ನಿನ್ನ ನೆನಪುಗಳಿಂದ ತಪ್ಪಿಸಿಕೊಳ್ಳುತ್ತೇನೆ!


Team Udayavani, Jan 28, 2020, 6:08 AM IST

ninna-nenapu

ಹೀಗೇ ಎಷ್ಟು ದಿನ ಉಳಿಯಲಿ? ಒಮ್ಮೆ ಕುಳಿತು ಯೋಚಿಸಿದೆ. ಒಂದು ಸಕಾರಾತ್ಮಕ ಯೋಚನೆ ಹೊಳೆಯಿತು. ನಾನಿನ್ನು ಏನಾದರೂ ಸಾಧಿಸಲು ನೀನೇ ಮುಖ್ಯ ಆಗಬೇಕು. ಎಂಥ ಸಂದರ್ಭದಲ್ಲೂ ಆತ್ಮವಿಶ್ವಾಸ ಕುಗ್ಗಬಾರದು ಎಂದು ನಿಶ್ಚಯಿಸಿದ ಗಳಿಗೆ ಯಾವುದಾಗಿತ್ತೋ ಗೊತ್ತಿಲ್ಲ….

ನಾನು ಏನಾಗಿದ್ದೆ? ಸ್ವಲ್ಪವೂ ಗಂಭೀರತೆ ರೂಢಿಸಿಕೊಳ್ಳದ ಜೀವನ, ಉಡಾಫೆತನ, ಸದಾ ಸ್ನೇಹಿತರ ದಂಡು ಅವರೊಂದಿಗೆ ಇದ್ದರಷ್ಟೇ ಪರಮಸುಖ. ಮುಂದಿನ ಜೀವನದ ಗುರಿ ಏನು ಎಂಬುದನ್ನು ಅರಿಯದೇ ಸಾಗುತ್ತಿದ್ದೆ. ನನ್ನ ಗೆಳೆಯರಂತೂ ಪ್ರೀತಿ-ಪ್ರೇಮ ಅಂದುಕೊಂಡು ಅವಳೇ ನೆನಪು, ಉಸಿರು, ಬದನೆಕಾಯಿ ಅಂದುಕೊಂಡು ಸಾಯುತ್ತಿದ್ದರು. ಆದರೆ, ನನಗೂ ಅದಕ್ಕೂ ಆಗಿಬರೋಲ್ಲ ಎಂಬುದನ್ನು ತಿಳಿದೋ ಅಥವಾ ಅದರಿಂದ ಈ ನೋವುಗಳನ್ನು ಅನುಭವಿಸುವ ಕರ್ಮ ಏಕೆ ಅಂದುಕೊಂಡೋ ಇವರುಗಳಿಗೆ ಸಹಾಯ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದೆ.

ಒಮ್ಮೆ ಗೆಳೆಯನ ಕಾಲೇಜಿನ ಬಳಿ ಹೋದಾಗ ಅವನ ಸಹಪಾಠಿ­ಯಾಗಿದ್ದ ನಿನ್ನನ್ನೊಮ್ಮೆ ಕಂಡೆ. ಆಗಲೇ, ಲವ್‌ ಆಗಿಬಿಡ್ತಾ? ಗೊತ್ತಿಲ್ಲ. ಅಂದಿನಿಂದ ನಿನ್ನ ಧ್ಯಾನ. ನೀನು ನನಗಿಷ್ಟ ಎಂದು ಹೇಳಿಕೊಳ್ಳಲು ಸಮಯವನ್ನೇನು ತೆಗೆದುಕೊಳ್ಳಲಿಲ್ಲ. ಹಾಗೆಯೇ, ಒಪ್ಪಿಕೊಳ್ಳಲು ನೀನೂ ನಿರಾಕರಿಸಲಿಲ್ಲ. ಇನ್ನೇನು ಬೇಕು ನಮಗೆ? ಮಾಮೂಲಿ ಸುತ್ತಾಟ, ತಿರುಗಾಟ. ಮನೆಯವರಿಗೂ ತಲುಪಿದ ವಿಷಯ. ಅಮ್ಮನಿಗೆ ನೀನೇ ಸೊಸೆ ಅನ್ನುವಷ್ಟರ ಮಟ್ಟಿಗೆ ಇಷ್ಟವಾದೆ. ಮನೆಯವರು ಯಾರೂ ಚಕಾರವೆತ್ತಲಿಲ್ಲ. ಆದರೆ, ಇದು ತಪ್ಪಾಗಿ ಹೋಗಿದ್ದು, ಕಾರಣವೇ ತಿಳಿಸದೇ ದೂರ ನೀ ಆದಾಗ!

ಅಸಲಿಗೆ ನಿನ್ನ ಮನಸ್ಸಿನಲ್ಲಿ ಏನಿತ್ತು? ಇಷ್ಟೆಲ್ಲಾ ಕನಸುಗಳನ್ನು ಕಾಣುವಂತೆ ಮಾಡಿ ಇದ್ದಕ್ಕಿದ್ದಂತೆ ನೀರು ಎರಚಿ ಹೊರಟಾಗ ನಾನು ನಾನಾಗಿ ಉಳಿಯಲಿಲ್ಲ. ತತ್ತರಿಸಿ ಹೋದೆ. ಹುಡುಕಿ ಹೊರಟೆ ನಿನ್ನೂರಿಗೆ. ನೀನು, ಅಲ್ಲೂ ಸಿಗಲಿಲ್ಲ. ಎಲ್ಲಿ ಹೋದೆಯೆಂದು ತಿಳಿಸುವವರಿಲ್ಲ. ನಾನು ಗಾಢವಾದ ಕತ್ತಲೆಯಲ್ಲಿ ಅಡಗಿಹೋದೆ. ಮನೆಯವರು ತತ್ತರಿಸಿ ಹೋದರು. ನನ್ನ ಪರಿಸ್ಥಿತಿ ಕಂಡು ಮರುಗುತ್ತಾ, ಸಮಾಧಾನ ಹೇಳುತ್ತಾ, ಅವಳಿಲ್ಲವೆಂದರೆ ಇನ್ನೊಬ್ಬಳು ಎಂದರು.

ಅವರಿಗೆ ಗೊತ್ತಿಲ್ಲ, ಅದು ನನ್ನೆದೆಯಲ್ಲಿ ಅರಳಿದ ಮೊದಲ ಹೂವೆಂದು. ಅದು ಕೊಟ್ಟು ಹೋದ ಸುವಾಸನೆ ಸುಮ್ಮನೆ ಹರಡಿಲ್ಲ ಎಂದು. ಹೀಗೇ, ಎಷ್ಟು ದಿನ ಉಳಿಯಲಿ? ಒಮ್ಮೆ ಕುಳಿತು ಯೋಚಿಸಿದೆ. ಒಂದು ಸಕಾರಾತ್ಮಕ ಯೋಚನೆ ಹೊಳೆಯಿತು. ನಾನಿನ್ನು ಏನಾದರೂ ಸಾಧಿಸಲು ನೀನೇ ಮುಖ್ಯ ಆಗಬೇಕು. ಎಂಥ ಸಂದರ್ಭದಲ್ಲೂ ಆತ್ಮವಿಶ್ವಾಸ ಕುಗ್ಗಬಾರದು ಎಂದು ನಿಶ್ಚಯಿಸಿದ ಗಳಿಗೆ ಯಾವುದಾಗಿತ್ತೋ ಗೊತ್ತಿಲ್ಲ.ಆದರೆ, ಇಂದು ಏನೋ ಸಾಧಿಸಿದ್ದೇನೆ.

ಹಣವಿದೆ, ಹೆಸರಿದೆ,ಜನರ ಬೆಂಬಲವಿದೆ. ಆದರೆ ನೀನು…..ಇಲ್ಲದ ಶೂನ್ಯ. ನನ್ನನ್ನೇ ನಾನು ಹುಡುಕಿಕೊಳ್ಳಬೇಕಾಗುತ್ತದೆ ಆಗ ನೀ ಮತ್ತೆ ಬೇಕು ಅನಿಸುತ್ತದೆ. ಹೊರಡುತ್ತೇನೆ. ಒಂಟಿಯಾಗಿ ನೀನು ನಾನು ಕುಳಿತ ಜಾಗಕ್ಕೆ. ಕಂಡ ಕನಸುಗಳು, ಕಳೆದುಕೊಂಡ ಮನಸ್ಸು ಎಲ್ಲ ನೆನಪಾಗಿ ಕಣ್ಣೀರಾಗುತ್ತೇನೆ ಮತ್ತೆ ಮೌನ. ವಾಪಾಸು ಆಗುತ್ತೇನೆ ನನ್ನ ನಾನು ಕಂಡುಕೊಳ್ಳಲು. ನಿನ್ನ ನೆನಪಿನೊಳಗೆ ನುಸುಳಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತೇನೆ ಕೆಲಸಗಳನ್ನು ಮೈ ಮೇಲೆ ಎಳೆದುಕೊಂಡು ಮತ್ತೆ ಹೊಸಬನಾಗಲು!!

* ಜಿ.ಲೋಕೇಶ

ಟಾಪ್ ನ್ಯೂಸ್

1-sfsfdf

ಬಸವರಾಜ್ ಹೊರಟ್ಟಿ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿದ ಜೆಡಿಎಸ್

ಕೇನ್ಸ್ ಚಲನಚಿತ್ರೋತ್ಸವ: ಭಾರತವನ್ನು ಪ್ರತಿನಿಧಿಸಿದ ನಟಿ ಪೂಜಾ ಹೆಗ್ಡೆ

ಕೇನ್ಸ್ ಚಲನಚಿತ್ರೋತ್ಸವ: ಭಾರತವನ್ನು ಪ್ರತಿನಿಧಿಸಿದ ನಟಿ ಪೂಜಾ ಹೆಗ್ಡೆ

1-fdfsfds-a

ರಾಜ್ಯದಲ್ಲಿ 2  ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾದ ಲುಲು ಗ್ರೂಪ್

Watch Video: ವಿಕ್ರಾಂತ್ ರೋಣದ..ರಾ..ರಾ..ರಕ್ಕಮ್ಮ ಮೊದಲ ಲಿರಿಕಲ್ ಹಾಡು ಬಿಡುಗಡೆ

Watch Video: ವಿಕ್ರಾಂತ್ ರೋಣದ..ರಾ..ರಾ..ರಕ್ಕಮ್ಮ ಮೊದಲ ಲಿರಿಕಲ್ ಹಾಡು ಬಿಡುಗಡೆ

ಪಂದ್ಯದ ವೇಳೆ ಕಾಣಿಸಿಕೊಂಡ ಎದೆನೋವು: ಆಸ್ಪತ್ರೆಗೆ ದಾಖಲಾದ ಕುಸಾಲ್ ಮೆಂಡಿಸ್

ಪಂದ್ಯದ ವೇಳೆ ಕಾಣಿಸಿಕೊಂಡ ಎದೆನೋವು: ಆಸ್ಪತ್ರೆಗೆ ದಾಖಲಾದ ಕುಸಾಲ್ ಮೆಂಡಿಸ್

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್

1-gfgdgdfg

ಶಿವಮೊಗ್ಗ: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

ಅರಿಯಬೇಕಿದೆ ದೇಶದ ನೈಜ ಇತಿಹಾಸ; ವಿಶಾಲ ಸ್ವಾಮಿ

ಅರಿಯಬೇಕಿದೆ ದೇಶದ ನೈಜ ಇತಿಹಾಸ; ವಿಶಾಲ ಸ್ವಾಮಿ

ನ್ಯಾಯಾಲಯದ ಆದೇಶ ಪಾಲಿಸಿ:ಶಿವಪ್ರಸಾದ ಮಠದ್‌

ನ್ಯಾಯಾಲಯದ ಆದೇಶ ಪಾಲಿಸಿ: ಶಿವಪ್ರಸಾದ ಮಠದ್‌

1-sfsfdf

ಬಸವರಾಜ್ ಹೊರಟ್ಟಿ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿದ ಜೆಡಿಎಸ್

21

ಬನಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಶಿಥಿಲ

ಕೇನ್ಸ್ ಚಲನಚಿತ್ರೋತ್ಸವ: ಭಾರತವನ್ನು ಪ್ರತಿನಿಧಿಸಿದ ನಟಿ ಪೂಜಾ ಹೆಗ್ಡೆ

ಕೇನ್ಸ್ ಚಲನಚಿತ್ರೋತ್ಸವ: ಭಾರತವನ್ನು ಪ್ರತಿನಿಧಿಸಿದ ನಟಿ ಪೂಜಾ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.