Udayavni Special

ಮನಸು ಈಗಲೂ ನಿನ್ನನ್ನೇ ಬಯಸುತಿದೆ…


Team Udayavani, Aug 7, 2018, 6:00 AM IST

8.jpg

ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ. 

ಹಾಯ್‌ ಶ್ರೀ,
 ನಾನು ನಿನ್ನ ಮುದ್ದಿನ ಪಂಡು. ಈಗ ನೀನು ಎಲ್ಲಿದ್ದೀಯೋ? ಹೇಗಿದ್ದೀಯೋ? ನನಗಂತೂ ತಿಳಿಯದು. ನಿನ್ನನ್ನು ನೋಡಿದ ಮೊದಲ ದಿನದಿಂದಲೇ ನಿನ್ನ ಮೇಲೆ ಪ್ರೀತಿಯಾಯಿತು. ಅಂದಿನಿಂದ ಇಂದಿನವರೆಗೂ ಮನಸ್ಸಲ್ಲಿ ನಿನ್ನದೇ ಗುನುಗು. ನಿನ್ನನ್ನು ನೋಡದೇ ಸುಮಾರು ಆರೇಳು ವರ್ಷಗಳು ಉರುಳಿಹೋದವೆಂದರೆ ನನಗಿನ್ನೂ ನಂಬಲಾಗುತ್ತಿಲ್ಲ! 

ಆಗ ನಾವೆಲ್ಲಾ ಹತ್ತನೇ ತರಗತಿಯಲ್ಲಿದ್ದೆವು. ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಪಕ್ಕದಲ್ಲಿ ಕೂರುತ್ತಿದ್ದ ಸ್ನೇಹಿತ, ಆ ಹುಡುಗಿ ಯಾಕೋ ನಿನ್ನನ್ನೇ ನೋಡಿ ನಗುತ್ತಿರುತ್ತಾಳೆ? ಎಂದು ಕೇಳುತ್ತಿದ್ದ. ಏನೋ ತಮಾಷೆ ಮಾಡ್ತಿದ್ದಾನೆ ಎಂದುಕೊಂಡು ನಾನು ಗಮನ ಹರಿಸಿರಲಿಲ್ಲ. ಆದರೂ ಅವನು ಪ್ರತಿದಿನವೂ ಅದನ್ನೇ ಹೇಳುತ್ತಿದ್ದುದರಿಂದ, ನೋಡಿಯೇ ಬಿಡೋಣ ಇವನು ಹೇಳುತ್ತಿರುವುದು ಸುಳ್ಳೋ? ನಿಜವೋ? ಎಂದು ಪರೀಕ್ಷಿಸಲು ಒಂದು ದಿನ ನಾನೂ ನಿನ್ನತ್ತ ತಿರುಗಿ ನೋಡಿಯೇ ಬಿಟ್ಟೆ! 

ಹಾಗೆ ನೋಡಿದಾಗ ನನಗೆ ನೀನು ಮಾತ್ರ ಕಾಣಲಿಲ್ಲ. ಬದಲಿಗೆ ನನ್ನ ಭವಿಷ್ಯವೇ ನಿನ್ನಲ್ಲಿ ಕಾಣಿಸಿಬಿಟ್ಟಿತು. ಅದುವರೆಗೂ ಲಂಗು-ಲಗಾಮಿಲ್ಲದೆ, ಎಲ್ಲೆಲ್ಲೋ ಸುತ್ತುತ್ತಿದ್ದ ನನ್ನ ಮನಸ್ಸು ಅಂದಿನಿಂದ ನಿನ್ನದೇ ಧ್ಯಾನದಲ್ಲಿ ಮುಳುಗಿಹೋಯಿತು. 

ನಿನ್ನ ನೋಡುವ ಸಲುವಾಗಿಯೇ, ನೋಟ್ಸ್‌ ಬೇಕೆಂಬ ನೆಪವೊಡ್ಡಿ  ನಿಮ್ಮ ಮನೆಗೆ ಬರುತ್ತಿದ್ದೆ. ನಿನಗೂ ನನ್ನ ಮೇಲೆ ಅಷ್ಟೇ ಪ್ರೀತಿ ಇದ್ದುದರಿಂದ, ಅದೇ ನೆಪವನ್ನೊಡ್ಡಿ ನೀನೂ ನಮ್ಮ ಮನೆಗೆ ಬರುತ್ತಿದ್ದೆ. ಆದರೂ ನನ್ನ ಮನದಾಳದ ಗೊಂದಲಕ್ಕೆ ಉತ್ತರವಾಗಿ, ನೀನೇ ಅಲ್ಲವೇ ನೋಟ್ಸ್‌ಅನ್ನು ಹಿಂದಿರುಗಿಸುವಾಗ, ಅದರೊಳಗೆ “ಐ ಲವ್‌ ಯೂ’ ಎಂದು ಬರೆದು,ನನಗೆ ಪ್ರೇಮಲೋಕವನ್ನು ಪರಿಚಯಿಸಿದ್ದು?

 ಹೀಗೆ ಸುಂದರವಾಗಿ ಸಾಗುತ್ತಿದ್ದ ನಮ್ಮಿಬ್ಬರ ಪ್ರೇಮದ ಪಯಣದ ಮೇಲೆ ಅದ್ಯಾರ ಕಣ್ಣು ಬಿತ್ತೋ? ನಮ್ಮಿಬ್ಬರ ಪ್ರೀತಿಯ ವಿಷಯ ನಮ್ಮ ಮನೆಗಳಲ್ಲಿ ತಿಳಿದು, ರಂಪವಾಯಿತು. ಅದೊಂದು ದಿನ ನಿಮ್ಮಮ್ಮ, “ಇನ್ಮುಂದೆ ನಮ್ಮ ಮನೆಯ ಹತ್ತಿರ ಬರಬೇಡಪ್ಪ’ ಎಂದು ಹೇಳಿಬಿಟ್ಟರು. ಅಂದಿನಿಂದ ನಿನ್ನನ್ನು ಭೇಟಿಯಾಗಲು ನಾನು ಮಾಡದ ಪ್ರಯತ್ನವಿಲ್ಲ. ನಿನ್ನ ಮನೆಯವರು ನಿನಗೇನು ಹೇಳಿ ನನ್ನಿಂದ ದೂರವಿಟ್ಟರೋ ನನಗಂತೂ ಗೊತ್ತಿಲ್ಲ. ನೀನು ನನ್ನನ್ನು ಬಿಟ್ಟು ಹೋಗಿ ಎಷ್ಟೋ ವರ್ಷಗಳು ಕಳೆದರೂ, ನಿನ್ನ ನೆನಪುಗಳು ಈಗಲೂ ಕಾಡುತ್ತಲೇ ಇವೆ. ಮನಸ್ಸು ಇಂದಿಗೂ ನಿನ್ನನ್ನೇ ಬಯಸುತ್ತಿದೆ. ಈಗ ಹಠಾತ್ತಾಗಿ ನಾನು ಈ ಪತ್ರ ಬರೆಯಲು ಕಾರಣ ಕೂಡ ನೀನೇ ಶ್ರೀ. ಈ ಪತ್ರ ಓದಿದರೆ ನೀನು ವಾಪಸ್‌ ಬಂದೇ ಬರ್ತೀಯಾ ಅನ್ನೋ ಭರವಸೆ ನನ್ನದು. ಹಾಗೆಯೇ ಆಗಲಿ ಎಂದು ಆಶಿಸುತ್ತಾ…….

ಇಂತಿ,
ನಿನ್ನ ಮುದ್ದಿನ ಪಂಡು
-ಗಿರೀಶ್‌ ಚಂದ್ರ ವೈ.ಆರ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಆಂಜನೇಯ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್ ತಿರುಗೇಟು

ಮಾಜಿ ಸಚಿವ ಆಂಜನೇಯ ಮಾಡಿರುವ ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಸಚಿವ ಪ್ರಭು ಚವ್ಹಾಣ್

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿನಿಂದ ಬಲಿ

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿಗೆ ಬಲಿ

ವಿಜಯಪುರ ಬಹಿರ್ದೆಸೆಗೆ ಹೋಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ವಿಜಯಪುರ ಬಹಿರ್ದೆಸೆಗೆ ಹೋಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ ; ನಿರೂಪಕಿ ಅನುಶ್ರೀ ಗೂ ಸಿಸಿಬಿ ನೋಟೀಸ್

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ ; ನಿರೂಪಕಿ ಅನುಶ್ರೀ ಗೂ ಸಿಸಿಬಿ ನೋಟೀಸ್

ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ನುಗ್ಗಿದ ಕಳ್ಳರು: ನಗದು, ಆಭರಣ ಕಳ್ಳತನ

ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ನುಗ್ಗಿದ ಕಳ್ಳರು: ನಗದು, ಆಭರಣ ಕಳ್ಳತನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ರೂಪ ಕೈಕೊಟ್ಟರೂ ಬುದ್ಧಿಕೈಕೊಡಲಿಲ್ಲ!

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ರೋಗ ನಿರೋಧಕ-ಕರಿಬೇವು

ರೋಗ ನಿರೋಧಕ-ಕರಿಬೇವು

josh-tdy-1

ಹೇಳ್ರೀ ನನ್ನ ಕಂಡ್ರೆ ನಿಮಗೇನನ್ನಿಸುತ್ತೆ?

MUST WATCH

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavaniಹೊಸ ಸೇರ್ಪಡೆ

ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಲಿ

ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಲಿ

ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಆಂಜನೇಯ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್ ತಿರುಗೇಟು

ಮಾಜಿ ಸಚಿವ ಆಂಜನೇಯ ಮಾಡಿರುವ ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಸಚಿವ ಪ್ರಭು ಚವ್ಹಾಣ್

ಕೋವಿಡ್ ಹಿನ್ನಲೆ : ಪೌಷ್ಟಿಕ ಆಹಾರ ಮನೆಗೇ ತಲುಪಿಸಿ

ಕೋವಿಡ್ ಹಿನ್ನಲೆ : ಪೌಷ್ಟಿಕ ಆಹಾರ ಮನೆಗೇ ತಲುಪಿಸಿ

ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ

ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ

ನಾಡ ಕಚೇರಿಗೆ ಡೀಸಿ ದಿಢೀರ್‌ ಭೇಟಿ

ನಾಡ ಕಚೇರಿಗೆ ಡೀಸಿ ದಿಢೀರ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.