ಪ್ಲೀಸ್‌ ಕಣ್ರಿ, ನೀವು ಮತ್ತೆ ನನಗೆ ಎದುರಾಗಬೇಡಿ


Team Udayavani, Sep 4, 2018, 6:00 AM IST

7.jpg

ನಿಮ್ಮೆದುರು ಬಂದು ಐ ಲವ್‌ ಯೂ ಅಂತ ಹೇಳಿ, ನಿಮ್ಮ ನಗುಮುಖದಲ್ಲಿ ಬೇಸರ ಮೂಡಿಸೋವಷ್ಟು ಕೆಟ್ಟ ಹುಡ್ಗ ನಾನಲ್ಲ. ಯಾಕ್‌ ಗೊತ್ತಾ? ಆಗ ನಿಮ್‌ ಡೈಲಾಗ್‌ ಏನಂತ ನಂಗೆ ಗೊತ್ತಿದೆ ರೀ..

ರೀ ಮೇಡಂ, ಯಾಕೆ ನಿಮ್ಮೇಲೆ ಲವ್ವಾಯೊ ಗೊತ್ತಿಲ್ಲ ಕಣ್ರಿ. ಮೊದಲ ನೋಟದಲ್ಲೇ ನೀವು ನನ್ನೆದೆಯೊಳಗೆ ನೆಲೆಯಾಗಿºಟ್ರಿ. ನಿಮ್ಮನ್ನ ನೋಡಿದ್ರೇ ಗೊತ್ತಾಗುತ್ತೆ, ನೀವು ಓದೋದ್ರಲ್ಲಿ ಮೊದಲನೇ ಬೆಂಚು. ಕನ್ನಡಿ ಮುಂದೆ ನಿಂತ್ರೆ ನಿಮ್ಮನ್ನೇ ನೀವು ಮೋಹಿಸುವಷ್ಟು ಚಂದಗೆ ಶೃಂಗರಿಸಿಕೊಳ್ಳೋ ಶ್ರದ್ಧೆ. ಮಾತಿಗಿಳಿದರೆ ಪಟಾಕಿ. ಮೌನವಾದರೆ ಇಡೀ ದಿನ ತುಟಿ ಎರಡು ಮಾಡದ ಗಂಭೀರೆ. ನಕ್ಕರೆ ಚೆಂದುಳ್ಳಿ ಚೆಲುವೆ. ಪಕ್ಕದಲ್ಲಿ ಹಾದುಹೋದರೆ ಮೈಮನವನ್ನು ದಾಟಿ ಹಿತವಾಗಿ ಆತ್ಮ ತಾಕುವ ಅವ್ಯಕ್ತ ಪರಿಮಳ. ಅಚಾನಕ್ಕಾಗಿ ಎದುರಾದರೆ ಇರುಳಿಗೆ  ಸವಿಗನಸು. ಮನದ ಮೂಲೆ ಮೂಲೆಯಲ್ಲಿನ ಒಲವ ಜ್ವಾಲೆಯ ಅಲೆಯ ಇನ್ನೆಷ್ಟು ಹೇಳಿದರೂ ಒಂದೇ ಒಂದು ಅಲ್ಪ ವಿರಾಮವೂ ಇಲ್ಲದ ಮುಗಿಯದ ಅಧ್ಯಾಯ ನೀವು. 

ನಿಮ್ಮನ್ನ ಎಷ್ಟು ನೋಡಿದರೂ, ಇನ್ನು ನೋಡಿದ್‌ ಸಾಕು ಅಂತ ಮನಸು ಹೇಳ್ಳೋದೇ ಇಲ್ಲ. ನಿಮಗೆ ಗೊತ್ತಾಗದಂತೆ ನಿಮ್ಮನ್ನೇ ಗಂಟೆಗಟ್ಟಲೆ ದಿಟ್ಟಿಸಿ ನೋಡಿ, ಖುಷಿಪಡುವ ಉಮೇದಿನಲ್ಲಿ, ನನ್ನನ್ನೇ ನಾನು ಮರೆತು ಎಷ್ಟೋ ಸಾರಿ ಪಜೀತಿಗೀಡಾಗಿದ್ದೇನೆ. ಅದೆಷ್ಟು ದಿನ ನಿಮ್ಮನ್ನು ನೋಡಿದರೂ ಅಷ್ಟು ಸಾರಿಯೂ ನಿಮ್ಮ ಮುಖದಲ್ಲಿ, ಮುಂಜಾವಿನ ಪರಿಶುದ್ಧ ಇಬ್ಬನಿಯಂಥ ತಣ್ಣನೆಯ ನವಿರು ನಗು. ನೀವು ನನಗೊಂದು ಕೊನೆಯಿಲ್ಲದ ಅಚ್ಚರಿ. ಪ್ರತಿಬಾರಿಯೂ ಮನದೊಳಗೆ ಸಂಭ್ರಮದ ನೀಲಾಂಜನ ಹಚ್ಚುವ ಕಣ್ಣೋಟದ ಒಡತಿ. ಮಧುರ ಭಾವ ಮೂಡಿಸುವ ಸುಮಧುರ ಮಾತುಗಳ ಸುಭಾಷಿಣಿ. ಹಾಲಿನಂಥಾ ಅಪ್ಪ, ಜೇನಿನಂಥ ಅಮ್ಮನ ಮಧುರ ಮೈತ್ರಿಗೆ ಸಾಕ್ಷಿಯಾಗಿ ಜನ್ಮ ತಳೆದ ಗುಲಾಬಿ ಹೂವಿನಂಥ ಹುಡುಗಿ ನೀವು.

ನಿಮ್ಮೆದುರು ಬಂದು ಐ ಲವ್‌ ಯೂ ಅಂತ ಹೇಳಿ, ನಿಮ್ಮ ನಗುಮುಖದಲ್ಲಿ ಬೇಸರ ಮೂಡಿಸೋವಷ್ಟು ಕೆಟ್ಟ ಹುಡ್ಗ ನಾನಲ್ಲ. ಯಾಕ್‌ ಗೊತ್ತಾ ಆಗ ನಿಮ್‌ ಡೈಲಾಗ್‌ ಏನಂತ ನಂಗೆ ಗೊತ್ತಿದೆ ರೀ.. “ಕನ್ನಡೀಲಿ ಯಾವತ್ತಾದ್ರೂ  ಮುಖ ನೋಡ್ಕೊಂಡಿದ್ದೀಯಾ? ಲವ್‌ ಮಾಡೋಕೆ ಬೇರೆ ಯಾರೂ ಸಿಗ್ಲಿಲ್ವ ನಿಂಗೆ? ಏನಂತ ಅನ್ಕೊಂಡಿದ್ದೀಯಾ ನನ್ನ?..’  ಇಂಥವೇ ಡೈಲಾಗ್‌ಗಳು ಬಾಣದಂತೆ ಬಂದು ನನ್ನ ಚುಚ¤ವೆ ಅಲ್ಲವಾ? ಇಷ್ಟಕ್ಕೂ, ಬೆಳದಿಂಗಳಂಥ ನಿಮ್ಮನ್ನ ದೂರದಿಂದ ಅನಾಮಿಕವಾಗಿ ಗುಟ್ಟಾಗಿ ಪ್ರೀತ್ಸೋಕೆ ಯಾರ ಹಂಗೂ ಇಲ್ಲ. ಸ್ವತಃ ನಿಮಗೂ ಅದನ್ನು ತಡೆಯೋಕೆ ಆಗಲ್ಲ! ಪ್ರೀತಿಯನ್ನು ಮನಸಿನ ಮನೆಯ ಬಾಗಿಲು ತೆಗೆದು ಇಷ್ಟ ಹೃದಯಕ್ಕೆ ನಿವೇದಿಸಲೇಬೇಕೆಂಬ ನಿಯಮವಾದರೂ ಎಲ್ಲಿದೆ ಹೇಳಿ? 

ನನ್ನದೇ ಏಕಾಂತಕ್ಕೆ ನೀವೊಂದು ಮುಗಿಯದ ಸುಮಧುರ ಗೀತೆ. ನಿಮ್ಮನ್ನ ಪ್ರೀತಿಸ್ತೀನಿ ಅನ್ನೋದೇ ನಂಗೆ ದೊಡ್ಡ ಎಕ್ಸೆ„ಟ್‌ಮೆಂಟು. ಅಲ್ಲಿ ನಿರಾಕರಣೆಯ ನೋವಿಲ್ಲ. ಆಸ್ತಿ ಅಂತಸ್ತಿನ  ಭಯವಿಲ್ಲ . ಕನಸಿನ ದರ್ಬಾರಿಗೆ ಯಾವ ತಡೆಗೋಡೆಯ ಆತಂಕವೂ ಇಲ್ಲ. ಅಹಂ ತಣಿಸುವ ಷರತ್ತುಗಳಿಲ್ಲ. ನೋವಿಗೀಡಾಗಿಸುವ ನಿರೀಕ್ಷೆಗಳಿಲ್ಲ. ಯಾವ ಘಳಿಗೆಯಲ್ಲಾದರೂ ಮನಸು ಮನಸುಗಳ ಭೇಟಿ ನಿರಂತರ ಮತ್ತು ನಿರಾತಂಕ. ನೀವು ಸಿಗ್ತಿರ ಅಂತಾದ್ರೆ ಎಷ್ಟೋ ಹೃದಯಗಳು ಪ್ರಾಣ ಬೇಕಾದರೂ ಬಿಟ್ಟಾವು. ಆದರೆ ನೀವು ಸಿಗೋದಿಲ್ಲ ಅಂತ ಗೊತ್ತಿದ್ದೂ, ನಿಮ್ಮ ಮೇಲೆ  ಅಷ್ಟೇ ಮೊತ್ತದ ಪ್ರೀತಿಯನ್ನು ಹೃದಯದ ಖಾತೆಯಲ್ಲಿ ಜಮಾ ಮಾಡಿದ್ದೇನೆ. ನಂದೇನೂ ಮಹಾನ್‌ ಪ್ರೀತಿಯಲ್ಲ ಬಿಡಿ. ಅದಕ್ಕೆ ಪ್ಲೆಟಾನಿಕ್‌ ಲವ್‌ ಅನ್ನೋ ದೊಡ್ಡ ಅರ್ಥವೇನೂ ಬೇಕಿಲ್ಲ ಮೇಡಂ. ಜತೆಗಿದ್ದರೂ, ದೂರವಿದ್ದರೂ, ಪರಿಚಯವಿದ್ದರೂ, ಅಪರಿಚಿತರೇ ಆದರೂ ಪ್ರೀತಿ ಪ್ರೀತಿಯೇ ಅಲ್ಲವಾ ? 

ಮೊನ್ನೆ ನೀವು ನವಿಲುಗರಿ ಬಣ್ಣದ ಸೀರೆಯುಟ್ಟು ನನ್ನ ಮುಂದೆಯೇ ನಡೆದುಹೋದಿರಿ. ಜೀವವೇ ಬಾಯಿಗೆ ಬಂದಂತಾಗಿತ್ತು. ಉಸಿರಿನ ಒಂದು ಗುಕ್ಕನ್ನೂ ನಿತ್ತರಿಸಿಕೊಳ್ಳಲಾಗದೆ ನಲುಗಿಹೋದೆ. ನನ್ನ ಡವಗುಡುವ ಎದೆಬಡಿತ ನನಗೇ ಕೇಳಿಸುತ್ತಿತ್ತು. ಈ ಜನ್ಮಕ್ಕೆ ಇಷ್ಟೇ ಸಾಕು. ಮತ್ತೆ ನೀವು ಈ ಬದುಕಿನಲ್ಲಿ ಎದುರಾಗಬೇಡಿ. ಯಾರಿಗೆ ಗೊತ್ತು? ಈ ಬಲಹೀನ ಮನಸ್ಸು ನಿಮ್ಮೆದುರು ಮಂಡಿಯೂರಿ, ಒಳಮನಸಿನ ತುಡಿತವನ್ನು ತುಟಿಗೆ ತಂದು ಒಣ ಶಬ್ದಗಳಲ್ಲಿ ಹೊರಹಾಕಿ, ನನ್ನ ಅಂತರಾಳದಲ್ಲಿನ ಖಾಸಗಿ ಲೋಕವನ್ನು ನಾಶಮಾಡಿಕೊಂಡುಬಿಟ್ಟೆನೆಂಬ ಭಯ ಕಾಡುತ್ತಿದೆ. ಪ್ಲೀಸ್‌ ನನ್ನನ್ನ ಒಬ್ಬಂಟಿಯಾಗಿ ಇರಲು ಬಿಡಿ. ಇಡೀ ಬದುಕಿನ ಪೂರ ನಿಮ್ಮನ್ನಷ್ಟೇ ಪ್ರೀತಿಸುತ್ತಾ ಕಳೆದುಬಿಡುತ್ತೇನೆ.

ನೀವು ಬರದ ಹಾದಿಯ ಅಲೆಮಾರಿ
 ಜೀವ ಮುಳ್ಳೂರು

ಟಾಪ್ ನ್ಯೂಸ್

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.