ಕಾಲ್ಬೆರಳು ಕಾದಿವೆ ಕಣೋ ಹುಡುಗಾ! 

Team Udayavani, Aug 14, 2018, 6:00 AM IST

9.jpg

ಅವನು ಯಾವತ್ತು ಮರಳಿ ಬರುತ್ತಾನೋ ಗೊತ್ತಿಲ್ಲ. ಆದರೆ, ಅದೆಷ್ಟು ದಿನವಾದರೂ ಸರಿಯೇ, ನಾನು ಕಾಯುತ್ತೇನೆ. ಈ ಕಾಲ್ಬೆರಳುಗಳಿಗೆ ಬಣ್ಣ ಹಚ್ಚುವ ಅವಕಾಶವನ್ನು ನಾನೆಂದೂ ಬೇರೆಯವರಿಗೆ ಕೊಡಲಾರೆ. 

ತಂಗಾಳಿ ಬೀಸುತ್ತಿದೆ ಎಂದರೆ, ಪ್ರಕೃತಿ ಮಳೆಯನ್ನು ಬರ ಮಾಡಿಕೊಳ್ಳಲು ತಯಾರಿ ನಡೆಸಿದೆ ಅಂತ ಅರ್ಥ. ನನ್ನ ಮನದಲ್ಲಿ ತಂಗಾಳಿ ಸುಳಿದಾಡುತ್ತಿದ್ದರೆ, ಅವನು ಬಂದೇ ಬರುವ ಅನ್ನೋ ಖಾತರಿ. ಅವನು ನನ್ನತ್ತ ಹೆಜ್ಜೆ ಹಾಕಿದರೆ, ಮನಸ್ಸಿನಲ್ಲಿ ಸಾವಿರ ಚಿಟ್ಟೆಗಳ ಆಗಮನ. ಅವನು ನನ್ನೆದುರು ಹಾದು ಹೋದರೆ, ಭಾವದ ಅಲೆಗಳ ತಕಧಿಮಿತ. ಯಾಕಿರಬಹುದು? ನಮ್ಮಿಬ್ಬರಿಗೂ ಗೊತ್ತಿಲ್ಲ! ಆದರೆ ಈ ಭಾವವ ಬೊಗಸೆಯಲ್ಲಿಟ್ಟ ನಮ್ಮ  ಕಾಲೇಜ್‌ ಕ್ಯಾಂಪಸ್‌ಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ಕ್ಯಾಂಪಸ್‌ ಎಂಬ ದೋಣಿಯೇ ನಮ್ಮನ್ನು ಎದುರುಬದುರು ನಿಲ್ಲಿಸಿದ್ದು. ಅದೇ ಕ್ಯಾಪಂಸ್‌ನಿಂದಲೇ ನಮ್ಮ ಪಯಣ ಶುರುವಾಗಿದ್ದು. 

  ಈ ಪಯಣದಲ್ಲಿ ಬರೀ ಸುಖಗಳಿಗೆ, ನಲಿವುಗಳಿಗೆ ಮಾತ್ರ ಅವಕಾಶವಿತ್ತು. ಬೇರೆಲ್ಲವೂ ಇಲ್ಲಿ ನಗಣ್ಯ. ನಾವೆಂದೂ ಬೇರೆಯವರನ್ನು ಅನುಕರಿಸಲು ಹೊರಟವರಲ್ಲ. ಬೇರೆಯವರಂತೆ ಕೈ ಕೈ ಹಿಡಿದು ನಡೆಯಲಿಲ್ಲ, ಒನ್‌ ಬೈ ಟು ಕಾಫಿ ಕುಡಿಯಲಿಲ್ಲ, ಐಸ್‌ ಕ್ರೀಂ ಪಾರ್ಲರ್‌ಗೆ ನುಗ್ಗಿದವರಲ್ಲ. ಒಬ್ಬರಿಗೊಬ್ಬರು ದುಬಾರಿ ಉಡುಗೊರೆ ಕೊಡಲಿಲ್ಲ. ನಮ್ಮ ಪ್ರೀತಿ ತೋರಿಕೆಯದ್ದಾಗಿರಲಿಲ್ಲ. ಅದು ಹಸಿರು ತುಂಬಿದ ಮರದ ಮರೆಯಲ್ಲಿರುವ ಕಾಣದ ಕೋಗಿಲೆಯ ದನಿಯಂಥದ್ದು.

ಅವನು ನನಗೋಸ್ಕರ ಕೊಡುತ್ತಿದ್ದ ಉಡುಗೊರೆ ಯಾವುದು ಗೊತ್ತಾ? ನಾನು ಬೇಜಾರಿನಲ್ಲಿದ್ದಾಗ ನನಗೇ ಗೊತ್ತಿಲ್ಲದಂತೆ ನನ್ನಿಷ್ಟದ ನೈಲ್‌ ಪಾಲಿಶ್‌ ಅವನ ಕೈಯಲ್ಲಿರುತ್ತಿತ್ತು. ಅದನ್ನು ಅವನೇ ನನ್ನ ಕಾಲುಗುರಿಗೆ ಹಚ್ಚಬೇಕು. ಹಾಗಂತ ಅವನೇ ಆಸೆ ಪಡುತ್ತಿದ್ದ. ಹೀಗೆ ಪ್ರೀತಿ ಸುರಿದು ಕೊಟ್ಟ ಅವನು, ಆಡಲು ಕಲಿತ ಕಂದ ದಾರಿ ತಪ್ಪಿ ಕಳೆದು ಹೋಗುವಂತೆ ನನ್ನಿಂದ ಮರೆಯಾದ! ಅವನು ಯಾಕಾಗಿ ನನ್ನ ದಾರಿಯಿಂದ ಪಟ್‌ ಅಂತ ಕಾಲು ಕಿತ್ತನೋ ಗೊತ್ತಿಲ್ಲ. ಈ ಕಣ್ಣುಗಳು ಅವನನ್ನು ಕ್ಷಣ ಕ್ಷಣಕ್ಕೂ ಹುಡುಕಿ ಸೋತಿವೆ. ಬಿಸಿಲಿನೊಡಗೂಡಿ ಬಂದ ಮಳೆಯಲ್ಲಿ ಮೂಡಿದ ಕಾಮನಬಿಲ್ಲಿನಂತೆ, ಕಂಡೂ ಕಾಣದಂತೆ ಮರೆಯಾದ. 

ಅವನು ಯಾವತ್ತು ಮರಳಿ ಬರುತ್ತಾನೋ ಗೊತ್ತಿಲ್ಲ. ಆದರೆ, ಅದೆಷ್ಟು ದಿನವಾದರೂ ಸರಿಯೇ, ನಾನು ಕಾಯುತ್ತೇನೆ. ಈ ಕಾಲೆºರಳುಗಳಿಗೆ ಬಣ್ಣ ಹಚ್ಚುವ ಅವಕಾಶವನ್ನು ನಾನೆಂದೂ ಬೇರೆಯವರಿಗೆ ಕೊಡಲಾರೆ. ಆ ಬಣ್ಣಗಳು ಅವನಿಗೆ ಮಾತ್ರ ಸ್ವಂತ; ನನ್ನ ಕಾಲೆºರಳುಗಳು ಕೂಡ! 

ಸೌಮ್ಯ ಸಿ. ದೇವಾಂಗದ 

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.