ಅವನನ್ನು ಇನ್ನೊಂದು ಸಲ ಭೇಟಿ ಆಗುವಾಸೆ…

Team Udayavani, Feb 11, 2020, 4:32 AM IST

kemmu-12

ನೂರಾರು ಭಾವನೆಗಳಿಗೆ ರೆಕ್ಕೆ ಕೊಡುವಾಸೆ. ಆದರೂ ಮನದಲ್ಲಿನ ದುಗುಡ ಅಡ್ಡಗಾಲಿಡುತ್ತಿದೆ. ನನ್ನ ಮಂದಹಾಸದಲಿ ನಿನ್ನೊಲವ ಧಾರೆ ದುಮ್ಮಿಕ್ಕುತ್ತಿದೆ. ಸಂಭಾಷಣೆಯಲ್ಲಿ ಜೊತೆಯಾಗುವ ಕನಸು ಕಾಣುತ್ತಿದೆ. ಕಣ್ಣಂಚಲಿ ಕುಕ್ಕುವ ಚಿತ್ರಕ್ಕೆ ಜೀವ ನೀಡುವ ಬಯಕೆಯಾದರೂ ಬರಡು ಭೂಮಿಯಲ್ಲಿ ನಿಂತ ಭಾವ ಮೂಡಿದೆ. ನನ್ನ ಕನಸಿನ ಹುಡುಗ, ಅದೊಂದು ದಿನ ಕಣ್ಣೆದುರು ಪ್ರತ್ಯಕ್ಷವಾಗಿದ್ದ. ಕಾಲೇಜಿನ ಕಾರ್ಯಕ್ರಮದ ನಿಮಿತ್ತ ಆತ ಬಂದಿದ್ದ. ಆತ, ಬೆಳಗ್ಗೆಯಿಂದಲೇ ಕಾಲೇಜಿನ ತುಂಬೆಲ್ಲಾ ಪಾದರಸದಂತೆ ಓಡಾಡುತ್ತಿರುವುದನ್ನು ಕಂಡು ಮನಸು ಪ್ರಶ್ನಿಸುತ್ತಿತ್ತು ಯಾರವನು? ಎಂದು. ಅವನ ನಗು ಮೊಗ ಮನದ ಮೂಲೆಯಲ್ಲಿ ಹುಟ್ಟಿದ್ದ ಭಾವನೆಗಳಿಗೆ ಪುಷ್ಟಿ ನೀಡಿತ್ತು. ಕಾರ್ಯಕ್ರಮವನ್ನು ನಾವೇ ಆಯೋಜಿಸಿದ್ದ ಕಾರಣ, ಕೆಲಸಗಳ ಹೊರೆ ಬೆನ್ನುಬಿದ್ದಿತ್ತು. ಆದರೂ, ಕಣ್ಣು ಮತ್ತೆ ಮತ್ತೆ ಅವನೆಡೆಗೆ ಎಳೆಯುತ್ತಿತ್ತು.

ಎಲ್ಲ ಕಾರ್ಯಕ್ರಮಗಳು ಮುಗಿದ ತಕ್ಷಣ ನಿದ್ದೆಯಿಂದ ಎದ್ದ ಅನುಭವವಾಗಿ ಕಣ್ಣು ಅವನ ಹಾಜರಿಗೆ ತವಕಿಸುತ್ತಿತ್ತು. ಎಷ್ಟು ದೂರ ಕಣ್ಣು ಹಾಯಿಸಿದರೂ ಆತ ಕಾಣಿಸಲೇ ಇಲ್ಲ. ದೇವರೇ ಒಮ್ಮೆ ಆತ ಕಣ್ಣಿಗೆ ಬೀಳುವಂತೆ ಮಾಡು ಎಂದು ಪ್ರಾರ್ಥಿಸುವಾ ಅನ್ನಿಸಿ, ಹಾಗೇ ಮಾಡಿದೆ! ಅದೇನು ಮಾಯವೋ ತಿಳಿಯೆನು. ಮತ್ತೂಮ್ಮೆ ತಿರುಗಿ ನೋಡುವಷ್ಟರಲ್ಲಿ ನನ್ನ ಹಿಂದೆಯೇ ಅದೇ ನಗುಮೊಗ ಗುಂಪಿನಲ್ಲಿ ಮಾತನಾಡುತ್ತ ನಿಂತಿದೆ. ಅಷ್ಟೇ; ಅವನನ್ನು ಕಂಡಾಕ್ಷಣ, ಬಿಗಿಹಿಡಿದ ಉಸಿರು ನಿರಾಳಗೊಂಡಿತ್ತು. ಮತ್ತದೇ ನಗುವನ್ನು ಕಂಡು ಮನಸ್ಸು ಪ್ರಫ‌ುಲ್ಲಗೊಂಡಿತ್ತು.

ಅದೇನೋ ಗೊತ್ತಿಲ್ಲ, ಅವನೊಂದಿಗೆ ಒಂದು ಫೋಟೊ ತೆಗೆಸಿಕೊಳ್ಳುವ ಆಸೆಯಾಯಿತು. ಅದನ್ನು ಹೇಗೆ ಕೇಳುವುದು? ಎಂಬ ಮುಜುಗರ. ಅಂದು ತಪ್ಪಿದರೆ ಮುಂದೆಂದೂ ಆತ ಸಿಗದಿದ್ದರೆ, ಎಂಬ ಭಯ ಬೇರೆ. ಮತ್ತೆ ನಮ್ಮಿಬ್ಬರ ಭೇಟಿಯಾಗಬಹುದೆಂಬ ಅದಾವ ನಂಬಿಕೆಯೂ ನನಗಿರಲಿಲ್ಲ. ಕೊನೆಗೂ ಕೇಳಿಯೇ ಬಿಟ್ಟೆ . ಆತನಿಂದ ಅದೇ ಮುಗುಳುನಗೆಯೊಂದಿಗೆ “ಆಗಬಹುದು’ ಎಂಬ ಉತ್ತರ ಬಂದಾಗ ಮನಸ್ಸು ಚಿಟ್ಟೆಯಂತೆ ಹಾರತೊಡಗಿತು. ವಾಪಸಾಗುವ ಹೊತ್ತಿಗೆ, ಮತ್ತೆ ಭೇಟಿಯಾಗೋಣ ಎಂದು ಹೇಳಿ, ಕೆನ್ನೆ ಕೆಂಪೇರಿಸುವಷ್ಟು ಸಿಹಿಯಾದ ನಗೆ ಬೀರಿ ಹೊರಟು ನಿಂತಿದ್ದ.

ಈ ವಿಶಾಲವಾದ ಪ್ರಪಂಚದಲ್ಲಿ ಒಂದಾದರೊಂದು ದಿನ ಮತ್ತೆ ನಮ್ಮಿಬ್ಬರ ಭೇಟಿ ಆಗಬಹುದೆಂಬ ಹಂಬಲ ನನ್ನದು.

ಪವಿತ್ರಾ ಭಟ್‌, ಜಿಗಳೇಮನೆ

ಟಾಪ್ ನ್ಯೂಸ್

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.