Udayavni Special

ಕೆಲಸ ಹುಡುಕುವ ಬದಲು “ಹುಡುಕುವ ಕೆಲಸ’ಕ್ಕೆ ಸೇರಿ

Team Udayavani, Aug 15, 2017, 7:40 AM IST

hudukuva-kelasa.jpg

ಸಂಸ್ಕೃತಿ ಮತ್ತು ಪ್ರಾಚೀನತೆ ಆಯಾ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುತ್ತವೆ. ಹರಪ್ಪಾ ಮತ್ತು ಮಹೆಂಜೋದಾರೋ ನಾಗರೀಕತೆಗಳು ನಮ್ಮ ದೇಶದ ಇತಿಹಾಸ ಮತ್ತು ಗತ ವೈಭವಕ್ಕೆ ಸಾಕ್ಷಿಯಂತೆ ಕಾಣಿಸಿದರೆ, ಒಂದು ಮಧುರ ನೆನಪಿನಂತೆ, ಸ್ಮಾರಕದಂತೆ ಉಳಿದಿರುವ ಆಗಿನ ಕಾಲದ ಪಳೆಯುಳಿಕೆಗಳು ಪ್ರಪಂಚದ ನಾನಾ ಭಾಗಗಳಲ್ಲಿ ದೊರೆಯುತ್ತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಗೂ ರಾಜತಾಂತ್ರಿಕ ಸಂಬಂಧವನ್ನು ಹೆಚ್ಚಿಸುತ್ತಿವೆ. ಇಂಥ ಪಳೆಯುಳಿಕೆಗಳು ಇದೇ ಕಾಲದ್ದು, ಇಂಥದೇ ನಾಗರಿಕತೆಯದ್ದು ಎಂದು ಅಂದಾಜು ಮಾಡಿ ದೇಶ, ಕಾಲ, ವರ್ತಮಾನವನ್ನು ಅಳೆಯುವವರೇ ಪ್ರಾಗಿjàವ ವಿಜ್ಞಾನಿಗಳು. ಕೇವಲ ಪ್ರಾಚೀನ ಸಂಶೋಧನೆಯಲ್ಲದೆ ತೈಲ, ನಿಧಿ, ನಿಕ್ಷೇಪಗಳ ಹುಡುಕುವಿಕೆಯಲ್ಲೂ ಇವರ ಪಾತ್ರ ಹಿರಿದು. ಇಂತಹ ವಿಜ್ಞಾನಿಗಳಾಗಬೇಕೆಂದರೆ..

ಮನೆಯಲ್ಲೇ ಕಾಪಿಟ್ಟ ವಸ್ತುಗಳು ಬೇರೆ ಏನನ್ನೋ ಹುಡುಕುವಾಗ ಸಿಕ್ಕಿದಾಗ, “ಅಯ್ಯೋ ಆವತ್ತು ಇಲ್ಲೇ ಇಟ್ಟು ಎಲ್ಲೆಲ್ಲೋ ಹುಡುಕಾಡಿದೆನÇÉಾ.. ಮೊದಲೇ ಸಿಕ್ಕಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದುಕೊಳ್ಳುತ್ತೇವೆ. ಸಹಸ್ರಾರು ವರ್ಷಗಳ ಹಿಂದಿನ ಸಂಸ್ಕೃತಿ, ನಾಗರೀಕತೆಯನ್ನು ಸೂಚಿಸುವ ಪಳೆಯುಳಿಕೆಗಳು ಮನೆ ಕಟ್ಟುವಾಗಲೋ, ಭೂಮಿ ಅಗೆಯುವಾಗಲೋ ದೊರೆತರೆ ಅಚ್ಚರಿಯಿಂದ ಕಣ್ಣು ಕಣ್ಣು ಬಿಡುತ್ತೇವೆ. ನಿಧಿ ಸಿಕ್ಕರೆ, ನಮ್ಮ ಹಿರಿಯರ ಪುಣ್ಯದಿಂದ ಕಷ್ಟಕಾಲದಲ್ಲಿ ಈ ನಿಧಿ ಸಿಕ್ಕಿದೆ ಎಂದೋ ಅಥವಾ ದೇವರು ಕಡೆಗೂ ಕಣ್ಣು ಬಿಟ್ಟ ಎಂದೋ ಹೇಳಿ ಅದನ್ನೂ ಬಳಸಿಕೊಳ್ಳುತ್ತೇವೆ.

ನಿಮ್ಮ ಮನೆ ಪಕ್ಕದಲ್ಲಿಯೇ ಇದ್ದ ಶಾಸನವೋ, ಶಿಲಾ ವಿಗ್ರಹವೋ ಇರುವುದನ್ನು ನೋಡಿದ ಒಬ್ಬರು, ಇದು ಇಂಥಾ ರಾಜರ ಕುರಿತಾಗಿದ್ದು, ಇದು ಯಾವುದೋ ರಾಜ-ಮಹಾರಾಜರ ಕಾಲದ ಪಳೆಯುಳಿಕೆ ಎಂದು ಹೇಳಿದರೆ ಏನನ್ನಿಸಬೇಡ? ಇದು ಇಂಥ ಕಾಲದ್ದೇ ಎಂದು ಹೇಳಿದರೆ, ಅಬ್ಬಬ್ಟಾ.. ನೂರಾರು ವರ್ಷಗಳ ಹಿಂದಿನ ಮಾಹಿತಿಯನ್ನು ಅಷ್ಟು ನಿಖರವಾಗಿ ಹೇಳಲು ಹೇಗೆ ಸಾಧ್ಯ ಎಂದು ಆಶ್ಚರ್ಯವಾಗುತ್ತದಲ್ಲವೆ? ಅಂಥ ವಿವರ ನೀಡಲು ಶಕ್ತರಾದವರೇ ಪ್ರಾಗಿjàವ ವಿಜ್ಞಾನಿಗಳು. ನೀವೂ ಅಂಥವರಾಗಬೇಕಾದರೆ..

ವಿದ್ಯಾರ್ಹತೆ ಹೀಗಿರಲಿ
ಎಸ್ಸೆಸ್ಸೆಲ್ಸಿಯಾದ ಬಳಿಕ ಪಿಯುಸಿಯಲ್ಲಿ ಭೌತಶಾಸ್ತ್ರ ಇರುವಂತೆ ವಿಷಯದ ಆಯ್ಕೆ ಇರಲಿ, ಡಿಗ್ರಿಯಲ್ಲಿ ಭೂವಿಜ್ಞಾನಕ್ಕೆ ಸಂಬಂಧಿಸಿದ ಪಠ್ಯ ಅವಶ್ಯ. ಇನ್ನು ಸ್ನಾತಕೋತ್ತರ ಪದವಿಯಲ್ಲಿ ಪೇಲಿಯಂಟಾಲಜಿ (ವಾಗಿjàವ ಶಾಸ್ತ್ರ) ಬಗ್ಗೆ ವಿಶೇಷಜ್ಞಾನ ಪಡೆಯಿರಿ. ಜೊತೆಗೆ ಅದೇ ವಿಷಯದಲ್ಲಿ ಪಿಎಚ್‌.ಡಿ ಮಾಡಿದರೆ ಇನ್ನೂ ಒಳಿತು.

ಕೌಶಲಗಳು
– ಗತಕಾಲದ ಪಳೆಯುಳಿಕೆಗಳ ಬಗ್ಗೆ ಅರಿವು, ಅಧ್ಯಯನಕ್ಕೆ ಪ್ರಾಶಸ್ತ್ಯ.
– ಐತಿಹಾಸಿಕ ದಾಖಲೆಗಳ ಕುರಿತ ಜ್ಞಾನ, ಸಂಶೋಧನಾ ಆಸಕ್ತಿ.
– ಪಳೆಯುಳಿಕೆಗಳ ಅನ್ವೇಷಣೆ, ಅಧ್ಯಯನಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್‌ ಸೂಕ್ಷ್ಮದರ್ಶಕಗಳು, ಕ್ಯಾಮೆರಾ, ಎಕ್ಸ್ ರೇ ರೇ ಯಂತ್ರ, ಸಿಟಿ ಸ್ಕ್ಯಾನರ್‌ಗಳ ಬಳಕೆ.
– ವಿವಿಧ ಕಾಲಮಾನಗಳ ಭೌಗೋಳಿಕತೆ, ಹವಾಮಾನ, ಜನರ ಜೀವನಶೈಲಿ, ಗೃಹ- ಸಾಮಾಜಿಕ ವಸ್ತುಗಳ ಬಳಕೆ ಬಗೆಗೆ ಅರಿವು.
– ಪ್ರಾಣಿವರ್ಗ, ಪಕ್ಷಿವರ್ಗ, ಸಸ್ತನಿಗಳ ದೈಹಿಕ ರಚನೆ, ತುಲನಾತ್ಮಕ ಜೀವರಾಸಾಯನಿಕ ವಿಶ್ಲೇಷಣಾ ಜ್ಞಾನ.
– ದತ್ತಾಂಶ ಸಂಗ್ರಹಣೆ, ಕಿರುಟಿಪ್ಪಣಿ ಸಂಗ್ರಹ, ಪ್ರಸ್ತುತತೆ ವಿಮರ್ಶೆ.
– ಕ್ಷೇತ್ರದರ್ಶನ, ಸಂವಹನ ಕೌಶಲ, ಸಂಪರ್ಕ ವೃದ್ಧಿ.
– ಪಳೆಯುಳಿಕೆ ಅಧ್ಯಯನ ಸಂಬಂಧಿ ರಾಸಾಯನಿಕ ವಸ್ತುಗಳ ಬಳಕೆ ಅರಿವು.

ಅವಕಾಶಗಳು
ನೈಸರ್ಗಿಕ ಇತಿಹಾಸ ವಸ್ತು ಸಂಗ್ರಹಾಲಯ
ತೈಲ ಕಂಪನಿಗಳು, ತೈಲ ಪರಿಶೋಧನಾ ಸಂಸ್ಥೆಗಳು
ಭಾರತೀಯ ಭೂವಿಜ್ಞಾನ ಸಮೀಕ್ಷೆ
ಆರ್ಕಿಯಾಲಜಿ ಅಸೋಸಿಯೇಷನ್‌ ಆಫ್ ಇಂಡಿಯಾ
ಭೌಗೋಳಿಕ ಮಾಹಿತಿ ಪ್ರಕಾಶನಾಲಯ
ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು

ವೇತನ:
ಪೇಲಿಯಂಟಾಲಜಿಸ್ಟ್‌ (ಪ್ರಾಗಿjàವ ವಿಜ್ಞಾನಿ) ಕೋರ್ಸ್‌ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲ. ಹೀಗಾಗಿ ಈ ವಿಷಯದ ಕುರಿತು ಹೆಚ್ಚು ಅಧ್ಯಯನ ನಡೆಸಿದವರ ಸಂಖ್ಯೆ ಕಡಿಮೆ. ಜಾಗತಿಕವಾಗಿ ತೈಲ ನಿಕ್ಷೇಪದಲ್ಲಿ ಸ್ವಾವಲಂಬಿಯಾಗಲು ಎಲ್ಲ ದೇಶಗಳೂ ಮುನ್ನುಗ್ಗುತ್ತಿರುವ ಈ ದಿನಗಳಲ್ಲಿ ಪ್ರಾಗಿjàವ ವಿಜ್ಞಾನಿಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಹೀಗಾಗಿ ಅವರ ಓದು, ಅನುಭವದ ಆಧಾರದ ಮೇಲೆ ಸಂಬಳ ನಿಗದಿಯಾಗುತ್ತದೆ. ಭಾರತದಲ್ಲಿ ಪ್ರಾರಂಭ ಹಂತದಲ್ಲಿ ತಿಂಗಳಿಗೆ 25 ಸಾವಿರದಿಂದ 35 ಸಾವಿರದವರೆಗೆ ಪಾವತಿಯಾಗುತ್ತದೆ. ಅನುಭವಿ ವಿಜ್ಞಾನಿಗಳಿಗೆ 60 ಸಾವಿರದಿಂದ ಲಕ್ಷಕ್ಕೂ ಮಿಗಿಲಾಗಿ ವೇತನ ಸಿಗುತ್ತದೆ. ಜಾಗತಿಕ ಮಟ್ಟದಲ್ಲಿ ಪೇಲಿಯಂಟಾಲಜಿಸ್ಟ್‌ಗಳು ವಾರ್ಷಿಕವಾಗಿ ಲಕ್ಷಾಂತರ ಡಾಲರ್‌ ದುಡಿಯುತ್ತಾರೆ.

ಕಾಲೇಜುಗಳು
ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಸೈನ್ಸ್ ಎಜುಕೇಷನ್‌ ಅಂಡ್‌ ರೀಸರ್ಚ್‌, ಕೋಲ್ಕತ್ತಾ.
ಜಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ಹೈದರಾಬಾದ್‌
ನ್ಯಾಷನಲ್‌ ಮ್ಯೂಸಿಯಂ ಆಫ್ ನ್ಯಾಚುರಲ್‌ ಹಿಸ್ಟರಿ, ದೆಹಲಿ
ಪ್ರಸಿಡೆನ್ಸಿ ಯೂನಿವರ್ಸಿಟಿ, ಕೋಲ್ಕತ್ತಾ
ಬನಾರಸ್‌ ಹಿಂದೂ ಯೂನಿವರ್ಸಿಟಿ, ವಾರಾಣಸಿ
ದೆಹಲಿ ಯೂನಿವರ್ಸಿಟಿ, ನವದೆಹಲಿ

ಟಾಪ್ ನ್ಯೂಸ್

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

264 ಮಂದಿಗೆ ಸೋಂಕು : 10 ದಿನಗಳಿಂದ 500ಕ್ಕಿಂತ ಕಮ್ಮಿ ಕೇಸ್‌

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ಕೆಲಸ ಕೊಡಿಸುವುದಾಗಿ ವಂಚನೆ-ಕೆಎಸ್‌ಆರ್‌ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ 

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

90

ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.