ಬಾಪು ಕಾರಣ; ಗಾಂಧೀಜಿ ನಮಗೇಕೆ ಪ್ರಾತಃ ಸ್ಮರಣೀಯ?


Team Udayavani, Oct 2, 2018, 6:00 AM IST

10.jpg

ಸತ್ಯ, ಶಾಂತಿ, ಅಹಿಂಸೆ, ಸತ್ಯಾಗ್ರಹ ಮತ್ತು ಹೋರಾಟದ ಮೂಲಕವೇ ಜಗತ್ತನ್ನು ಗೆದ್ದವರು ಗಾಂಧೀಜಿ. ಯುಗ ಪುರುಷ, ಫಾದರ್‌ ಆಫ್ ದಿ ನೇಷನ್‌ ಎಂದು ಕರೆಸಿಕೊಂಡಿದ್ದು ಗಾಂಧೀಜಿಯವರ ಹೆಚ್ಚುಗಾರಿಕೆ. ಇವತ್ತು, ಆ ಮಹಾತ್ಮನ ಜನ್ಮದಿನ. ಗಾಂಧಿ ತೋರಿದ ಮಾರ್ಗದಲ್ಲಿ ನಡೆದಾಗ, ತಮ್ಮ ಬದುಕು ಹೇಗೆ ಬದಲಾಯಿತು, ಗಾಂಧೀಜಿ ತಮಗೇಕೆ ಪ್ರಾತಃಸ್ಮರಣೀಯರು ಎಂಬುದನ್ನು ವಿವರಿಸುವ ಗಣ್ಯರ ಅನಿಸಿಕೆಗಳು…

ನನ್ನ ನೆಚ್ಚಿನ ಗಾಂಧಿ
ಗಾಂಧಿ ಹತ್ಯೆಯ ನಂತರ ಹುಟ್ಟಿದ ನಾನು, ಅವರನ್ನು ಪುಸ್ತಕಗಳ ಮೂಲಕ, ಹಿರಿಯರ ಆಪ್ತ ಮಾತುಕತೆಗಳ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಜೊತೆಗೆ, ಅವರ “ನನ್ನ ಸತ್ಯಾನ್ವೇಷಣೆ’ ಕೃತಿ ನನ್ನ ಮೇಲೆ ಗಾಢ ಪ್ರಭಾವ ಬೀರಿದೆ. ಮೂಲತಃ ಸಂಕೋಚ ಸ್ವಭಾವದ ಹುಡುಗನಾಗಿದ್ದ ಮೋಹನದಾಸ ಕರಮಚಂದ “ಮಹಾತ್ಮ’ನಾಗಿ ರೂಪಾಂತರವಾದ ರೀತಿ ಬೆರಗು ಮೂಡಿಸಿದೆ. ಹಾಗೆ ನೋಡಿದರೆ ಕನ್ನಡ ಸಂವೇದನೆ ಮೊದಲು ಬೆರಗಾಗಿ, ನಂತರ ವೈಚಾರಿಕವಾಗಿ, ಕಡೆಗೆ ವಿಷಾದದ ನೆಲೆಯಲ್ಲಿ ಗಾಂಧಿಯನ್ನು ಸ್ವೀಕರಿಸಿದಂತೆ ತೋರುತ್ತದೆ. 

  ನನಗೆ ಗಾಂಧಿಯನ್ನು ನೆನಪಿಸಿಕೊಂಡಾಗಲೆಲ್ಲ ಒಂದು ಪ್ರಸಂಗ ನೆನಪಾಗುತ್ತದೆ: ಲಂಡನ್ನಿಗೆ ಹೋದಾಗ ಅವರ ಗೆಳೆಯರು ಮಾಂಸಾಹಾರ ತಿನ್ನಲು ಬಲವಂತ ಮಾಡಿದರೂ ತಾಯಿಗೆ ಕೊಟ್ಟ ಮಾತು ತಪ್ಪಲು ಗಾಂಧಿ ಸಿದ್ಧರಿರಲಿಲ್ಲ. ಆಹಾರದಲ್ಲಿ ವೈವಿಧ್ಯವಿಲ್ಲದಿದ್ದರೂ ಸಂತೋಷವಾಗಿ ತಿನ್ನುತ್ತಿದ್ದರು. ಈ ಬಗ್ಗೆ ಅವರು ಹೀಗೆ ಹೇಳಿದ್ದಾರೆ- “ರುಚಿಯ ಮೂಲ ಮನಸ್ಸಿನಲ್ಲಿದೆಯೇ ಹೊರತು ನಾಲಗೆಯಲ್ಲಿಲ್ಲವೆಂದು ಅರಿತೆನು’. ಅಂದರೆ ತಮ್ಮ ತಾರುಣ್ಯದ ವೇಳೆಗೆ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಗಾಂಧಿ ಪ್ರಯತ್ನಿಸಿದ್ದರು. ಮುಂದೆ ಟಾಲ್‌ಸ್ಟಾಯ್‌ ಸಾಹಿತ್ಯದಿಂದ ಪ್ರೇರಣೆ ಪಡೆದ ಗಾಂಧಿ ಟಾಲ್‌ಸ್ಟಾಯ್‌ ಪ್ರತಿಪಾದಿಸಿದ “ಆತ್ಮಶಕ್ತಿ’ ಹಾಗೂ “ಪ್ರೀತಿಸುವ ಶಕ್ತಿ’ಯನ್ನು ತಮ್ಮ ವ್ಯಕ್ತಿತ್ವದ ಮೂಲದ್ರವ್ಯವಾಗಿಸಿಕೊಳ್ಳುತ್ತಾರೆ. ಅಂದರೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದು ಹಾಗೂ ಇತರರ ಬಗ್ಗೆ ಅಸಹನೆ ಬೆಳೆಸಿಕೊಳ್ಳದೆ ತಾಳಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳುವುದು ನಮ್ಮ ಬದುಕನ್ನು ಸಹನೀಯವಾಗಿಸುತ್ತವೆ.

  ಇದು ಎರಡು ಸಂಗತಿಗಳನ್ನು ನನಗೆ ಮನಗಾಣಿಸಿತು. ಒಂದು ಸಾಹಿತ್ಯಕ್ಕಿರುವ ಶಕ್ತಿ. ಮುಂದೆ ಸಾಹಿತ್ಯದ ಅಧ್ಯಯನ ನನ್ನ ಬದುಕಿನ ರೀತಿಯನ್ನೇ ಬದಲಿಸಿತು. ಮತ್ತೂಂದು, ಎಂಥದೇ ಸಂದರ್ಭವಾಗಲೀ ನಮ್ಮ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳದೆ ನಾವು ವ್ಯವಹರಿಸಲು ಸಾಧ್ಯವಾದರೆ ನಮ್ಮ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದು. ಗಾಂಧೀಜಿ ತಮ್ಮ ಆತ್ಮಕಥನದಲ್ಲಿ ಒಂದು ಕಡೆ ಪ್ರಸ್ತಾಪ ಮಾಡುತ್ತಾರೆ: “ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ- ಅದು ಸಣ್ಣದಿರಲಿ, ಮಹತ್ವದ್ದಿರಲಿ- ಒಂದು ಕ್ಷಣ ಮೌನಕ್ಕೆ ಜಾರಿ ನನ್ನ ಒಳಮನಸ್ಸನ್ನು ಕೇಳುತ್ತಿದ್ದೆ’. ಇದು ನನ್ನ ಬದುಕಿನಲ್ಲೂ ಅನೇಕ ಸಂದರ್ಭಗಳಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು ನೆರವಾಗಿದೆ. ಹಾಗೆಯೇ ಸಹಜೀವಿಗಳನ್ನು ಅವರ ದೌರ್ಬಲ್ಯಗಳನ್ನು ಒಪ್ಪಿಕೊಂಡು ಸ್ವೀಕರಿಸಬೇಕೆನ್ನುವ ಗಾಂಧೀಜಿಯ ನಿಲುವು ಸಂಬಂಧಗಳನ್ನು ಕಾಪಾಡಿಕೊಳ್ಳಲು ನೆರವಾಗಿದೆ. ನಮ್ಮೊಳಗಿನ ನೈತಿಕ ಶಕ್ತಿಯೇ ನಮ್ಮ ಬಲ ಎಂಬ ಗಾಂಧಿಯವರ ಮಾತುಗಳ ಬಗೆಗಿನ ನಂಬಿಕೆ ಲೋಕದ ಹಂಗಿಲ್ಲದ ಏಕಾಂತದ ಬದುಕನ್ನು ನೆಮ್ಮದಿಯಾಗಿಸಿದೆ.
– ನರಹಳ್ಳಿ ಬಾಲಸುಬ್ರಹ್ಮಣ್ಯ

ಬಾಪೂ ಎಂದರೆ, ಏಕವಚನದ ಆಪ್ತತೆ
ಗಾಂಧೀಜಿ ಅವರ ಮೂರು ಮಂಗಗಳ ಕಲ್ಪನೆ, ಬಾಲ್ಯದಲ್ಲಿ ನನಗೆ ಬಹಳ ಪುಳಕ ಕೊಟ್ಟಂಥ ರೂಪಕ. ಆದರೆ ಬದುಕು ನನ್ನಲಿ ಈ ಕಲ್ಪನೆಯ ಮೃದುತ್ವವನು ಈ ದಿನಮಾನಗಳಲ್ಲಿ ತುಸು ಒರಟು ಗೊಳಿಸಿದೆ. ಎಷ್ಟು ಕಾಲ ಅಂತ ಕೆಟ್ಟದ್ದನು ನೋಡಿಯೂ ನೋಡದಂತೆ ಕೇಳಿಯೂ ಮಾತಾಡದಂತೆ ಒಪ್ಪಂದಗೊಳಿಸುವುದು ಎಂಬ ಪ್ರಶ್ನೆ.

  simple living high thinking ಮಂತ್ರವನು ಕಲಿಸಿಕೊಟ್ಟ ಮಹಾತ್ಮ, ಈ ವ್ಯವಹಾರದ ಜಗದೊಳಗೆ ಹುಸಿಹುಸಿಯಾಗಿ ತೋರಿಕೆಗಾದರೂ, ಒಂದಿಷ್ಟು ಹೊರಗಣ ಪೋಷಾಕು ವೇಷಭೂಷಣ ಧರಿಸುವ ನನ್ನನ್ನು- ಸದಾ ಪ್ರಶ್ನಿಸುತ್ತಾನೆ! (ಕ್ಷಮಿಸಿ, ಏಕವಚನದ ಆಪ್ತತೆ ಅದು ಅಗೌರವ ಎಂದು ಭಾವಿಸಬೇಡಿ). ಇಷ್ಟು ಸಂಬಳ ಬರುತ್ತೆ, ಮೂರನೇ ಜೊತೆ ಬಟ್ಟೆ ಇಲ್ಲ… ಇನ್ನೊಂದು ಪೇರ್‌ ಷೂಗಳಿಲ್ಲ ಎಂಬ ಅನಿವಾರ್ಯವಾದ ಪ್ರಶ್ನೆ ಗಳಿಗೆ ನಿರುತ್ತರಿ ನಾನು.

ಹೇ ರಾಮ್‌! ಮಹಾತ್ಮ ಗಾಂಧೀಜಿಯವರ ವ್ಯಕ್ತಿ ತ್ವ ನನಗೆ ಕಲಿಸಿ ಕೊಟ್ಟ ಮೇರು ಪಾಠ ಎಂದರೆ being transparent… ಪಾರದರ್ಶಕತೆ ಮತ್ತು ಗುಣ ಅವಗುಣ ಎಲ್ಲವನ್ನೂ ತೆರದಿಡುವ ಧೈರ್ಯ. ಬಾಲ್ಯದಿಂದಲೂ ಎಸಗಿದ ತಪ್ಪುಗಳಿಂದ ಹಿಡಿದು ಇಡೀ ದೇಶದ ಏಳಿಗೆಯ ಚುಕ್ಕಾಣಿ ಹಿಡಿದ ಕಾಲಘಟ್ಟದವರೆಗಿನ ತಮ್ಮ ಲೋಪ ದೋಷಗಳನ್ನು ಬಿಡಿಸಿಟ್ಟ ಬಗೆ ಮತ್ತು ಕನ್‌ಫೆಷನ್‌ ಇದೆ ನೋಡಿ, ಅದು ಮಹಾತ್ಮ ಗಾಂಧೀಜಿಗೆ ಮಾತ್ರ ಸಾಧ್ಯವಾಗುವ ಮಾತು.

   ಮಾಡಿದ ತಪ್ಪುಗಳನೆ ಮತ್ತೆ ಮಾಡುತ್ತ ಅದೇ ಬದುಕಿಗೆ ಪಾಠ ಮೆಟ್ಟಿಲು ಮಣ್ಣು ಮಸಿ ಅಂತ ಎಲ್ಲ ಮಾತಾಡುವ ನನ್ನ ಬಾಯಿ ಮುಚ್ಚಿ ಸುವ ಈ ಮಹಾತ್ಮನ ತೆರೆದ ಪುಸ್ತಕದಂಥ ಬದುಕೇ ನನ್ನ ಇಡೀ ಜೀವನದ ಮೂಲ ದ್ರವ್ಯ ಆಗಿದೆ. ಬರೀ ಮಾತು ಮಾತಲೇ ಭಾಷಣ ಹೊಡೆದು ಹೂ ಹಾರ ಹಾಕಿ ಭಜನೆ ಮಾಡಿ ಎದ್ದು ಬಿಡುವ ನಾಳಿನ ಕಾರ್ಯಕ್ರಮಗಳಲಿ ನನ್ನ ಮಹಾತ್ಮ ಮತ್ತೆ ಕ್ಲೀಷೆ ಆಗೊ ನೋವೂ ನನ್ನದೆ.

  ದೇಶದ ಉದ್ದಗಲಕ್ಕೂ ಓಡಾಡ್ತಾ ಸ್ವಾತಂತ್ರ್ಯದ ತೀವ್ರ ತುಡಿತದ ಜೊತೆಗೆ, ಬದುಕಿನ ನಿಷ್ಠೆ, ಮೌಲ್ಯ, ಸಾರ್ಥಕತೆಯನ್ನೂ ಸಾರಿ ಹೋದ… ಕೊನೆಗೆ ತೀರಾ ದುರ್ಬಲ ಮತ್ತು ತುಸು ಜರ್ಜರಿತವಾಗಿದ್ದ ಆ ಎದೆಯನು ಹೊಕ್ಕ ಮೂರು ಗುಂಡುಗಳು ನನಗೆ ಮತ್ತೆ ಮೂರು ಮಂಗಗಳ ರೂಪಕವಾಗೇ ಕಾಡುತ್ತವೆ, ಅನುದಿನವೂ…
ಹೇ ರಾಮ…!
– ವಾಸುದೇವ ನಾಡಿಗ್‌  

ಆ ಹೆಸರಿನಲ್ಲೇ ವಿಶ್ವಶಾಂತಿ ಅಡಗಿದೆ…
ನನಗೆ ಆಗ ಒಂಬತ್ತೋ ಹತ್ತೋ ವರ್ಷ ಇರಬೇಕು. ಒಮ್ಮೆ ನಮ್ಮ ತಂದೆಯವರು ಏನೋ ಕೇಳಿದ್ದಕ್ಕೆ, ನಾನು ಸುಳ್ಳು ಹೇಳಿಬಿಟ್ಟೆ. ಅದೇನು ದೊಡ್ಡ ಸುಳ್ಳಾಗಿರಲಿಲ್ಲ. ಆದರೂ, ಸುಳ್ಳು ಹೇಳಿದೆಯಲ್ಲಾ ಅಂತ ಆತ್ಮಸಾಕ್ಷಿ ನನ್ನನ್ನು ಚುಚ್ಚತೊಡಗಿತು. ಕೊನೆಗೆ ಒಂದು ಚೀಟಿಯಲ್ಲಿ, “ಇವತ್ತು ನಾನು ನಿಮಗೆ ಸುಳ್ಳು ಹೇಳಿಬಿಟ್ಟೆ. ದಯವಿಟ್ಟು ನನ್ನನ್ನು ಕ್ಷಮಿಸಿ’ ಅಂತ ಬರೆದು, ತಂದೆಯವರ ಹಾಸಿಗೆ ದಿಂಬಿನ ಅಡಿಯಲ್ಲಿ ಇಟ್ಟು ಬಂದೆ. ರಾತ್ರಿ ಮಲಗುವಾಗ ಅದನ್ನು ಓದಿದ ಅಪ್ಪ, ಎದ್ದು ಬಂದು, ನನ್ನನ್ನು ಎತ್ತಿ ಮುದ್ದಾಡಿ, ನೀನು ಸತ್ಯವನ್ನು ಪರಿಪಾಲಿಸಿದ್ದೀಯ ಅಂತ ಖುಷಿಪಟ್ಟರು. ಮಗಳು ಸುಳ್ಳು ಹೇಳಿದ್ದನ್ನು ಒಪ್ಪಿಕೊಂಡಳಲ್ಲ ಎಂದು ತಂದೆಗೆ ಖುಷಿಯಾಗಿತ್ತು. ಯಾಕೆಂದರೆ, ಅವ‌ರು ಗಾಂಧಿ ತಣ್ತೀದ ಅನುಯಾಯಿಗಳಾಗಿದ್ದರು. ಆ ಘಟನೆಯ ನಂತರ ನಾನೂ ಗಾಂಧೀಜಿಯವರ ಸಿದ್ಧಾಂತಗಳನ್ನು ಪಾಲಿಸತೊಡಗಿದೆ.

   ಮಹಾತ್ಮ ಗಾಂಧೀಜಿಯವರು ನಮ್ಮನ್ನು ಅಗಲಿ ಎಷ್ಟೋ ವರ್ಷಗಳಾದರೂ, ಅವರು ಬಿಟ್ಟುಹೋದ ಆದರ್ಶಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದ ಗಾಂಧಿ ತಣ್ತೀಗಳೆಂದರೆ- ಸತ್ಯ, ಅಹಿಂಸೆ, ಶಾಂತಿ ಹಾಗೂ ಸರಳ ಜೀವನ. ಈ ತಣ್ತೀಗಳನ್ನು ಎಲ್ಲರೂ ಪಾಲಿಸಿಬಿಟ್ಟರೆ ಜಗತ್ತಿನ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ. 

   ಇಂದು ನಮಗೆ ಜಗತ್ತಿನಲ್ಲಿ ಶಾಂತಿ ಬೇಕಾಗಿದೆ. ಹಿಂಸೆಯಿಂದ ಸಾಧಿಸುವಂಥದ್ದು ಏನೂ ಇಲ್ಲ. ಖಂಡ ಖಂಡಗಳ ಮಧ್ಯೆ, ದೇಶ ದೇಶಗಳ ಮಧ್ಯೆ ಅಥವಾ ಪ್ರಾಂತ್ಯ ಪ್ರಾಂತ್ಯಗಳ ಮಧ್ಯೆ ವೈಮನಸ್ಯ ಮೂಡಿದರೆ ಅದನ್ನು ಶಾಂತಿಯಿಂದಲೇ ಬಗೆಹರಿಸಿಕೊಳ್ಳಬೇಕು. ನಮ್ಮ ಹೋರಾಟ, ಚಳವಳಿಗಳೂ ಅಹಿಂಸಾಮಾರ್ಗದಲ್ಲಿಯೇ ಸಾಗಲಿ ಎಂಬ ಮೇಲ್ಪಂಕ್ತಿ ಹಾಕಿದವರು ಬಾಪೂಜಿ. 

  ಗಾಂಧೀಜಿಯವರು ಅನಗತ್ಯ ವಸ್ತುಗಳನ್ನು ಖರೀದಿಸುವುದು, ಸಂಗ್ರಹಿಸುವುದುರ ವಿರುದ್ಧವಾಗಿದ್ದರು. ಆದರೆ, ನಾವು ಈಗ ಕೊಳ್ಳುಬಾಕ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ಊಟ, ವಸತಿ, ವಸ್ತ್ರ ಎಲ್ಲವೂ ಆಡಂಬರವಾಗಿದೆ. ಇದು ತಪ್ಪು. ಗಾಂಧೀಜಿ ನನ್ನ ಪಾಲಿನ ಹೀರೋ. ಅವರ ಬದುಕಿದ ರೀತಿಯ ನನಗೆ ಜೀವನಪಾಠ. ಹಾಗಾಗಿ ನಾನು ಕೂಡ ಸತ್ಯ, ಸರಳಜೀವನ, ಅಹಿಂಸೆಯನ್ನು ಸಾಧ್ಯವಾದ ಮಟ್ಟಿಗೆ ಪಾಲಿಸುತ್ತಿದ್ದೇನೆ. ಅವರು ನಡೆದು ಹೋದ ದಾರಿಯಲ್ಲಿ ನಡೆಯುವುದೇ, ನಾವು ಅವರಿಗೆ ಸಲ್ಲಿಸಬಹುದಾದ ಬಹುದೊಡ್ಡ ಗೌರವ. 

 ಮಾಲತಿ ಪಟ್ಟಣಶೆಟ್ಟಿ

ನೋವನ್ನು “ಮಂಗ’ಮಾಯವಾಗಿಸಿದ ಗಾಂಧೀಜಿ
ಚಿಕ್ಕಂದಿನಲ್ಲಿ ಗಾಂಧಿ ನನಗೆ ಪರಿಚಯವಾಗಿದ್ದೇ “ಮೂರು ಮಂಗಗಳ ಕತೆ’ಯಿಂದ. ಆ ಸ್ವಾರಸ್ಯಕರ ಕತೆಯಿಂದಲೇ ಬೋಳು ತಲೆಯ, ಕೋಲು ಹಿಡಿದ ತಾತ ಅಚ್ಚರಿಯಂತೆ ಕಂಡಿದ್ದರು. ಅಹಿಂಸೆ, ಪ್ರಾಮಾಣಿಕತೆ ಮುಂತಾದ ಒಳ್ಳೆಯ ವಿಚಾರಗಳನ್ನು ಗಾಂಧಿಯವರ ಕತೆಗಳಿಂದಲೇ ನಾನು ತಿಳಿದದ್ದು. ನಾನೊಬ್ಬನೇ ಅಲ್ಲ, ಭಾರತದ ಮಕ್ಕಳೆಲ್ಲರೂ ಹಾಗೆಯೇ ಕಲಿತಿರುತ್ತಾರೆ ಅಂದುಕೊಂಡಿದ್ದೀನಿ. ಶಾಲೆಯಲ್ಲಿ ಗಾಂಧೀಜಿಯವರ ವಿಚಾರಗಳನ್ನೇನೋ ತಿಳಿದೆವು, ಅದರ ಉಪಯೋಗ ಗೊತ್ತಾಗಿದ್ದು ಬೆಳೆದು ದೊಡ್ಡವನಾದ ಮೇಲೆಯೇ. ತೊಂದರೆಗೆ ಸಿಲುಕಿದಾಗ, ಕಷ್ಟದಲ್ಲಿದ್ದಾಗಲೆಲ್ಲ ಗಾಂಧೀಜಿಯ ತತ್ವಗಳು ನನ್ನ ನೆರವಿಗೆ ಬಂದಿವೆ.

  ಕಛೇರಿಯಲ್ಲಿರಬಹುದು, ವೈಯಕ್ತಿಕ ಸಂಬಂಧಗಳಲ್ಲೇ ಆಗಿರಬಹುದು, ಬದುಕಿನ ಪ್ರತಿ ಹಂತದಲ್ಲೂ ನೋವನ್ನು ಅನುಭವಿಸುತ್ತಲೇ ಇರುತ್ತೇವೆ. ಅಂಥ ಒಂದು ಹಂತದಲ್ಲಿ ನಾನಿದ್ದೆ. ನನಗೆ ತುಂಬಾ ಹತ್ತಿರವಿದ್ದವರಿಂದ ಮನಸ್ಸು ಘಾಸಿಗೊಂಡಿತ್ತು. ಆ ನೋವಿನಿಂದ ಹೊರಬರಲು ಕಷ್ಟಪಡುತ್ತಿದ್ದೆ. ಆ ಸಮಯದಲ್ಲಿ ಗಾಂಧಿಯವರ  “ನಿನ್ನ ಅನುಮತಿಯಿಲ್ಲದೆ ಯಾರೂ ನಿನ್ನನ್ನು ನೋಯಿಸಲಾರರು’ ಎಂಬ ಸೂಕ್ತಿಯೊಂದು ಕಣ್ಣಿಗೆ ಬಿತ್ತು. ಅರೆ, ಎಷ್ಟು ನಿಜ ಅಲ್ವಾ ಅಂತ ಅನ್ನಿಸಿತು. ನೋವು ಮಾಡಿಕೊಳ್ಳುವುದು ಬಿಡುವುದು ನಮ್ಮ ನಿಯಂತ್ರಣದಲ್ಲಿಯೇ ಇರುತ್ತೆ ಎನ್ನುವ ಸತ್ಯ ಗೋಚರಿಸಿತ್ತು. ಒಡನೆಯೇ ವಾರಗಳಿಂದ ಬಾಧಿಸುತ್ತಿದ್ದ ಹಿಂಸೆ, ನೋವು ಎಲ್ಲಾ “ಮಂಗ’ಮಾಯ. “ಮುನ್ನಾಭಾಯಿ ಎಂಬಿಬಿಎಸ್‌’ ಸಿನಿಮಾದಲ್ಲಿ ಸಂಜಯ್‌ ದತ್‌, ಗಾಂಧೀಜಿಯವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಗೂಂಡಾ ಒಬ್ಬನ ಮಾತ್ರ ಮಾಡಿದ್ದರು. ನಿಜಜೀವನದಲ್ಲಿ ಅದು ಸಾಧ್ಯವಾಗೋದಿಲ್ಲ ಎಂದುಕೊಂಡಿದ್ದ ನನಗೆ ಗಾಂಧೀಜಿಯವರ ಸೂಕ್ತಿಗಳು ಬರಿ ಸಿನಿಮಾಗೆ, ಪಠ್ಯಕ್ಕೆ ಮಾತ್ರವೇ ಸೀಮಿತವಲ್ಲ ಎನ್ನುವುದು ಹಲವಾರು ಬಾರಿ ಗೋಚರಿಸಿದೆ.

ಇಜಾಜ್‌ ಶೇಖ್‌

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.