ದ ಗೈಡ್‌

Team Udayavani, Nov 5, 2019, 4:30 AM IST

ಗೈಡ್‌ ಅಂದರೆ ಬದುಕಿನ ದಾರಿ ತೋರುವವರು ಮಾತ್ರ ಅಲ್ಲ. ನಮ್ಮ ಸುತ್ತಮುತ್ತಲಿರುವ ಐತಿಹಾಸಿಕ ಸ್ಮಾರಕಗಳ ಕತೆ ಹೇಳುವವವರೂ ಕೂಡ. ಇವರದೇನು ಸುಮ್ಮನೆ ಕೆಲಸವಲ್ಲ. ತಿಳುವಳಿಕೆಯ ಜೊತೆಗೆ ಚರಿತ್ರೆಯನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಈಗ, ಗೈಡ್‌ಗಳನ್ನೂ ತಯಾರು ಮಾಡುವಂಥ ಕೋರ್ಸ್‌ಗಳಿವೆ. ಜೊತೆಗೆ, ಉದ್ಯೋಗಗಳೂ ಕೂಡ.

ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಟ್ಟಾಗ ಆ ಸ್ಥಳದ ಮಾಹಿತಿ ನೀಡುವ, ಬಿಳಿ ಅಕ್ಷರಗಳಿರುವ ನೀಲಿ ಫ‌ಲಕವೊಂದರ ಕಡೆ ನಿಮ್ಮ ಗಮನ ಹರಿಯುತ್ತದೆ. ಅಷ್ಟರಲ್ಲಾಗಲೇ ನಿಮ್ಮನ್ನು ಸುತ್ತುವರಿಯುವ ಗೈಡ್‌ಗಳು ‘ನಿಮಗೆ ಸರಿಯಾದ ಮಾಹಿತಿ ನೀಡುತ್ತೇವೆ, ನಮ್ಮೊಂದಿಗೆ ಬನ್ನಿ’ ಎಂದು ಒತ್ತಾಯಿಸ ತೊಡಗುತ್ತಾರೆ. ನೀವು ಕಿವಿಗೊಡದಿದ್ದರೂ ಸ್ಥಳ, ವ್ಯಕ್ತಿ, ಘಟನೆಗಳ ಕುರಿತ ಪ್ರವರ ಶುರುಮಾಡುತ್ತಾರೆ. ಅವರಲ್ಲಿ ಕೆಲವರು ಪುರಾತತ್ವ ಇಲಾಖೆಯಿಂದ ಪ್ರಮಾಣ ಪತ್ರ ಪಡೆದ ಗೈಡ್‌ಗಳೂ ಆಗಿರುತ್ತಾರೆ.

ಆದರೆ, ಇವರ ಸಂಖ್ಯೆ ತೀರಾ ಕಡಿಮೆ. ನೀವು ಕರ್ನಾಟಕದವರೇ ಆಗಿದ್ದೀರಿ ಅಂದುಕೊಳ್ಳಿ. ಆಗ, ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುವ ಆಗಿದ್ದರೆ ಪ್ರವಾಸಕ್ಕೂ ಮುನ್ನ ಭೇಟಿ ನೀಡುವ ಸ್ಥಳದ ಕುರಿತು ಅಲ್ಪ ಸ್ವಲ್ಪ ಮಾಹಿತಿ ಕಲೆ ಹಾಕಿರುತ್ತೀರಿ. ಗೈಡ್‌ಗಳು ಹೇಳುವ ಅತಿರಂಜಿತ ವಿವರಗಳು ನಿಮಗೆ ಇಷ್ಟವಾಗದೇ ಇದ್ದಾಗ ಸ್ಥಳದ ಆವರಣದಲ್ಲೇ ಇರುವ ಪುರಾತತ್ವ ಇಲಾಖೆಯ ಮೊರೆ ಹೋಗುತ್ತೀರಿ. ಅಲ್ಲಿ ಪುರಾತತ್ವ ಶಾಸ್ತ್ರವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಅಧಿಕಾರಿಗಳು ನಿಮಗೆ ಕರಾರುವಾಕ್ಕಾದ ಮಾಹಿತಿ ನೀಡಿ ನಿಮ್ಮ ಅನುಮಾನಗಳನ್ನು ಬಗೆಹರಿಸುತ್ತಾರೆ.

ಸಂಸ್ಕೃತಿ, ಇತಿಹಾಸ, ನಾಗರೀಕತೆ ಮತ್ತು ಮಾನವ ಶಾಸ್ತ್ರ (Anthrapology) ದ ಬಗೆಗೆ ಅಸಕ್ತಿ ಇರುವ ಯಾರೇ ಆದರೂ ಭಾರತದ ವಿಶ್ವವಿದ್ಯಾಲಯಗಳು ಕಲಿಸುವ ಕೋರ್ಸ್‌ಗಳನ್ನು ಕಲಿತು ನಿಶ್ಚಿತ ಆದಾಯ ಕಲ್ಪಿಸುವ ಕೆಲಸಗಳಿಗೆ ಸೇರಬಹುದು.

ನೆನಪಿರಲಿ, ಎಲ್ಲ ಗೈಡ್‌ಗಳೂ ತಪ್ಪು ಅಥವಾ ಸುಳ್ಳು ಮಾಹಿತಿ ನೀಡುವುದಿಲ್ಲ. ಪುರಾತತ್ವ ಶಾಸ್ತ್ರ (Archeology) ವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ, ಕಾಲೇಜುಗಳಿಂದ ಪದವಿ ಪಡೆದವರು ಸರಿಯಾದ ಮಾಹಿತಿ ನೀಡಿ, ಇತಿಹಾಸ, ವ್ಯಕ್ತಿ, ಘಟನೆಗಳ ಕುರಿತು ಉಪಯುಕ್ತ ಮಾಹಿತಿ ನೀಡುತ್ತಾರೆ. ಪ್ರವಾಸಕ್ಕೆ ಬರುವ ಜನರಿಗೆ ನೈಜ ವಿಚಾರವನ್ನು ಒದಗಿಸುವ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಲವು ಹಂತಗಳಲ್ಲಿ ಇತಿಹಾಸ, ಸಂಸ್ಕೃತಿ, ನಾಗರೀಕತೆ, ಮಾನವಶಾಸ್ತ್ರಗಳ ಕುರಿತು ಅಧ್ಯಯನ ನಡೆಸಿರುತ್ತಾರೆ.

ಕೋರ್ಸ್‌ ಇದೆ
ಅದಕ್ಕೆಂದೇ ಮೀಸಲಾದ ಆರ್ಕಿಯಾಲಜಿ ಕೋರ್ಸ್‌ ಅನ್ನು ಭಾರತದ ಮತ್ತು ವಿಶ್ವದ ಅನೇಕ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಕಲಿಸಲಾಗುತ್ತದೆ. ಮಾನವ ಜನಾಂಗ ತನ್ನ ಉಗಮದಿಂದ ಇಲ್ಲಿಯವರೆಗೂ ನಡೆಸಿಕೊಂಡು ಬಂದಿರುವ ಪ್ರತಿಯೊಂದು ಚಟುವಟಿಕೆಯ ಗುರುತನ್ನೂ ಉಳಿಸಿರುತ್ತದೆ. ಕಾಲಾನುಕ್ರಮದಲ್ಲಿ, ಅವರೆಲ್ಲ ಅಳಿದು ಬದುಕಿನ ವಿವಿಧ ಘಟ್ಟಗಳ ಕುರುಹುಗಳು ಮಾತ್ರ ಉಳಿದಿರುತ್ತವೆ. ಭೂಮಿಯ ಉತ್ಖನನದ ಸಮಯದಲ್ಲಿ ಸಿಗಬಹುದಾದ ಅಪರೂಪದ ಹಳೆಯ ವಸ್ತು, ಆಭರಣ, ಅಸ್ತ್ರ, ಶಾಸನ, ತಲೆಬುರುಡೆ ವಿಗ್ರಹಗಳೆಲ್ಲಾ ತಮ್ಮದೇ ಕತೆ ಹೇಳುತ್ತವೆ. ಸಿಂಧೂ ನಾಗರೀಕತೆಯ ಕಾಲದಲ್ಲಿ ಉಪಯೋಗಿಸಲ್ಪಡುತ್ತಿದ್ದವು ಎನ್ನಲಾದ ಮಣ್ಣಿನ ಮಡಕೆಗಳು ಅಥವಾ ಮನುಷ್ಯನ ಮೂಳೆ, ಆ ಕಾಲಘಟ್ಟದ ಕತೆಯನ್ನು ವಿವರವಾಗಿ ತೆರೆದಿಡಲು ನೆರವಾಗುತ್ತದೆ.

ರೇಡಿಯೋ ಕಾರ್ಬನ್‌ ಡೇಟಿಂಗ್‌, ಥರ್ಮೋಗ್ರಫಿ, ಸ್ಯಾಟಲೈಟ್‌ ಇಮೇಜಿಂಗ್‌ ಮತ್ತು
MRI ತಂತ್ರಜ್ಞಾನ ಬಳಸಿಕೊಳ್ಳುವ ಈ ಓದು, ಭೌತಶಾಸ್ತ್ರ, ಇತಿಹಾಸ, ಶಾಸ್ತ್ರೀಯ ಸಾಹಿತ್ಯ, ರಸಾಯನ ಶಾಸ್ತ್ರ, ಭಾಷಾಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಪಳಿಯುಳಿಕೆ ಶಾಸ್ತ್ರ, ಸಂಖ್ಯಾಶಾಸ್ತ್ರ … ಹೀಗೆ, ಹಲವು ವಿಷಯಗಳ ನೆರವು ಮತ್ತು ಒಳನೋಟಗಳೊಂದಿಗೆ ಮುನ್ನಡೆಯುತ್ತದೆ.

ಎಲ್ಲೆಲ್ಲಿ ಕೋರ್ಸ್‌?
ಭಾರತದ ಬಹುಪಾಲು ವಿವಿಗಳು ಪದವಿ ಹಾಗೂ ಸ್ನಾತಕೋತ್ತರ ಎರಡೂ ವಿಭಾಗದಲ್ಲಿ ಆರ್ಕಿಯಾಲಜಿ ಕೋರ್ಸ್‌ಗಳನ್ನು ಹೊಂದಿವೆ. ಭಾರತ ಸರಕಾರದಿಂದ ಅಂಗೀಕೃತವಾದ ಯಾವುದೇ ವಿಶ್ವವಿದ್ಯಾಲಯದ ಪದವಿ ಹೊಂದಿದ್ದರೂ, ಆರ್ಕಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿಗೆ ದಾಖಲಾಗಬಹುದು. ಅದರಲ್ಲೂ ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರೆ, ಪುರಾತತ್ವ ಶಾಸ್ತ್ರದ ಅಧ್ಯಯನ ತುಂಬ ಸುಲಭವಾಗುತ್ತದೆ. ಬರೋಡಾದ ಮಹಾರಾಜ ಸಯ್ನಾಜಿರಾವ್‌ ವಿವಿ, ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಪುರಾತತ್ವಗಳಿಗೆ ಸಂಬಂಧಿಸಿದ ಮೂರು ವರ್ಷದ ಪದವಿ ಕೋರ್ಸ್‌ನ್ನು ನಡೆಸುತ್ತಿದೆ. ಕಾಶಿಯ ಬನಾರಸ್‌ ಹಿಂದೂ ವಿವಿ, ಎರಡು ವರ್ಷಗಳ ಪದವಿಯನ್ನು ನೀಡುತ್ತದೆ. ಭಾರತದ ಪ್ರಾಚೀನ ಇತಿಹಾಸ, ಸಂಸ್ಕೃತಿ, ಪುರಾತತ್ವಗಳ ಮೂರು ವರ್ಷಗಳ ವೃತ್ತಿಪರ ಪದವಿಯನ್ನು ನೀಡುತ್ತದೆ.

ಯಾರು ಈ ಕೋರ್ಸ್‌ ಮಾಡಬಹುದು?
ಇತಿಹಾಸ, ಮಾನವ ಶಾಸ್ತ್ರ, ಸಂಸ್ಕೃತಿ, ನಾಗರೀಕತೆಗಳ ಅಧ್ಯಯನದಲ್ಲಿ ಆಸಕ್ತಿ ಇರುವ ಯಾರೇ ಆದರೂ ಇದನ್ನು ಕಲಿಯಬಹುದು. ಇದರಲ್ಲಿ ಬರುವ ಅಧ್ಯಯನ ಉತ್ಖನನ, ಪ್ರವಾಸ, ಕ್ಷೇತ್ರಕಾರ್ಯಗಳಿಗೆ ಮುಕ್ತ ಮನಸ್ಸು ಹೊಂದಿರುವವರು ಈ ಕೋರ್ಸ್‌ಗಳಲ್ಲಿ ಯಶಸ್ಸುಗಳಿಸುತ್ತಾರೆ. ವಾಸಿಸುವ ಸ್ಥಳದಿಂದ ದೂವಿರದ್ದು ಸಂಶೋಧನೆ ಕೈಗೊಂಡು, ಅಲ್ಲಿ ಸಿಕ್ಕ ವಸ್ತುಗಳನ್ನು ಪ್ರಯೋಗಾಲಯಕ್ಕೆ ತಂದು, ಕೂಲಂಕಷವಾಗಿ ಅಭ್ಯಸಿಸಿ, ವರದಿ ತಯಾರಿಸಿದ ನಂತರ ಕೆಲಸ ಮುಗಿಯುತ್ತದೆ. ಇದಕ್ಕೆ ಅತಿಯಾದ ತಾಳ್ಮೆ, ಅಧ್ಯಯನ ಮತ್ತು ಗಮನವಿಟ್ಟು ಕೆಲಸ ಮಾಡುವ ಏಕಾಗ್ರತೆ ಬೇಕು. ಇದರ ಓದಿಗೆ ತಗಲುವ ಖರ್ಚು ಕಡಿಮೆಯೇ. ಪದವಿ ಅಥವಾ ಡಿಪೋ›ಮಾ, ಸ್ನಾತ‌ಕೋತ್ತರ ಅಧ್ಯಯನ ಕೈಗೊಳ್ಳುವವರಿಗೆ ಅಖಐ ನಿಂದ ಮಾಸಿಕ ಸ್ಟೆಫೆಂಡ್‌ ನೀಡಲಾಗುತ್ತದೆ. ಸ್ನಾತಕೋತ್ತರ ಪದವಿ ಓದಿನ ನಂತರ ಡಾಕ್ಟ್ರೇಟ್‌ ಅಧ್ಯಯನ ಮಾಡುವವರಿಗೆ ತಿಂಗಳಿಗೆ 8,000 ರೂ ಪ್ರೋತ್ಸಾಹ ಧನದ ಸೌಲಭ್ಯವೂ ಇದೆ.

ಎಲ್ಲೆಲ್ಲಿ ಕೆಲಸ?
ಆರ್ಕಿಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಕಾಲೇಜಿನಲ್ಲಿ ಇತಿಹಾಸದ ಅಧ್ಯಾಪಕರ ಹುದ್ದೆಗೆ ಸೇರಬಹುದು. ಯುಜಿಸಿಯವರು ನಡೆಸುವ ಎನ್‌ಇಟಿ ಮತ್ತು ಜ್ಯೂನಿಯರ್‌ ರಿಸರ್ಚ್‌ ಫೆಲೋ ಪರೀಕ್ಷೆಗಳನ್ನು ಪಾಸುಮಾಡಿದವರು ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಗಿಟ್ಟಿಸಬಹುದು, ಖಾಸಗಿಯವರು ನಡೆಸುವ ಮ್ಯೂಸಿಯಂಗಳಲ್ಲಿ ಕ್ಯುರೇಟರ್‌ಗಳಾಗಿ ಕೆಲಸ ಮಾಡುವ ಅವಕಾಶಗಳೂ ಇವೆ.

ಆರ್ಕಿಯಾಲಜಿಕಲ್‌ ಸರ್ವೆ ಆಫ್ ಇಂಡಿಯಾ, ಇಂಡಿಯನ್‌ ಕೌನ್ಸಿಲ್‌ ಆಫ್ ಸ್ಟಾರಿಕಲ್‌ ರಿಸರ್ಚ್‌, ನ್ಯಾಷನಲ್‌ ಮೂಸಿಯಂ, ಸರ್ಕಾರಿ ಮತ್ತು ಖಾಸಗೀ ಮ್ಯೂಸಿಯಂ ಹಾಗೂ ಗ್ಯಾಲರಿಗಳಲ್ಲಿ ಉತ್ತಮ ಸಂಬಳದ ಕೆಲಸಗಳು ದೊರೆಯುತ್ತವೆ.

ಯಾವ ಯಾವ ಕೋರ್ಸ್‌?
1. ಆರ್ಕಿಯೋ ಬಾಟನಿ – ಪುರಾತನ ಕಾಲದಲ್ಲಿದ್ದ ಜನರ ಆಹಾರ ಪದ್ಧತಿ, ಸಸ್ಯ ಸಂಪತ್ತು ಮತ್ತು ವಾಯುಗುಣದ ಬಗ್ಗೆ ಅಧಿಕೃತ ಜ್ಞಾನ ಕಲ್ಪಿಸುತ್ತದೆ.
2. ಆರ್ಕಿಯೋ ಮೆಟ್ರಿ – ಪುರಾತತ್ವ ಹಾಗೂ ತುಲನಾತ್ಮಕ ಎಂಜಿನಿಯರಿಂಗ್‌ ತಂತ್ರಜ್ಞಾನ ಕಲಿಸುತ್ತದೆ.
3. ಆರ್ಕಿಯೋಜುವಾಲಜಿ – ಪುರಾತನ ಜನ ಪ್ರಾಣಿಗಳ ಆರೋಗ್ಯ, ಬೇಟೆ ವಿಧಾನ, ಪ್ರಾಣಿ ಸಾಕ‌ಣೆಯ ಕುರಿತು ಅಧ್ಯಯನಕ್ಕೆ ಅವಕಾಶ ನೀಡುತ್ತದೆ.
4. ಬ್ಯಾಟಲ್‌ ಫೀಲ್ಡ್‌ ಆರ್ಕಿಯಾಲಜಿ – ಹಿಂದೆ ನಡೆದ ಯುದ್ಧಗಳ ಕೂಲಂಕಷ ಅಧ್ಯಯನಕ್ಕೆ ಒತ್ತು ನೀಡುತ್ತದೆ.
5. ಎನ್ವಿರಾನ್‌ಮೆಂಟಲ್‌ ಆರ್ಕಿಯಾಲಜಿ – ಅಂದಿನ ಜನಾಂಗಗಳಿಂದ ಪರಿಸರದ ಮೇಲೆ ಸಂಭಸಿದ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳೆರಡರ ಅಧ್ಯಯನವನ್ನು ಏಕಕಾಲಕ್ಕೆ ತೆರೆದಿಡುತ್ತದೆ.
6. ಎಥೊ° ಆರ್ಕಿಯಾಲಜಿ – ಆಧುನಿಕ ಕಾಲದ ಮಾನವನ ಜೀವನ ಶೈಲಿ ಮತ್ತು ಮಾನವ ಶಾಸ್ತ್ರದ ಮೇಲೆ ಬೆಳಕು ಚೆಲ್ಲುತ್ತದೆ.
7. ಎಕ್ಸ್‌ಪೆರಿಮೆಂಟಲ್‌ ಆರ್ಕಿಯಾಲಜಿ – ಹಿಂದಿನ ಕಾಲದ ವಸ್ತು ಮತ್ತು ಆಯುಧಗಳನ್ನು ಪ್ರಯೋಗಕ್ಕೊಳಪಡಿಸಿ ಮಾಹಿತಿ ಪಡೆಯುವುದು, ಇದರ ಮುಖ್ಯ ಕಲಿಕೆಯಾಗಿದೆ.
8. ಮೆರೈನ್‌ ಆರ್ಕಿಯಾಲಜಿ – ನೀರಿನಾಳದ, ಹಳೆಯ ಮುಳುಗಿದ ಹಡಗುಗಳು ಮೀನುಗಾರಿಕೆ ಮತ್ತು ಕರಾವಳಿಯ ಜೀವನ ಶೈಲಿಯ ಅಧ್ಯಯನ ಇಲ್ಲಿ ನಡೆಯುತ್ತದೆ.

ಗುರುರಾಜ್‌ ಎಸ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಾವು ಬೆಳಗ್ಗೆ ಎದ್ದಾಕ್ಷಣ ಗಡಿಯಾರ ನೋಡುವುದಿಲ್ಲ. ಹಾಸಿಗೆಯ ಪಕ್ಕದಲ್ಲೇ ಅಲ್ಲೆಲ್ಲೋ ಬಿದ್ದಿರುವ ಮೊಬೈಲನ್ನು ಎತ್ತಿಕೊಂಡು ಅರೆಗಣ್ಣಿನಲ್ಲೇ ಗಂಟೆ ಎಷ್ಟಾಯ್ತು...

  • ಕ್ರಷ್‌ ಮತ್ತು ಲವ್‌, ಇವೆರಡೂ ಒಂದೇನಾ? ಇದು, ಇವತ್ತಿನ ಯುವ ಜನತೆಗಿರುವ ಗೊಂದಲ ಇದು. ಒಂದು ಸಲ ಕ್ರಷ್‌ ಶುರುವಾದರೆ ಮುಗೀತು. ಅದರ ಅಂಗೈಯಲ್ಲಿ ನಾವು. ಇಡೀ ಜಗತ್ತೇ...

  • ಅವನು ಉತ್ತರ, ಇವಳು ದಕ್ಷಿಣ. ಅವನು ಹುಬ್ಬಳ್ಳಿ ಹೈದ, ಇವಳು ಕರಾವಳಿ ಮೀನು. ಇಬ್ಬರ ಭಾಷೆ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೇ ಬೇರೆ ಬೇರೆ. ಆದರೆ ದೇವರು ಬರೆದ ಕಥೆಯಲ್ಲಿ...

  • ಮುದ್ದಿನ ಹುಡುಗಿ ಚೆಂದ ,ಮೌನದ ರೂಪವೇ ಅಂದ. ಚಂದಕ್ಕೆ ಚಂದ ಅಂತೆ ನಿನ್ನ ಅಂದವೂ... ಈ ಹಾಡು, ನಿನ್ನನ್ನು ನೋಡಿದ ಕೂಡಲೇ ಮನದ ಮೂಲೆಯಲ್ಲಿ ಪಲ್ಲವಿಸುತ್ತದೆ.ಮೌನಂ ಸಮ್ಮತಿ...

  • ಅವರ ಜೊತೆಗಾರ ರಾಜಕಾರಣಿಗಳ ಬಳಿ ಎರಡು ಮೂರು ಕಾರುಗಳಿದ್ದವು. ಆದರೆ ಗೃಹಸಚಿವ ಅನ್ನಿಸಿಕೊಂಡ ನಂತರವೂ ಇವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು...

ಹೊಸ ಸೇರ್ಪಡೆ