Udayavni Special

ನೆನಪುಗಳ ನೆರಳು ಜೊತೆಗೇ ಇರ್ತದೆ!

Team Udayavani, Oct 20, 2020, 8:20 PM IST

josh-tdy-4

ನೀನೊಂದು ಸುಂದರ ಸ್ವಪ್ನ. ನಿನ್ನೊಂದಿಗೆಕಳೆದಕ್ಷಣಗಳು ಜೀವನದಲ್ಲಿ ಎಂದಿಗೂ ಮರೆಯಲಾರದಂತಹವು. ಆ ದಿನಗಳ ಲವಲವಿಕೆ- ಚೈತನ್ಯ ಹೇಳತೀರದು. ನಿನ್ನ ಧ್ವನಿಯೊಂದೇ ಸಾಕಾಗಿತ್ತು, ಮನಸ್ಸು ರಿಚಾರ್ಜ್‌ ಆಗಲು. ಹಲವಾರು ಕಲ್ಪನೆಗಳನ್ನು, ಕನಸುಗಳನ್ನು ಹುಟ್ಟುಹಾಕಿದ್ದ ಸ್ವಪ್ನಸುಂದರಿ ನೀನು.

ಬದುಕಿನ ವಿವಿಧ ಮಜಲುಗಳಲ್ಲಿ ನಿನ್ನದೊಂದು ಪಾತ್ರವನ್ನು ಸೃಷ್ಟಿಸಿಕೊಡಲೇಬೇಕು ಎಂದು ಆ ಭಗವಂತನಲ್ಲಿ ಬೇಡಿಕೊಂಡ ದಿನಗಳು ಹಲವಾರು. ಆ ಮನಸ್ಥಿತಿ ರೂಪಿತವಾದದ್ದು ನಿನ್ನಿಂದಲೇ.ಕಾಣದ ದಿನಗಳಿಗೆ ಹಲವು ಬಣ್ಣಗಳನ್ನು ಎರಚಿ ರಂಗುರಂಗಿನ ರಂಗೋಲಿಯನ್ನು ರಚಿಸಿ,ಕಲ್ಪನೆಗಳ ಕಾರ್ಮೋಡವನ್ನು ಸೃಷ್ಟಿಸಿದವಳು ನೀನು. ನಾವಂದುಕೊಂಡಂತೆ ಜಗತ್ತು ಇದ್ದಿದ್ದರೆ ಅದೆಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಬಯಸಿದ್ದೇ ಬದುಕಾಗಳು ಸಾಧ್ಯವೇ?

ಕೆಲವೊಮ್ಮೆ ನಮ್ಮ ಬದುಕಿಗೆ ಮತ್ಯಾರೋ ಹೇಳದೇಕೇಳದೆ ಬಂದುಬಿಡುತ್ತಾರೆ.  ಅವರ ಖುಷಿಗಾಗಿ ನಮ್ಮ ಸಂಭ್ರಮವನ್ನೇ ಬಲಿಕೊಡಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ನಾವು ನೋವನ್ನು ಸ್ವೀಕರಿಸಲೇಬೇಕಾದ ಸಂದರ್ಭ ಬಂದುಬಿಡುತ್ತದೆ. ನಿನ್ನ ಜೊತೆಗಿನ ಬದುಕುವ ವಿಷಯವಾಗಿ ನೂರಲ್ಲ, ಸಾವಿರಕನಸುಕಟ್ಟಿಕೊಂಡಿದ್ದವ ನಾನು. ಅಂಥವನಿಗೂ ಅನ್ಯಾಯವಾಗಿಹೋಯಿತಲ್ಲ… ಇರಲಿ ಬಿಡು, ಈಗ ಆಗಿರುವುದಕ್ಕೆಲ್ಲಾ ನೀನೇ ಕಾರಣ ಎಂದು ನಾನು ಹೇಳುವುದಿಲ್ಲ. ಇನ್ಯಾವತ್ತೂ ನೀನು ನನಗೆ ಸಿಗುವುದಿಲ್ಲ ಎಂದು ಗೊತ್ತಾದ ನಂತರವೂ ನಿನ್ನನ್ನು ನಾನು ಜರಿಯುವುದಿಲ್ಲ. ಟೀಕಿಸುವುದಿಲ್ಲ. ಬೇರೆಯವರ ಸಂತೋಷಕ್ಕಾಗಿ ನೀನೂ ನೋವು ಸ್ವೀಕರಿಸಿದೆ. ಅದರ ಮುಂದಿನ ಭಾಗವೆಂಬಂತೆ ನನ್ನಿಂದ ದೂರವಾದೆ. ಅದು ನನಗಾದ ಅನ್ಯಾಯವೆಂದು ನಾನೇಕೆ ಹೇಳಲಿ..? ನೀನು ನನಗಿಷ್ಟವಾದ ಮೇಲೆ, ನಿನ್ನ ನಿರ್ಧಾರಗಳೂ ನನಗೆ ಇಷ್ಟವೇ. ನಿನ್ನ ಯಾವುದೇ ನಿರ್ಧಾರಕ್ಕೆ ನನ್ನ ಸಮ್ಮತಿ ಇದ್ದೇ ಇರುತ್ತದೆ. ನಮ್ಮಿಬ್ಬರ ಅಗಲಿಕೆ ನಿನ್ನ ಮನದೊಳಗೆ ಅದೆಷ್ಟು ನೋವುಗಳನ್ನು ಹುಟ್ಟಿಸಿತೋ ನಾ ಅರಿಯೆ. ಆದರೆಊಹೆಗೂ ಮೀರಿದ ನೋವು ನಿನಗಾಗಿದೆ ಎಂಬುದು ಮಾತ್ರ ಸತ್ಯ. ನನ್ನ ಬಾಳಿಂದ ನೀನು ಮರೆಯಾದರೂ ನಿನ್ನ ನೆನಪುಗಳ ನೆರಳು ಎಂದಿಗೂ ಮರೆಯಾಗುವುದಿಲ್ಲ. ಈ ಕ್ಷಣಕ್ಕೆ ಅದಷ್ಟೇ ಸತ್ಯ.

– ವೆಂಕಟೇಶ ಚಾಗಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

ಮಳೆ ಹಾನಿ ಪ್ರದೇಶಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬಂದಿಲ್ಲ: ಅಜಿತ್‌ ಪವಾರ್‌

ಮಳೆ ಹಾನಿ ಪ್ರದೇಶಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬಂದಿಲ್ಲ: ಅಜಿತ್‌ ಪವಾರ್‌

ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ: ಶ್ರೀಲಂಕಾಕ್ಕೆ ಸೇರಿದ ದೋಣಿಯಲ್ಲಿತ್ತು 100ಕೆಜಿ ಹೆರಾಯ್ನ್

ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ: ಶ್ರೀಲಂಕಾಕ್ಕೆ ಸೇರಿದ ದೋಣಿಯಲ್ಲಿತ್ತು 100ಕೆಜಿ ಹೆರಾಯ್ನ್

ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಇನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ್‌ ಹೆಸರು

ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಇನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ್‌ ಹೆಸರು

ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ಸ್ವೀಕರಿಸಿದ ಗೌರವ್‌ ಶರ್ಮಾ

ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಗೌರವ್‌ ಶರ್ಮಾ

ಬೀಗರ ಊಟಕ್ಕೆ ಆಗಮಿಸಿ ಈಜಲು ತೆರಳಿದ ಯುವಕರು; ನಾಲ್ವರು ನಾಪತ್ತೆ, ಓರ್ವನ ಮೃತದೇಹ ಪತ್ತೆ

ಬೀಗರ ಊಟಕ್ಕೆ ಆಗಮಿಸಿ ಈಜಲು ತೆರಳಿದ ಯುವಕರು; ನಾಲ್ವರು ನಾಪತ್ತೆ, ಓರ್ವನ ಮೃತದೇಹ ಪತ್ತೆ

6 ತಿಂಗಳ ಬಳಿಕ ಅಮೇರಿಕಾದಲ್ಲಿ ಒಂದೇ ದಿನ 2,146 ಮಂದಿ ಕೋವಿಡ್ ಸೋಂಕಿಗೆ ಬಲಿ

6 ತಿಂಗಳ ಬಳಿಕ ಅಮೇರಿಕಾದಲ್ಲಿ ಒಂದೇ ದಿನ 2,146 ಮಂದಿ ಕೋವಿಡ್ ಸೋಂಕಿಗೆ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾರೋ ಸಾಧಕರ ಕೇರಿಗೆ : ರುಚಿ ಹಣ್ಣು, ದೊರಗು ಭಿತ್ತಿ

ಬಾರೋ ಸಾಧಕರ ಕೇರಿಗೆ : ರುಚಿ ಹಣ್ಣು, ದೊರಗು ಭಿತ್ತಿ

ದನ ಕಾಯುತ್ತಿದ್ದ ಹುಡುಗ ಜೇಮ್ಸ…ಬಾಂಡ್‌ ಆದ!

ದನ ಕಾಯುತ್ತಿದ್ದ ಹುಡುಗ ಜೇಮ್ಸ…ಬಾಂಡ್‌ ಆದ!

JOSH-TDY-1

ಮನೆಯೊಳಗಿಂದ ಕಂಡ ವಿಶ್ವರೂಪ

josh-tdy-3

ಮನಸು ಹೇಳಿದ್ದನ್ನು ಕೈಗಳು ಬರೆದಿವೆ…

‌ಗಣಿ ಮಾಲೀಕನಾಗಿ ಬದಲಾದ ನಟ

‌ಗಣಿ ಮಾಲೀಕನಾಗಿ ಬದಲಾದ ನಟ

MUST WATCH

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

ಹೊಸ ಸೇರ್ಪಡೆ

Add-in-Veerashaiva-Lingayata-OBC

ವೀರಶೈವ-ಲಿಂಗಾಯತ ಒಬಿಸಿಯಲ್ಲಿ ಸೇರಿಸಿ

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

ಕಾಶ್ಮೀರದತ್ತ ರಕ್ಷಿತ್‌ ಹಿಮದ ಮಧ್ಯೆ ಕ್ಲೈಮ್ಯಾಕ್ಸ್‌

ಕಾಶ್ಮೀರದತ್ತ ರಕ್ಷಿತ್‌ ಹಿಮದ ಮಧ್ಯೆ ಕ್ಲೈಮ್ಯಾಕ್ಸ್‌

ಮಳೆ ಹಾನಿ ಪ್ರದೇಶಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬಂದಿಲ್ಲ: ಅಜಿತ್‌ ಪವಾರ್‌

ಮಳೆ ಹಾನಿ ಪ್ರದೇಶಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬಂದಿಲ್ಲ: ಅಜಿತ್‌ ಪವಾರ್‌

ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ: ಶ್ರೀಲಂಕಾಕ್ಕೆ ಸೇರಿದ ದೋಣಿಯಲ್ಲಿತ್ತು 100ಕೆಜಿ ಹೆರಾಯ್ನ್

ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ: ಶ್ರೀಲಂಕಾಕ್ಕೆ ಸೇರಿದ ದೋಣಿಯಲ್ಲಿತ್ತು 100ಕೆಜಿ ಹೆರಾಯ್ನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.