Udayavni Special

ಆರು ಹಿತವರು ನಿನಗೆ ಈ ಮೂವರೊಳಗೆ?!


Team Udayavani, Feb 11, 2020, 6:16 AM IST

kemmu-9

ಮೊದಲಿಗೆ, ಮಕ್ಕಳ ಒಲವು ಯಾವ ಕ್ಷೇತ್ರದ ಕಡೆಗಿದೆ ಎಂದು ಗಮನಿಸಿ ಆ ನಿಟ್ಟಿನಲ್ಲಿ ಬೆಳೆಯಲು ಪೋ›ತ್ಸಾಹ ನೀಡಬೇಕು. ಯಾವ ಕೋರ್ಸ್‌ ತೆಗೆದುಕೊಂಡರು ಎಂಬುದು ಮುಖ್ಯವಲ್ಲ. ಯಾವ ಶ್ರೇಣಿಯಲ್ಲಿ ಉತ್ತೀರ್ಣರಾದರು ಮತ್ತು ಯಾವ ಮಟ್ಟಿಗಿನ ಸಂತೋಷವನ್ನು ಅವರು ಆ ಕಲಿಕೆಯಲ್ಲಿ ಕಂಡುಕೊಂಡರು ಎಂಬುದು ಮುಖ್ಯ. ಬಲವಂತಕ್ಕೆ ಇಂಜಿನಿಯರಿಂಗ್‌ ಓದಿ ಮೂರನೆಯ ದರ್ಜೆಯಲ್ಲಿ ಪಾಸಾಗುವುದಕ್ಕಿಂತ ಬಿ.ಎಸ್‌ಸಿಯಲ್ಲಿ ಚಿನ್ನದ ಪದಕ ಗಳಿಸುವುದು ಉತ್ತಮವಲ್ಲವೆ?

ಮಕ್ಕಳು ಎಸ್‌.ಎಸ್‌.ಎಲ್‌.ಸಿ. ತಲುಪುತ್ತಿದ್ದಂತೆ ತಂದೆ ತಾಯಿಗಳಿಗೆ ಚಿಂತೆ ಆರಂಭ. ಮಕ್ಕಳನ್ನು ಮುಂದೆ ಯಾವ ಕೋರ್ಸ್‌ಗೆ ಸೇರಿಸಿದರೆ ಒಳಿತು? ವಿಜ್ಞಾನವೊ, ಕಲೆಯೊ, ವಾಣಿಜ್ಯವೋ? ಜೊತೆಗೆ, ಆ ಮಗು ಎಸ್‌.ಎಸ್‌.ಎಲ್‌.ಸಿಯಲ್ಲಿ ಗಳಿಸುವ ಅಂಕವೂ ಅವನ ಭವಿಷ್ಯವನ್ನು ನಿರ್ಧರಿಸಿಬಿಡುತ್ತದೆ. ವಿಜ್ಞಾನ, ಗಣಿತಗಳಲ್ಲಿ ಹೆಚ್ಚು ಅಂಕಗಳಿಸಿದ್ದರೆ ವಿಜ್ಞಾನ, ಅದರಲ್ಲಿ ಸುಮಾರಾಗಿ ಬಂದರೆ ವಾಣಿಜ್ಯ, ಕಡಿಮೆ ಬಂದರೆ ಕಲೆ. ಹೆಚ್ಚಾಗಿ ಎಲ್ಲ ತಾಯ್ತಂದೆಯರ, ಹಿರಿಯರ ಆಲೋಚನೆ ಹೀಗೇ ಇರುತ್ತದೆ. ಆದರೆ, ವಾಸ್ತವದಲ್ಲಿ ಮಗುವಿನ ಅಂತರಂಗದ ತುಡಿತ ಏನಿದೆ ಎಂದು ತಿಳಿಯುವ ಪ್ರಯತ್ನವನ್ನು ಹೆಚ್ಚಿನವರು ಮಾಡುವುದೇ ಇಲ್ಲ. ಬದುಕಿನ ಅಳತೆಯ ಮಾಪಕ ಹಣವೋ, ಆಸ್ತಿಯೋ, ಐಷಾರಾಮಿ ಜೀವನವೋ ಅಲ್ಲ. ಅದು ಒಳಗಿನ ಆನಂದ ತೃಪ್ತಿಗಳನ್ನು ತುಂಬಿಕೊಡುವಷ್ಟಿದ್ದರೆ ಸಾಕು. ಆದರೆ, ಈ ಅರಿವು ಮೂಡುವ ವೇಳೆಗೆ ಹರೆಯವೇ ಜಾರಿ ಹೋಗಿರುತ್ತದೆ! ಇದರಲ್ಲಿ ಶಿಕ್ಷಣ ವ್ಯವಸ್ಥೆಯ ದೋಷ ಒಂದು ಭಾಗವಾದರೆ ಪಾಲಕ / ಪೋಷಕರ ಒತ್ತಡ ಇನ್ನೊಂದು ಭಾಗವಾಗಿ, ಮಗುವಿನ ಸೃಜನಶೀಲತೆಯನ್ನು ಒತ್ತಿಹಾಕಿಬಿಡುತ್ತವೆ.

ವಿಜ್ಞಾನಿಗರು
ವಿಜ್ಞಾನವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಮೆಡಿಕಲ್‌, ಇಂಜಿನಿಯರಿಂಗ್‌ ಬಿಟ್ಟು ಬೇರೆ ಕೋರ್ಸ್‌ಗಳಿಲ್ಲವೆ ಎಂದರೆ, ಅದು ಹಾಗಲ್ಲ, ಬೇಕಾದಷ್ಟು ಕೋರ್ಸ್‌ಗಳಿವೆ. ಆದರೆ, ಇವರು ಅತ್ತ ಮುಖ ಮಾಡುತ್ತಿಲ್ಲ ಅಷ್ಟೆ. ಫಿಸಿಯೊಥೆರಪಿ, ಇಂಟಗ್ರೇಟಡ್‌ ಎಂ.ಎಸ್‌.ಸಿ., ನರ್ಸಿಂಗ್‌, ಡೈರಿ ಟೆಕ್ನಾಲಜಿ, ಫಾರ್ಮಸಿ, ಆಕ್ಯುಪೇಷನಲ್‌ ಥೆರಪಿ, ಜನರಲ್‌ ನರ್ಸಿಂಗ್‌, ಮೆಡಿಕಲ್‌ ಲ್ಯಾಬ್‌ ಟೆಕ್ನಾಲಜಿ, ಪ್ಯಾರಾಮೆಡಿಕಲ್‌ ಕೋರ್ಸ್‌ಗಳು ಇವೆಲ್ಲ ಪದವಿಗಳಿವೆ. ಫಾರೆನ್ಸಿಕ್‌ ಸೈನ್ಸ್‌ ಕೂಡ ಬೇಡಿಕೆಯಲ್ಲಿರುವ ಕೋರ್ಸ್‌. ಇನ್ನು ವಿಜ್ಞಾನದ ವಿದ್ಯಾರ್ಥಿಗಳು ಗಳಿಸಬಹುದಾದ ಡಿಪ್ಲೊಮಾಗಳ ಪಟ್ಟಿ ಕೂಡ ದೊಡ್ಡದು. ಬ್ಯೂಟಿಕಲ್ಚರ್‌ ಅಂಡ್‌ ಹೇರ್‌ ಡ್ರೆಸಿಂಗ್‌, ಕಂಪ್ಯೂಟರ್‌ ಹಾರ್ಡ್‌ವೇರ್‌, ಫ್ಯಾಷನ್‌ ಡಿಸೈನಿಂಗ್‌, ಡ್ರೆಸ್‌ ಡಿಸೈನಿಂಗ್‌, ಕಟಿಂಗ್‌ ಅಂಡ್‌ ಟೇಲರಿಂಗ್‌, ವೆಬ್‌ ಡಿಸೈನಿಂಗ್‌, ಗ್ರಾಫಿಕ್‌ ಡಿಸೈನಿಂಗ್‌, ಟೆಕ್ಸ್‌ಟೈಲ್‌ ಡಿಸೈನಿಂಗ್‌, ಹಾಸ್ಪಿಟಲ್‌ ಕೇರ್‌ ಅಂಡ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌, ಫಿಲ್ಮ್ ಆರ್ಟ್‌ ಆಡಿಯೊ / ವಿಷುವಲ್‌ ಎಡಿಟಿಂಗ್‌, ಅನಿಮೇಷನ್‌ ಮತ್ತು ಮಲ್ಟಿಮೀಡಿಯಾ, ಏರ್‌ ಹೋಸ್ಟೆಸ್‌, ಏರ್‌ ಕ್ರೂ, ಇವೆಂಟ್‌ ಮ್ಯಾನೇಜ್‌ಮೆಂಟ್‌ ಇವೆಲ್ಲ ಹೊಸ ಕೋರ್ಸ್‌ಗಳು. ಸಾಂಪ್ರದಾಯಿಕವಾದ ಸಿವಿಲ್‌, ಇಲೆಕ್ಟ್ರಿಕಲ್‌, ಮೆಕಾನಿಕಲ್‌ ಇತ್ಯಾದಿ ಕೋರ್ಸ್‌ಗಳಿಗಿಂತ ಭಿನ್ನವಾದ ಈ ಹೊಸ ಡಿಪ್ಲೊಮಾಗಳು ನವಮಾದರಿಯ ಜೀವನಕ್ಕೆ ಇಂಬುಕೊಡುವಂಥಹವು. ವಾಣಿಜ್ಯ ವಿಷಯದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಬಿ.ಕಾಂ. ಬಿ.ಬಿ.ಎ.ಗಳಲ್ಲದೆ, ಬಿ.ಬಿ.ಎಸ್‌., ಬ್ಯಾಚಲರ್ ಇನ್‌ ಇಕಾನಾಮಿಕ್ಸ್‌, ಬಿ.ಎಮ್‌.ಎಸ್‌., ಸಿ.ಎ., ಸಿ.ಎಸ್‌. ಸರ್ಟಿಫೈಡ್‌ ಫೈನಾನ್ಷಿಯಲ್‌ ಪ್ಲಾನರ್‌ (ಸಿ.ಎಫ್.ಪಿ) ಸಿ.ಎಮ್‌.ಎ, ಬಿ.ಎಫ್.ಎ. ಬ್ಯಾಚಲರ್‌ ಆಫ್ ಅಕೌಂಟಿಂಗ್‌, ಬ್ಯಾಚಲರ್‌ ಆಫ್ ಆಕುrಯೇರಿಯಲ್‌ ಸೈನ್ಸ್‌ (ಪ್ರಾಡಕ್ಟ್ ಬೆಲೆ ನಿಷ್ಕರ್ಷೆ, ಮೌಲ್ಯ ವಿವೇಚನೆ, ಲಾಭ-ನಷ್ಟ ಲೆಕ್ಕಾಚಾರಗಳ ವಿಜ್ಞಾನ; ಮುಖ್ಯವಾಗಿ ಇನುÒರೆನ್ಸ್‌ ರಿಸ್ಕ್ಗಳನ್ನು ಮತ್ತು ಪ್ರೀಮಿಯಮ್‌ಗಳನ್ನು ಸ್ಟಾಟಿಸ್ಟಿಕ್ಸ್‌ ಬಳಸಿ ಲೆಕ್ಕ ಹಾಕುವ ಪರಿಣತಿ) ಇವೆಲ್ಲ ಕೋರ್ಸ್‌ಗಳಲ್ಲಿ ಮುಂದುವರಿಯಬಹುದು. ಇದಲ್ಲದೆ ಮಾನವ ಸಂಪನ್ಮೂಲ ನಿರ್ವಹಣೆ, ಮ್ಯಾನೇಜ್‌ಮೆಂಟ್‌ ಅಕೌಂಟಿಂಗ್‌, ಬ್ಯಾಂಕಿಂಗ್‌, ಬ್ಯುಸಿನೆಸ್‌ ಕಮ್ಯುನಿಕೇಷನ್‌, ಬ್ಯುಸಿನೆಸ್‌ ನಿಯಂತ್ರಣದ ರೂಪುರೇಷೆಗಳ ನಿಷ್ಕರ್ಷೆಯ ಹೊಣೆಯನ್ನೂ ಇವರು ಹೊರಬಹುದು.

ಕಲಾಕಾರರು
ಕಲಾ ವಿಷಯದಲ್ಲಿ ಅಧ್ಯಯನ ಮುಂದುವರೆಸಿದವರೆಲ್ಲ ಅಧ್ಯಾಪಕರಾಗಬೇಕಾಗಿಲ್ಲ. ಬಿ.ಎಫ್.ಎ., ಬಿ.ಎಚ್‌.ಎಮ್‌, ಬಿ.ಇ.ಎಮ್‌., ಬಿ.ಜೆ.ಎಮ್‌., ಬಿ.ಎಫ್.ಡಿ, ಬಿ.ಎಸ್‌.ಡಬ್ಲೂ, ಬಿ.ಆರ್‌.ಎಮ್‌ (ಬ್ಯಾಚಲರ್‌ ಆಫ್ ರೀಟೇಲ್‌ ಮೆನೇಜ್‌ಮೆಂಟ್‌), ಎವಿಯೇಷನ್‌ ಕೋರ್ಸ್‌ (ಕ್ಯಾಬಿನ್‌ ಕ್ರೂ), ಬಿ.ಟಿ.ಟಿ.ಎಮ್‌ (ಬ್ಯಾಚಲರ್‌ ಆಫ್ ಟ್ರಾವಲ್‌ ಆಂಡ್‌ ಟೂರಿಸಮ್‌ ಮೆನೇಜ್‌ಮೆಂಟ್‌) ಈ ಎಲ್ಲ ಕೋರ್ಸ್‌ಗಳು ಅವರಿಗೆ ಜೀವನದ ಮಾರ್ಗವನ್ನು ತೆರೆಯಬಲ್ಲವು. ಯಾವುದೇ ಕಲಿಕೆಯ ಉದ್ದೇಶ ಉದ್ಯೋಗ. ಹಾಗಾದರೆ, ಈ ಮೂರು ಮಾರ್ಗಗಳಲ್ಲಿ ಯಾವ ಮಾರ್ಗದಿಂದ ಉತ್ತಮ ಬದುಕನ್ನು ಅರಸಬಹುದು? ಇದೊಂದು ಕೋಟಿ ವರಹದ ಪ್ರಶ್ನೆ. ಆದರೆ, ಉತ್ತರ ಮಾತ್ರ ಲೇಖನದ ಮೊದಲ ಪ್ಯಾರಾದಲ್ಲಿಯೇ ಇದೆ. ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದು, ಮೈ ತಣಿಸುವುದು, ಆಸ್ತಿ ಕೂಡಿಡುವುದು ಮುಖ್ಯವಲ್ಲ. ಹಾಗೆಂದು, ಹಣದ ಹಂಗೇ ಬೇಡವೆಂದಲ್ಲ. ಆದರೆ, ವೃತ್ತಿಯಿಂದ ಆನಂದ, ತೃಪ್ತಿ ದೊರೆಯದಿದ್ದರೆ ಅದು ಶಿಕ್ಷೆ ಎಂದು ತೋರಿಬರುತ್ತದೆ. ಮೊದಲಿಗೆ, ಮಕ್ಕಳ ಒಲವು ಯಾವ ಕ್ಷೇತ್ರದ ಕಡೆಗಿದೆ ಎಂದು ಗಮನಿಸಿ ಆ ನಿಟ್ಟಿನಲ್ಲಿ ಬೆಳೆಯಲು ಪೋ›ತ್ಸಾಹ ನೀಡಬೇಕು. ಯಾವ ಕೋರ್ಸ್‌ ತೆಗೆದುಕೊಂಡರು ಎಂಬುದು ಮುಖ್ಯವಲ್ಲ. ಯಾವ ಶ್ರೇಣಿಯಲ್ಲಿ ಉತ್ತೀರ್ಣರಾದರು ಮತ್ತು ಯಾವ ಮಟ್ಟಿಗಿನ ಸಂತೋಷವನ್ನು ಅವರು ಆ ಕಲಿಕೆಯಲ್ಲಿ ಕಂಡುಕೊಂಡರು ಎಂಬುದು ಮುಖ್ಯ. ಬಲವಂತಕ್ಕೆ ಇಂಜಿನಿಯರಿಂಗ್‌ ಓದಿ ಮೂರನೆಯ ದರ್ಜೆಯಲ್ಲಿ ಪಾಸಾಗುವುದಕ್ಕಿಂತ ಬಿ.ಎಸ್‌ಸಿಯಲ್ಲಿ ಚಿನ್ನದ ಪದಕ ಗಳಿಸುವುದು ಉತ್ತಮವಲ್ಲವೆ?

ನನ್ನ ವಿದ್ಯಾರ್ಥಿಯೊಬ್ಬ ಇಂಜಿನಿಯರಿಂಗ್‌ ಬಿಟ್ಟು ಬಿ.ಎ. ಜರ್ನಲಿಸಮ್‌ ಅನ್ನು ಉತ್ತಮ ಶ್ರೇಣಿಯಲ್ಲಿ ಪಾಸಾಗಿ ಇಂದು ಅಂತಾರಾಷ್ಟ್ರೀಯ ಪತ್ರಿಕೆಯೊಂದರ ಸಂಪಾದಕನಾಗಿದ್ದಾನೆ. ಜೊತೆಗೆ ಅವನ ಗಳಿಕೆಯೂ ಉತ್ತಮವಾಗಿದೆ? ಮತ್ತೂಬ್ಬ ವಿದ್ಯಾರ್ಥಿನಿ ವೈದ್ಯಕೀಯ ಬಿಟ್ಟು ಕಲಾವಿಭಾಗಕ್ಕೆ ಬಂದು ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಪದಕ, ರ್‍ಯಾಂಕ್‌ ಪಡೆದಳು. ಕೋರ್ಸ್‌ ಮುಖ್ಯವಲ್ಲ, ಆಸಕ್ತಿ ಮುಖ್ಯ. ಕಾಲೇಜು ಕೋರ್ಸ್‌ಗಳು ಇಂದು ವಿಪುಲವಾಗಿವೆ. ನವಸಮಾಜದ ಬೇಡಿಕೆಗಳನ್ನು ಪೂರೈಸಲು ಸರ್ವಿಸ್‌ ಸೆಕ್ಟರ್‌ ಆಕ್ಟೋಪಸ್‌ನಂತೆ ತನ್ನ ಬಾಹುಗಳನ್ನು ವ್ಯಾಪಿಸುತ್ತಿದೆ. ಇಂಟರ್ನ್ಶಿಪ್‌ ನೀಡುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ. ಆಗ ಹಲವಾರು ಪ್ರಾಯೋಗಿಕ ಅಂಶಗಳು ಮನದಟ್ಟಾಗುತ್ತವೆ. ಕೈ ಕುದುರಿ ಮುಂದೆ ಉದ್ಯೋಗ ಗಳಿಸಲು ಅನುಕೂಲ ಆಗುತ್ತದೆ. ಒಟ್ಟಿನಲ್ಲಿ, ನಿಮ್ಮ ಆಸಕ್ತಿಯನ್ನು ಅನುಸರಿಸಿ ಕೋರ್ಸ್‌ ಆಯ್ಕೆಯಾಗಲಿ. ಅಗತ್ಯವಿದ್ದಲ್ಲಿ ಆಪ್ತಸಮಾಲೋಚಕರ, ಶಿಕ್ಷಣ ಸಮಾಲೋಚಕರ ನೆರವು ಪಡೆಯಲು ಹಿಂಜರಿಯದಿರಿ. ಮೂರು ದಾರಿಯಲ್ಲಿ ಯಾವ ದಾರಿ ಎಂಬ ಚಿಂತೆ ಬೇಡ, ನಡಿಗೆ ನಂದನವನದತ್ತ ಸಾಗಲಿ. ಗುರಿ ನಿಖರವಾಗಿದ್ದರೆ ದಾರಿ ತಾನೇ ತಾನಾಗಿ ತೆರೆದುಕೊಳ್ಳುತ್ತದೆ. ನೆಮ್ಮದಿಯ ಬದುಕು ನಿಮ್ಮದಾಗಲಿ.

ಪ್ರೊ|| ರಘು. ವಿ, ಪ್ರಾಂಶುಪಾಲರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಕಾಳಗ; ಐವರು ಉಗ್ರರ ಸಾವು, 3 ಯೋಧರು ಹುತಾತ್ಮ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಕೋವಿಡ್-19 ಗೆದ್ದ 104 ವರ್ಷದ ಸೈನಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-7

ಆವತ್ತು ನಾನೇ ಯಕ್ಷಗಾನ ಮಾಡಿದ್ದು..

ನೀನೆಂದರೆ ನನ್ನೊಳಗೆ..

ನೀನೆಂದರೆ ನನ್ನೊಳಗೆ..

ಆಫ್ ಬೀಟ್ ಕೋರ್ಸ್

ಆಫ್ ಬೀಟ್ ಕೋರ್ಸ್

ಶಿಕ್ಷಕಿಯಾದೆ, ಐಸಿಎಸ್‌ ಕೂಡ ಮಾಡಿದೆ!

ಶಿಕ್ಷಕಿಯಾದೆ, ಐಸಿಎಸ್‌ ಕೂಡ ಮಾಡಿದೆ!

ರಿಯಲ್‌ ಹೀರೋ ಮತ್ತು…

ರಿಯಲ್‌ ಹೀರೋ ಮತ್ತು…

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ಲಾಕ್‌ ಡೌನ್‌ ಅರ್ಧ ಮುಕ್ತಾಯ; ನಿಯಮ ಸಡಿಲಿಕೆ?

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ  ಆರಂಭ

ಸೋಂಕಿತರ ಪತ್ತೆಗೆ ಆನ್‌ಲೈನ್‌, ದೂರವಾಣಿ ಸಮೀಕ್ಷೆ ಆರಂಭ