ತೇಲುತಾ ದೂರಾ ದೂರ…

ಲೈಫ್ ಕ್ಯಾಮೆರಾ ಆ್ಯಕ್ಷನ್‌

Team Udayavani, May 14, 2019, 6:00 AM IST

ದ ರಿವರ್‌ ವೈಲ್ಡ್‌ (1994)
ನಿರ್ದೇಶನ: ಕರ್ಟಿಸ್‌ ಹ್ಯಾನ್ಸನ್‌
ಅವಧಿ: 108 ನಿಮಿಷ

ಕೆಲವು ಅನಿರೀಕ್ಷಿತ ಅವಘಡಗಳು ನಮ್ಮನ್ನೇ ಕಾಯುತ್ತಿರುತ್ತವೆ. ಅದೇನು ದುರಾದೃಷ್ಟವೋ ಏನೋ, ಒಂದೊಂದ್ಸಲ ಅವುಗಳ ಬುಡಕ್ಕೆ ನಾವೇ ಹೋಗಿಬಿಡುತ್ತೇವೆ. “ದ ರಿವರ್‌ ವೈಲ್ಡ್‌’ನ ನಾಯಕ- ನಾಯಕಿ ಕೂಡ ಈ ಮಾತಿಗೆ ಹೊರತಲ್ಲ. ಗೇಲ್‌ ಹಾರ್ಟ್‌ಮನ್‌, ಒಬ್ಬಳು ಸ್ಟ್ರಾಂಗ್‌ ಮದರ್‌. ಮಗನ 10ನೇ ವರುಷದ ಹುಟ್ಟುಹಬ್ಬವನ್ನು ವಿಭಿನ್ನ ಸಾಹಸದೊಂದಿಗೆ ಆಚರಿಸಲು ಮುಂದಾಗುತ್ತಾಳೆ. ಆಕೆಗೆ ಮೊದಲೇ ರಿವರ್‌ ರ್ಯಾಪ್ಟಿಂಗ್‌ನ ಹುಚ್ಚು. ಅತ್ಯಂತ ದುರ್ಗಮ ಜಲಹಾದಿಯ, ಅಮೆರಿಕದ ಸಾಲ್ಮೋನ್‌ ನದಿಯಲ್ಲಿ ರ್ಯಾಪ್ಟಿಂಗ್‌ ಮಾಡುವ ಕನಸಿಗೆ ಕೈಹಾಕುತ್ತಾಳೆ. ಕೊನೆಯ ಕ್ಷಣದಲ್ಲಿ ಗಂಡನೂ, ಅಮ್ಮ- ಮಗನ ಜತೆಗೂಡಿ ಹೊರಡುತ್ತಾನೆ. ಮುದ್ದು ನಾಯಿಯೂ ಜತೆಯಾಗುತ್ತದೆ. ಇಡೀ ಕುಟುಂಬ ಒಟ್ಟಾಗಿ ನದಿಯಲ್ಲಿ
ತೇಲುತ್ತಾ, ಮೇಲೇಳುತ್ತಾ, ಮುಂದೆ ಹೋಗುವಾಗ, ಇಬ್ಬರು ದರೋಡೆ ಕೋರರ ಮುಖಾ ಮುಖಿ ಆಗುತ್ತದೆ. ಇಡೀ ಕುಟುಂಬವನ್ನು ಹೈಜಾಕ್‌ ಮಾಡುವ ಅವರ ಪ್ರಯತ್ನವನ್ನು ಗೇಲ್‌ ತನ್ನ ಗಂಡುಧೈರ್ಯದಿಂದ ಹೇಗೆಲ್ಲ ಹಿಮ್ಮೆಟ್ಟಿಸುತ್ತಾಳೆ ಅನ್ನೋ ಕತೆಯಲ್ಲಿ ಮೈನವಿರೇಳಿಸುವ ದೃಶ್ಯಗಳಿವೆ. ಸಾಹಸ  ಪ್ರಿಯರಿಗೆ “ದ ರಿವರ್‌ ವೈಲ್ಡ್‌’ ರುಚಿಸಬಹುದು. ಅಂದಹಾಗೆ, ಈ ಚಿತ್ರದ ಶೇ.70ರಷ್ಟು  ಸಾಹಸದ ದೃಶ್ಯಗಳನ್ನು ನೀರಿನ ಮೇಲೆಯೇ, ನೈಜವಾಗಿ ಚಿತ್ರೀಕರಿಸಿರುವುದು ವಿಶೇಷ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • "ಆಲೂಗಡ್ಡೆ ಎಲ್ಲಿ ಬೆಳೆಯುತ್ತದೆ ? "ಮರದ ಮೇಲೆ ಸಾರ್‌', " ಹಾಲಿನ ಮೂಲ ಎಲ್ಲಿದೆ ?' " ಅಂಗಡಿಯಲ್ಲಿ ಸಾರ್‌' ಎಂದು ಉತ್ತರಿಸುವ ಮಕ್ಕಳು ಇರುವ ಈ ಕಾಲದಲ್ಲಿ. ಶಿರಸಿಯ ಒಂದಷ್ಟು...

  • ಬಹಳ ಹಿಂದೆ, ನನ್ನ ತಂದೆಯವರ ಬಳಿ ಕೆ.ಜಿ ತೂಕದ ಆಗ್ಭಾ ಬೆಲ್ಲೋಸ್‌ಫಿಲಂ ರೋಲ್‌ ಕ್ಯಾಮೆರಾ ಇತ್ತು. 100 ಮಿ.ಮೀ ಅಳತೆಯ ಒಂದೊಂದು ಪ್ರೇಂನಲ್ಲಿ ಚೌಕಾಶಿ ಮಾಡಿ ಒಟ್ಟು...

  • ಪರೀಕ್ಷೆ ಸಂದರ್ಭದಲ್ಲಿ ಸಮಯವೇ ದೇವರು. ಅದನ್ನು ಒಲಿಸಿಕೊಳ್ಳುವುದೂ ಕಲೆ. ಕಷ್ಟದ ಸಬೆjಕ್ಟ್ಗಳು, ಸುಲಭದ ವಿಷಯಗಳಿಗೆ ಇದನ್ನು ಹಂಚುವುದು ನಿಜಕ್ಕೂ ಪ್ರತಿಭೆಯೇ....

  • ಸೇವೆ ಅಂದರೆ ಊಟ, ಬಟ್ಟೆ ಕೊಡೋದು, ಕಷ್ಟದಲ್ಲಿರುವವರಿಗೆ ಹಣ ಸಹಾಯ ಮಾಡೋದು ಮಾತ್ರವಲ್ಲ. ಹೀಗೂ ಮಾಡಬಹುದು ಅಂತ ಕೊಟ್ಟೂರಿನ ಯುವಕರು ತೋರಿಸುತ್ತಿದ್ದಾರೆ. ಅವರು...

  • ಕೈ ಕೆಸರು ಮಾಡಿಕೊಂಡು, ಬಾಯಿಗೆ ಮೊಸರು ಹಾಕಿಕೊಳ್ಳುವುದು ಇವತ್ತು ಎಂಜಿನಿಯರಿಂಗ್‌ ಆಗಿದೆ. ಕೃಷಿ ಎಂದರೆ, ಅಪ್ಪ ಹಾಕಿದ ಆಲದ ಮರದಂತಲ್ಲ. ಅದರ ಸುತ್ತಲೂ ನಮ್ಮ...

ಹೊಸ ಸೇರ್ಪಡೆ