ಅರಮನೆಯ ಔತಣ

Team Udayavani, Aug 6, 2019, 5:00 AM IST

napoleon-bonaparte1

ಹೈಸ್ಕೂಲಿನಲ್ಲಿ ಜ್ಞಾನ ಕಲಿತವರಿಗೆಲ್ಲ ಆಂಪಿಯರ್‌ ಎಂಬ ಹೆಸರು ಗೊತ್ತಿರುತ್ತದೆ. ಎಲೆಕ್ಟ್ರಿಕ್‌ ಕರೆಂಟ್‌ ಅನ್ನು ಆಂಪಿಯರ್‌ಗಳಲ್ಲಿ ಅಳೆಯುತ್ತಾರೆ. ಆಂಪಿಯರ್‌ ಎಂಬುದು ಪ್ರಸಿದ್ಧ ಭೌತಜ್ಞಾನಿಯ ಹೆಸರು ಕೂಡ. ಆಂಪಿಯರ್‌ ಎಂಬ ಮಾನ (ಯುನಿಟ್‌) ಹುಟ್ಟಿದ್ದು ಅವನಿಂದಾಗಿಯೇ.

ಬಹುತೇಕ ಎಲ್ಲ ವಿಜ್ಞಾನಿಗಳಂತೆ ಆಂಪಿಯರ್‌ ಕೂಡ ಅನ್ಯಮನಸ್ಕ. ಅಂದರೆ, ಅವನಿಗೆ ಲೌಕಿಕ ಜಗತ್ತಿನ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಹೆಚ್ಚು ಗಮನ ಇರಲಿಲ್ಲ. ಊಟ, ನಿದ್ದೆ, ಸ್ನಾನ, ಅಲಂಕಾರಗಳಂಥ ವಿಷಯಗಳಲ್ಲಿ ಅವನಿಗೆ ಆಸಕ್ತಿಯೇ ಇರಲಿಲ್ಲ. ಮನೆಯಲ್ಲಿ ಅವನ ಕೈಯಲ್ಲಿ ಹತ್ತು ರುಪಾಯಿ ಇಟ್ಟು ಮಾರ್ಕೆಟ್ಟಿಗೆ ಹೋಗಿ ಕೊತ್ತಂಬರಿ ಸೊಪ್ಪು ತಗೊಂಡು ಬನ್ನಿ ಎಂದರೆ ಆತ ಅದರಲ್ಲಿ ಹತ್ತು ಚಾಕೊಲೇಟ್‌ ಕೊಂಡು ಮೈದಾನದಲ್ಲಿ ಆಡುವ ಮಕ್ಕಳಿಗೆ ಹಂಚಿಬಿಡುತ್ತಿದ್ದ. ಇಂಥ ಪೊ›ಫೆಸರ್‌ ಹುಚ್ಚಾರಾಯ ವಿಜ್ಞಾನದ ವಿಷಯಕ್ಕೆ ಬಂದಾಗ ಮಾತ್ರ ಅದ್ಭುತ ಸಾಧನೆಗಳನ್ನು ಮಾಡುತ್ತಿದ್ದ. ವಿದ್ಯುತ್ತಿನ ವಿಚಾರದಲ್ಲಿ ಅವನ ಸಂಶೋಧನೆಗಳು ಉನ್ನತ ಮಟ್ಟದವು.

ಅದೊಂದು ದಿನ ಪ್ಯಾರಿಸ್‌ ಅಕಾಡೆಮಿಗೆ ನೆಪೋಲಿಯನ್‌ ಬಂದ. ನೆಪೋಲಿಯನ್‌ಗೆ ವಿಜ್ಞಾನಿಗಳು, ಗಣಿತಜ್ಞರು ಎಂದರೆ ವಿಚಿತ್ರ ಆಸಕ್ತಿ. ಪಂಡಿತರನ್ನು ಮಾತಾಡಿಸುವುದು, ಅವರ ಜೊತೆ ಚರ್ಚೆ ನಡೆಸುವುದು ಅವನ ಖಯಾಲಿಗಳಲ್ಲೊಂದು. ಪ್ಯಾರಿಸ್‌ ಅಕಾಡೆಮಿಯಲ್ಲಿ ಉಳಿದೆಲ್ಲ ಪಂಡಿತರನ್ನು ಮಾತಾಡಿಸಿ ನೆಪೋಲಿಯನ್‌ ಆಂಪಿಯರ್‌ನ ಕೊಠಡಿಗೆ ಬಂದ. ಬಂದು ನಿಂತಾಗ ಆಂಪಿಯರ್‌ಗೆ ಆತನ ಗುರುತೇ ಹತ್ತಲಿಲ್ಲ. ನಾನು ನೆಪೋಲಿಯನ್‌ ಎಂದು ಪರಿಚುಸಿಕೊಂಡಾಗ ಓಹ್‌! ಓಹ್‌! ನೀವಾ! ಬನ್ನಿ ಬನ್ನಿ ಎಂದು ಗೌರವಾದರಗಳಿಂದ ಸ್ವಾಗತಿಸಿದ ಆಂಪಿಯರ್‌. ನಮ್ಮ ದೇಶದ ಪ್ರಸಿದ್ಧ ಪಂಡಿತರಿಗೆ ದೇಶದ ರಾಜನ ಪರಿಚಯವೇ ಇಲ್ಲವಲ್ಲ! ಆಂಪಿಯರ್‌ ಅವರೇ, ನಾಳೆ ಅರಮನೆಗೆ ಮಧ್ಯಾಹ್ನದ ಭೊಜನಕ್ಕೆ ಬನ್ನಿ. ಇದು ನನ್ನ ವಿಶೇಷ ಆಮಂತ್ರಣ. ನಾವಿಬ್ಬರು ಸ್ವಲ್ಪ ಹೆಚ್ಚು ಹೊತ್ತು ಜೊತೆಯಾಗಿ ಕಳೆದರೆ ನನ್ನ ಮುಖಪರಿಚಯ ನಿಮಗೆ ಮನಸ್ಸಿನಲ್ಲಿ ಉಳಿಯಬಹುದು ಎಂದ ನೆಪೋಲಿಯನ್‌. ರಾಜನ ಜೊತೆ ಭೋಜನಕ್ಕೆ ಆಮಂತ್ರಣ ಎಂದರೆ ಸಾಮಾನ್ಯವೇ! ಓಹ್‌! ಖಂಡಿತ! ಖಂಡಿತ! ಎಂದ ಆಂಪಿಯರ್‌.

ಮರುದಿನ ಏನಾಯ್ತು ಗೊತ್ತಲ್ಲ? ಸಂಜೆಯವರೆಗೂ ಪ್ರಯೋಗಶಾಲೆಯಲ್ಲೇ ಇದ್ದ ಆಂಪಿಯರ್‌ಗೆ ಭೋಜನದ ನೆನಪಾದದ್ದು ಯಾರೋ ಬಂದು ಅರಮನೆ ಊಟ ಹೇಗಿತ್ತು? ಎಂದು ಕೇಳಿದಾಗಲೇ!

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.