Udayavni Special

ಶಿಷ್ಟಾಚಾರ ತಪ್ಪಲುಂಟೆ?


Team Udayavani, Aug 27, 2019, 5:30 AM IST

n-1

ನಾರ್ಬರ್ಟ್‌ ವೀನರ್‌, ಹೆಸರಾಂತ ಗಣಿತಜ್ಞ. ಅಮೆರಿಕಾದ ಮೆಸಾಚುಸೆಟ್ಸ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಸೈಬರ್‌ನೆಟಿಕ್ಸ್‌ನ ಜನಕ ಎಂದೇ ಇವರನ್ನು ಜಗತ್ತು ನೆನೆಯುತ್ತದೆ. ಆದರೆ, ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಗೂ ಒಂದು ನೆಗೆಟಿವ್‌ ಸೈಡ್‌ ಇರಬೇಕಲ್ಲ? ಪಾಂಡಿತ್ಯದಲ್ಲಿ ವೀನರ್‌ ಎಷ್ಟು ಮೇಲ್ಮಟ್ಟದವರೋ ಗಾಡಿ ಓಡಿಸುವುದರಲ್ಲಿ ಅಷ್ಟೇ ಅಪಾಯಕಾರಿ ಮನುಷ್ಯ! ವೀನರ್‌ಗೆ ದೃಷ್ಟಿದೋಷವಿತ್ತು. ಸಮೀಪದ ವಸ್ತುಗಳು ಅವರಿಗೆ ಕಾಣಿಸುತ್ತಿರಲಿಲ್ಲ. ಜೊತೆಗೆ ಅವರು ಮರೆಗುಳಿ (ಆಬ್ಸೆಂಟ್ ಮೈಂಡೆಡ್‌) ಪ್ರಾಧ್ಯಾಪಕ ಎಂದೂ ಹೆಸರು ಮಾಡಿದವರು.

ಅದೊಮ್ಮೆ ಒಬ್ಬ ಫ್ರೆಂಚ್‌ ಗಣಿತಜ್ಞ ಎಂಐಟಿಗೆ ಬಂದ. ಕೆಲವು ದಿನ ಅವನು ಅಲ್ಲೇ ಉಳಿದುಕೊಳ್ಳುವ ಕಾರ್ಯಕ್ರಮವಿತ್ತು. ಹೊರದೇಶಗಳಿಂದ ಬಂದ ಸಂದರ್ಶಕ ಪ್ರಾಧ್ಯಾಪಕರನ್ನು ಎಂಐಟಿಯ ಆಸುಪಾಸಿನಲ್ಲಿ ನಡೆಯುವ ವಿಶೇಷ ಪಾರ್ಟಿಗಳಿಗೆ ಅತಿಥಿಗಳಾಗಿ ಕರೆಯುವುದು ಅಲ್ಲಿನ ಸಂಪ್ರದಾಯ. ಹಾಗೆ ಆ ಫ್ರೆಂಚ್‌ ಗಣಿತಜ್ಞನಿಗೂ ಒಂದು ಪಾರ್ಟಿಗೆ ಆಮಂತ್ರಣ ಬಂತು. ಹೊರಗಿನಿಂದ ಬಂದವರನ್ನು ವಿಶೇಷ ಮುತುವರ್ಜಿಯಿಂದ ನೋಡಿಕೊಳ್ಳುವುದು ಶಿಷ್ಟಾಚಾರ ತಾನೆ? ವೀನರ್‌ ಅಂಥ ಶಿಷ್ಟಾಚಾರದಲ್ಲಿ ಎತ್ತಿದ ಕೈ! ಅವರು ಆ ಫ್ರೆಂಚ್‌ ಬಳಿ ಬಂದು ಪಾರ್ಟಿಗೆ ತಾನೇ ಕರೆದೊಯ್ಯುತ್ತೇನೆಂದು ಹೇಳಿದರು.

ಆ ದಿನ ವೀನರ್‌ ತಮ್ಮ ಕಾರಿನೊಂದಿಗೆ ಫ್ರೆಂಚ್‌ ಗಣಿತಜ್ಞನೆದುರು ಪ್ರತ್ಯಕ್ಷರಾದರು. ಆತ ಕೃತಜ್ಞತೆ ಸಲ್ಲಿಸಿ ಅವರ ಜೊತೆ ಕೂತ. ವೀನರ್‌ ಅವರ ಡ್ರೆçವಿಂಗ್‌ ಪ್ರತಿಭೆಯ ಬಗ್ಗೆ ಅವನಿಗೆ ಏನೇನೂ ಗೊತ್ತಿರಲಿಲ್ಲ! ಆದರೆ ಗೊತ್ತಾಗಲು ಹೆಚ್ಚು ಹೊತ್ತೇನೂ ಬೇಕಾಗಲಿಲ್ಲ. ಕಾರು ರಸ್ತೆಗಿಳಿದ ಮೇಲೆ ಅಡ್ಡಾದಿಡ್ಡಿಯಾಗಿ ಓಡಾಡತೊಡಗಿತು. ವಿಪರೀತ ವೇಗ ಬೇರೆ! ಇದೇ ಕಲಿಯುಗದ ಕೊನೆ ದಿನ ಎಂಬಂತೆ ಕಾರು ಓಡತೊಡಗಿತು. ಇನ್ನೇನು ಗುದ್ದಿಯೇಬಿಟ್ಟಿತು ಎಂಬಂಥ ಹಲವು ಸಂದರ್ಭಗಳನ್ನು ಹೇಗೋ ದೈವಕೃಪೆಯಿಂದ ತಪ್ಪಿಸಿಕೊಂಡು ನಾಗಾಲೋಟಕಿತ್ತಿದ್ದ ಕಾರು ಕೊನೆಗೆ ಒಂದು ಟೆಲಿಫೋನ್‌ ಕಂಬಕ್ಕೆ ಹೋಗಿ ಧಡ್‌ ಎಂದು ಬಡಿಯಿತು. ಪುಣ್ಯವಶಾತ್‌ ಆ ಫ್ರೆಂಚ್‌ ಗಣಿತಜ್ಞನಿಗೆ ಏನೂ ಅಪಾಯ ಎದುರಾಗಲಿಲ್ಲ.

ಜಖಂಗೊಂಡ ಕಾರಿನ ಬಳಿ ಪೊಲೀಸರು ಬಂದರು. ವೀನರ್‌ ಕಾರಿನಿಂದಿಳಿದು ಪೊಲೀಸರಿಗೆ ಅಪಘಾತದ ವಿವರ ಕೊಡತೊಡಗಿದರು. ಬದುಕಿದೆಯಾ ಬಡಜೀವವೇ ಎಂದುಕೊಂಡ ಆ ಫ್ರೆಂಚ್‌ ಬೇಗ ಬೇಗ ಹೆಜ್ಜೆಹಾಕುತ್ತ ನಡೆದು ಕೊನೆಗೆ ಪಾರ್ಟಿ ನಡೆಯುತ್ತಿದ್ದ ಸ್ಥಳ ಸೇರಿದ. ಆತ ಪಾರ್ಟಿಯ ಅಂಗಣಕ್ಕೆ ಹೋಗಿ ಎರಡು ಗಂಟೆ ಹೊತ್ತಾಗಿರಬೇಕು. ಮದ್ಯದ ಗ್ಲಾಸ್‌ ಹಿಡಿದು ಯಾರೊಡನೆಯೋ ಗಹನ ಚರ್ಚೆಯಲ್ಲಿ ತಲ್ಲೀನನಾಗಿದ್ದ ಆ ಫ್ರೆಂಚನ ಮುಖದ ಮುಂದೆ ಧುತ್ತನೆ ಒಂದು ಮುಖ ಕಾಣಿಸಿಕೊಂಡಿತು. ನೋಡಿದರೆ ವೀನರ್‌! ಹಲೋ ಗಣಿತಜ್ಞರೆ! ನಿಮ್ಮನ್ನು ಪಾರ್ಟಿಗೆ ಕರೆತಂದ ಮೇಲೆ ವಾಪಸ್‌ ಮನೆವರೆಗೆ ಕಳಿಸಿಕೊಡದಿದ್ದರೆ ಹೇಗೆ! ಅದಕ್ಕಾಗಿಯೇ ಬೇರೊಂದು ಕಾರು ಅರೇಂಜ್‌ ಮಾಡಿಕೊಂಡು ತಂದಿದ್ದೇನೆ ಎಂದರು ವೀನರ್‌.

– ರೋಹಿತ್‌ ಚಕ್ರತೀರ್ಥ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

horoscope

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು!

mayank

ಬ್ರಿಸ್ಬೇನ್ ಟೆಸ್ಟ್: ನಾಲ್ಕು ವಿಕೆಟ್ ಕಳೆದುಕೊಂಡ ಭಾರತ, ಪಂತ್- ಮಯಾಂಕ್ ಮೇಲಿದೆ ಒತ್ತಡ

ಪಿಎಂ ಕೌಶಲ ಅಭಿವೃದ್ಧಿ ಯೋಜನೆ

ಪಿಎಂ ಕೌಶಲ ಅಭಿವೃದ್ಧಿ ಯೋಜನೆ

ಭತ್ತದ ಕೃಷಿಯಲ್ಲಿ ಮತ್ತಷ್ಟು ಸ್ವಾವಲಂಬನೆ ಅಗತ್ಯ

ಭತ್ತದ ಕೃಷಿಯಲ್ಲಿ ಮತ್ತಷ್ಟು ಸ್ವಾವಲಂಬನೆ ಅಗತ್ಯ

ಭೂಮಿಗೆ ಯಾವತ್ತಿದ್ದರೂ ಬಂಗಾರದ ಬೆಲೆ

ಭೂಮಿಗೆ ಯಾವತ್ತಿದ್ದರೂ ಬಂಗಾರದ ಬೆಲೆ

ಕೈ ಕಾಲು ಇಲ್ಲದಿದ್ರೂ ಕಡಲ್ಗಾಲುವೆ ಈಜಿದ!

ಕೈ ಕಾಲು ಇಲ್ಲದಿದ್ರೂ ಕಡಲ್ಗಾಲುವೆ ಈಜಿದ!

ಮೊಬೈಲ್‌ ಟವರ್‌ ಇಲ್ಲದ ಮುಟ್ಲುಪಾಡಿ ಗ್ರಾಮ

ಮೊಬೈಲ್‌ ಟವರ್‌ ಇಲ್ಲದ ಮುಟ್ಲುಪಾಡಿ ಗ್ರಾಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಿಯಲ್‌ ಹೀರೋ ವೀರಪ್ಪ :  ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!

ರಿಯಲ್‌ ಹೀರೋ ವೀರಪ್ಪ : ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!

ಬಿದಿರ ಕೊರಡು ಕೊನರದೇಕೆ?

ಬಿದಿರ ಕೊರಡು ಕೊನರದೇಕೆ?

ಯೋಗ ನಿರೋಗ : ಸೇತು ಬಂಧಾಸನ

ಯೋಗ ನಿರೋಗ : ಸೇತು ಬಂಧಾಸನ

ಯಾವುದಾದರೂ 10ಕ್ಕೆ ಮಾರ್ಕ್ಸ್ ಕೊಡಿ!

ಯಾವುದಾದರೂ 10ಕ್ಕೆ ಮಾರ್ಕ್ಸ್ ಕೊಡಿ!

ಹಬ್ಬದ ದಿನ ತಪ್ಪಿಸದೇ ಮನೆಗೆ ಬಾ…

ಹಬ್ಬದ ದಿನ ತಪ್ಪಿಸದೇ ಮನೆಗೆ ಬಾ…

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

horoscope

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು!

mayank

ಬ್ರಿಸ್ಬೇನ್ ಟೆಸ್ಟ್: ನಾಲ್ಕು ವಿಕೆಟ್ ಕಳೆದುಕೊಂಡ ಭಾರತ, ಪಂತ್- ಮಯಾಂಕ್ ಮೇಲಿದೆ ಒತ್ತಡ

ಪಿಎಂ ಕೌಶಲ ಅಭಿವೃದ್ಧಿ ಯೋಜನೆ

ಪಿಎಂ ಕೌಶಲ ಅಭಿವೃದ್ಧಿ ಯೋಜನೆ

ಉಡುಪಿ ಜಿಲ್ಲಾ ಉಸ್ತುವಾರಿ ಹುದ್ದೆಗೆ ಕೋಟ ಶ್ರೀನಿವಾಸ ಪೂಜಾರಿ ?

ಉಡುಪಿ ಜಿಲ್ಲಾ ಉಸ್ತುವಾರಿ ಹುದ್ದೆಗೆ ಕೋಟ ಶ್ರೀನಿವಾಸ ಪೂಜಾರಿ ?

ಭತ್ತದ ಕೃಷಿಯಲ್ಲಿ ಮತ್ತಷ್ಟು ಸ್ವಾವಲಂಬನೆ ಅಗತ್ಯ

ಭತ್ತದ ಕೃಷಿಯಲ್ಲಿ ಮತ್ತಷ್ಟು ಸ್ವಾವಲಂಬನೆ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.