ಅನುಮಾನಂ ಪೆದ್ದ ರೋಗಂ

ಮೂರು ನಿಮಿಷದ ಮನುಷ್ಯ

Team Udayavani, Apr 16, 2019, 6:06 AM IST

ಅಂದು ಅಮ್ಮನ ಜೊತೆ ಮುಂಬೈಗೆ ಹೊರಟಿದ್ದೆ. ಕುಡಚಿ ರೈಲು ನಿಲ್ದಾಣದಲ್ಲಿ ನಿಂತು ಸಹ್ಯಾದ್ರಿ ಎಕ್ಸ್‌ಪ್ರೆಸ್‌ಗೆ ಕಾಯುತ್ತಿದ್ದೆವು. ಸಮಯ 8 ಗಂಟೆ. ಅಮ್ಮ ಮಣಭಾರದ ಬ್ಯಾಗ್‌ಗಳನ್ನು ತಂದಿದ್ದರು.ನನಗೆ ಚಿಂತೆ… “ಹೇಗಪ್ಪಾ, ಈ ಲಗ್ಗೇಜುಗಳನ್ನು ರೈಲಿನಲ್ಲಿ ಎತ್ತಿ ಇಡೋದು?’ ಅಂತ. ಅಷ್ಟರಲ್ಲೇ ನಮ್ಮ ಪಕ್ಕದಲ್ಲಿ ಒಬ್ಬ ಹುಡುಗ ಬಂದು ನಿಂತಿದ್ದ. ಅವನನ್ನು ನೋಡಿ ಸ್ವಲ್ಪ ಭಯವಾಯಿತು. ಅಮ್ಮ ನೋಡ ನೋಡುತ್ತಲೇ ಆ ವ್ಯಕ್ತಿಯನ್ನು ಪರಿಚಯಮಾಡಿಕೊಂಡರು.

ಇನ್ನೇನು ರೈಲು ಬರಲು ಕೆಲವು ನಿಮಿಷಗಳು ಬಾಕಿ. ಆ ವ್ಯಕ್ತಿಗೆ ನಮ್ಮ ಲಗ್ಗೇಜುಗಳನ್ನು ರೈಲಿನಲ್ಲಿ ಇಡುವಂತೆ ಅಮ್ಮ ವಿನಂತಿಸಿಕೊಂಡರು. ನನಗೆ ಆತಂಕ… ಆತ ನಮ್ಮ ಲಗ್ಗೇಜ್‌ಗಳನ್ನು ತೆಗೆದುಕೊಂಡು ಪರಾರಿ ಆಗಿಬಿಟ್ಟರೆ ಅಂತ. ಅಮ್ಮನಿಗೆ ಬೈದೆ… “ಯಾಕೆ ಅಪಚಿತರನ್ನು ಅಷ್ಟು ಬೇಗ ನಂಬಿಬಿಡ್ತೀಯಾ? ಹಾಗೆ ನಂಬಬಾರದು’ ಎಂದೆ. ನಾನು ಹಾಗೆ ಅನುಮಾನದಿಂದ ನೋಡಿದ್ದು, ಆತನಿಗೆ ಕೊಂಚ ಕಸಿವಿಸಿಯೂ ಆಯಿತು.

ಟ್ರೈನ್‌ ಬಂತು. ತುಂಬಾ ರಶ್‌ ಇದ್ದ ಕಾರಣ, ನನಗೆ ಸೀಟೇ ಸಿಕ್ಕಿರಲಿಲ್ಲ. ಸುತ್ತಮುತ್ತಲೆಲ್ಲ ಹುಡುಗರೇ ಇದ್ದರು. ನನ್ನ ಸಂಕಷ್ಟ ನೋಡಿ, ಲಗ್ಗೇಜ್‌ ಎತ್ತಿಕೊಟ್ಟ ವ್ಯಕ್ತಿ ನನಗೆ ಸೀಟು ಬಿಟ್ಟುಕೊಟ್ಟ. ನನಗೆ ಆಗ ತಲೆ ತಗ್ಗಿಸುವಂತಾಯಿತು. ನಮ್ಮ ಸ್ಟಾಪ್‌ ಬಂದಾಗ, ಆತನೇ ಲಗ್ಗೇಜ್‌ ಇಳಿಸಿ, ಒಂದು ನಗು ಬೀರಿದ. ನಿಜಕ್ಕೂ ಆತ ಅವತ್ತು ನಮ್ಮ ಪಾಲಿಗೆ ಆಪದಾºಂಧವನಾಗಿದ್ದ.

ಎಲ್ಲರನ್ನೂ ಅನುಮಾನದ ತಕ್ಕಡಿಯಲ್ಲಿ ತೂಗಬಾರದು ಅಂತ ನನಗೆ ಆಗ ಅನ್ನಿಸಿತು.

ಪಲ್ಲವಿ ಸಂಜೀವ, ವಿಜಯಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇವತ್ತು ನಮ್ಮ ಸಮಾಜ ಹೇಗಿದೆ ಅಂದರೆ, 99 ಅಂಕ ಪಡೆದವರನ್ನು ಬಹಳ ಚೆನ್ನಾಗಿ ಆದರಿಸುತ್ತದೆ. 50 ಅಂಕ ಪಡೆದವರನ್ನು ಕ್ಯಾರೇ ಅನ್ನೋದಿಲ್ಲ. 90 ಅಂಕ ಪಡೆದ ವಿದ್ಯಾರ್ಥಿಗೆ...

  • ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫ‌ಲಿಸಿ ನೋಡುಗನ ಕಣ್ಣಿಗೆ ಕಂಡಾಗ ಆ ಚಿತ್ರಣದಲ್ಲಿ ಕಪ್ಪು ನೆರಳಿನ ಭಾಗ ಬಿಟ್ಟು ಇನ್ನುಳಿದವು ಕೆಂಪು, ಕಿತ್ತಳೆ ಅಥವಾ ಹಳದಿ...

  • ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಒಂದು ಸೇವಾ ಉದ್ಯಮವೆಂದರೆ ಆರೋಗ್ಯ ಸೇವಾ ಉದ್ಯಮ. ಅರ್ಥಾತ್‌ ಆಸ್ಪತ್ರೆ, ರೋಗ ಶುಶ್ರೂಷೆ. ಕೇವಲ ಕಟ್ಟಡ, ಉಪಕರಣ, ದಾದಿಯರು...

  • ಹುತಾತ್ಮರಾದ ಯೋಧರ ಅಂತ್ಯಕ್ರಿಯೆಗೆ ಹೆಗಲು ಕೊಡುವ ಶಹಾಪುರದ ಈಶ್ವರ್‌, ನಡು ರಾತ್ರಿಯೋ, ಬೆಳಗಿನ ಜಾವವೋ ಬರುವ ಯೋಧರು ವಿಶ್ರಾಂತಿ ತೆಗೆದುಕೊಳ್ಳುವಂತೆ ಏರ್ಪಾಟು...

  • ನಿನ್ನೊಂದಿಗೆ ಮಾತಿಗಿಳಿದರೆ ಯಾವ ಟ್ರಾಫಿಕ್‌ ಜಾಮ್‌ ಕೂಡಾ ವಿಳಂಬವೆನಿಸದು. . ನಿನ್ನ ಹೆಜ್ಜೆಗಳೊಂದಿಗೆ ಹೆಜ್ಜೆಗೂಡಿಸಿ ನಡೆಯುತ್ತಿದ್ದರೆ ಗೋಜಲ ಹಾದಿಯೇ ನಮ್ಮ...

ಹೊಸ ಸೇರ್ಪಡೆ