ನನ್ನ ಪಾಲಿನ ಆಪದ್ಭಾಂದವ

Team Udayavani, Jul 9, 2019, 5:30 AM IST

ಅದು ಅಮವಾಸ್ಯೆಯ ಹಿಂದಿನ ದಿನ. ಹತ್ತು ವರ್ಷಗಳ ನಂತರ ನಾನು ಮೊದಲಸಲ ತವರಿಗೆ ಹೊರಟಿದ್ದೆ. ಬಸ್‌ ಹೋಗುವುದು ಸ್ವಲ್ಪ ತಡವಾಗಿ ಇಳಿಯುವ ಹೊತ್ತಿಗೆ ಸಂಜೆಯಾಗಿತ್ತು. ಹತ್ತುವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದವು. ಅಲ್ಲೊಂದು ಹೊಸದಾಗಿ ಆಟೋ ಸ್ಟ್ಯಾಂಡಿತ್ತು. ಕಾಲು ದಾರಿಯ ಸುತ್ತಮುತ್ತ ಕೆಲಮನೆಗಳಾಗಿದ್ದವು. ಮೊದಲದು ಗೊಂಡಾರಣ್ಯವಾಗಿತ್ತು. ಆದರೆ, ಆಟೋ ಹತ್ತದೇ ನನ್ನಣ್ಣನಿಗೆ ಕಾಲ್‌ ಮಾಡಿದರೆ ಬಂದು ಕರೆದೊಯ್ತಾನೆ ಅಂತ ಭಾವಿಸಿ ಅಣ್ಣನಿಗೆ ಕಾಲ್‌ ಮಾಡುತ್ತಲೇ ಆಟೋ ಸ್ಟ್ಯಾಂಡ್‌ ದಾಟಿ ಮುಂದೆ ಹೋಗತೊಡಗಿದೆ. ಮೂರ್ನಾಲ್ಕು ಸಲ ಪೂರ್ತಿ ರಿಂಗ್‌ ಆಗಿ ಕಟ್ಟಾದರೂ ಅಣ್ಣ ಕಾಲ್‌ ಎತ್ತಲಿಲ್ಲ. ಬೇಗ ಬೇಗ ನಡೆಯುತ್ತಾ ಸುಮಾರು ದೂರ ಬಂದಾಗಿತ್ತು. ಆಗ ಸುತ್ತಮುತ್ತ ಗಮನಿಸಿದೆ. ಕಣ್ಣಳತೆಯ ದೂರದಲ್ಲೆಲ್ಲೂ ಮನೆಗಳಿರಲಿಲ್ಲ. ಮುಂಚಿನಂತೆ ಕಾಡು ಹಾಗೇ ಇತ್ತು. ಇದಿರುಗಪ್ಪಾಗ ತೊಡಗಿತ್ತು.. ಕಣ್ಣುಹಿಗ್ಗಲಿಸಿ ನೋಡಿದರೂ ಸರಿಯಾಗಿ ರಸ್ತೆ ಕಾಣಿಸುತ್ತಿರಲಿಲ್ಲ. ಆಗಸದಲ್ಲಿ ಒಂದೇ ಒಂದು ನಕ್ಷತ್ರ ಸಹ ಕಾಣಿಸಲಿಲ್ಲ. ನನ್ನ ಹಿಂಬದಿಗೆ ಒಂದು ಅಪರಿಚಿತ ಯುವಕರ ದಂಡು

ಮಚ್ಚಾ, ಯಾರೋ ಹೆಂಗಸು ಒಬ್ಬಳೇ ಹೋಗ್ತಿದ್ದಾಳೆ ನೋಡೋ..ಊರಿಗೆ ಹೊಸಬಳೆನಿಸುತ್ತದೆ.

ಲೋ, ಬನ್ರೊ ನೋಡೋಣ…
ನನಗೆ ಅವರ ಮಾತು ಕೇಳಿ ಒಮ್ಮೆಲೇ ಭಯವಾಯ್ತು.ಅಳುವೂ ಬಂತು. ಹಿಂತಿರುಗಿ ಆಟೋಸ್ಟ್ಯಾಂಡಿಗೆ ಹೋಗಲೂ ಭಯ. ಮುಂದೆ ಹೋಗಲೂ ಭಯ. ಇದ್ದಬದ್ದ ದೇವರನ್ನೆಲ್ಲಾ ನೆನಪಿಸಿಕೊಂಡು ಬಿರಬಿರನೆ ನಡೆಯಲಾರಂಭಿಸಿದೆ.

ಆಗಲೇ ಒಂದು ಬೈಕ್‌ ಬಂದು ನನ್ನ ಪಕ್ಕ ನಿಂತಿತು. ಎಲ್ಲಿಗಮ್ಮಾ? ಕೇಳಿದ ಆ ಬೈಕ್‌ ಸವಾರ. ನನಗೆ ಆತ ಯಾರೆಂದು ತಿಳಿಯಲಿಲ್ಲ. ಹೇ, ನೀವು ಕಾವೇರಮ್ಮನ ಮಗಳಲ್ಲವಾ..? ನಿಮ್ಮಣ್ಣ ಈಗ ತಾನೇ ಕೆಲಸದ ಮೇಲೆ ಬೇರೆ ಊರಿಗೆ ಹೋದ್ರು. ನೀವು ಬರುತ್ತಿರುವ ಸುದ್ದಿ ಮನೆಗೆ ತಿಳಿಸಿರಲಿಲ್ಲವೇ? ಎಂದು ಕೇಳಿದ ಆತ. ನಾನು “ಇಲ್ಲ’ ಎಂದೆ.ಯಾಕೆ ಒಬ್ಬರೇ ಬರೋದಿಕ್ಕೋದ್ರಿ..? ಬನ್ನಿ, ನಾನು ಮನೆ ತನಕ ಬಿಟ್ಟು ಬರ್ತೀನಿ. ನಿಮ್ಮ ಮನೆಯವರೆಲ್ಲಾ ತುಂಬಾ ಪರಿಚಯ ನನಗೆ ಎಂದ.

ಹಿಂದೆ ಬರುತ್ತಿರುವ ಕೇಡಿಗರ ಭಯಕ್ಕೆ ಗಪ್‌ಚುಪ್‌ ಎನ್ನದೇ ಬೈಕ್‌ ಏರಿದ್ದೆ. ಆತ ನನ್ನನ್ನು ಸುರಕ್ಷಿತವಾಗಿ ಮನೆಯ ಗೇಟಿನ ತನಕ ಬಿಟ್ಟು ಹೋದ. ಆತನ್ಯಾರೆಂದು ನನಗೆ ತಿಳಿಯಲಿಲ್ಲ. ಗಾಬರಿಯಲ್ಲಿ, ಹೆಸರು ಕೇಳಲೂ ಮರೆತಿದ್ದೆ. ಕತ್ತಲಲ್ಲಿಸ ಮುಖವನ್ನೂ ಸಹ ಸರಿಯಾಗಿ ನೋಡಲಿಕ್ಕಾಗಲಿಲ್ಲ. ಹಾಗಾಗಿ, ತವರಲ್ಲಿ ನಡೆದ ವೃತ್ತಾಂತ ತಿಳಿಸಿದರೂ ಆತನ್ಯಾರೆಂದು ತಿಳಿಯಲಿಲ್ಲ. ಮನದಲ್ಲೇ ಮತ್ತೂಮ್ಮೆ ಆತನಿಗೆ ಧನ್ಯವಾದ ತಿಳಿಸಿದೆ.

-ಗೀತಾ ಎಸ್‌.ಭಟ್‌


ಈ ವಿಭಾಗದಿಂದ ಇನ್ನಷ್ಟು

  • ಗಣಿತ ಸಮ್ಮೇಳನಗಳಲ್ಲಿ ಗಂಭೀರವಾದ ಉಪನ್ಯಾಸವಾದ ಮೇಲೆ ಪ್ರಶ್ನೋತ್ತರ ನಡೆಯುವುದು ರೂಢಿ. ಉಪನ್ಯಾಸದ ತಲೆಬುಡ ಅರ್ಥವಾಗದವರು ಕೂಡ ಆಗ ತಮಗೆಲ್ಲ ಅರ್ಥವಾಗಿದೆ ಎಂದು...

  • ನನ್ನ ಮೊಮ್ಮಗನನ್ನು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಹಾಸ್ಟೆಲ್‌ಗೆ ಸೇರಿಸುವ ಸಲುವಾಗಿ ಬಾಡಿಗೆ ಕಾರೊಂದರಲ್ಲಿ ಬೆಳಗಿನ ಜಾವ ಐದು ಘಂಟೆಗೆ ಚಿತ್ರದುರ್ಗದಿಂದ...

  • "ನಮ್ಮ ಕುಟುಂಬ' ಅಂತ ಒಂದು ಗ್ರೂಪ್‌ ರಚನೆ ಮಾಡಿದ್ದು ಚಿಕ್ಕಪ್ಪನ ಮಕ್ಕಳು. ಇದರ ಉದ್ದೇಶ, ಊರಲ್ಲಿದ್ದು, ನಗರಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಅಷ್ಟೂ ಸಂಬಂಧಿಕರನ್ನು...

  • ಬಸ್‌ಸ್ಟಾಪ್‌ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್‌ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ...

  • ಮಳೆ ಎಂದರೆ ಮನುಷ್ಯರಿಗಷ್ಟೇ ಅಲ್ಲ, ಪರಿಸರದ ಜೀವ ಸಂಕುಲಗಳಿಗೆಲ್ಲ ಸಂಭ್ರಮ. ಕಪ್ಪೆಗಳು ನೀರಿನಲ್ಲಿ ಕುಳಿತು ಗಾಳಿಯೊಂದಿಗೆ ರಾಗ ಭಾವವನ್ನು ತೇಲಿ ಬಿಡುತ್ತವೆ....

ಹೊಸ ಸೇರ್ಪಡೆ

  • ಮಂಗಳೂರು: ಕುಲಶೇಖರದಿಂದ ಮೂಡುಬಿದಿರೆ- ಕಾರ್ಕಳ ನಡುವಿನ ಸುಮಾರು 60 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಮತ್ತೂಮ್ಮೆ ಭೂಸ್ವಾಧೀನ ಪ್ರಕ್ರಿಯೆ...

  • ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

  • ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...

  • ಮಂಗಳೂರು: ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|...