ಬ್ಯಾಗ್‌ ಕೊಟ್ಟ ಮಹಾನುಭಾವ

Team Udayavani, Oct 29, 2019, 4:25 AM IST

ನಾನು ಆಗ ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎ ಪರೀಕ್ಷೆ ತೆಗೆದುಕೊಂಡಿದ್ದೆ. ಪರೀಕ್ಷೆ ಬರೆಯಲು, ನಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಪ್ರತಿನಿತ್ಯ ಓಡಾಡುತ್ತಿದ್ದೆ. ಹೀಗಿರುವಾಗ, ಮೂರನೇ ಪತ್ರಿಕೆ ಇದ್ದ ದಿನ ಆವತ್ತು ಹಾವೇರಿ ಜಿಲ್ಲೆಯಾದ್ಯಂತ ರಸಗೊಬ್ಬರಕ್ಕಾಗಿ ರೈತರು ಹೋರಾಟವನ್ನು ಮಾಡುತ್ತಿದ್ದರು.ನಾನು ಪ್ರಯಾಣಿಸುತ್ತಿದ್ದ ಬಸ್‌ ಶಿಗ್ಗಾವಿಯನ್ನು ಆಗತಾನೇ ತಲುಪಿತ್ತು. ನೂರಾರು ವಾಹನಗಳು ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದವು. ಇನ್ನೂ ನಿಧಾನ ಆಗಬಹುದು ಅಂತ ನಾನು, ವಾಹನಗಳು ಎಷ್ಟು ದೂರದವರೆಗೆ ನಿಂತಿವೆ? ಟ್ರಾಫಿಕ್‌ ಕ್ಲಿಯರ್‌ ಆಗಲು ಎಷ್ಟು ಸಮಯವಾಗಬಹುದೆಂದು ತಿಳಿಯಲು ಬಸ್‌ನಿಂದ ಕೆಳಗೆ ಇಳಿದೆ. ಹತ್ತು ನಿಮಿಷಗಳಲ್ಲಿ ಟ್ರಾಫಿಕ್‌ ಕ್ಲಿಯರ್‌ ಆಯ್ತು. ವಾಪಸ್‌ ಓಡಿ ಬಂದು ನಮ್ಮ ಬಸ್‌ ಎಲ್ಲಿ ಅಂತ ನೋಡ್ತೀನಿ, ಕಾಣ್ತಾನೇ ಇಲ್ಲ. ಮೈ ಬೆವರ ತೊಡಗಿತು. ಬಸ್‌ ನಂಬರ್‌ ಬೇರೆ ಬರೆದು ಕೊಂಡಿಲ್ಲ. ಏನು ಮಾಡುವುದು? ಸಿಕ್ಕ ಸಿಕ್ಕವರನ್ನು ಕೇಳಿದೆ. ಬಸ್ಟ್ಯಾಂಡಿಗೆ ಬೇಗ ಹೋಗಿ, ಸಿಗಬಹುದು ಎಂದರು. ಆಟೋದಲ್ಲಿ ಬಸ್ಟ್ಯಾಂಡಿಗೆ ಹೋದರೆ, ಅಲ್ಲಿ ಈಗ ತಾನೇ ಹೊರಟು ಹೋಯ್ತು ಎಂಬ ಉತ್ತರ ಸಿಕ್ಕಿತು. ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ, ಮತ್ತೂಂದು ಬಸ್‌ ಹತ್ತಿದೆ. ನಿರ್ವಾಹಕನಿಗೆ ನಡೆದ ಘಟನೆಯನ್ನು ತಿಳಿಸಿದೆ. ಡ್ರೈವರ್‌ ಬಳಿ ನಡೆದು ವೇಗವಾಗಿ ಬಸ್‌ ಓಡಿಸಲು ವಿನಂತಿಸಿದೆ. ನನ್ನ ಮನವಿಗೆ ಬೆಲೆ ಕೊಟ್ಟ ಡ್ರೈವರ್‌ ಅಣ್ಣ ವೇಗವಾಗಿ ಬಸ್‌ನ ಓಡಿಸಿ, ಹುಬ್ಬಳ್ಳಿಯ ಹಳೆ ಬಸ್ಟಾಂಡ್‌ಗೆ ತಲುಪಿಸಿದರು. ಲಗುಬಗನೇ ಕೆಳಗಿಳಿದು ಮೊದಲು ಹತ್ತಿದ್ದ ಬಸ್‌ ಅನ್ನು ಹುಡುಕಾಡಿದೆ. ಕೆಲವೇ ನಿಮಿಷಗಳ ಹಿಂದೆ ನಿರ್ಗಮಿಸಿತು ಅಂದರು. ಬರಸಿಡಿಲು ಬಡಿದಂತಾಯಿತು. ಅದೇ ಸಮಯದಲಿ, ಒಬ್ಬ ಮಹಿಳಾ ಪೊಲೀಸ್‌ ಪೇದೆಯ ಕೈಯಲ್ಲಿ ನನ್ನ ಬ್ಯಾಗ… ಕಾಣಿಸಿತು.

ಹೋದ ಜೀವ ಮರಳಿ ಬಂದಂತಾಗಿ ಓಡೋಡಿ ಹೋಗಿ,’ಮೇಡಮ್‌ ಇದು ನನ್ನ ಬ್ಯಾಗ… ಅಂದೆ. “ಹೌದಾ!ಕೆಲವು ನಿಮಿಷಗಳ ಹಿಂದೆ,ಒಬ್ಬ ಪ್ರಯಾಣಿಕ ಇದನ್ನು ಕೊಟ್ಟು,ಸಂಬಂಧಿಸಿದವರಿಗೆ ಕೊಡಿ ಎಂದು ಹೇಳಿ ಹೋದ’ ಅಂದರು.

ಬ್ಯಾಗಿನೊಳಗಿರುವ ಆಧಾರ್‌ ಕಾರ್ಡ್‌,ಬ್ಯಾಂಕ್‌ ಪಾಸ್‌ಬುಕ್‌,ಹಾಲ… ಟಿಕೆಟ್‌, 2 ಸಾವಿರ ರೂ.ಬಗ್ಗೆ ಮಾಹಿತಿ ಹೇಳಿದೆ. ಖಚಿತಪಡಿಸಿಕೊಂಡು, ನನ್ನ ಕೈ ಗೆ ಬ್ಯಾಗ್‌ ನೀಡಿದರು. ಬ್ಯಾಗ್‌ ಸಿಕ್ಕ ಖುಷಿಗಿಂತ “ಆಪದಾºಂಧವ’ನಾಗಿ ನನ್ನ ಬ್ಯಾಗನ್ನು ಹಿಂತಿರುಗಿಸಿದ ಆ ವ್ಯಕ್ತಿಗೆ ದೊಡ್ಡ ನಮಸ್ಕಾರ ಹಾಕಿದೆ. ಈಗಲೂ ಅವರ ನೆರವನ್ನು ನೆನಪಿಸಿಕೊಳ್ಳುತ್ತೇನೆ.

ಮಲ್ಲಪ್ಪ ಫ‌. ಕರೇಣ್ಣನವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಮಂತಿಕೆ ಪ್ರದರ್ಶನದ ಸೋಗಿನಲ್ಲಿ ಅಗತ್ಯವಿಲ್ಲದಿದ್ದರೂ ಸಭೆ, ಸಮಾರಂಭಗಳಲ್ಲಿ ಯಥೇಚ್ಛವಾಗಿ ಅಡುಗೆ ಮಾಡಿಸಿ ಉಳಿದ ಆಹಾರವನ್ನು ಬೀದಿಗೆ ಚೆಲ್ಲುವ ಸಂದರ್ಭದಲ್ಲೇ...

  • ಇತ್ತೀಚೆಗೆ, ಯುವಕರಲ್ಲಿ ಮಿಲಿಟರಿಗೆ ಸೇರುವ ಹುಮ್ಮಸ್ಸು ಹೆಚ್ಚಾಗುತ್ತಿದೆ. ಮಿಲಿಟರಿಯ ವಿಸ್ತರಣಾ ರೂಪವಾಗಿ ಕಾಣುವ ಪೊಲೀಸ್‌ ಇಲಾಖೆಯಲ್ಲೂ ಅನೇಕ ಹುದ್ದೆಗಳಿವೆ....

  • ಮಕ್ಕಳು ಪಿಯುಸಿ ದಾಟಿದ ನಂತರವೂ, ಅವರನ್ನು ಸಣ್ಣವರೆಂದೇ ಭಾವಿಸಿ ಅವರ ಎಲ್ಲ ಕೆಲಸವನ್ನೂ ತಾವೇ ಮಾಡಲು ಕೆಲವು ಪೋಷಕರು ಮುಂದಾಗುತ್ತಾರೆ. ಇದರಿಂದ ಮಕ್ಕಳು ಇನ್ನೊಬ್ಬರ...

  • ಹಳ್ಳಿ ಹುಡುಗರೂ ಬುದ್ಧಿ ವಂತಿಕೆ ಪೇಟೆ ಮಕ್ಕಳಿಗೇ ಸವಾಲು ಹಾಕುವಂತಿದೆ. ಇವರು ಹೈಳಿ ಹೈಕ್ಳು ಅನ್ನೋ ಹಾಗಿಲ್ಲ. ಏಕೆಂದರೆ, ಈಸಲದ ಪಿಯುಸಿಯಲ್ಲಿ ಇವರೇ ಮುಂದು. ದಿನೇ...

  • ನನ್ನೆಲ್ಲಾ ಶಕ್ತಿಗಳನ್ನು ಒಂದುಗೂಡಿಸಿಕೊಂಡೆ. ನನ್ನ ಪ್ರೀತಿಯ ಪಾಲಿಗೆ ಇಂದು ಈ ಕ್ಷಣವೇ ಅಚ್ಚೆ ದಿನ್‌ ಆಗಬಹುದೆಂದು ಎಣಿಸಿದೆ. ಜೊತೆಯಲ್ಲಿ ಏಳು ಹೆಜ್ಜೆ, ಒಂದು...

ಹೊಸ ಸೇರ್ಪಡೆ