ಪಿಚ್ಚರ್‌ ಬಿಡಿಸಿದ ವಾರ್ಡನ್‌

Team Udayavani, Jan 15, 2019, 12:30 AM IST

nenapu.jpg

ರಾತ್ರಿ ಊಟದ ಹೊತ್ತಿಗೆ ನಾವು ಸಿನಿಮಾಗೆ ಹೋಗಿದ್ದು ವಾರ್ಡನ್‌ ಕಿವಿಗೆ ಯಾರೋ ತಲುಪಿಸಿದ್ದರು…

ಆಗ ನಾನು ಬಿಗ್‌ಬಾಸ್‌ ಮನೆಯಲ್ಲಿದ್ದೆ! ಹೌದು, ಹಾಸ್ಟೆಲ್‌ ಎಂಬುದು ಒಂಥರ ಬಿಗ್‌ಬಾಸ್‌ ಮನೆ ಇದ್ದಂತೆಯೇ. ಅದು ಇನ್ನೊಂದು ಸೆರೆಯಿದ್ದಂತೆ. ಅಲ್ಲಿ ಅವರದ್ದೇ ಆದ ರೂಲ್ಸ್‌ಗಳ ಜೊತೆಗೆ ಟಾಸ್ಕ್ಗಳೂ ಇರುತ್ತವೆ. ಹೊರಗೆ ಯಾರೊಂದಿಗೂ ಸಂಪರ್ಕ ಇರುತ್ತಿರಲಿಲ್ಲ. ತಂದೆ- ತಾಯಿಯರ ಜೊತೆಗೆ ಮಾತಾಡಬೇಕಾದ್ರೆ, ಭಾನುವಾರವೊಂದೇ ಮೀಸಲು. ಅದೂ ತಪ್ಪಿ ಹೋಯಿತು ಅಂತಾದ್ರೆ, ಶಿಕ್ಷಕರು ನಮ್ಮಿಂದ ಪತ್ರ ಬರೆಸುತ್ತಿದ್ದರು. 

ಎಂಥ ಚಳಿಯಿದ್ದರೂ ಬೆಳಗಿನ ಐದು ಗಂಟೆಗೆ ಎದ್ದು ವಾಕಿಂಗ್‌ಗೆ ಹೊರಡಬೇಕು. ಹೀಗೆ ತಿಂಡಿ ಊಟ, ಓದು, ನಿದ್ದೆಗೆ ಎಲ್ಲದಕ್ಕೂ ಇಂಥದ್ದೇ ಟೈಮ್‌ ಅಂತ ಇರುತ್ತೆ. ಆ ಘಳಿಗೆ ಮೀರಿದರೆ ಅವೆಲ್ಲವೂ ನಮ್ಮಿಂದ ಕೈತಪ್ಪಿ ಹೋಗುವ ಸಂಭವವಿರುತ್ತದೆ. ಯಾರಾದರೂ ಶಿಕ್ಷಕರ ಆಜ್ಞೆ ಪಾಲಿಸದಿದ್ದರೆ ಬೆತ್ತದ ರುಚಿ ತೋರಿಸುತಿದ್ದರು. ಅಲ್ಲಿ ಎಲ್ಲವೂ ಶಿಸ್ತು, ಕಟ್ಟುನಿಟ್ಟು. ಅವರು ಹೇಳ್ಳೋದೆಲ್ಲ ನಮ್ಮ ಒಳ್ಳೆಯದಕ್ಕೇ ಆದರೂ ನಮಗೆ ಅದೇ ಹಿಂಸೆ ಎನಿಸುತಿತ್ತು. ಮೊದಮೊದಲು ಹಾಸ್ಟೆಲ್‌ ಸೇರಿದ ವಿದ್ಯಾರ್ಥಿಗಳ ಪಾಡಂತೂ ಹೇಳತೀರದು. ತಂದೆ- ತಾಯಿಯನ್ನು ಬಿಟ್ಟಿರದ ಮಕ್ಕಳಿಗೆ ನಿಜಕ್ಕೂ ಅದು ಜೈಲಿನಲ್ಲಿದ್ದ ಅನುಭವ. ಅಲ್ಲಿ ಸ್ವಾತಂತ್ರ್ಯವೆನ್ನುವುದು ತೀರಾ ಮರೀಚಿಕೆ. ನಾನು ಇಂಥ ಇಕ್ಕಟ್ಟಿನಲ್ಲಿಯೇ ಹಾಸ್ಟೆಲ್‌ ಸೇರಿದ್ದೆ. ನನ್ನ ವಸತಿ ನಿಲಯ ಊರಿಂದ ದೂರದ ನಿರ್ಜನ ಪ್ರದೇಶದಲ್ಲಿತ್ತು. ಅಲ್ಲಿ ನಮ್ಮ ಅಗತ್ಯ ವಸ್ತುಗಳ ಖರೀದಿಗೆ ಶಾಲೆಯಲ್ಲಿಯೇ ಸ್ಟೋರ್‌ರೂಮ್‌ ಇತ್ತು. ಹಾಗಾಗಿ, ನಾವು ಹೊರಗೆ ತಿರುಗಾಡುವ ಅವಶ್ಯಕತೆ ಒದಗುತ್ತಿರಲಿಲ್ಲ. ಹೊರಗಡೆ ಒಂದು ಹೆಜ್ಜೆ ಇಡಬೇಕಾದರೂ, ಶಿಕ್ಷಕರ ಪರ್ಮಿಶನ್‌ ಬೇಕಿತ್ತು. 

ಅಂದು ತಿಂಗಳ ಎರಡನೇ ರವಿವಾರ. ಮಕ್ಕಳನ್ನು ಪೋಷಕರು ಭೇಟಿಯಾಗುವ ದಿನವದು. ನನ್ನದು ದೂರದ ಊರಾಗಿದ್ದರಿಂದ ನಮ್ಮ ಪಾಲಕರೂ ನನ್ನನ್ನೂ ಭೇಟಿಯಾಗುವುದಕ್ಕೆ ಬರುವುದು ತೀರಾ ಕಡಿಮೆ. ಆದರೆ, ನನಗೆ ಸಿನಿಮಾ ನೋಡಬೇಕೆನ್ನುವ ಹುಚ್ಚು. ಅದಕ್ಕಾಗಿ ನಗರಕ್ಕೆ ಹೋಗಬೇಕಿತ್ತು. ಪಾಲಕರಿದ್ದವರಿಗೆ ಮಾತ್ರ ಹೊರಗೆ ಬಿಡುತ್ತಿದ್ದರು. ಅದಕ್ಕೆ ಒಂದು ಉಪಾಯ ಹೂಡಿದೆ. ನನ್ನ ಗೆಳೆಯರಾದ ಸಚಿನ್‌ ಮತ್ತು ಶೀತಲ್‌ ಜೊತೆಗೂಡಿ ಶಿಕ್ಷಕರ ಅನುಮತಿ ಕೇಳದೆ, ಶಾಲೆಯ ಹಿಂದಿನ ಗೇಟ್‌ ಹಾರಿ ಮೇನ್‌ ರೋಡಿಗೆ ತೆರಳಿ, ಅಲ್ಲಿಂದ ಬಸ್ಸೇರಿ ಪಟ್ಟಣವನ್ನು ತಲುಪಿದೆವು. ಅಲ್ಲಿ ಒಂದೊಳ್ಳೆ ಸಿನಿಮಾ ನೋಡಿದೆವು. ನಮಗೆ ಬೇಕಾದುದೆಲ್ಲವನ್ನೂ ಕೊಂಡೆವು. ತಿನ್ನಬೇಕೆನಿಸಿದ್ದನ್ನು ತಿಂದು ಮತ್ತೆ ಅಲ್ಲಿಂದ ಬಸ್‌ ಹತ್ತಿ ಶಾಲೆಯ ಹಿಂದಿನ ಗೇಟ್‌ನಿಂದಲೇ ಯಾರಿಗೂ ಗೊತ್ತಾಗದಂತೆ ಹಾಸ್ಟೆಲ್‌ ಸೇರಿದ್ದೆವು. ಅಂದು ದಿನ ಸರಿದಿದ್ದೇ ನಮಗೆ ಗೊತ್ತಾಗಲಿಲ್ಲ. 

ರಾತ್ರಿ ಊಟದ ಹೊತ್ತಿಗೆ ನಾವು ಸಿನಿಮಾಗೆ ಹೋಗಿದ್ದು ವಾರ್ಡನ್‌ ಕಿವಿಗೆ ಯಾರೋ ತಲುಪಿಸಿದ್ದರು. ಆದರೆ, ಊಟ ಮಾಡಲು ಹೊರಟಾಗ ವಾರ್ಡನ್‌ಗೆ ನಾನು ಸಿನಿಮಾಗೆ ಹೋಗಿದ್ದು ಗೊತ್ತಿರಲಿಲ್ಲ. ನನ್ನ ಜೊತೆಯಿದ್ದ ಶೀತಲ್‌ ಮತ್ತು ಸಚಿನ್‌ ಮಾತ್ರ ಫಿಲ್ಮ್ಗೆ ಹೋಗಿದ್ದರೆಂದು ತಿಳಿದಿದ್ದರು. ಶಿಕ್ಷಕರ ಪಾಲಿಗೆ ನಾನು ಮುಗ್ಧ ಹುಡುಗನಾಗಿದ್ದೆ. ಹಾಗಾಗಿ, ನನ್ನನ್ನು ಊಟಕ್ಕೆ ಕಳುಹಿಸಿ, ಅವರಿಬ್ಬರನ್ನು ಹೊರಗಡೆಯೇ ನಿಲ್ಲಿಸಿಕೊಂಡು, ಬೆತ್ತದ ರುಚಿ ತೋರಿಸಿ, ನಂತರ ಊಟಕ್ಕೆ ಕಳಿಸಿದರು. ಅವರ ಮುಖ ಇಂಗು ತಿಂದ ಮಂಗನಂತಾಗಿದ್ದು. ಸಿನಿಮಾಗೆ ನಾನೇ ಕರಕೊಂಡು ಹೋಗಿದ್ದರು. ಶಿಕ್ಷೆ ಅವರ ಪಾಲಿಗೆ ಕಾದು ಕುಳಿತಿತ್ತು. ಬೆತ್ತದ ಶಿಕ್ಷೆಯಿಂದ ಅಂದು ನಾನು ಪಾರಾಗಿದ್ದೆ. 

– ಅಂಬಿ ಎಸ್‌. ಹೈಯ್ನಾಳ್‌

ಟಾಪ್ ನ್ಯೂಸ್

ತಮ್ಮ ಚಾರಿತ್ರ್ಯ ಹರಣದ ಅಶ್ಲೀಲ ವಿಡಿಯೋ ತಡೆಗೆ ಪಕ್ಷೇತರ ಅಭ್ಯರ್ಥಿ ಲೋಣಿ ದೂರು

ತಮ್ಮ ಚಾರಿತ್ರ್ಯ ಹರಣದ ಅಶ್ಲೀಲ ವಿಡಿಯೋ ತಡೆಗೆ ಪಕ್ಷೇತರ ಅಭ್ಯರ್ಥಿ ಲೋಣಿ ದೂರು

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸೂಡಾ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ ಸಂಪನ್ನ

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?

ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೆಹಲಿಯಲ್ಲಿ ಕೊನೆಯದಾಗಿ ಭಾಷಣ ಮಾಡಿದ್ದ ಸಿಡಿಎಸ್ ಬಿಪಿನ್ ರಾವತ್

udayavani youtube

ಮಂಗಳೂರು: 13 ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಚೋರರ ಬಂಧನ

udayavani youtube

ಅಕಾಲಿಕ ಮಳೆಯ ಆತಂಕ.. ಯಂತ್ರದ ಮೂಲಕ ಭತ್ತದ ಒಕ್ಕಲು

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

ಹೊಸ ಸೇರ್ಪಡೆ

ತಮ್ಮ ಚಾರಿತ್ರ್ಯ ಹರಣದ ಅಶ್ಲೀಲ ವಿಡಿಯೋ ತಡೆಗೆ ಪಕ್ಷೇತರ ಅಭ್ಯರ್ಥಿ ಲೋಣಿ ದೂರು

ತಮ್ಮ ಚಾರಿತ್ರ್ಯ ಹರಣದ ಅಶ್ಲೀಲ ವಿಡಿಯೋ ತಡೆಗೆ ಪಕ್ಷೇತರ ಅಭ್ಯರ್ಥಿ ಲೋಣಿ ದೂರು

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬೊಮ್ಮಾಯಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ರಾಜ್ಯದೊಂದಿಗೆ ಎಐ, ಇಂಧನ, ಶಿಕ್ಷಣ ಸಹಭಾಗಿತ್ವ ಸ್ಥಾಪನೆಗೆ ಫಿನ್ಲೆಂಡ್ ಆಸಕ್ತಿ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ ಎಸ್.ಆರ್.ಮೊರೆ ನಿಧನ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.