ಇಲ್ಲಿ ಲೆಕ್ಕ ಗೋತ್ತಿದ್ದವನೇ ನಂಬರ್‌ ಒನ್‌

ನೀವು ಶಾಸ್ತ್ರ ಓದಿ

Team Udayavani, Dec 10, 2019, 5:11 AM IST

ಇವತ್ತು ಪ್ರತಿಯೊಂದಕ್ಕೂ ಅಂಕಿ ಅಂಶ ಬೇಕು. ಮನೆ ಕಟ್ಟಲು ಸಾಲ ಬೇಕು ಅಂದಾಗ, ಬ್ಯಾಂಕ್‌ನವರು ಎಸ್ಟಿಮೇಟ್‌ ತನ್ನಿ ಅಂತಾರಲ್ಲ; ಹಾಗೇ, ಏನೇ ಯೋಜನೆ ಮಾಡಬೇಕಾದರೂ ವಾಸ್ತವಾಂಶ ತಿಳಿಯಲು ಅಂಕಿ ಅಂಶ ಬೇಕಾಗುತ್ತದೆ. ಈ ಕಾರಣದಿಂದಲೇ ಸಂಖ್ಯಾಶಾಸ್ತ್ರಜ್ಞರಿಗೆ ಬೆಲೆ ಬಂದಿರುವುದು.

ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಇಂದಿನ ದಿನಗಳನ್ನು ಯೋಜನಾ ಯುಗ ಎನ್ನುತ್ತೇವೆ. ಏರುತ್ತಿರುವ ಜನಸಂಖ್ಯೆ ಆರೋಗ್ಯ, ಶಿಕ್ಷಣ, ವೆಚ್ಚವನ್ನು ಸರಿದೂಗಿಸಲು ನಮ್ಮ ಆದಾಯದ ಅಗತ್ಯಗಳನ್ನು ಅರಿತು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ, ಸರ್ಕಾರಗಳು ಯಾವುದಾದರೂ ಹೊಸ ಯೋಜನೆಗಳನ್ನು ಜಾರಿ ಮಾಡುವ ಮುನ್ನ ವಸ್ತುಸ್ಥಿತಿಯ ಕುರಿತು ಮಾಹಿತಿ ಬಯಸುತ್ತವೆ. ಅಂದರೆ, ಮನೆ ಕಟ್ಟಲು ಸಾಲ ಬೇಕು ಅಂದಾಗ, ಬ್ಯಾಂಕ್‌ಗಳು ಎಸ್ಟಿಮೇಟ್‌ ಕೊಡಿ ಅನಿವಾರ್ಯತೆ ಅನ್ನುತ್ತವಲ್ಲ; ಹಾಗೆ.

ಇಲ್ಲಿ ವಸ್ತುಸ್ಥಿತಿಯ ಮಾಹಿತಿ, ಅಂಕಿ-ಅಂಶಗಳಿಂದ ಕೂಡಿರುತ್ತದೆ. ಹೀಗಾಗಿ, ಅದು ನಿಖರವೂ, ಸತ್ಯವೂ ಆಗಿರಲೇಬೇಕು. ಕ್ರೀಡೆ, ವ್ಯಾಪಾರ, ಉದ್ಯಮ, ಉದ್ಯೋಗ, ಶಿಕ್ಷಣ, ಸಾಕ್ಷರತೆ, ಅಭಿವೃದ್ಧಿ, ಬೇಡಿಕೆ, ಪೂರಣ, ಅರಣ್ಯ, ಆರೋಗ್ಯ ಕ್ಷೇತ್ರ ಇತ್ಯಾದಿಗಳಿಗೆ ಸಂಬಂಧಿಸಿದ ಯೋಜನೆ ರೂಪಿಸಲು ಆಯಾ ಕ್ಷೇತ್ರಗಳ ಆಗು ಹೋಗುಗಳ ಕುರಿತ ಅಧಿಕೃತ ಮಾಹಿತಿ ಬೇಕಾಗುತ್ತದೆ. ಇದನ್ನು ಒದಗಿಸುವವರು ನುರಿತ ಸಂಖ್ಯಾ ಶಾಸ್ತ್ರಜ್ಞರು ಅಥವಾ ಅಂಕಿ-ಅಂಶ ತಜ್ಞರು.

ಈಗ ಇವರಿಗೆ ಹೆಚ್ಚು ಬೇಡಿಕೆ ಶುರುವಾಗಿದೆ. ಪ್ರತಿಯೊಂದು ಸರ್ಕಾರದ, ಸರ್ಕಾರೇತರ ಸಂಸ್ಥೆಗಳ ಯೋಜನೆಗಳಿಗೆ ಹೂರಣ ಒದಗಿಸುವವರು ಇವರೇ. ಸಂಖ್ಯಾಶಾಸ್ತ್ರಜ್ಞರು ಕೊಟ್ಟ ಮಾಹಿತಿ ಆಧಾರದ ಮೇಲೆಯೇ ಪ್ಲಾನಿಂಗ್‌ ನಡೆಯೋದು. ಅಂಕಿ ಅಂಶ ತಜ್ಞರು ಗಣಿತ ಮತ್ತು ಸಂಖ್ಯಾಶಾಸ್ತ್ರವನ್ನು ಆಳವಾಗಿ ತಿಳಿದುಕೊಂಡಿರಬೇಕಾಗುತ್ತದೆ.

ಯಾವ ಯಾವ ಕೋರ್ಸ್‌?
ಗಣಿತ ಅಥವಾ ಸ್ಯಾಟಿಸ್ಟಿಕ್ಸ್‌ ವಿಷಯಗಳಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದಲ್ಲಿ ಮುಖ್ಯವಾಗಿ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್‌.ಡಿ.ಗಳಿಸಬಹುದು. ಸಾಮಾನ್ಯವಾಗಿ ವಾಣಿಜ್ಯ ಹಾಗೂ ವಿಜ್ಞಾನ ಓದಿದವರು ಈ ಕೋರ್ಸ್‌ ಸೇರಲು ಅರ್ಹರಾಗಿರುತ್ತಾರೆ. ಮೂರು ವರ್ಷದ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ, ಆರು ತಿಂಗಳಿಂದ ಒಂದು ವರ್ಷದ ಸರ್ಟಿಫಿಕೇಟ್‌ ಕೋರ್ಸ್‌ ಮತ್ತು ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗಳು ನಮ್ಮ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿವೆ. ಅರ್ಹ ವಿದ್ಯಾರ್ಥಿಗಳು ಬಿಎ ಮತ್ತು ಎಂ.ಎ. ಇನ್‌ ಸ್ಟಾಟಿಸ್ಟಿಕ್ಸ್‌, ಬಿ.ಎಸ್ಸಿ ಮತ್ತು ಎಂ.ಎಸ್ಸಿ ಇನ್‌ ಸ್ಟಾಟಿಸ್ಟಿಕ್ಸ್‌ ಹಾಗೂ ಡಿಪ್ಲೊಮೊ ಇನ್‌ ಸ್ಟಾಟಿಸ್ಟಿಕ್ಸ್‌ ಅಧ್ಯಯನ ನಡೆಸಬಹುದು.

ಈ ಎಲ್ಲ ಕೋರ್ಸ್‌ಗಳಲ್ಲಿ ದತ್ತಾಂಶ ಸಂಗ್ರಹಣೆ, ತರ್ಕಬದ್ಧ ವಿಶ್ಲೇಷಣೆ, ಸಂಖ್ಯಾಶಾಸ್ತ್ರೀಯ ಜಿಜ್ಞಾಸೆ, ದತ್ತಾಂಶದ ಮೌಲ್ಯ ನಿರ್ಣಯ, ಅಂಕಿ-ಸಂಖ್ಯೆ ಗಣಿತದ ಮೂಲಭೂತ ಸಿದ್ಧಾಂತಗಳನ್ನು ವ್ಯವಸ್ಥಿತವಾಗಿ ಕಲಿಸಿಕೊಡಲಾಗುತ್ತದೆ. ಸಮಸ್ಯೆ ಬಿಡಿಸುವುದು, ಬದಲಾಗುತ್ತಿರುವ ಅಂಕಿ-ಅಂಶಗಳ ತ್ವರಿತ ತಿಳುವಳಿಕೆ, ಸಂಖ್ಯಾಶಾಸ್ತ್ರದ ವಿಸ್ತೃತ ಮತ್ತು ಖಚಿತ ಜ್ಞಾನ ಹೊಂದುವ ವಿದ್ಯಾರ್ಥಿಗಳು ಉದ್ಯಮ, ಸರ್ಕಾರ, ಸಂಸ್ಥೆಗಳು ಬಯಸುವ ಕೌಶಲ್ಯವನ್ನು ಹೊಂದಿದವರಾಗಿರುತ್ತಾರೆ.

ಎಲ್ಲೆಲ್ಲಿ ವಿದ್ಯಾಭ್ಯಾಸ?
ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯಲ್ಲಿ ಪದವಿ ಪಡೆಯುವುದು ಬಹುತೇಕ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಅಲ್ಲಿ ಕಲಿತರೆ ಉನ್ನತ ಹುದ್ದೆ, ಕೈತುಂಬಾ ಸಂಬಳ ಸಿಕ್ಕೇ ಸಿಗುತ್ತದೆ. ಅಲ್ಲಿ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನೆದರಿಸಬೇಕಾಗುತ್ತದೆ. ಹಾಗೆಯೇ, ಪೂನಾ ವಿಶ್ವವಿದ್ಯಾಲಯ, ಅಲಿಘರ್‌ ಮುಸ್ಲಿಂ ವಿವಿ, ದೆಹಲಿ ವಿವಿ, ಕಳಿಂಗ ಇನ್ಸಿಟಿಟ್ಯೂಟ್‌ ಆಫ್ ಇಂಡಸ್ಟ್ರಿಯಲ್‌ ಟೆಕ್ನಾಲಜಿಗಳು ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ. ಇವಲ್ಲದೆ, ದೆಹಲಿ, ಬೆಂಗಳೂರು, ಚೆನ್ನೆç, ಕೊಲ್ಕತ್ತಾದ ಸ್ಟಾಟಿಸ್ಟಿಕಲ್‌ ಇನ್ಸಿಟಿಟ್ಯೂಟ್‌, ಐಐಟಿ ಕಾನ್ಪುರ, ಚೆನ್ನೈನ ಲೊಯೋಲ ಕಾಲೇಜು, ಅಹಮದಾಬಾದ್‌ನ ಕ್ಸೇವಿಯರ್, ಇಂದೋರ್‌ನ ದೇವಿ ಅಹಲ್ಯ ವಿವಿ, ದೆಹಲಿಯ ಸೇಂಟ್‌ ಸ್ಟೀಫ‌ನ್ಸ್‌ , ಹಿಂದೂ ಕಾಲೇಜುಗಳಲ್ಲೂ ಅಧ್ಯಯನಕ್ಕೆ ಅವಕಾಶಗಳಿವೆ.

ಅಮೆರಿಕದ ಎಂಐಟಿ, ಹಾರ್ವರ್ಡ್‌, ಸ್ಟಾನ್‌ಫ‌ರ್ಡ್‌, ಜಾರ್ಜಿಯಾ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಜಿ, ಮಿಚಿಗನ್‌ ವಿವಿ, ಕಾರ್ನೆಲ್‌ ವಿವಿ, ವಾಷಿಂಗ್ಟನ್‌ ವಿವಿ, ಯುರೋಪಿನ ಆಕ್ಸ್‌ಫ‌ರ್ಡ್‌, ಕೇಂಬ್ರಿಡ್ಜ್, ಇಂಪೀರಿಯಲ್‌ ಕಾಲೇಜು, ಸಿಂಗಾಪೂರ್‌ನ ನ್ಯಾಷನಲ್‌ ವಿವಿ, ಕ್ಯಾಲಿಫೋರ್ನಿಯ ವಿವಿ, ಆಸ್ಟ್ರೇಲಿಯದ ಮೆಲ್ಬರ್ನ್ ವಿವಿ, ಜಪಾನ್‌ನ ಟೋಕಿಯೊ ವಿವಿಗಳಲ್ಲೂ ಸಹ ಉನ್ನತ ವಿದ್ಯಾಭ್ಯಾಸದ ಅವಕಾಶಗಳಿವೆ. ಅನ್‌ಲೈನ್‌ ಮಾದರಿಯಲ್ಲೂ ಸಂಖ್ಯಾಶಾಸ್ತ್ರ ಕಲಿಸುವ ಅನೇಕ ವಿವಿಗಳು ವಿದೇಶದಲ್ಲಿವೆ. ಪದವಿ ಶಿಕ್ಷಣದ ನಂತರ ಬಯೋ ಇನ್‌ಫಾಮ್ಯಾìಟಿಕ್ಸ್‌, ಬಯೋಸ್ಟಾಟಿಸ್ಟಿಕ್ಸ್‌, ಪಬ್ಲಿಕ್‌ ಹೆಲ್ತ್‌, ಆಸ್ಟ್ರೋನಾಮಿ, ಆಸ್ಟ್ರೋಫಿಸಿಕ್ಸ್‌, ಡಿಜಿಟಲ್‌ ಮಾರ್ಕೆಟಿಂಗ್‌, ಅರ್ಥಶಾಸ್ತ್ರ, ಆಕುcಯಲ್‌ ಏರಿಯಲ್‌ ಸೈನ್ಸ್‌ ವಿಷಯಗಳಲ್ಲಿ ಉನ್ನತ ಅಧ್ಯಯನ ಮುಂದುವರಿಸಬಹುದು.

ಯಾವ ಕೆಲಸ?
ಸ್ಟಾಟಿಸ್ಟಿಕ್ಸ್‌ ವಿಷಯದಲ್ಲಿ ಅಧ್ಯಯನ ಮಾಡಿರುವವರು- ಸ್ಟಾಟಿಸ್ಟೀಶಿಯನ್‌, ಡೇಟಾ ಸೈಂಟಿಸ್ಟ್‌, ಎಸ್‌ಎಎಸ್‌ ಡೆವೆಲಪರ್‌, ಬ್ಯುಸಿನೆಸ್‌ ಅನಾಲಿಸ್ಟ್‌ , ಮ್ಯಾಥಮ್ಯಾಟೀಶಿಯನ್‌, ರಿಸ್ಕ್ ಅನಾಲಿಸ್ಟ್‌, ಡೇಟಾ ಅನಾಲಿಸ್ಟ್‌ , ಕಂಟೆಂಟ್‌ ಅನಾಲಿಸ್ಟ್‌ , ಸ್ಟಾಟಿಸ್ಟಿಕ್ಸ್‌ ಟ್ರೇನರ್‌, ಡೇಟಾ ಅನಾಲಿಸ್ಟ್‌ , ಬಯೋ ಸ್ಟಾಟಸ್ಟೀಶಿಯನ್‌, ಎಕನಾಮೆಟ್ರೀಶಿಯನ್‌, ಕನ್ಸಲ್ಟೆಂಟ್‌ ಹುದ್ದೆಗಳನ್ನು ನಿರ್ವಹಿಸಬಹುದು.

ಕೆಲಸ ಯಾವ ಯಾವ ಕ್ಷೇತ್ರದಲ್ಲಿ?
ಅಂಕಿ-ಅಂಶ ತಜ್ಞರಿಗೆ ಡಿಮ್ಯಾಂಡ್‌ ಇದೆ. ಪದವಿ ಪೂರೈಸಿದಾಕ್ಷಣ ಸುಮ್ಮನೆ ಕೂರುವ ಪ್ರಮೇಯವೇ ಬರುವುದಿಲ್ಲ. ಆದರೆ, ನಿಮಗೆ ಓದಿನ ಸಾಮರ್ಥ್ಯ, ಎಂಥ ಕಂಪನಿ ಬೇಕು ಅನ್ನೋದನ್ನು ನೀವು ತೀರ್ಮಾನ ಮಾಡಿಕೊಂಡಿರಬೇಕು. ಸ್ಟಾಟಿಸ್ಟಿಕ್ಸ್‌ ಪದವಿಧರರು ವಾಸ್ತವಕ್ಕೆ ಬಹಳ ಹತ್ತಿರ ಇರುತ್ತಾರೆ. ಏನೋ ಓದಿ, ಇನ್ನೇನೋ ಉದ್ಯೋಗ ಮಾಡಲು ಆಗದು. ಓದಿಗೂ, ಉದ್ಯೋಗಕ್ಕೂ ಒಂಥರ ನಂಟಿರುತ್ತದೆ.

ಹೀಗಾಗಿ, ಹಣಕಾಸು, ಜಾಹೀರಾತು, ಸಾರ್ವಜನಿಕ ಸಾಗಣೆ, ಸಂಶೋಧನೆ ಮತ್ತು ಅಭಿವೃದ್ಧಿ, ವಿವಿಧ ಗಣತಿ, ಬ್ಯಾಂಕಿಂಗ್‌, ಇಕಾಲಜಿ ಸೇವೆ, ಮಾರ್ಕೆಟಿಂಗ್‌, ಆರೋಗ್ಯ, ಚುನಾವಣೆ, ಮನರಂಜನೆ, ಕ್ರೀಡೆ, ಶಿಕ್ಷಣ, ಪ್ರವಾಸೋದ್ಯಮ, ಅಪರಾಧ, ಗುಣಮಟ್ಟ ನಿರ್ಣಯ, ಯೋಜನೆ ಮತ್ತು ಅನುಷ್ಠಾನಗಳಿಗೆ ಸಂಬಂಧಿಸಿದ ರಂಗಗಳಲ್ಲಿ ಸಂಖ್ಯಾಶಾಸ್ತ್ರ ಓದಿದವರಿಗೆ ವಿಪುಲ ಅವಕಾಶಗಳಿವೆ.

ಕೆಲಸ ನೀಡುವ ಸಂಸ್ಥೆಗಳು
ಸಂಖ್ಯಾಶಾಸ್ತ್ರವನ್ನು ಪೂರೈಸಿದವರು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯ, ಎಚ್‌.ಡಿ.ಎಫ್.ಸಿ, ಜಿ.ಇ. ಕ್ಯಾಪಿಟಲ್‌, ಕಾಗ್ನಿಜಂಟ್‌, ಅಮೆರಿಕನ್‌ ಇಕ್ಸ್‌ಪ್ರೆಸ್‌, ಟಿಎನ್‌ಎಸ್‌ ಇನ್ನೊವೇಶನ್‌ ಲ್ಯಾಬ್ಸ್, ಬ್ಲು  ಓಶನ್‌ ಮಾರ್ಕೆಟಿಂಗ್‌, ಎಚ್‌.ಎಸ್‌.ಬಿ.ಸಿ, ಇಂಡಿಯನ್‌ ಮಾರ್ಕೆಟ್‌ ರಿಸರ್ಚ್‌ ಬ್ಯೂರೋ, ಜೆನ್‌ಪ್ಯಾಕ್ಟ್ , ಡೆಲಾಯಿಟ್‌ ಕನ್ಸ್‌ಲ್ಟಿಂಗ್‌ ಸೇರಿದಂತೆ ಹಲವು ಎಂಎನ್‌ಸಿಗಳಲ್ಲಿ ಕೆಲಸ ಮಾಡಬಹುದು.

ಗುರುರಾಜ್‌ ಎಸ್‌. ದಾವಣಗೆರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸರ್ಕಾರಿ ಶಾಲೆ ಶಿಕ್ಷಕರು ಅಂದರೆ, ಬರೀ ಮೀಟಿಂಗ್‌, ರಜೆ ಇಷ್ಟರಲ್ಲೇ ಕಾಲ ಕಳೆಯುತ್ತಾರೆ ಅಂತ ಸುಲಭವಾಗಿ ಆರೋಪಿಸಬಹುದು. ಆದರೆ, ಮೂಡಿಗೆರೆ ತಾಲೂಕಿನ ಈ ಶಿಕ್ಷಕರ...

  • 19ನೇ ಶತಮಾನದ ಶ್ರೇಷ್ಠ ತಣ್ತೀಜ್ಞಾನಿಗಳಲ್ಲಿ ಒಬ್ಬನಾಗಿದ್ದ ಎ.ಎನ್‌. ವೈಟ್‌ಹೆಡ್‌ ಗಣಿತಜ್ಞನೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪೊ›ಫೆಸರನೂ ಆಗಿದ್ದ....

  • ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗೆ ಶಿಕ್ಷಕನಾಗಿ ಸೇರಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನ ಬೋಧನಾ ಶೈಲಿ, ಇಂಗ್ಲೀಷ್‌ ಭಾಷೆ ಆರಂಭದಲ್ಲಿ ಅಲ್ಲಿಯ ಶ್ರೀಮಂತ...

  • ಗ್ರೂಪ್‌ಸ್ಟಡಿ ಮಾಡಬೇಕಾ ಬೇಡವಾ? ಈ ಮಕ್ಕಳು ಗ್ರೂಪ್‌ ಸ್ಟಡಿ ಅಂತ ಹೇಳ್ಕೊಂಡು ಏನೂ ಓದಲ್ಲ. ಬೇಡದ್ದೇ ಮಾಡ್ತವೆ ಅನ್ನೋ ಆರೋಪವೂ ಇದೆ. ಇಂಥ ಸಂದರ್ಭದಲ್ಲೇ ಗ್ರೂಪ್‌...

  • ಹಳ್ಳಿಗೆ ಹೋಗಿ ಕೆಲ್ಸ ಮಾಡೋದು ವೈದ್ಯ ವೃತ್ತಿಗೆ ಕಡ್ಡಾಯ. ದೇಶದ ಎಕಾನಿಮಿಯ ಹೃದಯ ಗ್ರಾಮೀಣ ಭಾಗ. ಎಲ್ಲರೂ ಹಳ್ಳಿಯ ಕಡೆ ನೋಡುತ್ತಿರುವುದು ಇದೇ ಕಾರಣಕ್ಕೆ. ಹೀಗಾಗಿ,...

ಹೊಸ ಸೇರ್ಪಡೆ