ನೋಡಿ ಸ್ವಾಮಿ, ನಾವಿರೋದೇ ಹೀಗೆ…

ಐಟಿ ಬದುಕು

Team Udayavani, Dec 10, 2019, 5:48 AM IST

ಅರಮನೆಗಳನ್ನು ದೂರದಿಂದ, ಯಾವತ್ತೋ ಒಂದು ದಿನ ಹೋಗಿ ನೋಡಿದರೆ ಬಹಳ ಚೆನ್ನಾಗಿರುತ್ತದೆ. ನಮ್ಮ ಸಾಫ್ಟವೇರ್‌ ಬದುಕು ಕೂಡ ಹೀಗೇ. ದೂರದ ಜಗತ್ತಿಗೆ ಇಲ್ಲಿ ಹಣ, ನೆಮ್ಮದಿ ಎಲ್ಲವೂ ದಂಡಿಯಾಗಿ ಇರುವಂತೆ ಕಾಣುತ್ತಿದೆ. ಆದರೆ ವಾಸ್ತವವೇ ಬೇರೆ. ಬಿಡ್ರೀ ಅವರಿಗೇನು? ದುಡ್ಡಿದೆ ಎಂದು ತೇಲಿಸಿ ಮಾತಾಡುವವರಿಗೆ, ಸಾಫ್ಟ್ವೇರ್‌ ಬದುಕು ಹೇಗಿದೆ ಅನ್ನೋದರ ಅನಾವರಣ ಹೀಗಿದೆ…

ವಾರಾಂತ್ಯ ಬಂದರೆ ಸಾಕು; ಮನಸ್ಸಿಗೆ ಅದೇನೋ ಖುಷಿ. ವಾರದಲ್ಲಿ ಈ ಎರಡು ದಿನಗಳು ರಜೆ ಇರದಿದ್ದರೇ…! ಐ.ಟಿ ಯಲ್ಲಿ ಕೆಲಸ ಮಾಡುವ ಸಾಕಷ್ಟು ಮಂದಿ ಇಷ್ಟೊತ್ತಿಗೆ ಅರೆ ಹುಚ್ಚರಾಗಿಬಿಡುತ್ತಿದ್ದರು.

ಇಲ್ಲಿಯ ಕೆಲಸ ದೂರದಿಂದ ನೋಡುವವರಿಗೆ ಸಕತ್‌ ಸಾಫ್ಟ್ ಆಗಿ ಕಾಣುತ್ತಿರುತ್ತದೆ. ಮೈಸೂರು ಅರಮನೆಯನ್ನು ದೂರದಿಂದ ನೋಡಿದ ಹಾಗೇ. ಅದರಲ್ಲಿ ಇರೋರಿಗೆ ಗೊತ್ತಾಗುತ್ತೆ ಕಷ್ಟ     -ಸುಖ. ಎಷ್ಟೋ ಜನ ನಾವೂ ಸಾಫ್ಟ್ವೇರ್‌ ಎಂಜಿನಿಯರ್‌ ಆಗಬೇಕು ಅಂತಾರೆ. ಅದು ನೋಡುವ ಉಡುಗೆಯಿಂದ, ದೊಡ್ಡ ಮಹಡಿಯಿಂದ ಹೊಳೆಯುವ ಗ್ಲಾಸ್‌ ಆಫೀಸಿನಿಂದ. ನಮ್ಮ ಜಗತ್ತಿನೊಳಗೆ ಹೆಜ್ಜೆ ಇಟ್ಟು ನೋಡಿದಾಗ ತಿಳಿಯುತ್ತದೆ. ನಿಜವಾದ ಸಾಫ್ಟ್ವೇರ್‌ ಇಂಜಿನಿಯರ್‌ನ ಹಾರ್ಡ್‌ ಕೆಲಸ . ನಮ್ಮ ಕೆಲಸವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ..

ಏಯ…, ಬಿಡು ಮಾರಾಯ. ಅದು ಏನೋ ನೀವು ಯಾವಾಗಲೂ ಕಂಪ್ಯೂಟರ್‌ ಪರದೆ ನೋಡುತ್ತಾ ಕಾಲ ಕಳೆಯುತ್ತಿರುತ್ತೀರಾ? ಎಂದು ಹಗುರವಾಗಿ ಮಾತನಾಡುವುದೂ ಉಂಟು. ಇದು ಸಲ್ಲ. ನಿತ್ಯ ಸರಿಯಾದ ಸಮಯಕ್ಕೆ ಆಫೀಸ್‌ ಗೆ ಬರುವುದು ಮಾತ್ರ ಗೊತ್ತು. ಅದೇ ಸಂಜೆ, ಸರಿಯಾದ ಟೈಂ ಗೆ ಮನೆಗೆ ಹೋಗುವುದು ಕಷ್ಟ. ಈ ಕೆಲಸದ ಕರಾಮತ್ತೇ ಹಾಗೆ. ಅದರ ವಿಚಾರವನ್ನು ಯಾರ ಬಳಿಯೂ ಹೇಳಿಕೊಳ್ಳುವ ಹಾಗಿಲ್ಲ ..ಸರ್ಕಾರಿ ಕೆಲಸ ದೇವರ ಕೆಲಸ ಅಂತ ಸುಮ್ಮನೆ ಹೇಳಿಲ್ಲ. ಒಂದು ಸಲ ಸರ್ಕಾರಿ ನೌಕರಿ ಕೆಲಸ ಸಿಕ್ಕಿದರೆ ಮುಗಿಯಿತು. 58-60 ವರ್ಷ ಆಗುವವರೆಗೂ ಯಾವ ತಲೆ ಬಿಸಿಯಿಲ್ಲ ..

ಈ ವಿಚಾರ ಏಕೆ ಹೇಳ್ತಿದ್ದೀನಿ ಅಂದರೆ, ಐ.ಟಿ ಬಿ.ಟಿ ನೌಕರರಿಗೆ, ಕೆಲಸ ಸಿಕ್ಕ ಕ್ಷಣದಿಂದಲೇ ಅದನ್ನು ಉಳಿಸಿಕೊಳ್ಳುವ ಹೋರಾಟ ಶುರುವಾಗುತ್ತದೆ. ವೇತನವನ್ನು ಹೆಚ್ಚಿಸಿಕೊಳ್ಳುವುದು, ಕ್ವಾರ್ಟರ್‌, ಮಧ್ಯ ವಾರ್ಷಿಕ, ವಾರ್ಷಿಕ ಅಪ್ರೈಸಲ…ನಲ್ಲಿ ರೇಟಿಂಗ್‌ ಜಾಸ್ತಿ ಪಡೆಯುವುದು ಹೆಗ್ಗುರಿ. ಹೀಗೆ ಕೆಲಸದ ಜೊತೆಯಲ್ಲಿಯೇ ಬರುವ ಒಳಗಿನ ತನ್ನ ವ್ಯಥೆಯನ್ನು ಮತ್ತೂಬ್ಬ ಐ.ಟಿ ಉದ್ಯೋಗಿ ಮಾತ್ರ ಅರ್ಥ ಮಾಡಿಕೊಳ್ಳಬಲ್ಲನು.

ಆದ್ದರಿಂದಲೇ ವಾರದ ರಜೆಗೆ ಇಲ್ಲಿ ಬಲು ಮಹತ್ವ. ಆ ಎರಡು ದಿನವಾದರೂ ಆರಾಮಾಗಿ ಬೇಗ ಮಲಗಿ ಲೇಟಾಗಿ ಏಳುವ ಕನಸು. ಎರಡು ದಿನವಾದರೂ ಖುಷಿಯಾಗಿ ಎಲ್ಲರೊಂದಿಗೆ ಬೆರೆತು ಊಟ ಮಾಡುವ ಸಂತೋಷ. ಯಾವುದೋ ಪ್ರೀತಿಯ ಕಾದಂಬರಿಯ ಅರ್ಧ ಓದನ್ನು ಎರಡು ದಿನದಲ್ಲಿ ಮುಗಿಸುವ ಆತುರ.

ಒಂದು ಸಲ ಹೀಗಾಯ್ತು.
ಇಂಥದ್ದೊಂದು ಶನಿವಾರ ತಾನೊಬ್ಬನೇ ಮನೆಯಲ್ಲಿ ಸಂಭ್ರಮಿಸುವಾ ಎಂದು ಎದ್ದಿದ್ದೇ ಮುಂಜಾನೆ 9ಕ್ಕೆ. ಸಧ್ಯ ಲ್ಯಾಪ್‌ ಟಾಪ್‌ ತೆಗೆದು ಇಶ್ಯೂ ಚೆಕ್‌ ಮಾಡುವ ಗೋಜು ಇರಲಿಲ್ಲ.

ಹೊರಗಡೆ ವಾತಾವರಣ ಸುಂದರವಾಗಿ ಕಾಣುತ್ತಿತ್ತು. ಇದೀಗ ತಾನೇ ಸ್ನಾನ ಮಾಡಿದ ಪ್ರಕೃತಿ ಮಾತೆಯಂತೆ ಹಚ್ಚಹಸಿರಾಗಿ ಕಂಗೊಳಿಸುತ್ತಿತ್ತು. ಊಟ ಮಾಡಿ ಹೀಗೆ ವಾಕ್‌ ಹೋಗಿ ಬರೋಣವೆಂದುಕೊಂಡೆ. ಟೇಂಪರೇಚರ್‌ 23 ತೋರಿಸುತ್ತಿತು. ವಾಕಿಂಗ ಲೇನ್‌ನಲ್ಲಿ ಯಾರೊಬ್ಬರೂ ಇಲ್ಲ. ಅದು ದೂರದಲ್ಲಿ ಅಮೇರಿಕಾದ ಲೇಡಿ ರನ್ನಿಂಗ್‌ … ಮಾಡಿಕೊಂಡು ಬರುತ್ತಿದ್ದಳು. ಹತ್ತಿರಕ್ಕೆ ಬಂದಾಗ ಹಾಯ…! ಎಂದು ಹಾಗೆಯೇ ಓಡುತ್ತಾ ಮರೆಯಾದಳು. ನಿತ್ಯ ಹೋಗುತ್ತಿದ್ದಷ್ಟು ದೂರ ಹೋಗಲು ಸಾಧ್ಯವಿಲ್ಲವೆಂದು ನಡೆಯುತ್ತಾ ಸಾಗಿದೆ.

ರಾತ್ರಿಗೆ ಏನು ಅಡುಗೆ ಮಾಡುವುದು? ಹೊಟ್ಟೆಯ ನೆನಪು ಮಾತ್ರ ಇರಲೇಬೇಕು. ಒಬ್ಬರೇ ಇದ್ದರೂ ಅಡುಗೆ ಇಬ್ಬರೂ ಇದ್ದರೂ ಅಡುಗೆ ಮಾಡಲೇಬೇಕು. ಅವಲಕ್ಕಿ ಮಾಡಿದರೇ ಭೇಷ್‌ ಅನಿಸಿತು. ಅದನ್ನು ಸುಲಭವಾಗಿ ಮಾಡಿದರಾಯ್ತು ಎಂದುಕೊಂಡೆ. ಪುನಃ ಲ್ಯಾಪ್‌ ಟಾಪ್‌ ಆನ್‌ ಮಾಡಿದೆ. ಹಾಗೆಯೇ, ಫೇಸುºಕ್‌ ಫ್ರೆಂಡ್‌ಲಿಸ್ಟ್‌ನಲ್ಲಿರುವ ಗೆಳೆಯ ಅವನ ಫ್ರೆಂಡ… ಗೆ ಕಾಮೆಂಟ್‌ ಹಾಕಿದ್ದಾ.

ಉಫ್!
ಅವಲಕ್ಕಿ ರಡಿಯಾಯಿತು.
ಹಾಗೆಯೇ ನನ್ನ ಬ್ಲಾಗ್‌ ಕೊಂಡಿಯನ್ನು ಓಪನ್‌ ಮಾಡಿದೆ. ಅಲ್ಲಿರುವ ಮುಂದಿನ ಬ್ಲಾಗ… ಕೊಂಡಿಯನ್ನು ಕ್ಲಿಕ್ಕಿಸಿದೆ. ಇನ್ನೊಂದು ಕನ್ನಡ ಕವನಗಳ ಬ್ಲಾಗ್‌ ಬಂತು. ಸಾಹಿತ್ಯಕ್ಕೆ ಸಂಬಂಧಿಸಿದ್ದು ಇನ್ನೊಂದು. ಪಂಡಿತ್‌ ಎಂಬುವವರು ಉತ್ತಮ ಪುಸ್ತಕ ವಿಮರ್ಶೆಗಳನ್ನು ಮಾಡಿದ್ದರು. ಭೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಬರೆದಿರುವುದನ್ನು ಪೂರ್ತಿ ಓದಿದೆ. ಓದುವುದಕ್ಕೆ ಸಮಯವಿದ್ದರೆ, ಅವರೆಲ್ಲರ ಅನುಭವಗಳನ್ನು ನಮ್ಮದಾಗಿಸಿಕೊಳ್ಳಬಹುದು. ವಾರಾಂತ್ಯಕ್ಕೆ ಇದಕ್ಕಿಂತ ಉತ್ತಮವಾದ ಸಂಗತಿ ಇನ್ನು ಏನಿದೆ?

ಶನಿವಾರದ ರಜೆ ಹೀಗೆ ಮುಗಿಯಿತು. ನಾಳೆ ಭಾನುವಾರ. 12 ಕ್ಕೆ .. ಗೆಟ್‌ಟುಗೆದರ್‌. ಆಫೀಸ್‌ ಗೆಳೆಯರೆಲ್ಲ ತಿಂಗಳಿಗೊಮ್ಮೆ ಒಟ್ಟಿಗೆ ಸೇರಿ ಕೆಲವು ಸಮಯವನ್ನು ಖುಷಿಯಾಗಿ ಕಳೆಯುವುದು. ನಾವುಗಳೇ ಮಾಡಿಕೊಂಡು ಬಂದಂಥ ವಿವಿಧ ಬಗೆಯ ಭಕ್ಷ್ಯಗಳನ್ನು ಹಂಚಿಕೊಂಡು ಒಟ್ಟಿಗೆ ತಿನ್ನುವುದು. ಈ ಭಾರಿಯ ನನ್ನ ಪಾಲಿನ ತಿನಿಸು ವೆನಿಲಾ ಐಸ್‌ ಕ್ರೀಮ….ನೆನಪಾಯಿತು.

ಎಲ್ಲವೂ ಲೆಕ್ಕ ಹಾಕಿದ ಹಾಗೇ ನಡೆಯಿತು. ಬೆನ್ನಿಗೇ ಮಾರನೆ ದಿನ ಸೋಮವಾರ ಬಂದೇ ಬಿಟ್ಟಿತು. ಶಾಲೆಗೆ ಹೋಗಲ್ಲ ಅಂತ ಹಠ ಮಾಡುವ ಮಗುವಿನಂತೆ ಮನಸ್ಸು ಚಂಡಿ ಹಿಡಿಯಿತು, ಆಫೀಸಿಗೆ ಹೋಗಲ್ಲ ಅಂತ. ಸಾರಿ ಸಾರಿ ಹೇಳಿಯಾದ ಮೇಲೆ, ಕ್ಯಾಲೆಂಡರ್‌ ಮೇಲೆ ಮತ್ತೆ ಶನಿವಾರ, ಭಾನುವಾರ ಕಂಡಾಗ… ಐದು ದಿನ ಕೆಲಸ ಮಾಡಿದರೆ ಮತ್ತೆ ಎರಡು ದಿನ ರಜೆ ಅಂತ ಮನಸ್ಸು ಕುಣಿದಾಡಿತು. ಅದೇ ಉತ್ಸಾಹವಾಗಿ, ಆತ್ಮವಿಶ್ವಾಸವಾಗಿ ಆಫೀಸಿಗೆ ಹೋಗಲು ಎದ್ದು ನಿಂತೆ.
ಕಣ್ಣಲ್ಲಿ ಮತ್ತೆ ರಜೆ ಸಿಗುವ ಆಸೆಯಲಿ…

ಸೌಮಿನಿ ಹನುಮಜೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸರ್ಕಾರಿ ಶಾಲೆ ಶಿಕ್ಷಕರು ಅಂದರೆ, ಬರೀ ಮೀಟಿಂಗ್‌, ರಜೆ ಇಷ್ಟರಲ್ಲೇ ಕಾಲ ಕಳೆಯುತ್ತಾರೆ ಅಂತ ಸುಲಭವಾಗಿ ಆರೋಪಿಸಬಹುದು. ಆದರೆ, ಮೂಡಿಗೆರೆ ತಾಲೂಕಿನ ಈ ಶಿಕ್ಷಕರ...

  • 19ನೇ ಶತಮಾನದ ಶ್ರೇಷ್ಠ ತಣ್ತೀಜ್ಞಾನಿಗಳಲ್ಲಿ ಒಬ್ಬನಾಗಿದ್ದ ಎ.ಎನ್‌. ವೈಟ್‌ಹೆಡ್‌ ಗಣಿತಜ್ಞನೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪೊ›ಫೆಸರನೂ ಆಗಿದ್ದ....

  • ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗೆ ಶಿಕ್ಷಕನಾಗಿ ಸೇರಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನ ಬೋಧನಾ ಶೈಲಿ, ಇಂಗ್ಲೀಷ್‌ ಭಾಷೆ ಆರಂಭದಲ್ಲಿ ಅಲ್ಲಿಯ ಶ್ರೀಮಂತ...

  • ಗ್ರೂಪ್‌ಸ್ಟಡಿ ಮಾಡಬೇಕಾ ಬೇಡವಾ? ಈ ಮಕ್ಕಳು ಗ್ರೂಪ್‌ ಸ್ಟಡಿ ಅಂತ ಹೇಳ್ಕೊಂಡು ಏನೂ ಓದಲ್ಲ. ಬೇಡದ್ದೇ ಮಾಡ್ತವೆ ಅನ್ನೋ ಆರೋಪವೂ ಇದೆ. ಇಂಥ ಸಂದರ್ಭದಲ್ಲೇ ಗ್ರೂಪ್‌...

  • ಹಳ್ಳಿಗೆ ಹೋಗಿ ಕೆಲ್ಸ ಮಾಡೋದು ವೈದ್ಯ ವೃತ್ತಿಗೆ ಕಡ್ಡಾಯ. ದೇಶದ ಎಕಾನಿಮಿಯ ಹೃದಯ ಗ್ರಾಮೀಣ ಭಾಗ. ಎಲ್ಲರೂ ಹಳ್ಳಿಯ ಕಡೆ ನೋಡುತ್ತಿರುವುದು ಇದೇ ಕಾರಣಕ್ಕೆ. ಹೀಗಾಗಿ,...

ಹೊಸ ಸೇರ್ಪಡೆ