Udayavni Special

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

Team Udayavani, Sep 22, 2020, 8:58 PM IST

ಇನ್ನೊಬ್ಬರನ್ನು ಮೆಚ್ಚಿಸಿ ಏನುಪಯೋಗ?

ಸಾಂದರ್ಭಿಕ ಚಿತ್ರ

ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಂದು ಜೀವಿಯೂ ಸಹ , ತಾನು ಅಡ್ಡಿ ಆತಂಕ ಗಳಿಲ್ಲದೇ ನೆಮ್ಮದಿಯಿಂದ ಜೀವನ ನಡೆಸ ಬೇಕೆಂದು ಬಯಸುತ್ತದೆ. ಮನುಷ್ಯನ ವರಸೆ ಇಲ್ಲಿಯೂ ಭಿನ್ನ. ಆತ ನೆಮ್ಮದಿಯ ಜೊತೆಜೊತೆಗೇ ಮತ್ತೂಬ್ಬರನ್ನು ಸಂತೋಷಪಡಿಸಲು, ಅವರನ್ನು ಮೆಚ್ಚಿಸಿ ಏನಾದರೂ ಲಾಭ ಪಡೆಯಲು ಯೋಚಿಸುತ್ತಾನೆ. ದಿನಬೆಳಗಾದರೆ ಸಾಕು; ನನ್ನ ಬಗ್ಗೆ ಜನ ಏನೆನ್ನುತ್ತಾರೆ? ಹೆಚ್ಚು ಗೌರವ, ಮರ್ಯಾದೆ, ಶ್ರೀಮಂತಿಕೆಯನ್ನು ಪಡೆಯುವುದು ಹೇಗೆ ಎಂದೆಲ್ಲಾ ಯೋಚಿಸಿ ಯೋಚಿಸಿ ಹಣ್ಣಾಗುತ್ತಾನೆ.

ಅಷ್ಟು ಮಾತ್ರವಲ್ಲ, ಸಣ್ಣದೊಂದು ಸೋಲಿಗೂ ಕಂಗಾಲಾಗುತ್ತಾನೆ. ಒಳ್ಳೆಯ ದಿನಗಳು ವರ್ಷದ ನಂತರ ಬರಬಹುದು. ಅಲ್ಲಿಯವರೆಗೂ ಏನಾಗುವುದೋ ನೋಡೋಣ. ಗೆಲುವಿಗಾಗಿ ಮರಳಿ ಯತ್ನವ ಮಾಡೋಣ ಎಂದು ಯೋಚಿಸುವುದೇ ಇಲ್ಲ.

ಹೌದು. ಒಂದರ ಹಿಂದೊಂದು ಸೋಲು ಜೊತೆಯಾದರೆ, ಅಷ್ಟಕ್ಕೇ ತಮ್ಮ ಬದುಕೇ ಮುಗಿದು ಹೋಯಿತೆಂದು ಭಾವಿಸುವ ಜನರೇ ನಮ್ಮ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದನ್ನೆಲ್ಲಾ ನೋಡುವಾಗಲೇ ಅಧ್ಯಾಪಕರೊಬ್ಬರು ಹೇಳಿದ್ದ ಮಾತುಗಳು ನೆನಪಾಗುತ್ತವೆ. ಅವರು ಹೇಳಿದ್ದರು: “ಪರೀಕ್ಷೆಯಲ್ಲಿ ಪಾಸ್‌ ಆದ್ರೆ ಉತ್ತಮ, ಒಂದು ವೇಳೆ ಫೇಲ್‌ ಆದ್ರೆ ಇನ್ನೂ ಉತ್ತಮ!’

ಇದರ ಅರ್ಥ- ಪಾಸ್‌ ಆದ್ರೆ ಮುಂದಿನ ತರಗತಿಗಳಿಗೆ ಹೋಗಬಹುದು. ಒಂದು ವೇಳೆ ಫೇಲ್‌ ಆದ್ರೆ, ಈ ಹಿಂದೆ ನಾವು ಆ ವಿಷಯದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಮುಂದಿನ ಸಾರಿ ಚೆನ್ನಾಗಿ ಬರೆದು ಪಾಸಾಗಬಹುದು ಎಂದು. ಜೀವನದ ಪ್ರತಿಯೊಂದು ಘಟ್ಟವೂಒಂದರ್ಥದಲ್ಲಿಪರೀಕ್ಷೆಯೇ.ಅದನ್ನು,ಹೇಗೆಬರುತ್ತದೆಯೋ ಹಾಗೆ ಸ್ವೀಕರಿಸಬೇಕು. ಒಬ್ಬ ಹಾಡುಗಾರ ಕೋಗಿಲೆಗೆ ಕೇಳಿದನಂತೆ: ನಿನ್ನ ಮಧುರವಾದ ಧ್ವನಿಗೆ ಮನಸೋತಿದ್ದೇನೆ. ನೀನು ಯಾರಿಗೂ ಕಾಣದಂಥ ಈ ಮರದ ಕೊಂಬೆಗಳ ಮಧ್ಯೆ ಅಡಗಿ ಕುಳಿತು ಹಾಡುವೆಯಲ್ಲ,ಅದರಿಂದ ಉಪಯೋಗವಿದೆಯಾ? ಹೀಗಾದರೆ, ನಿನ್ನ ಧ್ವನಿಯನ್ನು ಯಾರು ಗುರುತಿಸುತ್ತಾರೆ? ಯಾರು ನಿನ್ನನ್ನು ಸನ್ಮಾನಿಸುತ್ತಾರೆ? ಯಾರು ಗೌರವಿಸುತ್ತಾರೆ?’

ಅದಕ್ಕೆ ಕೋಗಿಲೆ ಹೇಳಿತಂತೆ: ನಾನು ಹಾಡುವುದು ನನ್ನಖುಷಿಗಾಗಿ. ಯಾರನ್ನೋ ಮೆಚ್ಚಿಸಲು ಹಾಡಿದರೆ ನನಗೆ ತೃಪ್ತಿಯಾಗಲಿ, ನೆಮ್ಮದಿಯಾಗಲಿ ಸಿಗುವುದಿಲ್ಲ. ನನಗೊಂದು ಬದುಕನ್ನೂ, ಆಹ್ಲಾದಕರವಾದ ಪ್ರಕೃತಿತಾಣವನ್ನೂ ಕೊಡುಗೆಯಾಗಿ ನೀಡಿದನಲ್ಲ;

ಆ ದೇವರಿಗೆ ಕೃತಜ್ಞತೆ ಅರ್ಪಿಸಲು, ಅವನಿಗೆ ಧನ್ಯವಾದ ಹೇಳಲು ನಾನು ಹಾಡುತ್ತೇನೆ. ಇಲ್ಲೆಲ್ಲೋ ದೇವನಿರಬಹುದು ಎಂಬ ಭಾವನೆಯೇ ನನಗೆ ಧೈರ್ಯ, ನೆಮ್ಮದಿ, ಸಂತೃಪ್ತಿ ಮತ್ತು ಸಾರ್ಥಕತೆಯನ್ನು ಕೊಡುತ್ತದೆ…’ ಕೋಗಿಲೆಯ ರೀತಿಯಲ್ಲಿ ಮನುಷ್ಯನೂ ಯೋಚಿಸಬೇಕಲ್ಲವೇ?

ಎಲ್ ಪಿ. ಕುಲಕರ್ಣಿ, ಬಾದಾಮಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ 2ನೇ ಅಲೆ ತಡೆಗಟ್ಟಲು ಫ್ರಾನ್ಸ್ ನಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ: ಮ್ಯಾಕ್ರನ್

ಕೋವಿಡ್ 2ನೇ ಅಲೆ ತಡೆಗಟ್ಟಲು ಫ್ರಾನ್ಸ್ ನಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ: ಮ್ಯಾಕ್ರನ್

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ, ಪಾರದರ್ಶಕವಾಗಿ ಅಭಿವೃದ್ಧಿಪಡಿಸಲಾಗಿದೆ: ಸರ್ಕಾರ

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ, ಪಾರದರ್ಶಕವಾಗಿ ಅಭಿವೃದ್ಧಿಪಡಿಸಲಾಗಿದೆ: ಸರ್ಕಾರ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ಕಂಬ್ಳಿ ಹುಳದ ಪುರಾಣ

josh-tdy-3

ಬಾರೋ ಸಾಧಕರ ಕೇರಿಗೆ :ಕಾಫ್ಕನೂ, ಪುಟ್ಟಿಯ ಗೊಂಬೆಯೂ…

josh-tdy-2

ಸೋತುಹೋದೆ ಎಂದು ಮನಸ್ಸಿಗೆ ಹೇಳಬೇಡಿ…

josh-tdy-1

ಫೇಕ್‌ ಇಟ್‌ ಈಸಿ!

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಕೋವಿಡ್ 2ನೇ ಅಲೆ ತಡೆಗಟ್ಟಲು ಫ್ರಾನ್ಸ್ ನಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ: ಮ್ಯಾಕ್ರನ್

ಕೋವಿಡ್ 2ನೇ ಅಲೆ ತಡೆಗಟ್ಟಲು ಫ್ರಾನ್ಸ್ ನಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ: ಮ್ಯಾಕ್ರನ್

ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಬೀಳ್ಕೊಡುಗೆ

ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಬೀಳ್ಕೊಡುಗೆ

ಮೈಸೂರು ನಿವೃತ್ತ ಪ್ರಾಂಶುಪಾಲ ಹತ್ಯೆ ಪ್ರಕರಣ : ಸುಪಾರಿ ಹಂತಕರು ಸೇರಿ ಐವರ ಬಂಧನ

ಮೈಸೂರು ನಿವೃತ್ತ ಪ್ರಾಂಶುಪಾಲ ಹತ್ಯೆ ಪ್ರಕರಣ : ಸುಪಾರಿ ಹಂತಕರು ಸೇರಿ ಐವರ ಬಂಧನ

ದೊಡ್ಡಬಳ್ಳಾಪುರ: ಮತದಾನದ ವೇಳೆ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಘರ್ಷಣೆ

ದೊಡ್ಡಬಳ್ಳಾಪುರ: ಮತದಾನದ ವೇಳೆ ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಘರ್ಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.90ರಷ್ಟು ಮತದಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.90ರಷ್ಟು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.