ಲಾಸ್ ಆಗೋದು ನಿನ್ಗೆನೇ…
Team Udayavani, Jul 17, 2018, 6:00 AM IST
ಒಂದು ಮಾತು ತಿಳ್ಕೊ. ನಾನು ನಿನ್ನ ಸೀನಿಯರ್. ಇವತ್ತು ಹೀಗೆಲ್ಲಾ ಕೆಲಸಕ್ಕೆ ಬಾರದ ಬಿಂಕ ಮಾಡಿದ್ರೆ, ನಾಳೆ ನಿಂಗೆ ನೋಟ್ಸ್ ಬೇಕಾಗೋದು ನಂದೇ. ನಮ್ಮಿಡೀ ಕ್ಲಾಸಲ್ಲಿ ನನ್ನಷ್ಟು ಚೆನ್ನಾಗಿ ನೋಟ್ಸ್ ಮಾಡೋದು ಯಾರೂ ಇಲ್ಲ.
ತ್ರಿಪುರ ಸುಂದರಿ, ಇಂಥದ್ದೊಂದು ಹೆಸರನ್ನೂ ಇಡ್ತಾರೆ ಅನ್ನೋದನ್ನೇ ನಾನು ಕೇಳಿರಲಿಲ್ಲ. ಅದೇನಿದ್ರೂ ಗೇಲಿ ಮಾಡಲು ಬಳಸುವ ಹೆಸರು ಅಂತ ತಿಳಿದುಕೊಂಡಿದ್ದೆ. ಕಾಲೇಜಿನಲ್ಲಿ ಮೊದಲ ಬಾರಿಗೆ ನಿನ್ನ ಹೆಸರು ಕೇಳಿದಾಗ, ದೇವ್ರೇ, ಹೆಸರೇ ಹಿಂಗಿದೆ. ಇನ್ನು ಹುಡುಗಿ ಹೆಂಗಿದ್ದಾಳ್ಳೋ ಎಂದು ಹೇಳಿಕೊಂಡು ಬಿದ್ದು ಬಿದ್ದು ನಕ್ಕಿದ್ದೆ. ಹೆಸರು ಹಾಗಿದೆ ಅನ್ನೋ ಕಾರಣಕ್ಕೇ ನಿನ್ನನ್ನ ನೋಡಬೇಕು ಅನ್ನೋ ಕುತೂಹಲ ಮೂಡಿತು. ನಿನ್ನ ಜೊತೆ ಒಂದ್ಸಾರಿ ಮಾತಾಡಿದ ಮೇಲೆ, ಮತ್ತೆ ಮತ್ತೆ ಮಾತಾಡಬೇಕು ಅನ್ನೋ ಆಸೆ ಹೆಚ್ಚಾಯಿತು. ನಿನ್ನ ಜೊತೆ ಮಾತಾಡೋಕೆ ಕಾಯ್ತಾ ಇರ್ತೀನಿ ಅನ್ನೋ ಕಾರಣಕ್ಕೆ ಫ್ರೆಂಡ್ಸೆಲ್ಲಾ ನನ್ನನ್ನ “ತ್ರಿಪುರಸುಂದರ’ ಅಂತ ಕರೀತಿದ್ದಾರೆ. ನಿನ್ನ ಪರಿಚಯ ಆಗೋದಕ್ಕೆ ಮುಂಚೆ, ಯಾರಾದ್ರೂ ಹೀಗೆಲ್ಲಾ ಛೇಡಿಸಿದ್ರೆ ಮುಖ ಊದಿಸಿಕೊಳ್ತಿದ್ದ ನಾನು, ನಿನ್ನ ಹೆಸರು ಹೇಳಿ ಛೇಡಿಸಿದಾಗ ಒಳಗೊಳಗೇ ಸಂತೋಷ ಪಡ್ತೀನಿ ಅಂದ್ರೆ ನಂಬಿ¤ಯಾ?!
ನೀನು ಹೆಸರಿಗಷ್ಟೇ ಸುಂದರಿ, ಒಳಗೆಲ್ಲಾ ಹೊಟ್ಟೆ ಉರಿ! ಒಂದ್ಸಾರಿನಾದ್ರೂ ನನ್° ಜೊತೆ ನಗ್ತಾ ಮಾತಾಡಿದ್ಯಾ? ನನ್ಹತ್ರ ಮಾತಾಡಿದ್ರೆ ಎಲ್ಲಿ ಮೈಲಿಗೆ ಆಗತ್ತೋ ಅನ್ನೋಹಾಗೆ ದೂರ ಓಡ್ತೀಯಲ್ಲ, ಯಾಕೆ? ಯಾವುದೋ ದುಬುìದ್ಧಿ ಮನಸಲ್ಲಿ ಇಟ್ಟುಕೊಂಡು ನಿನ್ನ ಮಾತಾಡಿಸ್ತಿಲ್ಲ ಮಾರಾಯ್ತಿ, ನಿಜವಾಗಿ ಒಳ್ಳೆ ಮನಸ್ಸಿನಿಂದಲೇ ಮಾತಾಡಬೇಕು ಅಂತಿದ್ದೀನಿ. ಆದ್ರೆ ನಿಂಗದೆಲ್ಲಾ ಯಾಕೆ ತಿಳಿಯಲ್ಲ?
ನಿನ್ನ ಫ್ರೆಂಡ್ ಕೋಮಲಾ ಹೇಳಿದ್ಲು, ಇಂಥವರ ಹತ್ರ ಮಾತಾಡಿದ್ರೆ ನಾಳೆ ನನ್° ಹೆಸ್ರು ಕಾಲೇಜ್ ಗೋಡೆ ಮೇಲೆ ಬರತ್ತೆ. ಇಂಥವರ ಸಹವಾಸ ಸರಿಯಿಲ್ಲ ಅಂದ್ಯಂತೆ! ಅಂಥದ್ದೇನು ಅಪರಾಧ ಮಾಡಿದೆ ನಾನು? ನನ್ನ ನೋಡಿದ್ರೆ ಹಾಗೆಲ್ಲಾ ಕೆಟ್ಟು ಕೆರ ಹಿಡಿದು ಹೋದ ಹುಡುಗ ಅನ್ಸತ್ತಾ? ನೋಡೂ, ಒಂದು ಮಾತು ತಿಳ್ಕೊ. ನಾನು ನಿನ್ನ ಸೀನಿಯರ್. ಇವತ್ತು ಹೀಗೆಲ್ಲಾ ಕೆಲಸಕ್ಕೆ ಬಾರದ ಬಿಂಕ ಮಾಡಿದ್ರೆ, ನಾಳೆ ನಿಂಗೆ ನೋಟ್ಸ್ ಬೇಕಾಗೋದು ನಂದೇ. ನಮ್ಮಿಡೀ ಕ್ಲಾಸಲ್ಲಿ ನನ್ನಷ್ಟು ಚೆನ್ನಾಗಿ ನೋಟ್ಸ್ ಮಾಡೋದು ಯಾರೂ ಇಲ್ಲ.ಇದನ್ನ ಜಂಬದಿಂದ ಹೇಳ್ತಿಲ್ಲ, ತೀರಾ ಸಹಜವಾಗಿ ಹೇಳ್ತಿದ್ದೀನಿ. ಈ ವಿಷಯ ನಿಂಗೆ ಗೊತ್ತಿರ್ಲಿ ಅಂತ ಹೇಳ್ತಿದ್ದೀನಿ.
ಇದ್ನೇಲ್ಲಾ ಹೇಳಿ ನಿನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದೀನಿ ಅಂದ್ಕೊಂಡ್ಯಾ? ಖಂಡಿತ ಇಲ್ಲ ಮಾರಾಯ್ತಿ. ಅಂತಹ ದುರ್ಭುದ್ಧಿ ನಂಗಿಲ್ಲ. ನಾನೇನು ಗಾಂಧಿ ಅಂತ ಹೇಳ್ಕೊತಿಲ್ಲ. ಅಷ್ಟೆಲ್ಲಾ ಸಾಧು ನಾನು ಅಲ್ಲವೂ ಅಲ್ಲ. ಆದ್ರೆ ಪೋಲಿ-ಪಡ್ಡೆಯಂತೂ ಅಲ್ಲ. ನನ್ನ ಹತ್ರ ಇನ್ನೊಂದ್ಸಾರಿ ಮಾತಾಡು. ಆಗ ನಿಂಗೇ ಗೊತ್ತಾಗತ್ತೆ ನಾನೆಷ್ಟು ಒಳ್ಳೆಯ ಹುಡುಗ ಅಂತ. ಉಳಿದೆಲ್ಲಾ ಹುಡುಗರ ಹಾಗೆ ಪಾರ್ಕಿಗೆ ಬಾ, ಕ್ಯಾಂಟೀನಲ್ಲಿ ಸಿಗು, ಲೈಬ್ರರಿಯಲ್ಲಿ ಕಾಣು ಅಂತೆಲ್ಲಾ ನಾನು ಹೇಳಲ್ವೆ. ಮಾತಾಡಬೇಕು, ಮಾತಾಡ್ತಾನೇ ಇರಬೇಕು ಅನ್ನೋ ಬಯಕೆ ಇರೋದು ನಿಜ. ಇಷ್ಟಾದ್ರೂ ನೀನು ನನ್ ಹತ್ರ ಮಾತಾಡ್ಲೆಬೇಕ್ ಅಂತ ಜಬರ್ದಸ್ತು ಮಾಡೋದಿಲ್ಲ, ಮಾಡಕ್ಕೆ ನಂಗಿಷ್ಟ ಇಲ್ಲ.
ನಿನ್ನ ಉಳಿದೆಲ್ಲಾ ಸ್ನೇಹಿತರ ಹಾಗೆ ನಾನೂ ಕೂಡ ಅಂತ ತಿಳಿದು ಮಾತಾಡಿದ್ರೆ ನಂಗೆ ಸಂತೋಷ ಆಗತ್ತೆ. ಆದ್ರೆ ನಿನ್ನ ಹಿಂದೆ ನಾನು ಅಥವಾ ನನ್ನ ಹಿಂದೆ ನೀನು ಸುತ್ತಿದ್ರೆ ಕಾಲೇಜಲ್ಲಿ ಇಲ್ಲದ್ದು-ಸಲ್ಲದ್ದು ಮಾತಾಡ್ತಾರೆ. ಅದ್ಕೆ, ಮಾತಾಡಬೇಕು ಅನ್ನಿಸಿದಾಗ ಫೋನ್ ಮಾಡು. ಅಲ್ಲೀವರೆಗೂ ಕಾಯ್ತಾ ಇರ್ತೆನೆ…
ನನ್ನ ಹೆಸರು ಮೋನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು