ಆಕಾಶಕ್ಕೆ ಬಲೆಯ ಬೀಸಿ… 


Team Udayavani, Feb 5, 2019, 12:30 AM IST

d-1.jpg

ಜಗತ್ತಿನ ಸಕಲ ಸಂಗತಿಗಳನ್ನೂ ಪ್ರೀತಿಸುತ್ತಾ, ಬಹುಮುಖಿ ಜ್ಞಾನಿಯಾಗಿ ಬೆಳೆಯುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಎಲ್ಲೋ ಫೀಮನ್‌ರಂಥವರಿಂದ, ಇಲ್ಲೆಲ್ಲೋ ನಮ್ಮ ಕಾರಂತಜ್ಜ, ತೇಜಸ್ವಿಯಂಥವರಿಂದಷ್ಟೇ ಸಾಧ್ಯ…

ವಿಜ್ಞಾನಿಗಳು ಅಂತಾಂದ್ರೆ ನಮ್ಮ ಕಲ್ಪನೆಯ ಫ್ರೆಮ್‌ನಲ್ಲಿ ಕುಳಿತುಕೊಳ್ಳುವ ಚಿತ್ರಕ್ಕೆ ಬೇರೆ ರೂಪಗಳೇನೂ ಸಿಗುವುದಿಲ್ಲ. ನೀಟಾಗಿ ತೆಗೆದ ಕ್ರಾಪು, ಆಕಾಶವನ್ನೇ ತಲೆಯ ಮೇಲೆ ಹೊತ್ಕೊಂಡಂತೆ ಗಾಂಭೀರ್ಯ ಹೊತ್ತ ಮುಖಭೂಷಣ, ವಿಜ್ಞಾನದ ಹೊರತಾಗಿ ಬೇರೇನನ್ನೂ ನೋಡಲಿಚ್ಚಿಸದೇ, ಆಲೋಚಿಸದೇ ಇರುವಂಥ ವಿದ್ಯುತ್ಕಾಂತಿ ತುಂಬಿದ ಕಂಗಳು… ಆದರೆ, ಇದಕ್ಕೆಲ್ಲ ಅಪವಾದದಂತೆ ಇದ್ದವರು ಭೌತವಿಜ್ಞಾನಿ ರಿಚರ್ಡ್‌ ಫೀಮನ್‌. ವಿಜ್ಞಾನಿ ಹೌದಾಗಿದ್ದರೂ, ಅವರಿಗೆ ಸಿದ್ಧಿಸದ ಕಲೆಗಳೇ ಇರಲಿಲ್ಲ. ಬಾಲ್ಯದ ಕಾತರ, ತುಂಟತನ, ಮೇರೆಯೇ ಇರದ ಉತ್ಸಾಹ… ಇವರನ್ನು ಯಾವುದೋ ದಡದ ತೀರಕ್ಕೆ ತಂದು ನಿಲ್ಲಿಸಿತು.

ಈ ಮನುಷ್ಯನ ಜೀವನದ ಒಂದೊಂದು ಘಟನಾವಳಿಗಳನ್ನು ಓದುತ್ತಾ ಹೋದಂತೆ, ಅವರು ಹಿಮಾಲಯದಂತೆ ಅನ್ನಿಸಿಬಿಟ್ಟರು. ಒಂದು ಜೀವನಕ್ಕೆ ಎಷ್ಟೊಂದು ಸಾಧ್ಯತೆಗಳು! 1965ರಲ್ಲಿ “fundamental work in quantum electro dynamics ಗಾಗಿ ನೋಬೆಲ್‌ ಬಹುಮಾನ ಪಡೆದ ಫೀಮನ್‌ರ ಜೀವನದ ಪ್ರತಿ ಘಟ್ಟವೂ ಒಂದು ವಿಸ್ಮಯ. ಬದುಕಿನ ಎಲ್ಲ ಮುಖಗಳನ್ನೂ ಅರಿಯಬೇಕೆಂಬ ಅವರ ಛಲದಲ್ಲಿ ಒಬ್ಬ ಸರ್ವಜ್ಞನಿದ್ದ. ಅಣುಬಾಂಬು ತಯಾರಿಸುವುದರಲ್ಲಿ ಫೀಮನ್‌ ನಿಪುಣ. ಇಂಥ ಕ್ಲಿಷ್ಟಕರ ಸಮಸ್ಯೆಗಳನ್ನೂ ಅರೆಕ್ಷಣದಲ್ಲಿ ಬಿಡಿಸುವ, ಅದೆಂಥ ಸೇಫ್ ಲಾಕರ್‌ಗಳಾದರೂ ಅಧಿಕೃತ ಕೀಲಿಕೈ ಇಲ್ಲದೇ ತೆರೆಯುವ ಮತ್ತು ಈ ಕಾರಣಕ್ಕೆ ಅವರಿಗೆ ವಿಜ್ಞಾನ ಲೋಕದಲ್ಲಿ “ಸೇಫ್ ಕ್ರ್ಯಾಕರ್‌’ ಎಂಬ ಬಿರುದೂ ಸಿಕ್ಕಿತ್ತು. ಬೇಟೆ ನಾಯಿಗಳಿಗಿರುವ ವಾಸನೆಯ ಶಕ್ತಿಯ ಬಗ್ಗೆ ಗೀಳು ಹುಟ್ಟಿಸಿಕೊಂಡು, ಅದರ ಬಗ್ಗೆ ಸತತವಾಗಿ ಅಧ್ಯಯನಿಸಿ, ವಾಸನೆಯಿಂದಲೇ ಮನುಷ್ಯ- ವಸ್ತುಗಳನ್ನು ಗುರುತಿಸುವ ಕಲೆಯನ್ನು ಸಿದ್ಧಿಸಿಕೊಂಡರು. ಕಾಡು   ಜನಗಳು ಡ್ರಮ್‌ ಬಾರಿಸುವುದನ್ನು ಕೇಳಿ, ಅದರಲ್ಲೂ ಮಾಸ್ಟರ್‌ ಆಗಿಬಿಟ್ಟರು. ಹೀಗೆ ಕಿವಿಗೆ ಬಿದ್ದಿದ್ದು, ಕಣ್ಣಿಗೆ ಕಂಡಿದ್ದು, ಥಟ್ಟನೆ ಗಮನ ಸೆಳೆದ ಎಲ್ಲ ಸಂಗತಿಗಳನ್ನೂ ಅಪ್ಪಿಕೊಳ್ಳುವ ಮಗು ಮನಸ್ಸಿನಿಂದಲೇ ಇವರು ಜೀನಿಯಸ್‌ ಆದರು.

ಫೀಮನ್‌ ಬಾಳಿನ ಪ್ರೇಮ ಪುಟಗಳೂ ಒಂದು ಪುಳಕವೇ ಸರಿ. ಇದ್ದ ಮೂರ್ನಾಲ್ಕು ಸಂಬಂಧಗಳಲ್ಲಿ ಜೀವವೆಂಬಂತೆ ಇದ್ದ ಪ್ರೇಯಸಿ ಕಣ್ಮುಂದೆ ಕೊನೆಯುಸಿರು ಎಳೆದಾಗ, ಫೀಮನ್‌ಗೆ ಚಿಕ್ಕ ಸಂಕಟವೂ ಆಗಲಿಲ್ಲ. ಅದೆಷ್ಟೋ ದಿನ ಕಳೆದ ನಂತರ ಅದ್ಯಾವುದೋ ಗಳಿಗೆಯಲ್ಲಿ ದಿಕ್ಕೆಟ್ಟವನಂತೆ ಭೋರ್ಗೆರೆದು ಅತ್ತೇಬಿಟ್ಟ. ಹಾಗೆ ಅತ್ತು ತನ್ನೊಳಗಿದ್ದ ಅವಳ ನೆನಪುಗಳನ್ನೆಲ್ಲ ಖಾಲಿ ಮಾಡಿಕೊಂಡ. ಆದರೆ, ಇದಕ್ಕಾಗಿ ಆತ ತಲೆಮೇಲೆ ಕೈಹೊತ್ತು, ಚಿಂತೆಗೆಟ್ಟು ಕೂರಲಿಲ್ಲ. ಪ್ರತಿಕ್ಷಣವನ್ನೂ ಇದಕ್ಕಿಂತ ಆಪ್ತವಾಗಿ ಬದುಕಲು ಸಾಧ್ಯವೇ ಇಲ್ಲವೇನೋ ಎನ್ನುವಂತೆ ಬದುಕಿದ.

ಜಗತ್ತಿನ ಸಕಲ ಸಂಗತಿಗಳನ್ನೂ ಪ್ರೀತಿಸುತ್ತಾ, ಬಹುಮುಖೀ ಜ್ಞಾನಿಯಾಗಿ ಬೆಳೆಯುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಎಲ್ಲೋ ಫೀಮನ್‌ರಂಥವರಿಂದ, ಇಲ್ಲೆಲ್ಲೋ ನಮ್ಮ ಕಾರಂತಜ್ಜ, ತೇಜಸ್ವಿಯಂಥವರಿಂದಷ್ಟೇ ಸಾಧ್ಯ. ಇಂಥವರು ಬದುಕಿನ ಪ್ರತಿ ಮುಖಗಳನ್ನೂ ನೋಡುವ ತವಕದಿಂದಲೇ ಮುನ್ನುಗ್ಗುತ್ತಿರುತ್ತಾರೆ. ಸಿಕ್ಕ ಪ್ರತಿ ಅವಕಾಶದಲ್ಲೂ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡು, ಮತ್ತಷ್ಟು ಅಚ್ಚರಿ ಆಗುತ್ತಾರೆ.

ನ್ಯೂಯಾರ್ಕ್‌ನ ಲೋವರ್‌ ಮ್ಯಾನ್ಹಟನ್‌ರ ಮುಖ್ಯ ರಸ್ತೆಯಲ್ಲಿ ಒಂದು ದೊಡ್ಡ ಚಾಕ್‌ ಬೋರ್ಡ್‌ ಇಡಲಾಗಿದೆ. ಬದುಕಿನ ದೊಡ್ಡ ನಿರಾಶೆಗಳನ್ನು ಅಲ್ಲಿ ದಾಖಲಿಸಲು ಅವಕಾಶವಿದೆ. ಅಲ್ಲಿ ಹಾದುಹೋಗುವವರು ಇದರ ಮೇಲೆ ಏನೇನೋ ಬರೆದು ಹೋಗುತ್ತಾರೆ. ಏನೋ ಕಳಕೊಂಡದ್ದಕ್ಕಿಂತ ಹೆಚ್ಚಾಗಿ ಪ್ರಯತ್ನ ಪಡದೇ ಕಳೆದುಕೊಂಡ ಬರಹಗಳೇ ಅಲ್ಲಿ ಕಣ್ಣಿಗೆ ಬೀಳುತ್ತವೆ. ಈ ಬದುಕಿನಲ್ಲಿ ಪ್ರಯತ್ನಪಡಲು ಎಷ್ಟೊಂದು ಅವಕಾಶಗಳಿವೆ. ಆ ಪ್ರತಿ ಹಾದಿಗಳಲ್ಲೂ ನಾವೆಷ್ಟು ಮುನ್ನುಗ್ಗಿರುತ್ತೇವೆ? ಹೋಗಲಿ ನಾಲ್ಕಾರು ಹೆಜ್ಜೆಯಾದರೂ ಇಟ್ಟಿರುತ್ತೇವೆಯೇ? 

life is nothing but life… ಎನ್ನುವ ಮಾತಿದೆ. ಆದರೆ, ನಮಗ್ಯಾವುದು ಬದುಕು ಎಂದು ಬರೆದುಕೊಳ್ಳವವರು ನಾವೇ… ನನ್ನಿಂದಾಗುವುದು ಇಷ್ಟೇ ಎಂದುಕೊಂಡರೆ, ನಮಗೆ ನಾವೇ ಬೇಲಿ ಕಟ್ಟಿಕೊಂಡಂತೆ. ಕಣ್ರೆಪ್ಪೆ ಬಡಿದು ತೆರೆಯುವಷ್ಟರಲ್ಲಿ ಗಳಿಗೆಗಳು ಗಂಟೆಗಳಾಗುವ ಮಿಂಚಿನ ವೇಗದ ಕಾಲ ಇದು. ಪ್ರಯತ್ನಗಳಿಗೆ, ಕನಸುಗಳಿಗೆ ಬೇಲಿ ಹಾಕಿಕೊಳ್ಳದೇ, ಸಿಕ್ಕ ಪ್ರತಿ ಅವಕಾಶಕ್ಕೂ ನಮ್ಮನ್ನು ನಾವೇ ಪೂರ್ಣವಾಗಿ ಕೊಟ್ಟುಕೊಳ್ಳುತ್ತಾ ಸಾಗುವುದೊಂದೇ ಮಾರ್ಗವೇನೋ…

Do it with passion or don’t do

ಮಂಜುಳಾ ಡಿ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.