Udayavni Special

ಬಾರೋ ಸಾಧಕರ ಕೇರಿಗೆ : ರುಚಿ ಹಣ್ಣು, ದೊರಗು ಭಿತ್ತಿ


Team Udayavani, Nov 24, 2020, 8:33 PM IST

ಬಾರೋ ಸಾಧಕರ ಕೇರಿಗೆ : ರುಚಿ ಹಣ್ಣು, ದೊರಗು ಭಿತ್ತಿ

ಮ್ಯಾಕ್‌ ಡೊನಾಲ್ಡ್ ನಲ್ಲಿ ಫ್ರೆಂಚ್‌ ಫ್ರೈಸ್‌ ತಿಂದವರು ನೀವಾಗಿದ್ದರೆ ಬಹುಶಃ ಲೂಥರ್‌ ರ್ಬಬ್ಯಾಂಕ್‌ನ ಋಣದಲ್ಲಿ ನೀವು ಬಿದ್ದಿರುವ ಸಾಧ್ಯತೆಯಿದೆ. ಯಾಕೆಂದರೆ ಫ್ರೆಂಚ್‌ ಫ್ರೈಸ್‌ಗೆಂದು ಬಳಸುವ ಆಲೂಗಡ್ಡೆಯ ತಳಿ ಅಭಿವೃದ್ಧಿಪಡಿಸಿದಾತ ಇದೇ ಲೂಥರ್‌ ಬ್ಯಾರ್ಯಂಕ್‌. ಹದಿನೆಂಟನೇ ಶತಮಾನದ ನಡುಭಾಗದಲ್ಲಿ ಹುಟ್ಟಿದ ಲೂಥರ್‌ನಿಗೆ ಚಿಕ್ಕಂದಿನಿಂದಲೂ ಜೀವಶಾಸ್ತ್ರದಲ್ಲಿ ಅತಿಯಾದ ಆಸಕ್ತಿ ಇತ್ತು. ಮುಂದೆ, ಜೀವಶಾಸ್ತ್ರದಲ್ಲೇ ಪದವಿ ಪಡೆದ ಮೇಲಂತೂ ಹಾರಬಯಸಿದ ಹಕ್ಕಿಗೆ ರೆಕ್ಕೆಪುಕ್ಕ ಹುಟ್ಟಿದಂತಾಯಿತು. ತಳಿಶಾಸ್ತ್ರದಲ್ಲಿ ಲೂಥರ್‌ ವಿಶೇಷ ಅಧ್ಯಯನ ಮಾಡಿದ.

ಯುರೋಪಿನಲ್ಲಿ ಆಲೂಗಡ್ಡೆ ಮುಖ್ಯ ಆಹಾರ. ಆದರೆ ಆಲೂಗಡ್ಡೆಯನ್ನು ಬಾಧಿಸುವಒಂದು ಸೂಕ್ಷ್ಮಣುರೋಗಆವರಿಸಿಕೊಂಡದ್ದರಿಂದ 1845-49ರ ಅವಧಿಯಲ್ಲಿ ಇಡೀ ಖಂಡದ ಹೊಲಗದ್ದೆಗಳೆಲ್ಲಪಾಳುಬಿದ್ದವು. ಆಲೂಗಡ್ಡೆ ಬೆಳೆ ಸಾರ್ವತ್ರಿಕವಾಗಿ ನಾಶವಾಗಿ ದೊಡ್ಡ ಕ್ಷಾಮ ಉಂಟಾಯಿತು. ಅದೆಷ್ಟು ಭೀಕರ ಸ್ವರೂಪ ಪಡೆಯಿತೆಂದರೆ, ಐರ್ಲೆಂಡಿನಲ್ಲಿ ತಿನ್ನಲು ಆಹಾರವಿಲ್ಲದೆ ಸಾವಿರಾರು ಜನ ಹಸಿದು ಪ್ರಾಣಬಿಟ್ಟರು. ಲಕ್ಷಾಂತರ ಮಂದಿ ಗುಳೆ ಹೋದರು. ಆ ಸಂದರ್ಭದಲ್ಲಿ ಲೂಥರ್‌ಕಡಿಮೆ ನೀರಿನಂಶ ಬಳಸಿಕೊಂಡುಬೇಗಕಟಾವಿಗೆ ಬರುವ ಆಲೂಗಡ್ಡೆ ತಳಿಯನ್ನು ಅಭಿವೃದ್ಧಿಪಡಿಸಿ ಜನರಿಗೆ ಹಂಚಿದ. ರೋಗ ಹರಡುವ ಸೂಕ್ಷ¾ಜೀವಿಗಳಿಂದ ಈ ಆಲೂಗಡ್ಡೆಗೆ ಯಾವ ಹಾನಿಯೂ ಆಗದಂತೆ ಎಚ್ಚರವಹಿಸಿದ. ಈ ತಳಿ ಅಂಥ ಎಲ್ಲ ಸೂಕ್ಷ್ಮಾಣುಗಳ ವಿರುದ್ಧವೂ ರೋಗನಿರೋಧತೆ ಬೆಳೆಸಿಕೊಳ್ಳುವಂತೆ ನೋಡಿಕೊಂಡ. ಇದರಿಂದಾಗಿ ಲೂಥರ್‌ನ ಆಲೂಗಡ್ಡೆ ತಳಿ ಯುರೋಪಿನಲ್ಲಷ್ಟೇ ಅಲ್ಲ, ಅಮೆರಿಕದಲ್ಲೂ ಭಲೇ ಜನಪ್ರಿಯವಾಯಿತು.

ಎಷ್ಟೆಂದರೆ ಮುಂದೆ ಜಗತ್ತಿನಾದ್ಯಂತ ಅಂಗಡಿ ತೆರೆದಿದ್ದ ಮ್ಯಾಕ್‌ ಡೊನಾಲ್ಡ್, ಫ್ರೆಂಚ್‌ ಫ್ರೈಗಾಗಿ ಇದೇ ಆಲೂಗಡ್ಡೆಯನ್ನು ಅವಲಂಬಿಸುವಷ್ಟು! ಲೂಥರ್‌ ತನ್ನ 55 ವರ್ಷಗಳ ದೀರ್ಘ‌ ವೃತ್ತಿಜೀವನದ ಅವಧಿಯಲ್ಲಿ ಸುಮಾರು 800 ಬಗೆ ಬಗೆಯ ಸಸ್ಯ, ತರಕಾರಿ, ಬಳ್ಳಿ, ಗಿಡಗಳ ವಿಶೇಷ ತಳಿಗಳನ್ನು ಅಭಿವೃದ್ಧಿಪಡಿಸಿದ. ಮುಳ್ಳಿಲ್ಲದ, ಹಸುಗಳಿಗೆ ಉತ್ತಮ ಮೇವಾಗಬಲ್ಲ ಮೃದುಕ್ಯಾಕ್ಟಸ್‌ ಈತನದೇಕೊಡುಗೆ. ಹಣ್ಣು- ಹೂವುಗಳ ಹೊಚ್ಚ ಹೊಸ ತಳಿಸೃಷ್ಟಿಗಳು ಎಂಬ ಅವನ ಗಿಡಮರಬಳ್ಳಿಗಳ ಕ್ಯಾಟಲಾಗ್‌ ಸುಮಾರು ಮೂರ್ನಾಲ್ಕು ದಶಕಗಳುದ್ದಕ್ಕೂ ಜನಪ್ರಿಯ ಹೊತ್ತಗೆಯಾಗಿತ್ತು. ಇಷ್ಟೆಲ್ಲ ಪ್ರಸಿದ್ಧಿ ಪಡೆದ ವ್ಯಕ್ತಿ ವೈಫ‌ಲ್ಯವನ್ನೇಕಾಣಲಿಲ್ಲವೆ? ಇತ್ತು, ಅಂಥ ಸಂದರ್ಭವೂ ಇತ್ತು. ಒಮ್ಮೆ ಲೂಥರ್‌ ವಾಲ್ನಟ್‌ನ ಹೊಸತಳಿಯ

ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ. ವಾಲ್ನಟ್‌ ಎಂದರೆ ಒಂದು ಬಗೆಯ ಡ್ರೈ ಫ್ರೊಟ್ಸ್. ಹೊರಭಿತ್ತಿ ದಪ್ಪ, ಗಟ್ಟಿ. ಒಳಗೆ ಮಿದುಳಿನ ರಚನೆಯಲ್ಲಿರುವಒಂದು ಸಣ್ಣ ಹಣ್ಣಿನ ಭಾಗ. ಗೋಡಂಬಿ, ಖರ್ಜೂರಗಳಂತೆ ಇದೂ. ಒಳಗಿನ ರುಚಿಯಾದ ಹಣ್ಣು ತಿನ್ನಬೇಕಾದರೆ ಹೊರಗಿನ ದೊರಗುಭಿತ್ತಿಯನ್ನು ಕಲ್ಲಿನಲ್ಲೋ ಕುಟ್ಟಣಿಗೆಯ ಮೂಲಕವೋ ಜಜ್ಜಿಕುಟ್ಟಿ ಒಡೆಯಬೇಕು. ತಿನ್ನುವ ಸುಖ ಬೇಕಾದರೆ ಈ ಜಜ್ಜುವಕಷ್ಟ ಅನಿವಾರ್ಯ!

ಲೂಥರ್‌, ಮೃದು ಭಿತ್ತಿ ಇರುವ, ಸುಲಭದಲ್ಲಿ ಬೆರಳುಗಳಿಂದ ಬಿಡಿಸಿ ತೆಗೆಯಬಹುದಾದ ವಾಲ್ನಟ್‌ ಹಣ್ಣುಗಿಡದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ. ಆದರೆಕೆಲವೇ ದಿನಗಳಲ್ಲಿ ಅವನಿಗೆ ಈ ಪ್ರಯೋಗದಲ್ಲಿ ತಾನು ಪ್ರಕೃತಿಯ ಮುಂದೆ ಸೋತೆ ಅನ್ನಿಸಿತು.ಕಾರಣ? ತೆಳು ಭಿತ್ತಿಯ ವಾಲ್ನಟ್‌ ಮರದಲ್ಲಿ ಹುಟ್ಟಲಿಲ್ಲವೆ? ಹುಟ್ಟಿತು! ಗ್ರಾಹಕರಿಗೆ ಈ ತೆಳುಸಿಪ್ಪೆಯ ಹಣ್ಣು ಇಷ್ಟವಾಗಲಿಲ್ಲವೆ? ಅದೂ ಆಯಿತು. ಆದರೂ ಪ್ರಯೋಗ ವಿಫ‌ಲ ಯಾಕೆ? ಯಾಕೆಂದರೆ ಗಿಡದಲ್ಲಿ ಹಣ್ಣು ಪಕ್ವವಾಗುವುದಕ್ಕೆ ಮೊದಲೇ ಅವು ಹಕ್ಕಿ ಮತ್ತು ಅಳಿಲುಗಳ ಪಾಲಾದವು! ರುಚಿಹಣ್ಣನ್ನು ಸವಿಯಲು ಪ್ರಾಣಿಪಕ್ಷಿಗಳು ಮರಗಳಿಗೆ ಮುತ್ತಿಗೆ ಹಾಕಿಬಿಟ್ಟವು! ವಾಲ್ನಟ್‌ನ ಭಿತ್ತಿಯನ್ನು ಪ್ರಕೃತಿ ದೊರೆಗಾಗಿ ಇಟ್ಟದ್ದು ಯಾಕೆ ಎಂಬುದು ಲೂಥರ್‌ಗೆ ಆಗ ಅರ್ಥವಾಯಿತು!

 

– ರೋಹಿತ್‌ ಚಕ್ರತೀರ್ಥ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kabaddi

ಮನಕಲಕುವ ಘಟನೆ: ಕಬಡ್ಡಿ … ಕಬಡ್ಡಿ… ಎನ್ನುತ್ತಲೇ ಪ್ರಾಣಬಿಟ್ಟ ಯುವಕ !

ಮಲೇಷಿಯಾಗೆ ರಫ್ತಾಗುತ್ತಿದ್ದ 400ಟನ್ ಗೂ ಅಧಿಕ ಅಕ್ರಮ ಪಡಿತರ ಅಕ್ಕಿ ವಶ : ತನಿಖೆ ಚುರುಕು

ಮಲೇಷಿಯಾಕ್ಕೆ ರಫ್ತಾಗುತ್ತಿದ್ದ 400ಟನ್ ಗೂ ಅಧಿಕ ಅಕ್ರಮ ಪಡಿತರ ಅಕ್ಕಿ ವಶ : ತನಿಖೆ ಚುರುಕು

ಪಿಯು ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲು ಚಿಂತನೆ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಪಿಯು ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲು ಚಿಂತನೆ : ಶಿಕ್ಷಣ ಸಚಿವ ಸುರೇಶ್ ಕುಮಾರ್

ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ

ದೇವರ ದರ್ಶನಕ್ಕೆ ಬಂದ ಮೂವರು ಸಮುದ್ರ ಪಾಲು : ಗೋಕರ್ಣ ಕಡಲಿನಲ್ಲಿ ನಡೆದ ದುರಂತ

ಬೈಂದೂರು ತಾಲೂಕು 15 ಗ್ರಾ.ಪಂ.ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಬೈಂದೂರು ತಾಲೂಕು 15 ಗ್ರಾ.ಪಂ.ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

Pathan: Truth REVEALED behind reported fight between Siddharth Anand & assistant on sets of SRK’s film

 ‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರ ಮೇಲೆ ಹಲ್ಲೆ! ನಡೆದಿದ್ದೇನು?

ಸೆರಮ್ ಇನ್ಸ್ ಟಿಟ್ಯೂಟ್  ಅಗ್ನಿ ಅವಘಡದಲ್ಲಿ ಐವರು ದುರ್ಮರಣ, ಘಟನೆ ಬಗ್ಗೆ ತನಿಖೆಗೆ ಆದೇಶ

ಸೆರಮ್ ಇನ್ಸ್ ಟಿಟ್ಯೂಟ್ ಅಗ್ನಿ ಅವಘಡದಲ್ಲಿ ಐವರು ದುರ್ಮರಣ, ಘಟನೆ ಬಗ್ಗೆ ತನಿಖೆಗೆ ಆದೇಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀನೂ ಇದ್ದೀಯ, ದಂಡಕ್ಕೆ… ಅವರನ್ನು ನೋಡಿ ಕಲೀಬಾರ್ದಾ?

ನೀನೂ ಇದ್ದೀಯ, ದಂಡಕ್ಕೆ… ಅವರನ್ನು ನೋಡಿ ಕಲೀಬಾರ್ದಾ?

ಕೆರೆ -ದಂಡೆ, ದಂಡೆ -ಕೆರೆ! ನಾವು ಮರೆತ ಹಳೆಯ ಆಟ

ಕೆರೆ -ದಂಡೆ, ದಂಡೆ -ಕೆರೆ! ನಾವು ಮರೆತ ಹಳೆಯ ಆಟ

ಮುಠ್ಠಾಳ ಎಂದು ಕೂಗಿದರೆ ಬಹುಮಾನ ಉಂಟು!

ಮುಠ್ಠಾಳ ಎಂದು ಕೂಗಿದರೆ ಬಹುಮಾನ ಉಂಟು!

ಯೋಗ ನಿರೋಗ : ಸುಖಾಸನ

ಯೋಗ ನಿರೋಗ : ಸುಖಾಸನ

ಗಣಿತದ ಮೇಷ್ಟ್ರು ಹಾಗೂ ಕೋಲಿನ ಏಟು…!!

ಗಣಿತದ ಮೇಷ್ಟ್ರು ಹಾಗೂ ಕೋಲಿನ ಏಟು…!!

MUST WATCH

udayavani youtube

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

udayavani youtube

PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

ಹೊಸ ಸೇರ್ಪಡೆ

kabaddi

ಮನಕಲಕುವ ಘಟನೆ: ಕಬಡ್ಡಿ … ಕಬಡ್ಡಿ… ಎನ್ನುತ್ತಲೇ ಪ್ರಾಣಬಿಟ್ಟ ಯುವಕ !

Potato Tissue Agricultural Field Festival

ಆಲೂಗಡ್ಡೆ ಅಂಗಾಂಶ ಕೃಷಿ ಕ್ಷೇತ್ರೋತ್ಸವ

kannada kalarava at malooru

ಗಡಿ ತಾಲೂಕು ಮಾಲೂರಿನಲ್ಲಿ ಕನ್ನಡ ಕಲರವ

protest against to maharashtra CM

ಬೆಳಗಾವಿ ನಮ್ಮದೆಂದ ಮಹಾ ಸಿಎಂ ವಿರುದ್ಧ ಧರಣಿ

Attempts to get students back to school

ವಿದ್ಯಾರ್ಥಿಗಳನ್ನು ಮರಳಿಶಾಲೆಗೆ ಕರೆತರಲು ಪ್ರಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.