Udayavni Special

ಪ್ರಧಾನಿಗೇ ಪತ್ರ ಬರೆದ ಶಾಲೆ


Team Udayavani, Jul 9, 2019, 5:30 AM IST

board-high-school

ಶನಿವಾರ ಬಂತೆಂದರೆ ನಂಜನಗೂಡಿನ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಪೇಪರ್‌ ಕವರ್‌ ಮಾಡುತ್ತಾರೆ. ಅದನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಬದಲಾಗಿ, ” ಇನ್ನು ಮೇಲೆ ನೀವು ಪ್ಲಾಸ್ಟಿಕ್‌ ಬಳಸಬೇಡಿ. ಇದನ್ನು ಬಳಸಿ. ತಗೊಳ್ಳಿ’ ಅಂತ ಊರ ಮುಂದಿನ ಅಂಗಡಿಗಳಿಗೆ ಕೊಟ್ಟು ಬರುತ್ತಾರೆ. ಹೀಗೆ ಕೊಟ್ಟಾಗ ಅಂಗಡಿಯವರಿಗೆ ಕಸಿವಿಸಿ ಆಗೋದು ಗ್ಯಾರಂಟಿ.

ನಾವು ಮಾಡಬೇಕಾದ ಕಾರ್ಯವನ್ನು ಮಕ್ಕಳು ಮಾಡುತ್ತಿದ್ದಾರಲ್ಲ ಅಂತ. ಹೀಗೆ, ಹೆಗ್ಗಡಹಳ್ಳಿಯ 9-10ನೇ ತರಗತಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ಪ್ಲಾಸ್ಟಿಕ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಪ್ಲಾಸ್ಟಿಕ್‌ ಬಳಸಿದರೆ ಏನೇನಾಗುತ್ತದೆ, ಆರೋಗ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಅನ್ನೋದನ್ನೆಲ್ಲಾ ಈ ಹುಡುಗರು ಅರೆದು ಕುಡಿದಿದ್ದಾರೆ. ಇದಕ್ಕೆಲ್ಲಾ ಕಾರಣ, ನಾಟಕದ ಮೇಷ್ಟ್ರು ಸಂತೋಷ್‌ ಗುಡ್ಡಿಯಂಗಡಿ. ಅವರು ವಿಜ್ಞಾನ ನಾಟಕ ಮಾಡಿಸುವಾಗ ಪ್ಲಾಸ್ಟಿಕ್‌ ಪರಿಣಾಮದ ಬಗ್ಗೆ ತಿಳಿಹೇಳಿದರು. ಇಷ್ಟೇ ಆದರೆ ಪ್ರಯೋಜನವಿಲ್ಲ. ನಾಟಕದ ನಂತರ ಮಕ್ಕಳೂ ಮರೆಯಬಹುದು ಅಂತ ವಿದ್ಯಾರ್ಥಿಗಳಿಗೆ ಅವರವರ ಮನೆಯಲ್ಲಿ ಬಳಸುವ ಪ್ಲಾಸ್ಟಿಕ್‌ ಅನ್ನು ತರಲು ಹೇಳಿದರು. ಹೀಗೆ ತಂದ ಪ್ಲಾಸ್ಟಿಕ್‌ ಅನ್ನು ಶಾಲೆಯ ಒಂದು ರೂಮಿನಲ್ಲಿ ಗುಡ್ಡೆ ಹಾಕಿ, ಆಯಾ ಕಂಪನಿ ಆಧರಿಸಿ ವಾರಕ್ಕೆ ಒಂದು ದಿನ ಬೇರ್ಪಡಿಸುತ್ತಾರೆ. ನಂತರ ಕಂಪನಿಗಳ ಪಟ್ಟಿ ಮಾಡಿ, ವಿಳಾಸ ಹುಡುಕಿ, ಆಯಾ ಕಂಪನಿಗಳಿಗೆ “ನಿಮ್ಮ ಕಂಪನಿಯಿಂದ ತಿಂಗಳಿಗೆ ಇಷ್ಟು ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ. ಇದರಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಆಗುತ್ತಿದೆ. ಹೀಗೆ ಮಾಡಿದರೆ ಮುಂದಿನ ನಮ್ಮ ಜನಾಂಗದ ಗತಿ ಏನು? ‘ ಅಂತ ಪ್ರಶ್ನೆ ಮಾಡಿ ಪತ್ರ ಬರೆದರು. ಹೀಗೆ, ಪತ್ರ ಬರೆಯಲು ಶುರುಮಾಡಿಯೇ 6 ತಿಂಗಳಾಯಿತು. ಈ ವರಗೆ 30ಕ್ಕೂ ಹೆಚ್ಚು ಕಂಪನಿಗಳಿಗೆ ಪತ್ರಗಳು ಹೋಗಿವೆ. ಅದರಲ್ಲಿ ಕೋಲ್ಗೆಟ್‌ ಕಂಪನಿ ಎಚ್ಚೆತ್ತುಕೊಂಡು, ಶಾಲೆಗೆ ಪತ್ರಹಾಕಿ. “2025 ರ ಒಳಗಾಗಿ ನಾವು ಪ್ಲಾಸ್ಟಿಕ್‌ ಮರು ಬಳಕೆಗೆ ಯೋಜಿಸಿದ್ದೇವೆ. ನಿಮ್ಮ ಕಾಳಜಿಗೆ ಧನ್ಯವಾದ’ ಅಂತ ಮರು ಪತ್ರ ಬರೆದಿದೆಯಂತೆ.

ಇಷ್ಟೆಲ್ಲಾ ಹೇಗೆ ಸಾಧ್ಯ?
ಈ ನಾಟಕದ ಮೇಷ್ಟ್ರದೇ ಕೈವಾಡ. ಅವರು ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್‌ ಪರಿಣಾಮದ ವೀಡಿಯೋ ತೋರಿಸಿದ್ದಾರೆ. ರುವಾಂಡದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನ ಉಗ್ರವಾಗಿ ವಿರೋಧಿಸಿದ್ದರಿಂದ ಗಳಿಸಿರುವ ಆರೋಗ್ಯಭಾಗ್ಯದ ಬಗ್ಗೆ ತಿಳಿ ಹೇಳಿದ್ದಾರೆ. ಹೀಗಾಗಿ, 160 ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್‌ ದುಷ್ಪರಿಣಾಮಗಳ ಬಗ್ಗೆ ಇರಿವು ಮೂಡಿದೆ. ಇದು ಯಾವ ಮಟ್ಟಕ್ಕೆ ಪರಿಣಾಮ ಬೀರಿದೆ ಎಂದರೆ, ಶಾಲೆಗೆ ಬರುವಾಗ ರಸ್ತೆಯಲ್ಲಿ ಸಿಗುವ ಪ್ಲಾಸ್ಟಿಕ್‌ ತಂದು ಶಾಲೆಗೆ ಹಾಕುತ್ತಾರೆ. ನಂತರ ಅದನ್ನು ವಿಂಗಡಿಸಿ, ಚರ್ಚೆ ಮಾಡಿ, ಮೇಷ್ಟ್ರ ಜೊತೆ ಸೇರಿ ಕಂಪನಿಗೆ ಪತ್ರ ಬರೆಯುತ್ತಿದ್ದಾರೆ.

ಮಕ್ಕಳು ಬರೆದ ಪತ್ರವನ್ನು ಕೊರಿಯರ್‌ ಮೂಲಕ ಕಳುಹಿಸುತ್ತಿದ್ದೆವು. ಅದಕ್ಕೆ ಖರ್ಚು ಹೆಚ್ಚಾಗುತ್ತದೆ. ಹೀಗಾಗಿ, ರಿಜಿಸ್ಟರ್‌ ಪೋಸ್ಟ್‌ ಮಾಡುತ್ತಿದ್ದೇವೆ ಎನ್ನುತ್ತಾರೆ ಸಂತೋಷ್‌.

ಅಂದಹಾಗೆ, ಈಗ ಪ್ರಧಾನಿಗಳಿಗೂ, ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದಾರಂತೆ. ಇವರ ಈ ಚಟುವಟಿಕೆಗಳಿಂದ ಸ್ಥಳೀಯ ಸರ್ಕಾರಿ ಯಂತ್ರಗಳೂ ಚುರುಕುಗೊಂಡಿವೆ. ಇಂಥ ಚಟುವಟಿಕೆಗಳು ನಡೆಯೋದು ಕೂಡ ಸರ್ಕಾರಿ ಶಾಲೇಲಿ ಮಾತ್ರ ಅನ್ನೋದೇ ಹೆಮ್ಮೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಮುಂದೂಡಲ್ಪಟ್ಟಿದ್ದ ಸಪ್ತಪದಿಗೆ ಕೂಡಿಬಂತು ಮುಹೂರ್ತ!

ಮುಂದೂಡಲ್ಪಟ್ಟಿದ್ದ ಸಪ್ತಪದಿಗೆ ಕೂಡಿಬಂತು ಮುಹೂರ್ತ!

IPLಪಂಜಾಬ್‌ಗ ಸೋಲಿನ ಪಂಚ್‌ ನೀಡಿದ ರಾಜಸ್ಥಾನ್‌

ಪಂಜಾಬ್‌ಗ ಸೋಲಿನ ಪಂಚ್‌ ನೀಡಿದ ರಾಜಸ್ಥಾನ್‌

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಕಾಲೇಜಿನಲ್ಲಿ ಪ್ರಾಯೋಗಿಕ ತರಗತಿಗೆ ಆದ್ಯತೆ

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರ: ಸುಧಾಕರ್

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಯುವಕನ ಆತ್ಮಹತ್ಯೆ- ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿರುವ ಶಂಕೆ

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

ಪಿಎಂ ಕಿಸಾನ್‌ ಯೋಜನೆ : ನಕಲಿ ಫಲಾನುಭವಿಗಳಿಗೆ ಜಿಲ್ಲಾಡಳಿತ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ಕಂಬ್ಳಿ ಹುಳದ ಪುರಾಣ

josh-tdy-3

ಬಾರೋ ಸಾಧಕರ ಕೇರಿಗೆ :ಕಾಫ್ಕನೂ, ಪುಟ್ಟಿಯ ಗೊಂಬೆಯೂ…

josh-tdy-2

ಸೋತುಹೋದೆ ಎಂದು ಮನಸ್ಸಿಗೆ ಹೇಳಬೇಡಿ…

josh-tdy-1

ಫೇಕ್‌ ಇಟ್‌ ಈಸಿ!

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

An outrage against people who don’t have the basic infrastructure

ಮೂಲ ಸೌಕರ್ಯ ಕಲ್ಪಿಸದ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

MLR

ಕುಂಟುತ್ತಾ ಸಾಗುತ್ತಿದೆ ಪಚ್ಚನಾಡಿ ರೈಲ್ವೇ ಮೇಲ್ಸೇತುವೆ ಕಾಮಗಾರಿ

Vote

ಪಂಚಾಯತ್‌ ಚುನಾವಣೆಗೆ ತಾಲೀಮು

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಹುಲಿ ಹೆಜ್ಜೆ ಗುರುತು ಗ್ರಾಮಸ್ಥರು ಆತಂಕ

ಹುಲಿ ಹೆಜ್ಜೆ ಗುರುತು ಗ್ರಾಮಸ್ಥರು ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.