ವ್ಹಾ ತಾಜ್‌! ಅಯ್ಯೋ, ನನ್‌ ಕ್ಯಾಮೆರಾ…!

Team Udayavani, Jan 23, 2018, 12:33 PM IST

23-21.jpg

ತಾಜ್‌ಮಹಲ್‌ ಬಗ್ಗೆ ನನ್ನಲ್ಲಿ ಆಸೆ ಹುಟ್ಟಿಸಿದ್ದು “ಅಮೃತಧಾರೆ’ ಸಿನಿಮಾ. ಅಲ್ಲಿ ಪುರು, ಅಮೃತಾಳನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಪ್ರೇಮದ ಉತ್ತುಂಗವನ್ನು ತೋರಿಸುವ ಆ ಮಧುರ ಕ್ಷಣವೇ ಅದ್ಭುತ. ಹಾಗೆ ನನ್ನ ಪತಿಯೂ ನನ್ನನ್ನು ಅದೇ ರೀತಿ ಮಲಗಿಸಿಕೊಂಡು, ತಾಜ್‌ಮಹಲ್‌ ತೋರಿಸಬೇಕು ಎಂದು ಹಂಬಲಿಸುತ್ತಲೇ ಇದ್ದೆ. ಅದು ಮೊನ್ನೆ ಈಡೇರಿತು.

ಪುರು ಎಲ್ಲಿ ಅಮೃತಾಳನ್ನು ಕಲ್ಲು ಬೆಂಚಿನ ಮೇಲೆ ಕೂರಿಸಿದ್ದನೋ, ಅದೇ ಬೆಂಚಿನ ಮೇಲೆಯೇ ನಾನೂ ತನ್ಮಯಳಾಗಿ ಕುಳಿತಿದ್ದೆ. ಮುಲ್ತಾನ್‌ ಮಿಟ್ಟಿ ಮೆತ್ತಿದ್ದ ತಾಜ್‌ಮಹಲ್‌ನ ಆ ಮುತ್ತಿಕ್ಕುವ ಸೌಂದರ್ಯಕ್ಕೆ ಮನಸೋತೆ. ಸಂಜೆ ಆರು ಗಂಟೆಯಾಗಿದ್ದರಿಂದ, ಆಗ್ರಾದ ಸೆಖೆ ತಗ್ಗಿ, ತಣ್ಣನೆಯ ಚಳಿ ಕೊರೆಯಲು ಆರಂಭಿಸಿತ್ತು. ತಾಜ್‌ ಎದುರಿನ ಕೊಳದ ಅಕ್ಕಪಕ್ಕದ ಬಲುºಗಳೆಲ್ಲ ಬೆಳಗಿ, ಅಲ್ಲೊಂದು ಸ್ವರ್ಗ ಸೃಷ್ಟಿಯಾಗಿತ್ತು. ಹೊಸ ವರುಷದ ಮೊದಲ ದಿನವಾದ್ದರಿಂದ ಜನಜಂಗುಳಿ ಅಧಿಕವಿತ್ತು. ಎಲ್ಲೆಲ್ಲೂ ಪ್ರಣಯ ಪಕ್ಷಿಗಳೇ ಕಣ್ಣಿಗೆ ಬೀಳುತ್ತಿದ್ದರು.

ಸಿನಿಮಾದಲ್ಲಿ ಅಮೃತಾ ಕುಳಿತಿದ್ದ ಕಲ್ಲು ಬೆಂಚಿನ ಮೇಲೇ ಫೋಟೋ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದೆ. ಪತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು, ಅವರ ಕಾಲ ಮೇಲೆ ನಾನು ಕೆನ್ನೆಯಿಟ್ಟು, ಕುಳಿತೆ. ಸೆಲ್ಫಿ ತೆಗೆದರೆ, ಅದು ಚೆನ್ನಾಗಿ ಕವರ್‌ ಆಗುವುದಿಲ್ಲವೆಂದು ತಿಳಿದು, ನಮ್ಮ ಕ್ಯಾಮೆರಾವನ್ನು ಅಲ್ಲೇ ಇದ್ದ ಒಬ್ಬ ವ್ಯಕ್ತಿಗೆ ಕೊಟ್ಟೆವು. ಆತ, “ಇಷ್ಟು ಹತ್ತಿರದಿಂದ ಫೋಟೋ ತೆಗೆದರೆ ಚೆನ್ನಾಗಿ ಬರುವುದಿಲ್ಲ. ಸ್ವಲ್ಪ ದೂರದಿಂದ ತೆಗೀತೀನಿ. ಹೇಗಿದ್ದರೂ ಒಳ್ಳೆಯ ಲೆನ್ಸ್‌ ಇದೆಯಲ್ಲ’ ಎನ್ನುತ್ತಾ ಆತ ತುಸು ಹಿಂಭಾಗಕ್ಕೆ ಹೋದ. ಮರುಕ್ಷಣವೇ, ಜನರ ನಡುವೆ ಆತ ಪುಸಕ್ಕನೆ ನುಗ್ಗಿ, ಓಡಿ ಹೋಗಲೆತ್ನಿಸಿದ. ಆ ಜನಸಾಗರದ ನಡುವೆ ಆತನನ್ನು ಎಲ್ಲಿ ಹುಡುಕುವುದು ಎಂಬುದೇ ದೊಡ್ಡ ತಲೆನೋವಾಯಿತು. ನನ್ನ ಪತಿ, ನನ್ನನ್ನು ಬಿಟ್ಟು ಆತನ ಹಿಂದೆ ಓಡಿ ಹೋದರು. 

ಕೊನೆಗೆ ಆ ಕ್ಯಾಮೆರಾ ಕಳ್ಳನನ್ನು ಅಲ್ಲೇ ಇದ್ದ ಹುಡುಗಿಯೊಬ್ಬಳು ಹಿಡಿದಿದ್ದಳು! ಕ್ಯಾಮೆರಾ ಹಿಡಿದು ಓಡಿದ್ದನ್ನು ಕಂಡ ಆಕೆ, ಆತನನ್ನು ಹಿಂಬಾಲಿಸಿ, ಕೆನ್ನೆಗೆ ನಾಲ್ಕು ಬಾರಿಸಿದ್ದಳು. ಜನರೆಲ್ಲ ಹೊಡೆಯಲು ಸೇರಿಕೊಂಡಾಗ ಆತ ಗಾಬರಿ ಬಿದ್ದು, ಕ್ಯಾಮೆರಾವನ್ನು ಆಕೆಯ ಕೈಗೆ ಕೊಟ್ಟಿದ್ದನಂತೆ! ಅವಳ ಹೆಸರು ಸಂಜೌತಾ ಅಂತ. ಆಕೆ ಕುಂಗ್‌ಫ‌ು ಪಟುವಂತೆ. ಅಲ್ಲದೇ, ರನ್ನಿಂಗ್‌ರೇಸ್‌ನಲ್ಲಿ ಜೆಎನ್‌ಯುನಿಂದ ದೆಹಲಿಯನ್ನು ಪ್ರತಿನಿಧಿಸುತ್ತಿದ್ದ ಕ್ರೀಡಾಪಟುವಂತೆ. ಸಂಜೌತಾ, ಕ್ಯಾಮೆರಾವನ್ನು ನಮ್ಮ ಕೈಗಿಟ್ಟು, ಕ್ಷಣದಲ್ಲೇ ಮರೆಯಾದಳು.

ಅವಳ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ. ಕಡೆಗೂ ನನ್ನ ಬದುಕಿನ ಅತ್ಯಮೂಲ್ಯ ಚಿತ್ರ, ಕ್ಯಾಮೆರಾದೊಳಗೆ ಬಂಧಿಯಾಯಿತು. ನನ್ನ ಈ ಖುಷಿಯ ಎಲ್ಲ ಕ್ರೆಡಿಟ್ಟೂ ಆಕೆಗೇ ಸಲ್ಲಬೇಕು.

ಸಂಚಿತಾ ಪ್ರಭು, ಹೊನ್ನಾವರ

ಟಾಪ್ ನ್ಯೂಸ್

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಬ್ಯಾಟಿಂಗ್‌ನಲ್ಲಿ ಮಿಂಚಿದ ಹನುಮ ವಿಹಾರಿ, ಇಶಾನ್‌ ಕಿಶನ್‌ 

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.