Udayavni Special

ಖಂಡಿಸಲಾರೆ, ಋಣವಿರದ ಅನುರಾಗವೇ ಹಾಗೇ…


Team Udayavani, Jul 16, 2019, 5:46 AM IST

kandisalare

ಕಳೆದುಹೋದ ಭರ್ತಿಹಣವಿರುವ ಪರ್ಸ್‌ ಒಮ್ಮೆ ಸಿಕ್ಕರು ಅಷ್ಟು ಖುಷಿ ಆಗೋದಿಲ್ಲ. ಅದೇ ಹಾರಿಹೋದ ಪ್ರೀತಿ ಎಂಬ ಪಾರಿವಾಳ ಮರಳಿ ಗೂಡಿಗೆ ಬಂದಾಗ ಆಗುವ ಖುಷಿಗೆ ಪಾರವೇ ಇರುವುದಿಲ್ಲ ಬಿಡಿ. ಅಷ್ಟಕ್ಕೂ ಈ ನನ್ನ ಪಾರಿವಾಳದ ಮನಸ್ಸೇ ಚಿತ್ತ ಚಂಚಲ, ನಗು ಕೋಮಲ, ಒಂದೊಮ್ಮೆ ಕೆಂದುಟಿಯ ಪಕ್ಕದಲ್ಲಿ ಬೊಟ್ಟಿಟ್ಟು, ಯಾರ ದೃಷ್ಟಿ ತಾಕದಂತೆ ಗುಳಿಗೆನ್ನೆಯ ಮೇಲೆ ಕೈ ಬೆರಳ ಒರಳಾಡಿಸಿ, ಕಪ್ಪನೆಯ ಚಂದ್ರನ ಚಿತ್ರ ಬರೆದುಬಿಡಬೇಕು ಎಂದೆನೆಸಿದರು ಸುಮ್ಮನಿದ್ದೆ. ಮೊದಲೇ ಜಿಂಕೆ ಮರಿ ಅವಳು, ಗಾಬರಿಯಾಗಿ ಪ್ರೀತಿಯನ್ನು ಬುಡಮೇಲು ಮಾಡಿದರು ಅಚ್ಚರಿ ಇಲ್ಲ. ಹೌದು, ಹಾರಿಹೋದ ಪರಿವಾಳ ಗೂಡಿನ ಸನಿಹವಾದರು ಸುಳಿದಿದ್ದು ಹೇಗೆ ಎಂದು ಮನಸ್ಸು ಕನಸಿನ ಜೋಕಾಲಿಯನ್ನು ಜೀಕಿತು.

ಅಂದು ಅವಳ ಮಾತು ಕಠೊರವಾಗಿತ್ತು. ಆಕರ್ಷಣೆಗೆ ಹುಟ್ಟಿದ ಈ ನಿನ್ನ ಪ್ರೀತಿ ಘರ್ಷಣೆಯಲ್ಲೇ ಕಳೆದೊಯ್ತು ಎಂದಾಗ ಒಂದೊಮ್ಮೆ ಉಮ್ಮಳಿಸಿ ಕಣ್ಣಾಲೆಗಳು ಒ¨ªೆಯಾಗಿದ್ದು ಸುಳಲ್ಲ. ಮಾರನೆ ದಿನ ಅಮ್ಮ ಮಾಡಿದ ತಿಂಡಿ ತಿಂದು ನಲಿಯಬೇಕಿತ್ತು. ಅಷ್ಟರಲ್ಲಿ ಅದೊಂದು ಕರೆಯೊಂದು ಕರೆಯಿತು ನೋಡಿ. ಆಗ ಶುರುವಾದ್ದದ್ದೇ ಅಮ್ಮನ ಎದುರಿನ ನಾಟಕ.
ಕ್ಷೀಣ ಧ್ವನಿಯಲ್ಲಿ..
“ಹ‌ಲೋ ಯಾರು?’ ಅಂದಳು.
“ನಾನು ! ಓ ಹೇಳಿ ಏನಾಗಬೇಕಿತ್ತು?’ ಎಂದೆ.
“ಸಂಜೆ ಫ್ರೀ ಇದ್ರೆ ಸಿಗ್ತಿàಯ.’ ಕೇಳಿದಳು.
“ಆಯ್ತು’ ಅಂದೆ.

ಏನೇ ಸುಂದ್ರಿ ಕೊಬ್ಟಾ! ಎಂದೆನ್ನ ಬೇಕೆನಿಸಿದರು ಸುಮ್ಮನಾದೆ. ಆನಂತರ ಇಬ್ಬರು ವಾಟ್ಸ್ ಆಪ್ ಗೋಡೆಯ ಮೇಲೆ ಒಂದಿಷ್ಟು ತುಂಟತನವನ್ನು ಹಂಚಿಕೊಂಡ ಮೇಲೇ “ಲೇ ಸುಂದ್ರಿ ನೀನ್‌ ಅಂದ್ರೆ ಇಷ್ಟ ಕಣೆ’ ಅಂದೆ, ಆ ಕಡೆಯಿಂದ “ಲೋ ಸುಬ್ಬ ನಂಗೂ ಅಷ್ಟೆ ಕಣೋ..!’ ಅಂತ ಉತ್ತರ ಬಂದಾಗ ಮರುಭೂಮಿಯಲ್ಲಿ ಪ್ರೀತಿ ಚಿಲುಮೆ ಉಕ್ಕಿತು. ಎಲ್ಲವೂ ಸರಿ ಇದೆ ಎನ್ನುವಾಗಲೇ ಕಿತ್ತಾಟದ ಸಣ್ಣ ರಂಧ್ರ ಪ್ರೀತಿಯ ಹೃದಯದ ಗೋಡೆಯನ್ನೇ ಬಗೆದಾಗಿತ್ತು.

ಮತ್ತೆ ಸ್ಮಶಾನ ಮೌನ. ಪ್ರೇಮ ವೈರಾಗ್ಯದ ಕೂಗು ದಟ್ಟವಾಗುತ್ತಿದೆ, ಬಸವಳಿದ ದೇಹ ಕಂಪಿಸುತ್ತಿದೆ, ಯಾವುದು ಹಿತವಾಗಿಲ್ಲ, ಊಟ ಸಪ್ಪೆ ಆಯ್ತು, ಅಮ್ಮನ ಮೇಲೆ ಕೋಪ ವಿಪರೀತವಾಯಿತು, ಕಣ್ಣಂಚಿನ ಧೂಳಿನ ಕಣ ಮತ್ತೆ ಗುಡ್ಡವಾಯ್ತು. ಸುರಿವ ನನ್ನ ಕಣ್ಣ ಹನಿಗಳಿಗೆ ಕೊಡೆ ಹಿಡಿದು ಬಿಡು ಬಾ ಎಂದು ಜೋರಾಗಿ ಕೂಗಿ ಕರೆದರೆ ಮರಳಿ ಬರುವೆಯಾ! ಗೊತ್ತಿಲ್ಲ.

ಖಂಡಿಸಲಾರೆ, ಋಣವಿರದ ಅನುರಾಗವೇ ಹಾಗೇ… ಕೊಂದು, ಬೆಂದು, ನೊಂದರು ನೆನಪಿನ ಗಹನಕ್ಕೆ ಕರುಳು ಕಿವುಚಿ ಕುಹಕ ಎನಿಸುತ್ತಿದೆ. ಆದರೂ ಕಾಯುವೆ, ಕಾಯುತ್ತಲೇ ಇರುವೆ ಮರಳಿ ನನ್ನಡೆಗೆ ಬಂದು ಬಿಡು.
ಆದರೆ ಮತ್ತೆ ಹೀಗೆಂದೂ ಮಾಡದಿರು.

– ವಿರುಪಾಕ್ಷಿ ಕಡ್ಲೆ ಕಲ್ಲುಕಂಭ

ಟಾಪ್ ನ್ಯೂಸ್

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಸಮ್ಮತಿ ಶುಲ್ಕ ಪರಿಷ್ಕರಣೆಗೆ ಶೆಟ್ಟರ್‌ ಸೂಚನೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆ

ಕೋವಿಡ್ ಹಿನ್ನೆಲೆ : ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶ ಮುಂದೂಡಿಕೆ

cats

ದಾವಣಗೆರೆ ಜಿಲ್ಲೆಯಲ್ಲಿಂದು ಕೋವಿಡ್ ಗೆದ್ದ 187 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್

cats

ಹಾವೇರಿ ಜಿಲ್ಲೆಯಲ್ಲಿಂದು ಕೋವಿಡ್ ಸೋಂಕಿನಿಂದ 257 ಜನರು ಗುಣಮುಖ

ಕೋವಿಡ್ ಕಷ್ಟ ಕಾಲದಲ್ಲಿ ಬಂಗಾರವೇ ಜೀವನಾಧಾರ! ಚಿನ್ನ ಅಡ ಇಡುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಕೋವಿಡ್ ಕಷ್ಟ ಕಾಲದಲ್ಲಿ ಬಂಗಾರವೇ ಜೀವನಾಧಾರ! ಚಿನ್ನ ಅಡ ಇಡುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿ ಮಲ್ಲಿಗೆ ಬೆಳೆದು ಆದಾಯ ಗಳಿಸಿದ ಪುತ್ತೂರಿನ ಲೋಬೋ..!

udayavani youtube

ಮಳೆಗೆ ಉರುಳಿದ ಮರ: ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ..!

udayavani youtube

ಆಪತ್ಬಾಂಧವ ಆಟೋ ಡ್ರೈವರ್ – ಮಹೇಶ್ ಮಣಿಪಾಲ

udayavani youtube

ಕೊರೊನಾ ವಿಷಮ ಸ್ಥಿತಿ ಯಲ್ಲಿರುವ ಭಾರತಕ್ಕೆ “ಸಂಜೀವಿನಿ’

udayavani youtube

ಲಾಕ್​ಡೌನ್ ನಿಯಮ ಉಲ್ಲಂಘಿಸಿದ ಯುವಕರಿಗೆ ನಾಗಿಣಿ ಡ್ಯಾನ್ಸ್ ಶಿಕ್ಷೆ

ಹೊಸ ಸೇರ್ಪಡೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

18-23

ಖಾಸಗಿ ವೈದ್ಯರಿಂದ ತಪಾಸಣೆಗೆ ಅನುಮತಿ ನೀಡಲು ಆಗ್ರಹ

18-22

ಇನ್ನೊಂದು ವಾರ ಬೀಳಲಿದೆ ಬಿಗಿ ಬೀಗ

18-21

ಶುಭಮಂಗಳ ಕಲ್ಯಾಣ ಮಂಟಪ ಇಂದಿನಿಂದ ಕೋವಿಡ್‌ ಕೇರ್‌ ಸೆಂಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.