Udayavni Special

ಅನುಮಾನಂ ಪೆದ್ದ ರೋಗಂ!

Team Udayavani, May 23, 2017, 9:54 AM IST

anumana.jpg

ಎರಡು ವರ್ಷಗಳ ಹಿಂದಿನ ಘಟನೆಯಿದು. ನಾನು ಕಚೇರಿ ಕೆಲಸ ಮುಗಿಸಿ ಊರಿಗೆ ಹೋಗುವ ಸಂಭ್ರಮದೊಂದಿಗೆ ಬಸ್‌ಸ್ಟಾಂಡ್‌ಗೆ ಪ್ರಯಾಣ ಬೆಳೆಸಿದೆ. ಆದಾಗಲೇ ಬಸ್‌ ಹೊರಡುವ ಸಮಯವಾಗಿದ್ದರಿಂದ ತರಾತುರಿಯಲ್ಲಿ ಬಸ್‌ ಹತ್ತಿ ನನ್ನ ಸೀಟ್‌ ಸಿಕ್ಕ ಖುಷಿಯಲ್ಲಿ ದೀರ್ಘ‌ ನಿಟ್ಟುಸಿರು ಬಿಡುತ್ತಾ ಆರಾಮಾಗಿ ಕುಳಿತೆ. ಕೆಲಸದ ಆಯಾಸದಿಂದ ಅಲ್ಲೇ ನಿದ್ರಾಲೋಕಕ್ಕೆ ಜಾರಿದೆ. 

ಬಸ್‌ ಹೊರಟು ಒಂದು ಗಂಟೆ ನಂತರ, ನನ್ನ ಪಕ್ಕದ ಸೀಟಿನಲ್ಲಿ ಒಂದು ಹುಡುಗ- ಹುಡುಗಿ ಬಂದು ಕುಳಿತರು. ನಾನು ನಿದ್ರಾಲೋಕದಲ್ಲಿ ಇದ್ದುದರಿಂದ ಅಷ್ಟಾಗಿ ಅವರನ್ನು ಗಮನಿಸಲಿಲ್ಲ. ಗಾಢ ನಿದ್ದೆಯಲ್ಲಿದ್ದ ನನಗೆ ಕಂಡಕ್ಟರ್‌ ಚಾ/ತಿಂಡಿಗೆ ಹತ್ತು ನಿಮಿಷ ಸಮಯವಿದೆ ಎಂದು ಜೋರಾಗಿ ಹೇಳುತ್ತಾ ನಮ್ಮ ಸೀಟಿನ ಬದಿಗೆ ಬಂದಾಗ ಎಚ್ಚರವಾಯಿತು.

ಆದಾಗಲೇ ಪಕ್ಕದ ಸೀಟಿನವರು ಚಾ ಕುಡಿಯಲು ಹೊರಟು ಹೋಗಿಯಾಗಿತ್ತು. ನಾನು ಚಾ ಕುಡಿದು ನನ್ನ ಸೀಟಿನಲ್ಲಿ ಕುಳಿತು, ಆಗಸದ ಚಂದ್ರನನ್ನು ದಿಟ್ಟಿಸಿ ನೋಡುತ್ತಿರುವಾಗ ನಮ್ಮ ಕಚೇರಿಯ ಮಹಿಳಾ ಸಹೋದ್ಯೋಗಿ ನಮ್ಮ ಬಸ್‌ ಕಡೆ ಬರುವುದನ್ನು ಗಮನಿಸಿದೆ. ನನ್ನ ಮುಖವನ್ನು ಬಾಟಲಿ ನೀರಿನಲ್ಲಿ ತೊಳೆದು ಮತ್ತೆ ಸರಿಯಾಗಿ ನೋಡಿದೆ. ಹೌದು ಅವಳೇ… ನೀಲಿ ಕಣ್ಣಿನ ಸುಂದರಿ!

ಅವಳು ಬಂದು ನನ್ನ ಪಕ್ಕದ ಸೀಟಿನಲ್ಲಿ ಹುಡುಗನೊಬ್ಬನ ಜೊತೆ ಕುಳಿತಾಗ ನನಗೆ ಅಚ್ಚರಿ. ವಾರೆ ಕಣ್ಣಿನಲ್ಲಿ ನೋಡುತ್ತಾ ಗಾಢ ನಿದ್ರೆಯಲ್ಲಿ ಇರುವ ಹಾಗೆ ನಟನೆ ಮಾಡಿದೆ. ಆದರೆ ಮನದಲ್ಲಿ ನೂರಾರು ಆಲೋಚನೆ! ಅವಳ ಬಳಿಯಿದ್ದ  ದೃಢಕಾಯ ಶರೀರದ ಹುಡುಗ ಯಾರಿರಬಹುದು? ಇವರಿಬ್ಬರೂ ಎಲ್ಲಿಗೆ ಹೋಗುತ್ತಿರಬಹುದು? ಸಂಬಂಧಿಕನಾ? ಅಥವಾ ಪರಿಚಯದವನಾ? ಹೀಗೆ ಏನೇನೋ ಆಲೋಚನೆಗಳಿಗೆ ಉತ್ತರ ಹುಡುಕುತ್ತಿರುವಾಗ ಆ ಹುಡುಗಿ ನನ್ನನ್ನು ನೋಡಿ “ನೀವಾ ಸಾರ್‌! ನಾನು ನೋಡಿರಲೇ ಇಲ್ಲ. ಸಾರೀ ಸಾರ್‌. ಅಜ್ಜಿ ಮನೆಯಲ್ಲಿ ಕಾರ್ಯಕ್ರಮ ಇರುವುದರಿಂದ ನಾನು ಮತ್ತು ಅಣ್ಣ ಹಾಸನಕ್ಕೆ ಹೋಗುತ್ತಿದ್ದೇವೆ’ ಎಂದಾಗ ನನ್ನ ಮನಸ್ಸು ನಿರಾಳವಾಯಿತು. ಸಾವರಿಸಿಕೊಂಡು ಹ್ಯಾಪಿ ಜರ್ನಿ ಹೇಳುತ್ತಾ ನನ್ನ ಸ್ಟಾಪ್‌ನಲ್ಲಿ ಇಳಿದೆ. ಇದೇ ಕಾರಣಕ್ಕೆ ಹಿರಿಯರು ಹೇಳಿರಬಹುದು, “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂದು.                                                     

– ಅಶೋಕ್‌ ಕುಲಾಲ್‌ ಬಂಟ್ವಾಳ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲ: ರಾಮಲಿಂಗ ರೆಡ್ಡಿ

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲ: ರಾಮಲಿಂಗ ರೆಡ್ಡಿ

ನಿಗದಿತ ಮುನ್ನೆಚ್ಚರಿಕೆಯೊಂದಿಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ: ಬಿಎಸ್ ವೈ ಸೂಚನೆ

ನಿಗದಿತ ಮುನ್ನೆಚ್ಚರಿಕೆಯೊಂದಿಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ: ಬಿಎಸ್ ವೈ ಸೂಚನೆ

ಶೃಂಗೇರಿ ಶಾರದಾಂಭೆ ದೇಗುಲದಲ್ಲೂ ಸದ್ಯಕ್ಕೆ ಭಕ್ತರಿಗೆ ದರ್ಶನ ಭಾಗ್ಯವಿಲ್ಲ!

ಶೃಂಗೇರಿ ಶಾರದಾಂಭೆ ದೇಗುಲದಲ್ಲೂ ಸದ್ಯಕ್ಕೆ ಭಕ್ತರಿಗೆ ದರ್ಶನ ಭಾಗ್ಯವಿಲ್ಲ!

ಚಿಕ್ಕಮಗಳೂರು ಜಿಲ್ಲೆ ಮತ್ತೆ ಕೋವಿಡ್-19 ಸೋಂಕು ಮುಕ್ತ

ಚಿಕ್ಕಮಗಳೂರು ಜಿಲ್ಲೆ ಮತ್ತೆ ಕೋವಿಡ್-19 ಸೋಂಕು ಮುಕ್ತ

ಮನೆ ಆಳು, ಬಾಡಿಗಾರ್ಡ್ಸ್ ಗೂ ಆಸರೆ…ಮುತ್ತಪ್ಪ ರೈ ಬರೆದಿಟ್ಟ 40 ಪುಟಗಳ ವಿಲ್ ವಿವರ ಬಹಿರಂಗ

ಮನೆ ಆಳು, ಬಾಡಿಗಾರ್ಡ್ಸ್ ಗೂ ಆಸರೆ…ಮುತ್ತಪ್ಪ ರೈ ಬರೆದಿಟ್ಟ 40 ಪುಟಗಳ ವಿಲ್ ವಿವರ ಬಹಿರಂಗ!

ಐಪಿಎಲ್ ಗಿಂತ ಪಿಎಸ್ ಎಲ್ ನಲ್ಲಿ ಉತ್ತಮ ಬೌಲರ್ ಗಳಿದ್ದಾರೆ: ವಾಸೀಂ ಅಕ್ರಮ್

ಐಪಿಎಲ್ ಗಿಂತ ಪಿಎಸ್ ಎಲ್ ನಲ್ಲಿ ಉತ್ತಮ ಬೌಲರ್ ಗಳಿದ್ದಾರೆ: ವಾಸೀಂ ಅಕ್ರಮ್

ಕೋವಿಡ್ 19 ಎಫೆಕ್ಟ್:ಮಹಾರಾಷ್ಟ್ರದಲ್ಲಿ ಎಷ್ಟು ಲಕ್ಷ ಜನ ಕ್ವಾರಂಟೈನ್ ನಲ್ಲಿ ಇದ್ದಾರೆ ಗೊತ್ತಾ

ಕೋವಿಡ್ 19 ಎಫೆಕ್ಟ್:ಮಹಾರಾಷ್ಟ್ರದಲ್ಲಿ ಎಷ್ಟು ಲಕ್ಷ ಜನ ಕ್ವಾರಂಟೈನ್ ನಲ್ಲಿ ಇದ್ದಾರೆ ಗೊತ್ತಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

khanapura

ಶಿಕ್ಷಕರು ಬಂದರು ಓಡಿ ಬನ್ನಿ…

o manasse

ಮನವನು ಕೆಡಿಸಿಕೊಳ್ಳಬೇಡಿ…

krish radha

ರಾಧೆಯ ಸ್ವಗತ

artha-tili

ಅರ್ಥ ತಿಳಿದವನೊಬ್ಬನೇ…

sirname-pexhara

ಸರ್‌ನೇಮ್‌ ಪೇಚಾಟ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

06-June-11

ಹೊಸ ಮದ್ಯದಂಗಡಿಗೆ ಅನುಮತಿ ಬೇಡ

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲ: ರಾಮಲಿಂಗ ರೆಡ್ಡಿ

ವಲಸೆ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವಲ್ಲಿ ಸರ್ಕಾರ, ಬಿಬಿಎಂಪಿ ವಿಫಲ: ರಾಮಲಿಂಗ ರೆಡ್ಡಿ

ನಿಗದಿತ ಮುನ್ನೆಚ್ಚರಿಕೆಯೊಂದಿಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ: ಬಿಎಸ್ ವೈ ಸೂಚನೆ

ನಿಗದಿತ ಮುನ್ನೆಚ್ಚರಿಕೆಯೊಂದಿಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಿರಿ: ಬಿಎಸ್ ವೈ ಸೂಚನೆ

06-June-10

ಕೋವಿಡ್ ಟೆಸ್ಟಿಂಗ್ ‌ಲ್ಯಾಬ್‌ಗೆ ಚಾಲನೆ

ಶೃಂಗೇರಿ ಶಾರದಾಂಭೆ ದೇಗುಲದಲ್ಲೂ ಸದ್ಯಕ್ಕೆ ಭಕ್ತರಿಗೆ ದರ್ಶನ ಭಾಗ್ಯವಿಲ್ಲ!

ಶೃಂಗೇರಿ ಶಾರದಾಂಭೆ ದೇಗುಲದಲ್ಲೂ ಸದ್ಯಕ್ಕೆ ಭಕ್ತರಿಗೆ ದರ್ಶನ ಭಾಗ್ಯವಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.