Udayavni Special

ಕಪಾಟಿನಲ್ಲಿ ಸಿಕ್ಕಿತು ಕಳೆದು ಹೋಗದ ಪ್ರೀತಿ


Team Udayavani, Feb 26, 2019, 12:30 AM IST

x-9.jpg

ಕಳೆದ ವಾರ ಪ್ರವಾಸ ಹೋಗಿದ್ದಾಗ ರಾತ್ರಿ ಕ್ಯಾಂಪ್‌ ಫೈರ್‌ ಹಾಕಿ, ನಮ್ಮ ಮನೋರಂಜನೆಯ ಆಟ, ಹುಡುಗಾಟಗಳು ನಡೆದವು. ನಿನ್ನ ಪಾಳಿ ಬಂದಾಗ “ಕಲ್ಪನಾ ಛಾಯೆಯಲಿ, ನಲ್ಮೆಯ ನೌಕೆಯಲಿ’ ಗೀತೆಯನ್ನು ಅದೆಷ್ಟು ಭಾವಪೂರ್ಣವಾಗಿ ಅನುಭವಿಸಿ ಹಾಡಿದ್ದೆ ನೀನು. ನಾನಂತೂ ಮೈಮರೆತು ಚಪ್ಪಾಳೆ ಹೊಡೆದಿದ್ದೇ, ಹೊಡೆದಿದ್ದು. 

ಪ್ರೀತಿಯ ಮೊದಲ ಬೆಂಚ್‌ ಹುಡುಗನಿಗೆ, 
ನೆಲ ನೋಡಿಕೋತಾ ಬರ್ತಿದ್ದೆ, ನೆಲ ನೋಡಿಕೋತ ಹೋಗ್ತಿದ್ದೆ, ಸಂಕೋಚದ ಮುದ್ದೆ ನೀನು. ಯಾರಿಗೂ ಬೇಡದ ಫ‌ಸ್ಟ್ ಬೆಂಚ್‌ ನಿನಗೆ ಮಾತ್ರ ಸಿಂಹಾಸನ. ಕಾಫಿ, ಲಂಚ್‌ ಬ್ರೇಕ್‌ಗೂ ಕ್ಲಾಸ್‌ರೂಮ್‌ನಿಂದ ಹೊರಗೆ ಕಾಲಿಡದ ವಿಧೇಯ “ಕುಡುಮಿ’ ಎಂದೇ ಎಲ್ಲರೂ ನಿನ್ನನ್ನು ಚುಡಾಯಿಸುತ್ತಿದ್ದರು. 

ಎಲ್ಲರಂತೆ ನಿನ್ನನ್ನು ಜೀನ್ಸ್ ಪ್ಯಾಂಟ್‌, ಟಿ ಶರ್ಟ್‌ನಲ್ಲಿ ಕಂಡದ್ದೇ ಇಲ್ಲ. ಸಾದಾ ಉಡುಗೆ. ಆದರೇನು? ಎಲ್ಲರೂ ನಿನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ನಿನ್ನ ವಾರ್ಷಿಕ ಫ‌ಲಿತಾಂಶ. ಯಾವುದೇ ಬ್ಯಾಕ್‌ ಲಾಗ್ಸ್‌ ಇಲ್ಲದೆ ಪಾಸ್‌ ಆದ  ಕೆಲವೇ ಪ್ರತಿಭಾವಂತರಲ್ಲಿ ನೀನು ಮೊದಲಿಗ. ಓದಿಗೂ ಉಡುಗೆಗೂ ಸಂಬಂಧ ಇಲ್ಲ ಅಂತ ನೀನು ಸಾಧಿಸಿ ತೋರಿಸಿದ್ದೆ. 

ಪಾರ್ಟ್‌ ಟೈಮ್‌ ಕೆಲಸ ಮಾಡಿ ಹಳ್ಳಿಯಲ್ಲಿರೋ ನಿನ್ನ ಮನೆಯವರಿಗೆ ನೆರವಾಗ್ತಿದ್ದೀಯ ಅಂತೆಲ್ಲ ಗುಸುಗುಸು ಕೇಳ್ಪಟ್ಟೆ. ನಿನ್ನ ಕಠಿಣ ಪರಿಶ್ರಮ ನನಗಂತೂ ತುಂಬಾ ಹಿಡಿಸಿದೆ. ಇನ್ನೇನು ಎರಡು  ತಿಂಗಳಲ್ಲಿ ನಮ್ಮ ಓದು ಮುಗಿದು ಕಾಲೇಜಿಗೆ ವಿದಾಯ ಹೇಳ್ತೀವಿ. ಅಷ್ಟರಲ್ಲಿ ನನ್ನ ಮನದ ಮಾತು ನಿನಗೆ ಹೇಳಲೇಬೇಕು. 

ನೆನಪಿದೆಯಾ, ಕಳೆದ ವಾರ ಪ್ರವಾಸ ಹೋಗಿದ್ದಾಗ ರಾತ್ರಿ ಕ್ಯಾಂಪ್‌ ಫೈರ್‌ ಹಾಕಿ, ನಮ್ಮ ಮನೋರಂಜನೆಯ ಆಟ, ಹುಡುಗಾಟಗಳು ನಡೆದವು. ನಿನ್ನ ಪಾಳಿ ಬಂದಾಗ “ಕಲ್ಪನಾ ಛಾಯೆಯಲಿ, ನಲ್ಮೆಯ ನೌಕೆಯಲಿ’ ಗೀತೆಯನ್ನು ಅದೆಷ್ಟು ಭಾವಪೂರ್ಣವಾಗಿ ಅನುಭವಿಸಿ ಹಾಡಿದ್ದೆ ನೀನು. ನಾನಂತೂ ಮೈಮರೆತು ಚಪ್ಪಾಳೆ ಹೊಡೆದಿದ್ದೇ, ಹೊಡೆದಿದ್ದು. ಆಗಲೇ ನಮ್ಮಿಬ್ಬರ ಕಂಗಳು ಪರಸ್ಪರ ಸಂಧಿಸಿದವು. ತಕ್ಷಣ ನಾನು ನಾಚಿ ತಲೆ ತಗ್ಗಿಸಿದೆ. ಆ ಕ್ಷಣವೇ ತೀರ್ಮಾನಿಸಿಬಿಟ್ಟೆ, ಮುಗುಳುನಗೆ ಚೆಲ್ಲುವಷ್ಟಾದರೂ ನಿನ್ನೊಂದಿಗೆ ಸ್ನೇಹ ಗಳಿಸಬೇಕು.

ನನ್ನ ಪುಣ್ಯ, ನಂತರದ ದಿನಗಳಲ್ಲಿ ಸಂಕೋಚದಿಂದಲೇ ನನ್ನತ್ತ ಕಣ್ಣರಳಿಸಿ, ತುಟಿ ಬಿಚ್ಚಿ ಹಲೋ ಹೇಳುವಷ್ಟು ಧೈರ್ಯ ಮಾಡಿದೆಯಲ್ಲ, ಅಷ್ಟು ಸಾಕು ನನಗೆ. ರೇಡಿಯೋದಲ್ಲಿ “ನೀನಂದ್ರೆ ನಂಗಿಷ್ಟ’ ಹಾಡು ಬರುವಾಗ ಕಲ್ಪನೆಯಲ್ಲಿ ನಾವಿಬ್ಬರೇ. ನನ್ನ ಭಾವನೆಗಳಿಗೆ ನೀನು ಸ್ಪಂದಿಸಬಲ್ಲೆ ಎಂದು ನನ್ನ ಮನಸ್ಸು ಹೇಳ್ತಿದೆ. ನಿನ್ನ ಮುಕ್ತ ಮಾತುಗಳಿಗೆ ಕಾಯುತ್ತಿರುವ ಭಾವಜೀವಿ’. 

ಲೈಬ್ರರಿಯಲ್ಲಿ ಅವನಿಗೆ ಅವಳು ಕೊಟ್ಟ ಪತ್ರ, ಮೂರು ವರ್ಷಗಳ ನಂತರ ಮತ್ತೆ ಅವಳ ಕೈಗೆ ಸಿಕ್ಕಿತ್ತು, ಅವನ ಕಪಾಟಿನಲ್ಲಿ.
 “ಏನದು ?’ ಅವನು ಕೇಳಿದ. 
“ಅಪ್ಲಿಕೇಷನ್‌. ನಿನ್ನ ಸಂಗಾತಿಯಾಗೋಕ್ಕೆ ಹಾಕಿದ್ನಲ್ಲ, ಅದು’ ನಕ್ಕಳು, “ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು’ ಗುನುಗುತ್ತ. 

ಕೆ.ವಿ. ರಾಜಲಕ್ಷ್ಮಿ, ಬೆಂಗಳೂರು.  

ಟಾಪ್ ನ್ಯೂಸ್

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಆವರಣ ಗೋಡೆಯಿಲ್ಲದೆ ಗುಮ್ಮೆತ್ತು ಸ.ಕಿ.ಪ್ರಾ. ಶಾಲೆಗೆ ಅಭದ್ರತೆ

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

ಸಿದ್ದು-ಡಿಕೆಶಿ ಜೋಡೆತ್ತಲ್ಲ, ಕಾಡೆತ್ತು: ನಳಿನ್ ಕುಮಾರ್ ಕಟೀಲ್

100 ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :  ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

100ಕೋಟಿ ಸನಿಹಕ್ಕೆ ಲಸಿಕೆ ಅಭಿಯಾನ :ಹೆಚ್ಚು ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೂ ಸ್ಥಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಚಿತ್ರಪಾಡಿ ಗ್ರಾಮಸ್ಥರ ಪಡಿತರ ಪರಿಪಾಟಲು ಅಂತ್ಯ

ಇನ್ನೂ ಅನುಷ್ಠಾನ ಆಗದ ಫೂಟ್ ಬ್ರಿಡ್ಜ್ ಕಾಮಗಾರಿ

ಇನ್ನೂ ಅನುಷ್ಠಾನ ಆಗದ ಫೂಟ್ ಬ್ರಿಡ್ಜ್ ಕಾಮಗಾರಿ

ಕರಾವಳಿಯಲ್ಲಿ ಸರಳ ಈದ್‌ ಮಿಲಾದ್‌

ಕರಾವಳಿಯಲ್ಲಿ ಸರಳ ಈದ್‌ ಮಿಲಾದ್‌

ಬಹುವರ್ಷಗಳ ರಸ್ತೆ ಕನಸು ಈಡೇರಿಕೆ

ಬಹುವರ್ಷಗಳ ರಸ್ತೆ ಕನಸು ಈಡೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.