ಗುಲಾಬಿ ಬಣ್ಣದ ಡ್ರೆಸ್‌ ಹಾಕ್ಕೊಂಡೇ ಬರ್ತೀನಿ, ಕಾಯ್ತಾ ಇರು!


Team Udayavani, Nov 13, 2018, 6:00 AM IST

10.jpg

ಕೋಣೆ ಸೇರಿಕೊಂಡು ಬಾಗಿಲು ಮುಚ್ಚಿ ಪತ್ರ ಓದತೊಡಗಿದೆ. ಅದರಲ್ಲಿರುವುದು ಕೇವಲ ಅಕ್ಷರಗಳಲ್ಲ, ನಿನ್ನ ಹೃದಯದ ತುಣುಕುಗಳು ಅನಿಸಿತು. ನಾನೀಗ ನಿನ್ನ ಪ್ರೀತಿಗೆ ಶರಣಾಗಿದ್ದೇನೆ. 

ಏ ಕನಸುಗಾರ ಹುಡುಗ,
 ನಾನು ಹೀಗೊಂದು ಪತ್ರ ಬರೆಯುತ್ತೇನೆ ಎಂಬುದನ್ನು ನನಗೇ ನಂಬಲಾಗ್ತಿಲ್ಲ. ನನ್ನ ಮೇಲೆ ನಿನಗೆ ಗೆಳೆತನಕ್ಕಿಂತ ಹೆಚ್ಚಿನದೇನೋ ಇದೆಯೆಂದು ಅನಿಸತೊಡಗಿತ್ತು. ಗೆಳೆಯರ ಗುಂಪಲ್ಲಿರುವಾಗ ನೀನು ನನ್ನ ಜೊತೆ ಹುಸಿ ಗಾಂಭೀರ್ಯದಿಂದ ವರ್ತಿಸುವುದು, ನನ್ನೊಂದಿಗೆ ಎಲ್ಲರೆದುರು ಕಡಿಮೆ ಮಾತನಾಡುವುದು ಹೀಗೆಲ್ಲಾ ವಿಚಿತ್ರವಾಗಿ ವರ್ತಿಸುತ್ತಿದ್ದೆ. ಆದರೆ, ದಿನಕಳೆದಂತೆ ನೀನು ಪ್ರೀತಿಯಿಂದ ಹುಚ್ಚನಂತಾಗುತ್ತಿದ್ದುದನ್ನು ನಾನು ಗಮನಿಸಿದೆ. ನೀನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಒಬ್ಬಂಟಿಯಾಗಿ ಕುಳಿತಿರುತ್ತಿದ್ದೆ. ಅಂಥ ಒಂದೆರಡು ಸಂದರ್ಭದಲ್ಲಿ ನಿನ್ನ ಬಳಿ ಬಂದಾಗ, ನಿನ್ನ ಸ್ವರ ಕಂಪಿಸುವುದನ್ನು, ಮಾತು ತಡವರಿಸುವುದನ್ನೂ ಗಮನಿಸಿದ್ದೆ. ನೆಪ ಹುಡುಕಿ ನನ್ನಲ್ಲಿ ಒಬ್ಬಂಟಿಯಾಗಿ ಮಾತಾಡಲು ನಾನು ಪ್ರಯತ್ನಿಸುತ್ತಿದ್ದೆ. ನೀನು ಉಳಿದ ಹುಡುಗರಿಗಿಂತ ಭಿನ್ನವಾಗಿ ನನ್ನೊಂದಿಗೆ ವ್ಯವಹರಿಸುವುದನ್ನು ಕಂಡಾಗಲೇ ನನಗೆಲ್ಲಾ ಅರ್ಥವಾಗಿತ್ತು. 

ಆಗ ನಿನ್ನ ಮೇಲೆ ಅಸಾಧ್ಯ ಕೋಪ ಬಂದಿತ್ತು. ಗೆಳೆತನದ ಸೋಗಿನಲ್ಲಿ ಪ್ರೀತಿ ಮಾಡಲು ಹೊರಟ ನಿನ್ನ ಬಗ್ಗೆ ಜಿಗುಪ್ಸೆ ಮೂಡಿತ್ತು. ಎಲ್ಲರೆದುರು ಕಪಾಳಕ್ಕೆರಡು ಬಿಗಿಯಬೇಕು ಅಂದುಕೊಂಡಿದ್ದೆ. “ನಿನ್ನ ಮೂರ್ಖತನದ ಆಸೆ ಈಡೇರುವುದಿಲ್ಲ’ ಎಂದು ಹೇಳಬೇಕೆಂದುಕೊಂಡಿದ್ದೆ. ಆದರೆ, ಚಾಕಲೇಟ್‌ ಬಾಯ…ನಂಥ ನಿನ್ನ ಮುದ್ದು ಮುಖ, ಉತ್ತಮ ಗುಣ ನಡತೆ, ನಿನ್ನ ಟ್ಯಾಲೆಂಟ್‌ ನನ್ನ ಕೋಪವನ್ನೆಲ್ಲ ಕರಗಿಸಿತ್ತು. ನಿನ್ನ ಜೊತೆ ಒರಟಾಗಿ ವರ್ತಿಸುವುದು ಬೇಡ. ಆದರೆ ನಿನ್ನನ್ನು ಪ್ರೀತಿಸಲೂಬಾರದು ಎಂಬ ಅಚಲ ನಿರ್ಧಾರ ಕೈಗೊಂಡೆ. 

 ಆದರೆ, ಇತ್ತೀಚೆಗೆ ಯಾಕೋ, ನನ್ನ ಹುಡುಗ ಹೇಗಿರಬೇಕು ಅಂತ ಸುಮ್ಮನೆ ಯೋಚಿಸಿದೆ. ಸುಮ್ಮನೆ ಬೇರೆ ಬೇರೆ ಹುಡುಗರ ವರ್ತನೆ, ಸ್ವಭಾವಗಳನ್ನು ಗಮನಿಸತೊಡಗಿದೆ. ಆದರೆ ಯಾರೊಬ್ಬರೂ ನಿನಗೆ ಸಮ ಅನಿಸಲೇ ಇಲ್ಲ. ನಿನಗಿಂತ ಯಾಕೋ ಅವರೆಲ್ಲಾ ತುಂಬಾ ಕೆಳಗಿದ್ದಾರೆ ಅನಿಸಿತು. ಒಬ್ಬ ಆದರ್ಶ ಯುವಕನಾಗಿ ನನ್ನ ಕಣ್ಣ ಮುಂದೆ ಮೂಡುವ ಚಿತ್ರ ನಿನ್ನದಷ್ಟೇ ಆಗಿತ್ತು. ನಿನ್ನ ಮೇಲೆ ರೇಗಿದ್ದರ ಬಗ್ಗೆ ಮನಸ್ಸಿಗೇಕೋ ನೋವಾಗತೊಡಗಿತ್ತು. 

ಅದಕ್ಕಾಗಿಯೇ ನಿನ್ನೆ, ಕಾಲೇಜಿನ ಗುಲ್‌ಮೊಹರ್‌ ಮರದಡಿಯಲ್ಲಿ ನಿಂತು ನೀನು ನನ್ನಲ್ಲಿ ಏನೋ ಮಾತಾಡಲು ಯತ್ನಿಸಿದೆ. ನನ್ನ ಪ್ರತಿಕ್ರಿಯೆಗೆ ಹೆದರಿ ಒಂದು ಕಾಗದವನ್ನು ಕೈಗೆ ತುರುಕಿ  “ಮನೆಗೆ ಹೋಗಿ ಓದು’ ಎಂದಷ್ಟೇ ಹೇಳಿ ಬಿರುಸಿನಿಂದ ನಡೆದು ಮರೆಯಾದೆ. ಮೊದಲಾಗಿದ್ದರೆ ಅದನ್ನು ಕಣ್ಣೆತ್ತಿಯೂ ನೋಡದೇ ಹರಿದು ಕಸದ ಬುಟ್ಟಿಗೆ ಹಾಕುತ್ತಿದ್ದೆ. ಆದರೆ ನನ್ನ ಬದಲಾದ ಮನಸ್ಸಿಗೆ ಅದನ್ನು ಹರಿಯುವ ಮನಸ್ಸಾಗಲಿಲ್ಲ. ಅದನ್ನು ಬ್ಯಾಗಲ್ಲಿ ಭದ್ರವಾಗಿಟ್ಟು ಮನೆಗೆ ಓಡಿದೆ. ಎಂದೂ ಇಲ್ಲದಂತೆ ನನ್ನ ಹೃದಯ ಡವಡವಗುಟ್ಟತೊಡಗಿತ್ತು. ಕೋಣೆ ಸೇರಿಕೊಂಡು ಬಾಗಿಲು ಮುಚ್ಚಿ ಪತ್ರ ಓದತೊಡಗಿದೆ. ಅದರಲ್ಲಿರುವುದು ಕೇವಲ ಅಕ್ಷರಗಳಲ್ಲ, ನಿನ್ನ ಹೃದಯದ ತುಣುಕುಗಳು ಅನಿಸಿತು. ನಾನೀಗ ನಿನ್ನ ಪ್ರೀತಿಗೆ ಶರಣಾಗಿದ್ದೇನೆ. ನಿನ್ನ ಪ್ರೀತಿಯನ್ನು ತಿರಸ್ಕರಿಸುವಷ್ಟು ದಡ್ಡಿ ನಾನಲ್ಲ.

ಲವ್‌ ಲೆಟರ್‌ ಬರೆಯುವುದು ಹೇಗೆಂದು ನನಗೆ ಗೊತ್ತಿಲ್ಲ. ಆದರೆ ಇಷ್ಟನ್ನು  ಬರೆಯದಿರಲು ನನಗೆ ಆಗಲಿಲ್ಲ. ನಾಳೆ ಕಾಲೇಜಿನ ಗುಲ…ಮೊಹರ್‌ ಮರದ ಬಳಿ ಕಾಯುತ್ತಿರು. ನೀನು ಹೇಳಿದಂತೆ, ನಿನ್ನನ್ನು ಪ್ರೀತಿಸುವ ಕುರುಹಾಗಿ ಗುಲಾಬಿ ಬಣ್ಣದ ಡ್ರೆಸ್‌ ಧರಿಸಿ ಬರುತ್ತೇನೆ!
ಇಂತಿ ನಿನ್ನ ಪಾರೂ..

ಜೆಸ್ಸಿ ಪಿ.ವಿ ಪುತ್ತೂರು

ಟಾಪ್ ನ್ಯೂಸ್

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.