Udayavni Special

ಬೇರೆಯಾರಿಗೂ ನಾ ಒಲಿಯಲಾರೆ…

Team Udayavani, Aug 13, 2019, 5:00 AM IST

r-15

ಈ ಹಸಿ ಹಸಿ ರೋಮ್ಯಾಂಟಿಕ್‌ ಎನ್ನುವುದು ಅಸಲು ನಿನಗೆ ಗೊತ್ತೇ ಇಲ್ಲ ನೋಡು.. ಸಿನಿಮಾ ಥಿಯೇಟರಿನ ಕೊನೆಯ ಸಾಲಿನ ಮೂಲೆ ಸೀಟು ಸಿಕ್ಕು, ಎಲ್ಲರೂ ಮುಳುಗಿ ಹೋದಾಗ.. ನಾನು ನಿನ್ನ ಭುಜಕ್ಕೊರಗಿದರೆ, ತುಂಟತನದಿಂದ ಸೊಂಟ ಚಿವುಟುತ್ತೀಯೇನೋ ಅಂದುಕೊಂಡಿದ್ದೆ! ಆದರೆ ನೀನೋ, ನಾನು ಮಗುವೆಂಬಂತೆ ತಲೆ ಸವರುತ್ತಿದ್ದೆ! ಆಗ ಎಷ್ಟು ಸಿಟ್ಟು ಬಂದಿತ್ತು ಗೊತ್ತಾ?

ಡಿಯರ್‌ ಗೆಳೆಯ,

ನಿನಗೊಂದು ಪ್ರೇಮ ಪತ್ರ ಬರೆಯದೇ ಅದೆಷ್ಟು ಕಾಲವಾಯ್ತಲ್ಲ? ಈ ವಾಟ್ಸಪ್ಪು, ಫೇಸ್ಬುಕ್‌, ಮೆಸೆಂಜರ್‌ ಕೈಯಲ್ಲಿ ಕುಣಿಯುವ ಕಾಲಕ್ಕೂ ನಿನಗೆ ಅದೆಂತಹ ಅಕ್ಷರದ ಮೋಹವೇ ಹುಡುಗಿ? ಎಂದು ಗೊಣಗುತ್ತೀಯೇನೋ. ಆದರೂ, ಕೊಟ್ಟದ್ದನ್ನು ಅಷ್ಟೇ ಮುಚ್ಚಟೆಯಾಗಿ ಕಾಪಿಟ್ಟುಕೊಳ್ಳುತ್ತೀ ನೋಡು? ಆ ನಿನ್ನ ಕಲೆಕ್ಟೀವ್‌ ಬುದ್ಧಿ ನನಗಿಷ್ಟ. ಅದ್ಯಾಕೋ ನೀನು ಮೊನ್ನೆ ನನ್ನ ನೋಟಕ್ಕೆ ಸಿಕ್ಕರೂ ನೋಡದಂತೆ ನಡೆದುಬಿಟ್ಟೆ? ಅದ್ಯಾವ ಸುಂದರಿ ಮುಂದಿನ ತಿರುವಿನಲ್ಲಿ ಉಸಿರು ಬಿಗಿ ಹಿಡಿದು ನಿನ್ನ ಬೆವರ ಘಮಕ್ಕೆ ಕಾಯುತ್ತಿದ್ದಳ್ಳೋ… ಹೇಳು, ಏನಾದ್ರೂ ಹೊಸ ಹೂವಿನ ಹಿಂದೆ ಬಿದ್ದಿದ್ದೀಯೋ ಹೇಗೆ?

ಅಷ್ಟು ಸುಲಭವಲ್ಲ ಮಾರಾಯ ನೀನು ನನ್ನನ್ನು ದಾಟಿ ಹೋಗುವುದು! ಒಮ್ಮೆ ನಿನ್ನಂಥ ಮುದ್ದು ಹುಡುಗನನ್ನ ಸ್ವಂತವಾಗಿಸಿಕೊಂಡ ಅದ್ಯಾವ ಹುಡುಗಿ ಕಿರುಬೆರಳಿನ ತುದಿಯಿಂದಾದರೂ ಮನಸ್ಸಿಂದ ಆಚೆ ನೂಕಿಯಾಳು ಹೇಳು? ನಿನ್ನಂತವನಿಗಾಗಿ ಜಿದ್ದಾಜಿದ್ದಿಗೆ ಬಿದ್ದಾದರೂ ಎಳೆದಿಟ್ಟುಕೊಳ್ಳಬಯಸುವ ಹುಚ್ಚು ಹುಡುಗಿಯರ ಪ್ರೇಮಕ್ಕಿಂತ, ನನ್ನದು ತುಸು ಬೇರೆಯದೇ ರೀತಿ!

ಈ ಹಸಿ ಹಸಿ ರೋಮ್ಯಾಂಟಿಕ್‌ ಎನ್ನುವುದು ಅಸಲು ನಿನಗೆ ಗೊತ್ತೇ ಇಲ್ಲ ನೋಡು.. ವಾರದ ಹಿಂದೆ, ಸಿನಿಮಾ ಥಿಯೇಟರಿನ ಕೊನೆಯ ಸಾಲಿನ ಮೂಲೆ ಸೀಟು ಸಿಕ್ಕು, ಎಲ್ಲರೂ ಮುಳುಗಿ ಹೋದಾಗ.. ನಾನು ನಿನ್ನ ಭುಜಕ್ಕೊರಗಿದರೆ, ತುಂಟತನದಿಂದ ಸೊಂಟ ಚಿವುಟುತ್ತೀಯೇನೋ ಅಂದುಕೊಂಡಿದ್ದೆ! ಆದರೆ ನೀನೋ, ನಾನು ಮಗುವೆಂಬಂತೆ ತಲೆ ಸವರುತ್ತಿದ್ದೆ! ಆಗ ಎಷ್ಟು ಸಿಟ್ಟು ಬಂದಿತ್ತು ಗೊತ್ತಾ?

ನಾವು, ಹುಡುಗಿಯರ ಮನಸ್ಸೇ ಇಂಥದ್ದೋ ಅಕ್ಷರಶಃ ಹುಚ್ಚುಕೋಡಿಯಂಥ‌ದ್ದು. ನೀನು ಪ್ರತಿ ಜನ್ಮ ಹುಟ್ಟಿ ಬಂದು, ಆಗಲೂ ಈ ಎಡಬಿಡಂಗಿಯಂಥ ನಾನೇ ಸಿಕ್ಕರೂ ಏನೇನೂ ಅರ್ಥವಾಗಲಿಕ್ಕಿಲ್ಲ ನಿನಗೆ!

ಅರ್ಧ ಚಂದ್ರ ತೂಗುಬಿದ್ದ ಆ ಕತ್ತಲೆಯಲ್ಲಿ, ಬೆತ್ತಲಾದ ಒಂಟಿ ರಸ್ತೆಯ ಬೆನ್ನಿನ ಮೇಲೆ ಗೋಲ್ಗುಪ್ಪಾ ತಿನ್ನುವಾಗ ಅಸ್ಪಷ್ಟವಾಗಿ ಕಂಡ ನನ್ನ ಕುತ್ತಿಗೆಯ ಇಳಿಜಾರು ನೋಡಿಯೇ ಬೆಚ್ಚಿಬಿದ್ದೆ. ಮರು ದಿನ ನನ್ನ ಮುಖ ನೋಡಲೂ ನಾಚಿಕೆ ನಿನಗೆ! ಒಳ್ಳೇ ಹುಡುಗ ಎಂದು ತುಟಿಯಂಚಲ್ಲೇ ನಸುನಕ್ಕೆ..

ಆದರೂ, ನೀನೆಂದರೆ ಬಿಸಿ ಬಿಸಿ ಚಾಕ್ಲೇಟ್‌, ಲಾವಾ ಕೇಕಿನಷ್ಟೇ ಇಷ್ಟ.. ಕಣ್ಣಲ್ಲಿ ನೀರು ಬಂದರೂ ಆಸೆಯಿಂದ ತಿನ್ನುವ ಗೋಲ್ಗಪ್ಪಾದಷ್ಟೇ ಇಷ್ಟ. ಧೋ.. ಎಂದು ಸುರಿದು ನಿನ್ನ ನೆನಪಿನ ವಾಸನೆ ಹಬ್ಬಿಸುವ ಮಳೆಯಷ್ಟೇ ಇಷ್ಟ.. ಚುಮುಚುಮು ಚಳಿಯಲ್ಲಿ ಬೇಕೆನ್ನಿಸುವ ನೊರೆ ಕಾಫಿಯಷ್ಟೇ ಇಷ್ಟ.. ಎಲ್ಲಿ ಹೋದರೂ ಚಿತ್ತ ಕೆದಕುವ ಸಂಗೀತದಷ್ಟೇ ಇಷ್ಟ. ಬೇಸರದ ಸಂಜೆಯಲ್ಲಿ ಜೊತೆಯಾಗುವ ಪುಸ್ತಕಗಳಷ್ಟೇ ಇಷ್ಟ… ನನ್ನೆಲ್ಲ ಇಷ್ಟಗಳಿಗೆ ಮಿಗಿಲಾಗಿಯೂ ನೀನಿಷ್ಟ ಕಣೋ..

-ವೀಚೀ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ಬಿಹಾರ್ ಟು ಬಾಲಿವುಡ್ ರೈತನ ಮಗ “Gangs of wasseypur” ನ ಸುಲ್ತಾನ್ ನಾಗಿ ಬೆಳೆದ ರೋಚಕ ಹಾದಿ

ಬಿಹಾರ್ ಟು ಬಾಲಿವುಡ್ ರೈತನ ಮಗ “Gangs of wasseypur” ನ ಸುಲ್ತಾನ್ ನಾಗಿ ಬೆಳೆದ ರೋಚಕ ಹಾದಿ

STUDIO

ಬಂಟ್ವಾಳ: ಸ್ಟುಡಿಯೋಗೆ ನುಗ್ಗಿ ದುಷ್ಕರ್ಮಿಗಳಿಂದ ಹಲ್ಲೆ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಮದ್ಯ ಬಳಸಿ ಗುದ್ದಲಿ ಪೂಜೆ ನೆರವೇರಿಸಿದ ವ್ಯಸನ ಮುಕ್ತ ರಾಜ್ಯ ಗುಜರಾತ್‌ನ ಶಾಸಕರು

ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಮಂಡ್ಯ ಜಿಲ್ಲೆಯಲ್ಲಿ ಇಳಿಕೆ ಕಂಡ ಕೋವಿಡ್ ! 79 ಮಂದಿಗೆ ಸೋಂಕು ದೃಢ, 89 ಮಂದಿ ಗುಣಮುಖ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ಕಂಬ್ಳಿ ಹುಳದ ಪುರಾಣ

josh-tdy-3

ಬಾರೋ ಸಾಧಕರ ಕೇರಿಗೆ :ಕಾಫ್ಕನೂ, ಪುಟ್ಟಿಯ ಗೊಂಬೆಯೂ…

josh-tdy-2

ಸೋತುಹೋದೆ ಎಂದು ಮನಸ್ಸಿಗೆ ಹೇಳಬೇಡಿ…

josh-tdy-1

ಫೇಕ್‌ ಇಟ್‌ ಈಸಿ!

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ಬಂಟ್ವಾಳ: ಗೂಡ್ಸ್ ಟೆಂಪೊ – ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

ಉಳ್ಳಾಲ, ಬಂಟ್ವಾಳದಲ್ಲಿಯೂ ಕಸ ವಿಂಗಡಣೆಗೆ ಪಾಲಿಕೆಯಿಂದ ಸೂಚನೆ

ಉಳ್ಳಾಲ, ಬಂಟ್ವಾಳದಲ್ಲಿಯೂ ಕಸ ವಿಂಗಡಣೆಗೆ ಪಾಲಿಕೆಯಿಂದ ಸೂಚನೆ

ನೀರಾ ಘಟಕ ಕಾರ್ಯಾಚರಣೆ: ಮೂರ್ತೆ ತರಬೇತಿಗೆ ಶಾಸಕರ ಸೂಚನೆ

ನೀರಾ ಘಟಕ ಕಾರ್ಯಾಚರಣೆ: ಮೂರ್ತೆ ತರಬೇತಿಗೆ ಶಾಸಕರ ಸೂಚನೆ

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ನನಗೆ ಪ್ರಾಣ ಬೆದರಿಕೆ ಇದೆ: ಶಿವಸೇನೆ ಸಂಸದ ದೂರು

ಬಿಹಾರ್ ಟು ಬಾಲಿವುಡ್ ರೈತನ ಮಗ “Gangs of wasseypur” ನ ಸುಲ್ತಾನ್ ನಾಗಿ ಬೆಳೆದ ರೋಚಕ ಹಾದಿ

ಬಿಹಾರ್ ಟು ಬಾಲಿವುಡ್ ರೈತನ ಮಗ “Gangs of wasseypur” ನ ಸುಲ್ತಾನ್ ನಾಗಿ ಬೆಳೆದ ರೋಚಕ ಹಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.