ಒಂದರಲ್ಲಿ ಟಾಪರ್‌, ಮೂರರಲ್ಲಿ ಫ್ಲಾಪರ್‌


Team Udayavani, Oct 23, 2018, 6:00 AM IST

5.jpg

ಫ‌ಸ್ಟ್‌ ಪಿಯೂಸಿ ಓದುವಾಗ ನಡೆದ ಘಟನೆ. ನನಗೆ ಕೆಮಿಸ್ಟ್ರಿ ಎಂದರೆ ಅಚ್ಚುಮೆಚ್ಚು. ತಗೊಂಡ ಕಾಂಬಿನೇಷನ್‌ ಪಿಸಿಎಂಬಿ ಆದರೂ ಫಿಸಿಕ್ಸ್‌ನಲ್ಲಿ ಆ ಲಾಗಳು, ಅಪ್ಲಿಕೇಶನ್‌ಗಳು ತಲೆಗೆ ಹತ್ತುತ್ತಿರಲಿಲ್ಲ, ಬಯಾಲಜಿ ಹೆಸರುಗಳಂತೂ ಉಚ್ಛರಿಸಲು ನಾಲಗೆ ಹೊರಳುತ್ತಿರಲಿಲ್ಲ. ಜೊತೆಗೆ ಕ್ಲಿಷ್ಟಕರ ಹೆಸರುಗಳು ಒಂದೂ ಜ್ಞಾಪಕವಿರುತ್ತಿರಲಿಲ್ಲ. ಗಣಿತಕ್ಕೆ ದೇವರೇ ಗತಿ! ಆ ರಾಶಿ ರಾಶಿ ಫಾರ್ಮುಲಾಗಳನ್ನು ನೆನಪಿಟ್ಟುಕೊಂಡರೂ ಯಾವ ಸಮಯದಲ್ಲಿ ಯಾವ ಫಾರ್ಮುಲಾ ಉಪಯೋಗಿಸಬೇಕು ಎಂಬುವಲ್ಲಿ ಎಡವುತ್ತಿದ್ದೆ. ಇದ್ಯಾವ ಜಂಜಾಟವೂ ಇಲ್ಲದ ಕೆಮಿಸ್ಟ್ರಿ ನನಗೆ ಸುಲಭ ಎನಿಸಿತ್ತು.  ಹಾಗಾಗಿ ಬರೀ ಅದೊಂದೇ ವಿಷಯಕ್ಕೆ ಹೆಚ್ಚು ಒತ್ತು ನೀಡಿದ್ದೆ. ಎಷ್ಟೋ ವರ್ಷಗಳ ನಂತರ ಈಗ ನನಗೆ ಅನಿಸುತ್ತಿರುವುದು ವಿಜಾnನದ ಬದಲು ಕಲಾ ವಿಭಾಗ ನನ್ನ ಆಯ್ಕೆ ಆಗಬೇಕಿತ್ತೇನೋ ಎಂದು. 

ಮೊದಲನೇ ಕಿರುಪರೀಕ್ಷೆಗೆ ಹಾಜರಾಗಿದ್ದಾಯಿತು. ಆಯಾ ವಿಷಯದ ಶಿಕ್ಷಕರು, ಆಯಾ ಪೀರಿಯಡ್ಡಿನಲ್ಲಿ ಉತ್ತರ ಪತ್ರಿಕೆಗಳನ್ನು ನೀಡುತ್ತಾ ಎಲ್ಲರ ಮುಂದೆ ಮಾರ್ಕ್ಸ್ ಅನೌನ್ಸ್‌ ಮಾಡುವಾಗ ಜೀವವೇ ಬಾಯಿಗೆ ಬಂದಿತ್ತು. ಒಟ್ಟು 25 ಮಾರ್ಕ್ಸ್ಗಳ ಪೇಪರ್‌ನಲ್ಲಿ ಫಿಸಿಕ್ಸ್‌ನಲ್ಲಿ 5, ಬಯಾಲಜಿಯಲ್ಲಿ 7, ಗಣಿತದಲ್ಲಿ 6 ಅಂಕಗಳು ಬಂದಿದ್ದವು. ಮಗಳು ಡಾಕ್ಟರ್‌ ಆಗುತ್ತಾಳೆಂದು ಕನಸು ಕಾಣುತ್ತಿದ್ದ ಅಪ್ಪನಿಗೆ ಹೇಗೆ ಮುಖ ತೋರಿಸುವುದೆಂದು ನಾನು ಯೋಚಿಸುತ್ತಿದ್ದೆ. ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರನ್ನು ಮುಂದಕ್ಕೆ ಕರೆದು, ತರಗತಿಯಲ್ಲಿ ಎಲ್ಲರ ಮುಂದೆ ಶಹಬ್ಟಾಸ್‌ಗಿರಿ ಕೊಟ್ಟು ಚಪ್ಪಾಳೆ ಹೊಡೆಸುತ್ತಿದ್ದರು. ನನ್ನ ಕರ್ಮಕ್ಕೆ ಕ್ಲಾಸಿಗೆ ಟಾಪರ್‌ ಆಗಿದ್ದ ಹುಡುಗಿ ನನ್ನ ಪಕ್ಕದಲ್ಲೇ ಕುಳಿತುಕೊಂಡಿರಬೇಕೇ?  ಚಪ್ಪಾಳೆ ಹೊಡೆಸಿಕೊಳ್ಳಲು ಅವಳು, ಫೇಲಾಗಿದ್ದಕ್ಕೆ ಉಗಿಸಿಕೊಳ್ಳಲು ನಾನು! ನಮ್ಮ ಜೋಡಿ ಸರಿಯಾಗಿತ್ತು. ಪ್ರತಿಸಲ ಆಕೆ ಹೆಮ್ಮೆಯಿಂದ ಬೀಗುವಾಗ ನಾನು ಅವಮಾನದಿಂದ ಕುಗ್ಗಿ ಹೋಗುತ್ತಿದ್ದೆ.

ಅದರ ಮುಂದಿನ ಕ್ಲಾಸು ಕೆಮಿಸ್ಟ್ರಿಯದು. ನಾನು ಫೇಲಾದ ದುಃಖದಲ್ಲಿದ್ದೆ. ಅದೇ ಸಮಯಕ್ಕೆ ಶಿಕ್ಷಕರು “ಈ ಸಲ ನಳಿನಿ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ’ ಎಂದು ಘೋಷಿಸಿ, ತರಗತಿಯ ಮುಂದಕ್ಕೆ ಕರೆದು ಚಪ್ಪಾಳೆ ಹೊಡೆಸಿದರು. ನಾನು ಪೆಚ್ಚು ಪೆಚ್ಚಾಗಿ ನೋಡಿದ್ದೆ. ಎರಡು ಸಬ್ಜೆಕ್ಟ್ ಫೇಲಾಗಿದ್ದಕ್ಕೆ ಅಳಬೇಕೋ, ಒಂದು ವಿಷಯದಲ್ಲಿ ತರಗತಿಗೇ ಹೆಚ್ಚು ಅಂಕ ಪಡೆದುಕೊಂಡಿದ್ದಕ್ಕೆ ಸಂತೋಷ ಪಡಬೇಕೋ ತಿಳಿಯದೆ ಒದ್ದಾಡಿದ್ದೆ.  ಮೂರು ವಿಷಯಗಳಲ್ಲಿ ಅಂಕಗಳು ತಳಹತ್ತಿ, ಒಂದು ವಿಷಯದಲ್ಲಿ ಅತಿ ಹೆಚ್ಚಾಗಿ ತೇಲಾಡಿದ ನನ್ನೆಡೆ ಸಹಪಾಠಿಗಳಂತೂ ವಿಚಿತ್ರ ಪ್ರಾಣಿ ನೋಡುವಂತೆ ನೋಟ ಬೀರುತ್ತಿದ್ದ ನೆನಪು ಹಸಿರಾಗಿದೆ.  
                                     
ನಳಿನಿ. ಟಿ. ಭೀಮಪ್ಪ, ಧಾರವಾಡ

ಟಾಪ್ ನ್ಯೂಸ್

1-sadsa

ಕಾಲಾವಕಾಶ ಕೇಳಿದ ಹೊರತಾಗಿಯೂ ಶರಣಾದ ನವಜೋತ್ ಸಿಂಗ್ ಸಿಧು

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

1-ffsf

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರಕಾರ

ಅಂಕೋಲಾ : ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ, ಮೂರು ತಾತ್ಕಾಲಿಕ ಸೇತುವೆ ಮುಳುಗಡೆ

ಅಂಕೋಲಾ : ಭಾರಿ ಮಳೆಗೆ ಮೂರು ಸೇತುವೆ ಸಂಪೂರ್ಣ ಮುಳುಗಡೆ, ಗ್ರಾಮಗಳ ಸಂಪರ್ಕ ಕಡಿತ

bommai

ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ ಖಚಿತ: 26 ಕ್ಕೆ ವಾಪಸ್

siddaramaiah

ರಾಜ್ಯಸಭೆ ಚುನಾವಣೆ; ನಾಳೆ ಸಿದ್ದರಾಮಯ್ಯ ನವದೆಹಲಿಗೆ :ಹೈಕಮಾಂಡ್‌ ಜತೆ ಚರ್ಚೆ

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಅಪಘಾತ : ಇಬ್ಬರು ಸಾವು, ಓರ್ವ ಗಂಭೀರ

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಅಪಘಾತ : ಇಬ್ಬರು ಸಾವು, ಓರ್ವ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

ಹೊಸ ಸೇರ್ಪಡೆ

1-sadsa

ಕಾಲಾವಕಾಶ ಕೇಳಿದ ಹೊರತಾಗಿಯೂ ಶರಣಾದ ನವಜೋತ್ ಸಿಂಗ್ ಸಿಧು

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

ಎಟಿಆರ್‌ ಕಣ್ಣಿಗೆ ಬೆಣ್ಣೆ , ಕೆಎಂಶಿ ಕಣ್ಣಿಗೆ ಸುಣ್ಣ ಏಕೆ?; ಬಿಜೆಪಿ

ಎಟಿಆರ್‌ ಕಣ್ಣಿಗೆ ಬೆಣ್ಣೆ , ಕೆಎಂಶಿ ಕಣ್ಣಿಗೆ ಸುಣ್ಣ ಏಕೆ?; ಬಿಜೆಪಿ

ರಬಕವಿ-ಬನಹಟ್ಟಿಯಲ್ಲಿ ದಾಖಲೆಯ 10 ಸೆಂ.ಮೀ ಮಳೆ : 21 ಮನೆಗಳಿಗೆ ಹಾನಿ 

ರಬಕವಿ-ಬನಹಟ್ಟಿಯಲ್ಲಿ ದಾಖಲೆಯ 10 ಸೆಂ.ಮೀ ಮಳೆ : 21 ಮನೆಗಳಿಗೆ ಹಾನಿ 

ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಒತ್ತು; ಸಚಿವ ಡಾ.ಕೆ.ಸುಧಾಕರ್‌

ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಒತ್ತು; ಸಚಿವ ಡಾ.ಕೆ.ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.