ಜಸ್ಟ್‌ ಪಾಸಿಗನೂ ಜೀನಿಯಸ್ಸು

ಲೈಫಿನ ಡಿಸ್ಟಿಂಕ್ಷನ್‌ ಪಟ್ಟಿಯಲ್ಲಿ ನಿಮ್ಮ ಹೆಸರುಂಟು...

Team Udayavani, May 21, 2019, 6:00 AM IST

shutterstock_494736238

ಎಲ್ಲ ಕಾಲೇಜುಗಳೂ ಟಾಪರ್ಸ್‌ಗೆ ರೆಡ್‌ಕಾಪೆìಟ್‌ ಹಾಸಿ, ಸ್ವಾಗತಿಸುತಿವೆ. ಹಾಗಾದ್ರೆ, ಶೇ.50ಕ್ಕಿಂತ ಕಡಿಮೆ ಅಂಕ ತೆಗೆದ, ಜಸ್ಟ್‌ ಪಾಸ್‌ ಆದ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಕತೆಯೇನು? ಇಂಥವರು ನಿರಾಶಾರಾಗಬೇಕಿಲ್ಲ. ನಿಮ್ಮ ಕನಸುಗಳಿಗೆ ರೆಕ್ಕೆ ಮೂಡಿಸಲು ದಾರಿಗಳು ಹಲವು…

ಎಸ್‌.ಎಸ್‌.ಎಲ್‌.ಸಿ / ಬೋರ್ಡ್‌ ಎಕ್ಸಾಮ್‌ನ ಫ‌ಲಿತಾಂಶಗಳು ಬಂದಿವೆ. ಮಕ್ಕಳನ್ನು ಮುಂದೆ ಯಾವ ಕೋರ್ಸು ಓದಿಸುವುದು, ಯಾವ ಕಾಲೇಜು ಸೇರಿಸುವುದು, ಡಿಸ್ಟಿಂಕ್ಷನ್‌ ಪಡೆದಿದ್ದರೂ ತಾವಂದುಕೊಂಡಿರುವ ಕಾಲೇಜಿನಲ್ಲಿ ಸೀಟು ಸಿಗುತ್ತದೋ ಇಲ್ಲವೋ ಎಂಬಿತ್ಯಾದಿ ಚರ್ಚೆಗಳಲ್ಲಿ ಮನೆ ಮಂದಿ, ನೆಂಟರಿಷ್ಟರೆಲ್ಲರೂ ಮುಳುಗಿದ್ದಾರೆ. ಇವೆಲ್ಲವನ್ನೂ ನೋಡಿದಾಗ ಅತ್ಯಂತ ಕಡಿಮೆ ಅಂಕಗಳನ್ನು ಗಳಿಸಿದವರು, ನಪಾಸಾದವರು ಮಂಕಾಗುವುದು ಸಹಜ. ಆದರೆ ಅವರು ನಿರಾಶರಾಗಬೇಕಿಲ್ಲ. ಅವರ ಕನಸುಗಳಿಗೂ ರೆಕ್ಕೆ ಮೂಡಿಸುವ ದಾರಿಗಳು ಹಲವಾರಿವೆ. ನಪಾಸಾಗಿದ್ದರೆ ಮರುಪರೀಕ್ಷೆಗೆ ಕುಳಿತು ಚೆನ್ನಾಗಿ ಅಧ್ಯಯನ ಮಾಡಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣರಾಗುವುದು ಅವುಗಳಲ್ಲೊಂದು.

ಈಗಂತೂ ವೃತ್ತಿಪರ ಸರ್ಟಿಫಿಕೇಷನ್‌ ಕೋರ್ಸುಗಳು ಹಲವಾರಿವೆ. ವಿದ್ಯಾರ್ಥಿ ತನ್ನ ಆಸಕ್ತಿಗೆ ತಕ್ಕ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ಮುಂದುವರಿಯಬಹುದು.

1. ಪ್ರೋಗ್ರಾಮಿಂಗ್‌ ಲಾಂಗ್ವೇಜ್‌
ಕಂಪ್ಯೂಟರ್‌ ಎಂಜಿನಿಯರ್‌ ಕೆಲಸಕ್ಕೆ ಸೇರಿದಾಗ ನಿರ್ವಹಿಸುವ ಜವಾಬ್ದಾರಿಗಳನ್ನು ಈ ತರಬೇತಿಯಲ್ಲಿ ಪಡೆಯಬಹುದು. ಜಾವಾ, ಸಿ++, ಪೈಥಾನ್‌, ಪಿ.ಎಚ್‌.ಪಿ ಇತ್ಯಾದಿ ಪ್ರೋಗ್ರಾಮಿಂಗ್‌ ಭಾಷೆಗಳಿವೆ. ಅವುಗಳ ಮೂಲ ತಣ್ತೀಗಳು ಒಂದೇ ಆಗಿರುತ್ತವೆ. ಬೇಸಿಕ್‌ ಕಲಿತ ನಂತರ ಒಂದು ಲ್ಯಾಂಗ್ವೇಜ್‌ನಲ್ಲಿ ತೀವ್ರ ಅಧ್ಯಯನ ನಡೆಸಿ ಸರ್ಟಿಫಿಕೇಷನ್‌ ಕೋರ್ಸನ್ನು ಪೂರ್ತಿ ಮಾಡಿದರೆ ಐ.ಟಿ. ಕಂಪನಿಗಳಲ್ಲಿ ಸಾಫ್ಟ್ವೇರ್‌ ಡೆವಲಪರ್‌ ಆಗಿ ಆಯ್ಕೆಯಾಗಬಹುದು.

2. ವೆಬ್‌ ಡಿಸೈನಿಂಗ್‌
ಇಂದಿನ ಇಂಟರ್‌ನೆಟ್‌ ಯುಗದಲ್ಲಿ ಬ್ಲಾಗ್‌, ವೆಬ್‌ಸೈಟ್‌ ಮತ್ತು ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಕುರಿತು ಹೆಚ್ಚಿಗೆ ಹೇಳಬೇಕಾದ ಅಗತ್ಯವಿಲ್ಲ. ಈ ತಾಣಗಳನ್ನು ನಿರ್ಮಿಸುವವರೇ ವೆಬ್‌ ಡಿಸೈನರ್‌ಗಳು. ಬ್ರೌಸರ್‌ನಲ್ಲಿ ಯಾವುದೇ ಜಾಲತಾಣಕ್ಕೆ ಭೇಟಿ ನೀಡಿದರೂ ಕಣ್ಮುಂದೆ ಕಾಣುವ ಎಲ್ಲಾ ವಿಷುವಲ್‌ ಮತ್ತು ಅದರ ಕಾರ್ಯತಂತ್ರಗಳನ್ನು ರೂಪಿಸುವುದು ಒಂದು ಕಲೆ. ಈಗಂತೂ ಆನ್‌ಲೈನ್‌ ಕಂಪನಿಗಳು ಹೆಚ್ಚುತ್ತಿರುವುದರಿಂದ ನುರಿತ ವೆಬ್‌ಡಿಸೈನರ್‌ಗಳಿಗೆ ಬೇಡಿಕೆ ಇದ್ದೇ ಇದೆ.

3. ಗ್ರಾಫಿಕ್‌ ಡಿಸೈನಿಂಗ್‌
ಸೃಜನಾತ್ಮಕ ಮನೋಭಾವ ಉಳ್ಳವರಿಗೆ ಈ ಕೋರ್ಸು ಬಹಳ ಇಷ್ಟವಾಗುತ್ತದೆ. ಇಮೇಜಿಂಗ್‌, ಎಡಿಟಿಂಗ್‌, ಲೋಗೋ ಡಿಸೈನಿಂಗ್‌ ಇತ್ಯಾದಿ ವಿಷಯಗಳನ್ನು ಇಲ್ಲಿ ಕಲಿಯಬಹುದು. ಅಡೋಬ್‌ ಫೋಟೊಶಾಪ್‌ ಮತ್ತು ಪ್ರಿಂಟ್‌ ಟೆಕ್ನಾಲಜಿಯ ಸಾಫ್ಟ್ವೇರ್‌ಗಳಲ್ಲಿ ನಿಮ್ಮ ಕೈ ಕುದುರಿದರೆ ನಿಮಗೆ ಅನೇಕ ಅವಕಾಶಗಳು ಕೈ ಬೀಸಿ ಕರೆಯುತ್ತವೆ. ಇದು 3 ಅಥವಾ 6 ತಿಂಗಳಲ್ಲಿ ಮುಗಿಸಬಹುದಾದ ಕೋರ್ಸ್‌.

4. ಎಂ.ಎಸ್‌. ಆಫೀಸ್‌, ಸರ್ಟಿಫಿಕೇಟ್‌ ಕೋರ್ಸ್‌: ಕಚೇರಿಗಳ ಫ್ರಂಟ್‌ ಆಫೀಸ್‌ ಕೆಲಸಗಳಿಗೆ ಬೇಕಾದ ಕೌಶಲ್ಯವನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುವುದು. ಮೈಕ್ರೋಸಾಫ್ಟ್ ಆಫೀಸ್‌ ಕೆಲವು ಉಪ ಕೌಶಲಗಳನ್ನೂ ಒಳಗೊಂಡಿದೆ. ಎಂ.ಎಸ್‌. ವರ್ಡ್‌, ಎಂ.ಎಸ್‌. ಎಕ್ಸೆಲ್‌, ಎಂ.ಎಸ್‌. ಆಕ್ಸೆಸ್‌ ಮತ್ತು ಎಂ.ಎಸ್‌. ಪವರ್‌ಪಾಯಿಂಟ್‌ ಕಲಿಸಲಾಗುತ್ತದೆ. ಕಲಿಕೆಯ ಅವಧಿ ಮೂರು ತಿಂಗಳು. ಅದಾದ ಬಳಿಕ ಕಚೇರಿಗಳ ನಿರ್ವಹಣಾ ಸಿಬ್ಬಂದಿಯಾಗಿ ಕೆಲಸ ಮಾಡಬಹುದು.

ಇದೇ ರೀತಿಯಲ್ಲಿ ಎಥಿಕಲ್‌ ಹ್ಯಾಕಿಂಗ್‌, ಡಿಜಿಟಲ್‌ ಮಾರ್ಕೆಟಿಂಗ್‌, ಆ್ಯಪ್‌ ಡೆವಲೆಪ್‌ಮೆಂಟ್‌ ಇತ್ಯಾದಿ ಕ್ಷೇತ್ರಗಳನ್ನು ಕುರಿತ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಕಲಿತು ಆಯಾ ಕ್ಷೇತ್ರದಲ್ಲಿ ಮುಂದುವರಿಯಬಹುದು. ಜೀವನೊಪಾಯಕ್ಕಾಗಿ ಮಾಡುವ ಯಾವ ಕೆಲಸವೂ ಕಡಿಮೆಯಲ್ಲ ಎನ್ನುವ ಸತ್ಯ ಅರಿತರೆ ಮನಸ್ಸು ಸದಾ ನೆಮ್ಮದಿಯಿಂದಿರುತ್ತದೆ. ಹೀಗಾಗಿ ಸ್ವಂತ ಉದ್ದಿಮೆ ಇರಬಹುದು, ವಿಡಿಯೋಗ್ರÅಫಿ ಇವುಗಳಲ್ಲಿ ತೊಡಗಿಕೊಳ್ಳುವುದರಿಂದಲೂ ಬದುಕಿನ ಎತ್ತರವನ್ನು ಮುಟ್ಟಲು ಸಾಧ್ಯವಾಗುತ್ತದೆ. ಮನಸ್ಸು ಮತ್ತು ಛಲ ಇದ್ದರೆ ಯಾವುದೇ ವೃತ್ತಿ ಕೈಗೊಂಡರೂ ಮುಂದೆ ಬರಬಹುದು.

ಜೀವನದಲ್ಲಿ ಯಶಸ್ಸಿಗೆ ಫಾರ್ಮುಲಾ ಕಂಡುಹಿಡಿದವರಿಲ್ಲ. ಇಲ್ಲಿ ಎಲ್ಲವಕ್ಕೂ ಮಾರ್ಗಗಳಿದ್ದೇ ಇವೆ. ಯಾವುದಕ್ಕೂ ಇಲ್ಲಿ ಕೊನೆಯೆಂಬುದಿಲ್ಲ. ಆದ್ದರಿಂದ ಅಂಕಗಳೆಷ್ಟೇ ಬಂದಿದ್ದರೂ ಆತಂಕಗೊಳ್ಳದೆ, ನಿರಾಶರಾಗದೆ ನಿಮಗೆ ಸೂಕ್ತವೆನಿಸುವ ಕೌಶಲ್ಯ ಕ್ಷೇತ್ರವನ್ನು ಆರಿಸಿಕೊಂಡು ಮುನ್ನುಗ್ಗಿ. ಗುಡ್‌ಲಕ್‌!

ಎನ್‌ಟಿಟಿಎಫ್ ಬಗ್ಗೆ ಗೊತ್ತಾ?
“ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಕೇವಲ 35% ಪರ್ಸೆಂಟು ಪಡೆದು ಪಾಸಾಗಿದ್ದರೂ ಸಾಕು. ನಮ್ಮಲ್ಲಿ ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದು ಜೀವನದಲ್ಲಿ ಸೆಟಲ್‌ ಆಗಿಬಡಿಬಹುದು!’ ಎನ್ನುತ್ತಾರೆ NTTF ನ ಟ್ರೇನಿಂಗ್‌ ಮ್ಯಾನೇಜರ್‌ ಪ್ರಶಾಂತ್‌ ಕೆ. ಆಲಂದಿಕರ್‌. NTTF (www.nttftrg.com)ಭಾರತ ಸರ್ಕಾರ ಮತ್ತು ಸ್ವಿಟlರ್‌ಲೆಂಡ್‌ ಸರ್ಕಾರದ ಪಾಲುದಾರಿಕೆಯಲ್ಲಿ ಯುವಜನತೆಗೆ ಕೌಶಲಾಧಾರಿತ ತರಬೇತಿ ಮತ್ತು ಉದ್ಯೋಗ ದೊರಕಿಸಿಕೊಡುವ ಸಲುವಾಗಿ ಪ್ರಾರಂಭಗೊಂಡ ಸಂಸ್ಥೆ. ಇಂದು 170 ಕಂಪೆನಿಗಳ ಸಹಯೋಗದಲ್ಲಿ ದೇಶದಾದ್ಯಂತ ಯುವಜನರಿಗೆ ಕೌಶಲ ತರಬೇತಿ ನೀಡುತ್ತಿದೆ. ಕರ್ನಾಟಕದ ಧಾರವಾಡ ಮತ್ತು ಬೆಂಗಳೂರಿನಲ್ಲಿ (ಪೀಣ್ಯ 2ನೇ ಹಂತ ಮತ್ತು ಇಲೆಕ್ಟ್ರಾನಿಕ್‌ ಸಿಟಿ) ಇದರ ತರಬೇತಿ ಕೇಂದ್ರಗಳಿವೆ. ಇಲ್ಲಿ ಪ್ರವೇಶವೂ ಸುಲಭ. ಎಸ್‌.ಎಸ್‌.ಎಲ್‌.ಸಿ. ಪಾಸಾದ ಅಭ್ಯರ್ಥಿ NTTF ನಡೆಸುವ ಸರಳ ಪ್ರವೇಶ ಪರೀಕ್ಷೆ ಬರೆಯಬೇಕು. ಒಟ್ಟು ಅಂಕಗಳು 60, ಅದರಲ್ಲಿ ಶೇ. 40 ಅಂದರೆ ಕನಿಷ್ಟ 24 ಅಂಕಗಳನ್ನು ಗಳಿಸಿದರೆ ಮುಂದೆ ಒಂದು ತಿಂಗಳ ಕಾಲ ಪ್ರಾಥಮಿಕ ತರಬೇತಿ. ತರಬೇತಿ ಅವಧಿಯಿಂದಲೇ 9-10 ಸಾವಿರ ಸ್ಟೈಪೆಂಡ್‌ ಕೂಡ ದೊರೆಯುತ್ತದೆ. ನಂತರ ಕೆಲಸ ಮಾಡುತ್ತಲೇ, 3 ವರ್ಷಗಳಲ್ಲಿ ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪದವಿ ಕೂಡ ಗಳಿಸಿಬಿಡುತ್ತಾರೆ! ಸ್ಟೈಪೆಂಡ್‌, ಮೆಡಿಕಲ್‌ ಇನುÒರೆನ್ಸ್‌ ಸವಲತ್ತನ್ನೂ ಒದಗಿಸಲಾಗುತ್ತದೆ.

– ರಘು ವಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.