ಜಿ.ಎಸ್‌.ಟಿ.ಯಿಂದ ಕಂಪನಿ ಸೆಕ್ರೆಟರಿಗಳಿಗೆ ಶುರುವಾಗಿದೆ ಶುಕ್ರದೆಸೆ


Team Udayavani, May 9, 2017, 3:45 AM IST

08-JOSH-5.jpg

ಬದಲಾವಣೆ ಜಗದ ನಿಯಮ ಎನ್ನುವಂತೆ ತೆರಿಗೆ ಪದ್ಧತಿಯಲ್ಲಿ ಬದಲಾವಣೆಯನ್ನು ಮುಂದಿನ ದಿನಗಳಲ್ಲಿ ಕಾಣಲಿದ್ದೇವೆ. ಬಹು ನಿರೀಕ್ಷಿತ ಮಸೂದೆಯಾದ ಜಿ.ಎಸ್‌.ಟಿ. ಸಂಸತ್ತಿನಲ್ಲಿ ಅಂಗೀಕೃತಗೊಂಡು ಈಗ ರಾಷ್ಟ್ರಪತಿಗಳ ಅಂಕಿತದೊಂದಿಗೆ ಕಾಯ್ದೆಯಾಗಿ ಜಾರಿಯಾಗುವುದನ್ನು ಎಲ್ಲರೂ ಕಾಯುತ್ತಿದ್ದಾರೆ. ಜುಲೈ 1ರಿಂದ ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜಿ.ಎಸ್‌.ಟಿ.(Goods and Service Ta) ಪದ್ಧತಿಯಿಂದ ದೇಶದ ಆರ್ಥಿಕತೆಗೆ ಬಲ ತುಂಬುವುದರ ಜೊತೆಗೆ ಉದ್ಯೋಗಾವಕಾಶಕ್ಕೂ ದಾರಿ ಮಾಡಿಕೊಡಲಿದೆ. ಅದರಲ್ಲೂ ಕಂಪನಿ ಸೆಕ್ರೆಟರಿಗಳ ಮಹತ್ವ ಹಚ್ಚಾಗಲಿದೆ.

ಜಿ.ಎಸ್‌.ಟಿ. ಹೊಸ ತೆರಿಗೆ ಪದ್ಧತಿಯಿಂದ ಕಂಪನಿ ಸೆಕ್ರೆಟರಿಗಳ ಹುದ್ದೆಯು ಮುಂದಿನ ದಿನಮಾನಗಳಲ್ಲಿ ಬಹುಬೇಡಿಕೆಯ ವೃತ್ತಿಯಾಗಲಿದೆ. ಹಾಗಾಗಿ ಇಂತಹ ವೃತ್ತಿಯ ಕಡೆಗೆ ಸ್ವಲ್ಪ ಗಮನಹರಿಸುವುದು ಒಳಿತು. ಯಾವುದೇ ವೃತ್ತಿ ಆರಂಭಿಸಲು ಹಲವು ದಿನಗಳ ಅಧ್ಯಯನ ಮತ್ತು ತರಬೇತಿಯ ಅವಶ್ಯಕತೆ ಇದೆ. ಹಾಗೆಯೇ ಅಧಿಕೃತ ಹಾಗೂ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಅಧ್ಯಯನ ಹಾಗೂ ತರಬೇತಿಯ ನಂತರ ಪಡೆಯುವ ಕೋರ್ಸ್‌ ಪ್ರಮಾಣಪತ್ರವು, ಕಂಪನಿ ಸೆಕ್ರೆಟರಿಯಾಗಲು ಅವಕಾಶ ನೀಡುತ್ತದೆ. ಭಾರತೀಯ ಕಂಪನಿ ಸೆಕ್ರೆಟರಿಗಳ ಸಂಸ್ಥೆ MATM(Mq||O|h  si  Asptbq¦  Thewh|bwh si Mqgb) ಈ ಸಂಸ್ಥೆಗೆ ನೊಂದಾಯಿಸಿಕೊಳ್ಳುವ ಮುಖಾಂತರ ಈ ಹುದ್ದೆಗೆ ಬೇಕಾಗುವ ಪದವಿಯನ್ನು ಪಡೆಯಬಹುದು.

ಈ ಪದವಿ ಪಡೆಯಲು ಮೂರು ಹಂತದ ಕೋರ್ಸ್‌ಗಳಿವೆ.

*ಫೌಂಡೇಶನ್‌ ಪ್ರೋಗ್ರಾಂ- ಪಿ.ಯು. ಪಾಸಾದವರು ಅಥವಾ ಈ ವರ್ಷ ದ್ವಿತೀಯ ಪಿ.ಯು.ಪರೀಕ್ಷೆ ಬರೆಯುವವರು ಈ ಕೋರ್ಸ್‌ಗೆ ಸೇರಿಕೊಳ್ಳಬಹುದು.)
*ಪ್ರೊಫೆಷನಲ್‌ ಪ್ರೋಗ್ರಾಂ
*ಎಕ್ಸಿಕ್ಯುಟಿವ್‌ ಪ್ರೋಗ್ರಾಂ- ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದವರು, ಅಥವಾ ಈಗ ಕೊನೆಯ ವರ್ಷದ ಪದವಿ ಓದುತ್ತಿರುವವರು ಈ ಕೋರ್ಸ್‌ಗೆ ಸೇರಬಹುದು.

ಈ ಕೋರ್ಸ್‌ ಡಿಸ್ಟನ್ಸ್‌ ಎಜುಕೇಶನ್‌ ರೀತಿ ಇರುತ್ತದೆ. ಹೆಚ್ಚಿನ ಮಾಹಿತಿಯನ್ನು ಈ ವೆಬ್‌ಸೈಟ್‌ ವಿಳಾಸದಿಂದ ಪಡೆಯಬಹುದು.(£££.e.hgO) ಈ ಕೋರ್ಸ್‌ಗೆ ಸಂಬಂಧಿಸಿದಂತೆ ಹಲವು ಮಾಹಿತಿ ತಿಳಿಯಲು ಐ.ಸಿ.ಎಸ್‌.ಐ. ಅಧ್ಯಕ್ಷರಾದ ಮಮತಾ ಬಿನಾನಿಯವರ ವಿಡಿಯೋ ಸಂದರ್ಶನ ನೋಡಬಹುದು.||t://£££.k¦d¨.|ñ/MATM&Pwhghq|&Jbp|b&@qbq/204929
ಈ ಮೂರು ಹಂತಗಳ ಜೊತೆಗೆ 15 ತಿಂಗಳ ವ್ಯಾವಹಾರಿಕ ತರಬೇತಿ(Pwbe|ebo UwbqqÃ) ಪಡೆಯುವುದು ಅವಶ್ಯ. ಈ ಅವಧಿಯಲ್ಲಿ ಕಾರ್ಪೊರೇಟ್‌ ಕಂಪನಿಗಳಲ್ಲಿ, ಬ್ಯಾಂಕ್‌ಗಳಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪಡೆಯಬೇಕಾಗುತ್ತದೆ.(ಮೂರು ಹಂತದ ಕೋರ್ಸ್‌ಗಳಲ್ಲಿ ಯಾವುದೇ ಹಂತದ ಕೋರ್ಸ್‌ ಮಧ್ಯದಲ್ಲಿ ಈ ತರಬೇತಿ ಪಡೆಯಬಹುದು.)
ಈ ಕೋರ್ಸ್‌ನಲ್ಲಿ ಕಂಪನಿ ಕಾಯ್ದೆಗಳ ಬಗ್ಗೆ, ಹಣಕಾಸು ನಿಯಮಗಳ ಬಗ್ಗೆ, ಹಣಕಾಸು ಕಾಯ್ದೆ, ಬ್ಯಾಂಕಿಂಗ್‌ ಕಾಯ್ದೆ, ತೆರಿಗೆಗಳ ಬಗ್ಗೆ, ಅಕೌಂಟ್ಸ್‌, ಕಾಸ್ಟಿಂಗ್‌ ಹಾಗೂ ಹಣಕಾಸು ನಿರ್ವಹಣೆ ಬಗ್ಗೆ, ಜಾಗತಿಕ ವ್ಯಾಪಾರ ಒಕ್ಕೂಟದ(UL) ನಿಯಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಒಟ್ಟಾರೆಯಾಗಿ, ಒಂದು ಕಾರ್ಪೊರೇಟ್‌ ಕಂಪನಿಯ ಸಮರ್ಥ ಕಂಪನಿ ಸೆಕ್ರೆಟರಿಯಾಗುವ ಅರ್ಹತೆ ಪಡೆಯಲು ಬೇಕಾಗುವ ತರಬೇತಿಯನ್ನು ನೀಡಲಾಗುತ್ತದೆ.

ಕಂಪನಿಗಳ ಸೆಕ್ರೆಟರಿಗಳು ಆಡಿಟ್‌ಗಳನ್ನು ನಿರ್ವಹಿಸುವುದಲ್ಲದೇ ಜಿ.ಎಸ್‌.ಟಿ. ರಚಿಸುವ ಪ್ರಾಧಿಕಾರ ಹಾಗೂ ಅಪಲೈಟ್‌ ಟ್ರಿಬ್ಯುನಲ್‌(ítthoob|h UwdOqbo) ಗಳಲ್ಲಿ ತಮ್ಮ ವಾದ ಮಂಡಿಸಬಹುದಾಗಿದೆ. ಕಂಪನಿ ಸೆಕ್ರೆಟರಿಗಳು ಕಂಪನಿಗಳನ್ನು ಪ್ರತಿನಿಧಿಸುವ ಕಾರಣ ಪ್ರಕರಣಗಳು ಬೇಗ ಇತ್ಯರ್ಥಗೊಂಡು ಕಂಪನಿಗಳಿಗೆ ಸಹಾಯವಾಗಲಿದೆ.
ದೇಶದಲ್ಲಿ ಈಗ ಆದಾಯ ಘೋಷಣೆ ಯೋಜನೆ ಹಾಗೂ ರಿಯಲ್‌ ಎಸ್ಟೇಟ್‌ ಕಾನೂನುಗಳು, ಅಲ್ಲದೇ ನವಂಬರ್‌ 8ರಿಂದ ಕೇಂದ್ರ ಸರ್ಕಾರವು ಕಪ್ಪು ಹಣ ನಿಯಂತ್ರಣಕ್ಕಾಗಿ ಹಳೆಯ ರೂ. 500 ಹಾಗೂ ರೂ. 1000ದ ನೋಟುಗಳನ್ನು ಹಿಂಪಡೆದ ಕಾರಣ ಮತ್ತು ಆದಾಯ ಇಲಾಖೆಯಿಂದ ವಿವರಣೆಗಾಗಿ ಬಹಳಷ್ಟು ಜನರಿಗೆ ನೋಟಿಸ್‌ಗಳು ಬರಬಹುದು. ಇವೆಲ್ಲದರಿಂದಾಗಿ ಕಂಪನಿ ಸೆಕ್ರೆಟರಿಗಳ ಕೆಲಸ ಹೆಚ್ಚುವುದಲ್ಲದೆ, ಅವರಿಗೆ ಬೇಡಿಕೆಯೂ ಹೆಚ್ಚಾಗಲಿದೆ. 

ಜೆ.ಸಿ.ಜಾಧವ, ಗಂಗಾವತಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.