Udayavni Special

ಹೇಳಿ ಹೋಗು ಕಾರಣ

Team Udayavani, Jul 23, 2019, 5:00 AM IST

i-18

ಆ ದಿನ ನನಗೆ ಸರಿಯಾಗಿ ನೆನಪಿದೆ. ಸ್ನೇಹಿತನ ಮದುವೆಗೆ ಅಂತ ನಾನು ಬಳ್ಳಾರಿಯಿಂದ ದೂರದ ಮಂಗಳೂರಿಗೆ ಬಂದಿದ್ದೆ. ಅವತ್ತೇ ನಾನು ನಿನ್ನ ಮೊದಲು ನೋಡಿದ್ದು. ವಧುವಿನ ಜೊತೆ ಮದುಮಗಳಂತೆಯೇ ಸಿಂಗಾರಗೊಂಡ ನಿನ್ನ ಸೌಂದರ್ಯಕ್ಕೆ ಆ ಕ್ಷಣದಲ್ಲೇ ಶರಣಾಗಿಬಿಟ್ಟೆ. ನಿನ್ನ ಕೋಗಿಲೆ ಧ್ವನಿ, ಕಮಲದಂಥ‌ ಕಣ್ಣುಗಳು, ನಾಜೂಕು ನಡಿಗೆ, ಅಬ್ಟಾ, ಅದೆಷ್ಟು ಚೆಂದ ಕಾಣ್ತಿದ್ದೆ ಗೊತ್ತಾ ನೀನು? ಮದುವೆ ಮನೇಲಿದ್ರೂ ಯಾವುದೇ ಗಲಾಟೆ,, ಗೋಜು ನನ್ನ ಅರಿವಿಗೆ ಬರಲೇ ಇಲ್ಲ. ಯಾಕಂದ್ರೆ ಆ ಹೊತ್ತಿಗಾಗಲೇ ನೀ ನನ್ನನ್ನು ಸಂಪೂರ್ಣವಾಗಿ ಆವರಿಸಿಬಿಟ್ಟಿದ್ದೆ.

ಸ್ನೇಹಿತರ ಸಹಾಯದಿಂದ ಹೇಗೋ ನಿನ್ನ ಮೊಬೈಲ್‌ ನಂಬರ್‌ ಪತ್ತೆ ಹಚ್ಚಿದ್ದೇ ನಂಗೆ ಆವತ್ತಿಗೆ ದೊಡ್ಡ ಸಾಧನೆ ಅನಿಸಿದ್ದು ಸುಳ್ಳಲ್ಲ. ಸ್ವಲ್ಪ ಹೆಚ್ಚೇ ಮೃದು ಸ್ವಭಾವದ ನಾನು ಬರೋಬ್ಬರಿ ಒಂದು ವಾರ ಯೋಚನೆ ಮಾಡಿ ಅಳೆದು, ತೂಗಿ ಕೊನೆಗೂ ಒಂದು ದಿನ Hai ಅಂತ ಸಂದೇಶ ಕಳಿಸೇ ಬಿಟ್ಟೆ. ಆವಾಗ ಶುರುವಾಯಿತು ನೋಡು ನನ್ನ ಫ‌ಜೀತಿ. ಆಮೇಲೆ ನಾನು ಪಟ್ಟ ಪಾಡು ನೆನಸ್ಕೊಂಡ್ರೆ ನಗು ಬರುತ್ತೆ. ಇದೆಲ್ಲಾ ಆಗಿ ಎರಡನೇ ದಿನ ಬೆಳಗ್ಗೆ ಎದ್ದು ಮೊಬೈಲ್‌ ನೋಡಿದ್ರೆ ಆ ಕಡೆಯಿಂದ Hai ಅಂತ ನೀನು ಕಳ್ಸಿರೋ ಮೆಸೇಜ್ ಅವತ್ತು ಪ್ರಪಂಚವನ್ನೇ ಗೆದ್ದ ಖುಷಿ ನಂದಾಗಿತ್ತು. ಅದೆಷ್ಟು ಸಾರಿ ಆ ಮೆಸೇಜನ್ನು ಓದಿದೆನೋ…!

ಅಲ್ಲಿಂದ ಶುರುವಾದ ನಮ್ಮ ಸ್ನೇಹ, ಎಷ್ಟು ಬೇಗ ಪ್ರೀತಿ ಅಂತ ಹೆಸರು ಬದಲಾಯಿಸಿಕೊಳ್ಳು ಅಂತ ನನಗೆ ಇವತ್ತಿಗೂ ಆಶ್ಚರ್ಯ ಆಗುತ್ತೆ. ಬಯಲುಸೀಮೆಯ ನನಗೂ ಕಡಲತೀರದ ನಿನಗೂ ಈ ಪ್ರೀತಿಯನ್ನೋ ಮಾಯೆ ಬೆಸುಗೆ ಹಾಕಿಬಿಟ್ಟಿತ್ತು. ಒಂದು ದಿನ ನಿನ್ನ Call ಬರ್ದಿದ್ರೂ ಏನೋ ಕಳೆದುಕೊಂಡ ಭಾವ ನನ್ನ ಕಾಡ್ತಿತ್ತು. ಆದ್ರೆ ನೀನು ಆಥರಾ ಯಾವತ್ತೂ ಮಾಡಿಲ್ಲ Call ಮಾಡೋಕಾಗ್ದೇ ಇದ್ರು ಕಡೇಪಕ್ಷ ಮೆಸೇಜ್‌ ಮಾಡಿ ನನ್ನನ್ನು ಸಮಾಧಾನ ಮಾಡ್ತಿದ್ದೆ. ಆಗ ನಿಜವಾಗಲೂ ನಿನ್ನಲ್ಲಿ ಒಬ್ಬ ತಾಯಿನ ಕಂಡಿದ್ದೆ.

ಅಷ್ಟೊಂದು ಪ್ರೀತಿಸುತ್ತಿದ್ದ ನೀನು ಇದ್ದಕ್ಕಿದ್ದ ಹಾಗೆ ಮೆಸೇಜ್‌ ಮಾಡೋದು ನಿಲ್ಲಿಸಿಬಿಟ್ಟೆ. ಇವತ್ತಿಗೆ ನೀನು ನನ್ನಿಂದ ದೂರ ಆಗಿ ಒಂದು ವರ್ಷ ಆಯ್ತು. ಬಲವಂತವಾಗಿ ಯಾವುದನ್ನೇ ಪಡೆದರೂ ಅದು ಕೊನೆಯವರೆಗೂ ಉಳಿಯಲ್ಲ ಅನ್ನೋದು ನನ್ನ ನಂಬಿಕೆ. ಅದಕ್ಕೇ ನಾನು ನಿನ್ನನ್ನು ಯಾವುದಕ್ಕೂ ಒತ್ತಾಯ ಮಾಡಲ್ಲ. ಆದ್ರೆ ಇದೊಂದನ್ನು ಮಾತ್ರ ಕೇಳ್ತೀನಿ: ಎದ್ದು ಹೋದೆ ಸರಿ. ಆದ್ರೆ ಯಾಕೆ ಹೀಗೆ ಮಾಡಿದೆ? ಸಾಧ್ಯ ಆದ್ರೆ – “ಹೇಳಿ ಹೋಗು ಕಾರಣ’.

ನಿನ್ನದೇ ಗುಂಗಿನ…….
ಶಂಕರ ನವಲೆ ಮಧುಗಿರಿ.

ಟಾಪ್ ನ್ಯೂಸ್

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಅನಾರೋಗ್ಯದಿಂದ ದೆಹಲಿಯ ಉದ್ಯಾನವನದಲ್ಲಿದ್ದ 7 ವರ್ಷದ ಸಿಂಹ ಸಾವು

ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಇಲ್ಲಿ ಪ್ರತಿಯೊಂದು ಕೂಡ ಬಹಳ ಮುಖ್ಯ

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್‌

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಮಾಲ್ಡೀವ್ಸ್‌ ನಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿದ ಬೆಂಗಳೂರು ಎಫ್ಸಿ

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಬೆಲೆ ನಿಯಂತ್ರಣಕ್ಕೆ ತೆರಿಗೆ ವಿಧಿಸಿದ್ದೇವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

ರಕ್ಷಣಾ ಇಲಾಖೆ, ಬ್ಯಾಂಕುಗಳಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.