೀವ್‌ ಮಾಡಿಲ್ಲ. ಇಡೀ ದಿನ ಅವಳಿಗೆ ಕಾಲ್‌ ಮಾಡುತ್ತಲೇ ಇ¨ªಾನೆ.

ಇತ್ತ ಕಡೆ. ಆ ಹುಡುಗಿಯಿಂದ ನನಗೆ ಕಂಪ್ಲೆಂಟ್‌ ಬಂತು. ಕೂಡಲೆ “ಲೇಯ್‌, ಆ ಹುಡುಗಿ ಥ್ಯಾಂಕ್ಸ್‌ ಹೇಳಿದ ತಕ್ಷಣ ನೀನು ಕಾಲ್‌ ಮಾಡಿದರೆ ಅವಳಿಗೆ ಭಯ ಆಗುತ್ತಂತೆ’ ಅಂತ ಅವನಿಗೆ ಹೇಳಿದೆ. ಅವನು, ” ಇಲ್ಲ ಕಣೋ, ನಾನು ಸಾರಿ ಕೇಳ್ಳೋಣ ಅಂತ ಕರೆ ಮಾಡಿದ್ದು’ ಅಂದ. ಅಲ್ಲಯ್ನಾ, ಸಾರಿ ಕೇಳ್ಳೋಕೆ ಇಡೀ ದಿನ ಕಾಲ್‌ ಮಾಡಬೇಕೇನಪ್ಪಾ? ಅಂತ ಸರಿಯಾಗಿ ಕ್ಲಾಸ್‌ ತಗೊಂಡೆ. ರಾತ್ರಿ ಇಡೀ ಅದರದ್ದೇ ಚರ್ಚೆ. ಕೊನೆಗೆ ಅವನನ್ನು ಗ್ರೂಪ್‌ ನಿಂದ ಹೊರ ತಳ್ಳಿದೆ. ಆದ್ರೆ ಅವನ ಕಾಟ ತಪ್ಪಲಿಲ್ಲ. ಮೇಲಿಂದ ಮೇಲೆ ಅವನ ಕಡೆಯಿಂದ ಕರೆಗಳು ಬರಲು ಶುರುವಾದವು. ಅದಕ್ಕೆ ತಲೆ ಕೊಡದೆ ಸುಮ್ಮನೆ ಮಲಗಿದೆ. ಬೆಳಗ್ಗೆ ಎದ್ದು ನೋಡಿದರೆ, ಬರೋಬ್ಬರಿ 25 ಮಿಸ್ಡ್ ಕಾಲ್‌ ಮಾಡಿದ್ದಾನೆ.

ಮತ್ತೆ ಕಾಲ್‌ ಮಾಡಿ ಸಮಾಧಾನ ಹೇಳಿ “ಒಂದೆರಡು ದಿನ ಸುಮ್ಕಿರು. ಆಮೇಲೆ ನಾನೇ ಗ್ರೂಪ್‌ಗೆ ಆಡ್‌ ಮಾಡ್ತೀನಿ’ ಅಂದೆ. ಅದಕ್ಕವನು ಸುಮ್ಮನಾದ. ಸುಮಾರು ಮೂರು ವಾರಗಳ ನಂತರ ಮತ್ತೆ ಅವನನ್ನು ಗ್ರೂಪ್‌ಗೆ ಸೇರಿಸಿದೆ. ಮತ್ತೆ ಅವನು ಲೈಕಾಸುರನಂತೆ ವರ್ತನೆ ಮಾಡಲಿಲ್ಲ. ಹಾಗಾಗಿ, ಗ್ರೂಪಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ.

ಮೈಲಾರಿ ಸಿಂಧುವಾಳ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಡಿ.ಕೆ ಶಿವಕುಮಾರ್

ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಡಿ.ಕೆ ಶಿವಕುಮಾರ್

ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ವಿಜಯಪುರ: ಭೀಮಾ ತೀರದ ಹೆಸರಿನಲ್ಲಿ ಸುಲಿಗೆ ನಡೆಸಿದ ಮೂವರ ಬಂಧನ

ವಿಜಯಪುರ: ಭೀಮಾ ತೀರದ ಹೆಸರಿನಲ್ಲಿ ಸುಲಿಗೆ ನಡೆಸಿದ ಮೂವರ ಬಂಧನ

ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

ಬೆಂಗಳೂರಿನಲ್ಲಿ ವರುಣನ ಅಬ್ಬರ: ಸಂತೃಸ್ಥ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿಎಂ ಬಿಎಸ್ ವೈ

ನಟ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ: ಬಂಡೀಪುರ ವಲಯ ಅರಣ್ಯಾಧಿಕಾರಿ ಸ್ಪಷ್ಟನೆ

ನಟ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ: ಬಂಡೀಪುರ ವಲಯ ಅರಣ್ಯಾಧಿಕಾರಿ ಸ್ಪಷ್ಟನೆ

ಪರಿಷತ್ ಚುನಾವಣಾ ಅಭ್ಯರ್ಥಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ

ಪರಿಷತ್ ಚುನಾವಣಾ ಅಭ್ಯರ್ಥಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

josh-tdy-3

ಬ್ಯಾಚುಲರ್‌ ಬದುಕಿನ ಆಸ್ತಿ ಹಂಚಿಕೆ

josh-tdy-2

ಆದರ್ಶ ಪ್ರಪಂಚ

josh-tdy-1

ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ …

josh-tdy-5

ಬಾರೋ ಸಾಧಕತ ಕೇರಿಗೆ : ಅರಮನೆಯ ಶಿಶು ಗುಡಿಸಲಲ್ಲಿ ಬೆಳೆಯಿತು!

MUST WATCH

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Special

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?ಹೊಸ ಸೇರ್ಪಡೆ

ಪುರಸಭೆಗೆ ಅರ್ಚನಾ ಅಧ್ಯಕ್ಷೆ

ಪುರಸಭೆಗೆ ಅರ್ಚನಾ ಅಧ್ಯಕ್ಷೆ

MYSURU-TDY-2

ವೈರಸ್‌ನಿಂದ ತಾಲೂಕು ಆಸ್ಪತ್ರೆಗೆ ವೆಂಟಿಲೇಟರ್‌, ಆಕ್ಸಿಜನ್‌ ಭಾಗ್ಯ

ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಡಿ.ಕೆ ಶಿವಕುಮಾರ್

ರಾಜ್ಯದ ಪ್ರತಿಯೊಬ್ಬ ಚಾಲಕರ ಕಷ್ಟ- ಸುಖದ ಜತೆ ನಾವಿರುತ್ತೇವೆ: ಡಿ.ಕೆ ಶಿವಕುಮಾರ್

MYSURU-TDY-1

ಕೋವಿಡ್ ಅಂತ್ಯ ತನಕ ನಿರ್ಲಕ್ಷ್ಯ ಬೇಡವೇ ಬೇಡ

ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು-ಕಾಶ್ಮೀರ: ಪಾಕಿಸ್ತಾನದ ಅತ್ಯಾಧುನಿಕ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.