Udayavni Special

ಭಾವೋದ್ದೀಪನದಲ್ಲಿ ಬೆಚ್ಚಗಿನ ವರ್ಣಗಳ ಬೆಳಕಿನ ಪಾತ್ರ

Team Udayavani, Feb 25, 2020, 6:00 AM IST

Majj-7

ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫ‌ಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ ವರ್ಣಗಳ ಛಾಯೆಯನ್ನು ಹೊಮ್ಮಿಸುವಂತಿದ್ದರೆ, ಅದು ವಾರ್ಮ್ ಕಲರ್ಸ್‌. ಫೋಟೋಗ್ರಫಿಗೆ ಇದು ಬೇಕೇಬೇಕು.

ಕ್ಯಾಮೆರಾ ಕೈಯಲ್ಲಿ ಬಂದ ಹೊಸತರಲ್ಲಿ ಇದ್ಯಾವುದರ ಪರಿವೇ ಇರುವುದಿಲ್ಲ. ಸಿಕ್ಕ ಸಿಕ್ಕಿದ್ದನ್ನೆಲ್ಲಾ ಹುಮ್ಮಸ್ಸಿನಿಂದ ಸೆರೆಹಿಡಿಯುತ್ತಾ ಸಾಗಿದಾಗ, ತಿಳಿದೋ, ತಿಳಿಯದೆಯೋ ಹಲವಾರು ಪ್ರೇಮ್‌ಗಳು ಶಹಭಾಶ್‌ ಗಿರಿ ಪಡೆಯುವುದು ಸಹಜವೇ. ಅಚಾನಕ್‌ ಆಗಿ ಅವುಗಳಲ್ಲೊಂದು ತರುಣಿಯ ಸುಂದರ ಚಿತ್ರನೋಡಿ ಪ್ರಭಾವಿತಳಾದ, ದೂರದ ಊರಿಗೆ ನಡು ಹಗಲು ಹೊರಟು ನಿಂತ ಪರಿಚಯದ ಯವ್ವನೆಯೊಬ್ಬಳಿಗೆ ನಿಮ್ಮ ಬಗ್ಗೆ ಅಭಿಮಾನ ಉಕ್ಕಿ ಬಂತು ಅನ್ನಿ. “ನಂದೂ ಒಂದು ಫೋಟೋ ಈ ಥರಾನೇ ತೆಗೀರೀ’ ಅಂತ ಗಂಟು ಬಿದ್ದರೆ, ಓಹ್‌, ಅದಾ…ಸೂರ್ಯಾಸ್ತದ ಸಂಜೆ ತೆಗೆದದ್ದು ಎನ್ನುವ ಸಮಜಾಯಿಶಿಯನ್ನು ಕೊಟ್ಟು ಜಾರಿಕೊಳ್ಳಬಹುದು. ಅದರ ಬದಲು ಆ ಬಗೆಯ ವಾರ್ಮ್ ಕಲರ್ಸ್‌ ಬಣ್ಣಗಳ ಬೆಳಕನ್ನು ಹೇಗಾದರೂ ದೊರಕಿಸಿಕೊಂಡು, ಅದಕ್ಕೊಂದು ಹಿನ್ನೆಲೆ ಹೊಂದಿಸಿಕೊಂಡು ಆಕೆಯ ಭಾವಪೂರ್ಣ ಭಂಗಿಯೊಂದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲಿ ನಿಮ್ಮ ಕೈ ಚಳಕ ತೋರಿಸಬಲ್ಲಿರಾದರೆ, ಸಾಧನೆಯ ಮೆಟ್ಟಲೊಂದನ್ನು ಏರಿ ನಿಂತಿದ್ದೀರಿ ಅಂತಲೇ ಅರ್ಥ.

ನಾವೆಲ್ಲಾ ತಿಳಿದಂತೆ, ವರ್ಣಗಳಲ್ಲಿ ಹಲವು ವಿಧ, ಮೂಲ (Primary), ಒಂದಕ್ಕೊಂದು ಪೂರಕ (Supplementary), ಅವಲಂಬಿತ (Dependent), ವೈದೃಶ್ಯ (Contrast) ಇತ್ಯಾದಿ. ಒಂದೊಂದು ಬಣ್ಣವೂ, ಕಣ್ಣಿಗೆ ಹೇಗೆ ಬೇರೆ ಬೇರೆ ರಂಗಿನಲ್ಲಿ ಗೋಚರಿಸುವುದೋ, ಹಾಗೆಯೇ ಬೇರೆ ಬೇರೆ ಭಾವನೆಯನ್ನೂ ನೋಡುಗನ ಮನಸ್ಸಿನಮೇಲೆ ಉಂಟುಮಾಡಬಲ್ಲದು. ವಾರ್ಮ್ ಕಲರ್‌ಗಳು ಪ್ರಭಾವಿಸುವ ಭಾವನೆಗಳು ಸಾಮಾನ್ಯವಾಗಿ, ಮುನ್ನುಗ್ಗುವ ಧೈರ್ಯ, ಅತಿಶಯ ಲಾವಣ್ಯ, ಗಾಂಭೀರ್ಯ, ರೌದ್ರ, ಭಯ, ತಳಮಳ, ಕೂಡಲೇ ತನ್ನೆಡೆ ಸೆಳೆಯುವ ಮತ್ತು ಭಾವ ಪ್ರಚೋದಿತ ಇಲ್ಲಿ ಇಬ್ಬರು ತರುಣಿಯರ ಮುಖಭಾವವನ್ನು ವಸ್ತುವಾಗಿಟ್ಟು ಕೊಳ್ಳೋಣ. ಮೊದಲನೆಯದು, ಸ್ಯಾಟಿನ್‌ ಟಚ್‌ ಎಂದು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳಲ್ಲಿ ಬಹುಮಾನಗಳಿಸಿರುವ ಭಾವಚಿತ್ರ. ಇದನ್ನು ತೆಗೆದವರು ಮೊಹಮ್ಮದ್‌ ಆರ್ಫಾನ್‌ ಆಸಿಫ್. ಇಳಿ ಸಂಜೆಯ ಸೂರ್ಯನ ಬೆಳಕನ್ನೇ ತರುಣಿಯ ತಲೆಯ ಹಿಂಬದಿಯಿಂದ ಬೀಳುವಂತೆ ಆಕೆಯನ್ನು ಕುಳ್ಳರಿಸಿ. ನಂತರ, ಹಿನ್ನೆಲೆಯಲ್ಲಿ ಕಡು ಕೆಂಪು ಮಿಶ್ರಿತ ಕಂದು ಸೀರೆಯನ್ನು ಮೇಲಿನಿಂದ ಇಳಿ ಬಿಟ್ಟು, ಅದು ಪಾರದರ್ಶಿಕವಾಗದಂತೆ ದಪ್ಪದಾದ ಕಂದು ಉಣ್ಣೆಯ ಹಾಸನ್ನು ಅದಕ್ಕೆ ಜೋಡಿಸಿ ಜೊತೆಗೇ ಇಳಿಬಿಟ್ಟು, ಅದರ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳದಂತೆ ಎಚ್ಚರವಹಿಸಿರುವುದು. ಕೊನೆಯದಾಗಿ, ತರುಣಿಯ ಮುಖಾರವಿಂದಾರ , ಮುಂದಿನ ನೀಳ ಕೇಶರಾಶಿ ಮತ್ತು ಹಿನ್ನೆಲೆಯನ್ನೂ ತೆಳುವಾಗಿ ಸ್ಪರ್ಷಿಸುವಂತೆ ಆಕೆಯ ಮುಖದೆದುರು, ಆರು ಅಡಿ ದೂರ ತುಸು ಎತ್ತರದಲ್ಲಿ ಹಿಡಿದ ಪ್ರತಿಫ‌ಲಕ ಇಟ್ಟಿದ್ದಾರೆ. (Crumped Aluminium
Foil Refl ector ) ಅದರ ಸಹಾಯದಿಂದ ತಲೆಯ ಬದಿಯಿಂದ ಮುಂದುವರಿದ ಅದೇ ಕೆಂಪು ಸೂರ್ಯಕಿರಣಗಳನ್ನು ಪ್ರತಿಫ‌ಲನಗೊಳಿಸಿರುವುದು ಆಸಿಫ್ ಅವರ ಬೆಳಕಿನ ಮೇಲಿನ ಹಿಡಿತ ಮತ್ತು ತಾಂತ್ರಿಕ ಪರಿಣಿತಿಗೆ ಕನ್ನಡಿ ಹಿಡಿದಂತಿದೆ.

ಇನ್ನೊಂದು, ನಾನು ಸೆರೆಹಿಡಿದ ಪರಿಚಿತ ತರುಣಿಯದ್ದು. ಮಹಡಿ ಮನೆಯ ತೆರೆದ ಬಾಲ್ಕನಿಯಲ್ಲಿ ಬೆಳಗ್ಗೆ ಹತ್ತರ ಆಸು ಪಾಸು. ಆಕೆಯ ಲಾವಣ್ಯಪೂರಿತ, ಮನೋಧೃಡತೆಯುಳ್ಳ ಮುಖಭಾವದ ಜೊತೆಗೆ, ಪೂರಕ ನೀಳ ಬಾಹು- ಕೈನ ಭಾಗಗಳು ಕೆಂಚುಬಣ್ಣದ ಗುಂಗುರು ಕೇಶರಾಶಿ ಮತ್ತು ಸ್ವಲ್ಪ ಕೆಂಪು ತ್ವಚೆಯುಳ್ಳ ಮೈಬಣ್ಣ . ಅವೆಲ್ಲಾ ಸಹಜವಾಗಿಯೇ ವಾರ್ಮ್ ಕಲರ್ಸ್‌ ಚಿತ್ರಣಕ್ಕೆ ಹೇಳಿಮಾಡಿಸಿದಂತಿತ್ತು. ಆಕಾಶದಿಂದ ಮಂದವಾದ (Overcast & Diff used) ಬೆಳಗಿನ ಬೆಳಕು ತರುಣಿಯ ಹಿಂಬದಿಯಿಂದ ಬರುವಂತೆ ನೋಡಿಕೊಂಡು ಆಕೆಯನ್ನು ಕುಳ್ಳರಿಸಿ, ಆಕೆಯ ಮುಖದೆದುರು ಐದಡಿ ಅಂತರದಿಂದ ದೊಡ್ಡ ಥರ್ಮೋಕೋಲ್‌ ಶೀಟ್‌ ಹಿಡಿದು, ಪೂರಕ ಬೆಳಕನ್ನು ಪ್ರತಿಫ‌ಲಿಸಿ ಈ ಭಂಗಿಯನ್ನು ಸೆರೆಹಿಡಿದದ್ದು.

ಸ್ಯಾಟಿನ್‌ ಟಚ್‌ ; 200 ಎಂ.ಎಂ., f 5.6 ; 1/60 ಸೆಕೆಂಡ್‌, 100 ಐ.ಎಸ್‌.ಒ. ಟ್ರೈಪಾಡ್‌ ಬಳಸಿದೆ.

ಭಾವಲಹರಿಯ ಧೀಮಂತೆ ; 90 ಎಂ.ಎಂ. f 5.6 1/80 ಸೆಕೆಂಡ್‌, 200 ಐ.ಎಸ್‌.ಒ; ಟ್ರೈಪಾಡ್‌ ಬಳಸಿದೆ

ಕೆ.ಎಸ್‌.ರಾಜಾರಾಮ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-7

ಆವತ್ತು ನಾನೇ ಯಕ್ಷಗಾನ ಮಾಡಿದ್ದು..

ನೀನೆಂದರೆ ನನ್ನೊಳಗೆ..

ನೀನೆಂದರೆ ನನ್ನೊಳಗೆ..

ಆಫ್ ಬೀಟ್ ಕೋರ್ಸ್

ಆಫ್ ಬೀಟ್ ಕೋರ್ಸ್

ಶಿಕ್ಷಕಿಯಾದೆ, ಐಸಿಎಸ್‌ ಕೂಡ ಮಾಡಿದೆ!

ಶಿಕ್ಷಕಿಯಾದೆ, ಐಸಿಎಸ್‌ ಕೂಡ ಮಾಡಿದೆ!

ರಿಯಲ್‌ ಹೀರೋ ಮತ್ತು…

ರಿಯಲ್‌ ಹೀರೋ ಮತ್ತು…

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ