ಕು ರಿ ಗ ಮ ಪ

Team Udayavani, Mar 19, 2019, 12:30 AM IST

w-16.jpg

ರಿಯಾಲಿಟಿ ಶೋನಲ್ಲಿ ಒಂದು ಚಾನ್ಸ್‌ ಸಿಕ್ಕರೆ ಸಾಕೆಂದು ಹಪಹಪಿಸುವ ಮಂದಿಯ ನಡುವೆ ಅಯ್ಯೋ ತನ್ನ ಕುರಿಗಳಿಂದ ದೂರವಿರಬೇಕಲ್ಲಪ್ಪಾ ಎಂದು ಬೇಸರಿಸುತ್ತಲೇ ಹಾಡಿನ ಮೂಲಕ ಕನ್ನಡಿಗರ ಅಭಿಮಾನವನ್ನು ಸಂಪಾದಿಸಿದ ಕುರಿಗಾಹಿ ಹನುಮಂತಪ್ಪ. ಆತನ ಮನದಾಳ ಇಲ್ಲಿದೆ…

ಇಚ್ಛಾಶಕ್ತಿ, ಪರಿಶ್ರಮ ಇದ್ದುಬಿಟ್ಟರೆ ಅದೆಂಥದ್ದೇ ಬೆಟ್ಟದಂಥ ಸವಾಲುಗಳು ಎದುರಾದರೂ ಸಾಧನೆ ಕಷ್ಟವಾಗುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಅಂದಿನ ಕುರಿಗಾಹಿ, ಇಂದು ಸೆಲೆಬ್ರಿಟಿಯಾಗಿರುವ ಹನುಮಂತಪ್ಪ ಲಮಾಣಿ. ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಚಿಲ್ಲೂರು- ಬಡ್ನಿ ತಾಂಡಾದಲ್ಲಿ ಕುರಿ ಮೇಯಿಸಿಕೊಂಡಿದ್ದಾತ ಇಂದು ಕರ್ನಾಟಕದ ಮನೆಮಾತಾಗಿರುವುದು ಕಡಿಮೆ ಸಾಧನೆಯೇನಲ್ಲ.

ಕುರಿಗಳ ನಡುವೆ ಸಂಗೀತಾಭ್ಯಾಸ
ಹನುಮಂತಪ್ಪ, ಕುರಿ ಕಾಯುವಾಗ ಮನಸಿಗೆ ತೋಚಿದ ಜನಪದ ಗೀತೆಗಳನ್ನು ಗುನುಗುಡುತ್ತಿದ್ದ. ಆತನ ಪಾಲಿಗೆ ಅದೇ ಸಂಗೀತಾಭ್ಯಾಸ. ಹನುಮಂತಪ್ಪ ಕಲಿತಿದ್ದು ಕೇವಲ ಏಳನೇ ತರಗತಿ ತನಕ ಮಾತ್ರ. ಮುಂದಕ್ಕೆ ಓದಲು ಮನೆಯ ಪರಿಸ್ಥಿತಿ ಅಡ್ಡಿಯಾದ ಕಾರಣ ಅಪ್ಪನಿಗೆ ಕುಟುಂಬ ನಿರ್ವಹಣೆಗೆ ಸಹಾಯ ಮಾಡುವ ಸಲುವಾಗಿ ಸ್ಲೇಟು ಬಳಪ ಪುಸ್ತಕ ಬಿಟ್ಟು ಕಾರಿ ಕಾಯಲು ಹೊರಟುಬಿಟ್ಟ. ಬೆಳಗ್ಗಿನಿಂದ ಕುರಿ ಮೇಯಿಸಿ, ಸಂಜೆ ಓರಗೆಯ ಗೆಳೆಯರೊಂದಿಗೆ ಊರ ಹನುಮಂತ ದೇವರ ಗುಡಿಯಲ್ಲಿ ಭಜನೆಯಲ್ಲಿ ತೊಡಗಿಕೊಳ್ಳುತ್ತಿದ್ದ.

ಗೆಳೆಯರ ಪ್ರೋತ್ಸಾಹ
ಸಂಗೀತದ ಕುರಿತಾದ ತುಡಿತವೇನೋ ಮುಂಚಿನಿಂದಲೇ ಇತ್ತು. ಆದರೆ, ತಾಂಡಾದಲ್ಲಿ ಕಳೆದು ಹೋಗುತ್ತಿದ್ದ ಪ್ರತಿಭೆ ಝೀ ಕನ್ನಡ ವಾಹಿನಿಯ ಸಾರೆಗಮಪ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಕ್ಕೆ ಗೆಳೆಯರ ಪ್ರೋತ್ಸಾಹವೂ ಕಾರಣ. ಸ್ನೇಹಿತರಾದ ನಾಗರಾಜ, ವಾಸುದೇವ, ಗಂಗಾಧರ, ಉಮೇಶ, ಮಹಾಲಿಂಗ, ಫ‌ಕ್ಕೀರೇಶ ಹೀಗೆ ಹನುಮಂತನ ಗೆಳೆಯರ ಪಟ್ಟಿ ಪುರಾಣದ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಚಿಕ್ಕ ಮನೆಯಲ್ಲಿ ತಂದೆ, ತಾಯಿ, ಅಣ್ಣ, ಅಕ್ಕ ತಂಗಿಯರ ಜೊತೆ ಕಷ್ಟದ ಜೀವನ ನಡೆಸುತ್ತಿರುವ ಹನುಮಂತಪ್ಪ ಮೊಬೈಲ್‌ನಲ್ಲಿ ಪ್ರಖ್ಯಾತ ಗಾಯಕರ ಹಾಡುಗಳನ್ನು ಪ್ಲೇ ಮಾಡಿ ಅವರಂತೆಯೇ ತಾನೂ ಹಾಡಲು ಪ್ರಯತ್ನಿಸುತ್ತಿದ್ದ. 

ಕುರಿಯನ್ನು ಬಿಟ್ಟಿರಲಾಗಿರಲಿಲ್ಲ
ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನಗರಕ್ಕೆ ಹೊಂದಿಕೊಳ್ಳುವುದು ಒಂದು ರೀತಿಯ ಕಷ್ಟವಾಗಿದ್ದರೆ ಅದಕ್ಕಿಂತ ಹೆಚ್ಚಾಗಿ ಕುರಿಗಳನ್ನು ಬಿಟ್ಟಿರಬೇಕಾಗಿ ಬಂದಿದ್ದು ಆತನಿಗೆ ತುಂಬಾ ಕಷ್ಟವೆನಿಸಿತ್ತು. ಬೆಂಗಳೂರಿನ ಜೀವನ ಹೇಗನ್ನಿಸಿತು ಎಂದು ಕೇಳಿದರೆ “ಅಲ್ಲಿದ್ದಾಗ ಅಲ್ಲಿನ ಜೀವನ ಚೆಂದ, ಇಲ್ಲಿದ್ದಾಗ ಇಲ್ಲಿಯ ಜೀವನ ಇಷ್ಟ’ ಎಂದು ವೇದಾಂತಿಯಂತೆ ಉತ್ತರಿಸುತ್ತಾನೆ. 

ಸೆಲೆಬ್ರಿಟಿಯಾದಾಗಿನಿಂದ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಹನುಮಂತ ಇಂದಿಗೂ ಊರಲ್ಲಿದ್ದರೆ ಕುರಿ ಮೇಯಿಸುವುದನ್ನು ತಪ್ಪಿಸುವುದಿಲ್ಲ. ಶನಿವಾರಕ್ಕೊಮ್ಮೆ ಹನುಮಂತ ದೇವರ ದೇವಸ್ಥಾನದಲ್ಲಿ ಭಜನೆ, ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಲು ಮರೆಯುವುದಿಲ್ಲ.  

ಹನುಮಂತನ ಗುಡಿಯಲ್ಲಿ ಭಜನೆ ಮಾಡುತ್ತಿದ್ದೆ. ಶ್ರುತಿ ತಪ್ಪದಂತೆ ಹಾಡುವುದು ಅಭ್ಯಾಸವಾಗಿದ್ದು ಅಲ್ಲೇ. ಇವತ್ತು ಜನ ನನ್ನನ್ನು ಗಾಯಕನಾಗಿ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮೂರ ಗುಡಿಯ ಮಾರುತಿಯೇ ಕಾರಣ.
ಹನುಮಂತಪ್ಪ

 ರಾಜಶೇಖರ ಗುರುಸ್ವಾಮಿಮಠ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.