Udayavni Special

ಹೇಳ್ರೀ ನನ್ನ ಕಂಡ್ರೆ ನಿಮಗೇನನ್ನಿಸುತ್ತೆ?

ಗಡಿಬಿಡಿ ಮಾಡದೆ ಗುಟ್ಟಾಗಿ ಹೇಳಿಬಿಡಿ

Team Udayavani, Sep 22, 2020, 8:33 PM IST

josh-tdy-1

ಸಾಂದರ್ಭಿಕ ಚಿತ್ರ

ಕಳೆದವಾರವಿಡೀ ಫೇಸ್‌ಬುಕ್‌ನಲ್ಲಿ ಎಲ್ಲರದ್ದೂ ಒಂದೇ ಪ್ರಶ್ನೆ: “ನನ್ನಕಂಡ್ರೆ, ನನ್ನ ಹೆಸರು ಬೆಂಗಳೂರು ಕೇಳಿದ್ರೆ, ಆ ಕ್ಷಣಕ್ಕೆ ನಿಮಗೆ ಏನನ್ನಿಸ್ತದೆ?’ ಪ್ರತಿಯೊಂದು ಪ್ರಶ್ನೆಗೂ ತರಹೇವಾರಿ ಉತ್ತರಗಳು ಬಂದವು ಎಂಬುದು ಸ್ವಾರಸ್ಯದ ಸಂಗತಿ. ತನ್ನ ವಿಷಯವಾಗಿ ಇನ್ನೊಬ್ಬರು ಏನೆನ್ನಬಹುದು ಎಂದು ತಿಳಿಯುವಕುತೂಹಲ ಪ್ರತಿಯೊಬ್ಬರಿಗೂ ಇರುತ್ತದಲ್ಲಯಾಕೆ?

ಕಲ್ಪಿಸಿಕೊಳ್ಳಿ. ಹೊಸದಾಗಿ ಮದುವೆಯಾಗಿದ್ದೀರಿ. ಆಫೀಸಿನಿಂದ ಆಗಷ್ಟೇ ಮನೆಗೆ ಬಂದು, ಹೆಂಡತಿ ನಗುನಗುತ್ತಾ ತಂದುಕೊಟ್ಟ ಬಿಸಿಬಿಸಿ ಕಾಫಿ ಹೀರುತ್ತಿದ್ದೀರಿ. ಪಕ್ಕದಿಂದ ರೀ… ಎಂಬ ಸ್ವರ. ತಲೆಯೆತ್ತಿ ನೋಡಿದರೆ ನಿಮ್ಮಾಕೆ ನುಲಿಯುತ್ತಾ ನಾನು ಹ್ಯಾಗೆಕಾಣಿ¤àನ್ರೀ ಎನ್ನುತ್ತಾಳೆ. ಸಣ್ಣದಾಗಿ ಶಿಳ್ಳೆ ಹೊಡೆಯುತ್ತಾ ಸೂಪರ್‌ ಎಂದು ಉದ್ಗಾರವೆತ್ತುತ್ತೀರಿ. ಅಷ್ಟೇನಾ?… ಈ ಡ್ರೆಸ್‌ ನನಗೆ ಹ್ಯಾಗೆಕಾಣಿ¤ದೆ ಹೇಳಿ ಅಂದ್ರೆ… ನಿಂಗೇನ್‌ ಚಿನ್ನಾ, ಯಾವ ಡ್ರೆಸ್‌ ಹಾಕಿದ್ರೂ ಸೂಪರ್‌ ಎನ್ನುತ್ತೀರಿ. ಹಾಕದಿದ್ರೂ… ಎಂಬ ತುಂಟಮಾತುಕಣ್ಣಲ್ಲಿಕಂಡು, ತುಟಿಯಲ್ಲಿ ನಿಂದುಕೆನ್ನೆಕೆಂಪಾಗಿಸುತ್ತದೆ. ಇರಲಿ ಬಿಡಿ, ನಾವಂತೂ ತಪ್ಪು ತಿಳಿಯುವುದಿಲ್ಲ, ಪಾಪ, ನೀವೇನು ಮಾಡುತ್ತೀರಿ? ಇನ್ನೊಂದು ಚಿತ್ರ,8-10 ವರ್ಷಗಳ ನಂತರದ್ದು ಎನ್ನಿ. ಅದೇ ಸೀನು. ಆಫೀಸಿನಿಂದ

ಆಗಷ್ಟೇ ಮನೆಗೆ ಬಂದು ಅದೇಕಾಫಿ, ಹೀರುತ್ತಾ ಸುಧಾರಿಸಿಕೊಳ್ಳುತ್ತಿದ್ದೀರಿ. ಪಕ್ಕದಿಂದ ಅದೇ ಉಲಿ. ತಣ್ಣಗೆ ಹ್ಮ್ ಚೆನ್ನಾಗಿ ಕಾಣ್ತಿನಿ ಎಂದು ಸುರಿ ಕಾಫಿಯಲ್ಲಿಮುಳುಗುತ್ತೀರಿ. ಮತ್ತೆ ಅದೇ ಪ್ರಶ್ನೆ. ಅಷ್ಟೇನಾ… ಸರಿಯಾಗಿ ನೋಡಿ ಹೇಳ್ರೀ, ಹ್ಯಾಗೆ ಕಾಣ್ತೀನಿ – ಈ

ಬಾರಿ ಬೇಡಿಕೆ ಗದರಿಕೆಯಾಗಿದೆ. ನಿಮಗೋ, ಆಗಷ್ಟೇ ಆಫೀಸಿನಲ್ಲಿ ಮಂಗಳಾರತಿಯಾಗಿದೆ. ನಿಮ್ಮ “ಸ್ಮಾರ್ಟ್‌’ ಕೆಲಸಕ್ಕೆ ಬಾಸ್‌ ಸಿಕ್ಕಾಪಟ್ಟೆ ರೇಗಾಡಿದ್ದುಕಿವಿಯಲ್ಲಿನ್ನೂ ಗುಂಯ್ಯುಡುತ್ತಿದೆ – ಅವನೂ ಹೀಗೇಕೇಳಿದ್ದ – ಏನ್ರೀ, ನಿಮ್‌ಕಣ್ಣಿಗೆ ಹ್ಯಾಗ್‌ಕಾಣ್ತೀನ್ರೀ ನಾನು? ಗೂಬೆ ಥರಾ ಕಾಣ್ತೀನಾ? ಹೆಂಡತಿ ಹ್ಯಾಗೆಕಾಣ್ತೀನ್ರೀ ಎಂದು ಜಬರಿಸಿದಾಗ ಇದೇ ಗುಂಗಿನಲ್ಲಿ, ಗೂಬೆ ಥರಾ ಕಾಣ್ತೀಯ ಎಂದುಬಿಟ್ಟಿರಿ ಹುಷಾರು – ಪಾಪ, ಅವರು ನಿಜಕ್ಕೂ ಹಾಗಿಲ್ಲವೂ ಇಲ್ಲ, ಮತ್ತೆ ನಿಮಗೆ ವಿವೇಕವೂ ಇದೆ. ಹೆಂಡತಿ ಹೇಗೆ ಕಾಣ್ತೀನ್ರೀ ಎಂದು ರಾಗವೆಳೆಯುವುದು, ಗಂಡ ಸಮಯೋಚಿತವಾಗಿ ಅದ್ಭುತ, ಸೂಪರ್‌, ಸೆಕ್ಸೀ, ರೊಮ್ಯಾಂಟಿಕ್‌ ಉದ್ಗಾರವೆಳೆಯುವುದು, ಬೊಗಳೆಯೆಂದು ತಿಳಿದಿದ್ದರೂ ಅದಕ್ಕಾಕೆ ನಸುನಾಚಿದಂತೆ ನಟಿಸುವುದು- ಇದು ಲಾಗಾಯ್ತಿನಿಂದ ಬಂದ ರೂಢಿ.

ಹಾಗೆಂದು ಆ ಸವಲತ್ತು ನಿಮಗೂ ಇದೆಯೆಂದು ಭ್ರಮಿಸಿಬಿಟ್ಟಿರಿ. ನೀವೇನೋ ಸೊಗಸಾಗಿ ಗಡ್ಡ ಟ್ರಿಮ್‌ ಮಾಡಿಕೊಂಡು, ನೀವು ರೊಮ್ಯಾಂಟಿಕ್‌ ಎಂದುಕೊಂಡ ಒಂದು ನಗೆಬಾಣವನ್ನೆಸೆಯುತ್ತಾ ಕಣ್ಣಲ್ಲೇ ಹೇಗಿದೆ ಎಂದು ಕೇಳುತ್ತೀರಿ (ಬಾಯಲ್ಲಿಕೇಳಲು ಧೈರ್ಯ ಬರಬೇಕಲ್ಲ). ಕೇಳಿದ್ದಿನ್ನೂ ಮುಗಿದೇ ಇಲ್ಲ, ಅಯ್ಯ, ಇದೇನು ಅವತಾರ, ಒಳ್ಳೆಕತ್ತೆಕಿರುಬನ ರೀತಿ ಧಾಡಿ ಬಿಟ್ಕೊಂಡು, ಹೋಗಿ ಶೇವ್‌ ಮಾಡಿಕೊಂಡ್‌ ಬನ್ನಿ ಎಂಬ ಮಾತಿನ ತಪರಾಕಿ ಬೀಳುತ್ತದೆ. ತೆಪ್ಪಗೆಕೆನ್ನೆ ಸವರಿಕೊಂಡು ಹೋಗಿ ಶೇವ್‌ ಮಾಡಿಕೊಂಡು, ಕನ್ನಡಿಯಲ್ಲೊಮ್ಮೆ ನೋಡಿ, ಪರವಾಗಿಲ್ಲ ಈಗ ನಿಜಕ್ಕೂ ಸ್ಮಾರ್ಟ್‌ ಎಂದುಕೊಂಡು ಹೆಂಡತಿಯ ಮುಂದೆ ನಿಲ್ಲುತ್ತೀರಿ- ನಿಮ್ಮದೇಕೆನ್ನೆಯ ನುಣುಪನ್ನು ಅನುಭವಿಸುತ್ತಾ. ಆಕೆಯೋ ನಿಮ್ಮಕಡೆಕಣ್ಣೆತ್ತಿಯೂ ನೋಡದೇ, ಇದಕ್ಕೇನು ಕಮ್ಮಿಯಿಲ್ಲ, ಹೋಗಿ ತರಕಾರಿ ತನ್ನಿ, ಬೇಗ ಎಂದು ಆಜ್ಞಾಪಿಸುತ್ತಾಳೆ. ಟುಸ್ಸೆಂದ ಉತ್ಸಾಹದ ಬಲೂನನ್ನು ಮುದುರಿಟ್ಟುಕೊಳ್ಳುತ್ತಾ ತೆಪ್ಪಗೆ ತರಕಾರಿ ತಂದಿಟ್ಟು, ಫೇಸ್ಬುಕ್‌ ತೆರೆದು ಕೂರುತ್ತೀರಿ. ಮೊನ್ನೆ, ಯಾರೋ ಹೀಗೆ ಕೌಟುಂಬಿಕ ಅನಾದರದಿಂದ ಬೇಸತ್ತ ಪ್ರಾಣಿಯೇ ಇರಬೇಕು, ಫೇಕ್ಕಿನಲ್ಲಿ ಅಭಿಯಾನವೊಂದನ್ನು ಶುರುಮಾಡಿದ್ದುಕಂಡುಬಂತು – ನನ್ನ ಹೆಸರುಕೇಳಿದಾಗ ನಿಮಗೇನೆನಿಸುತ್ತದೆ?. ಅಲ್ಲಪ್ಪಾ, ಈ ಮೂತಿಗೆ ಮನೆಯಲ್ಲೇ ಸಿಗದಕಿಮ್ಮತ್ತು ಫೇಸ್ಬುಕ್ಕಿನಲ್ಲಿ ಸಿಗುತ್ತದೆಯೇ ಎನ್ನಬೇಡಿ. ಈ ಫೇಸ್ಬುಕ್‌ ಬೇರೆಯದೇ ಪ್ರಪಂಚ. ಇಲ್ಲೂ ಬಡಿದಾಟಗಳೂ,ಕೆಸರೆರಚಾಟಗಳೂ ಇದ್ದರೂ ಬಹುತೇಕ ಸದ್ಭಾವ ಸನ್ನಡತೆಗಳ ಜಗತ್ತೆಂದೇ ಹೇಳಬೇಕು. ನೀವು ಹಾಕಿದ ಪೋಸ್ಟನ್ನು ಓದಿಯೇ ಇರದಿದ್ದರೂ ಒಂದು ಲೈಕೊತ್ತಿ ಮುಂದುವರೆಯುವ ಧಾರಾಳ.

ನಿಮ್ಮದು ಮಂಗನಮೂತಿಯೇ ಆಗಿರಲಿ, ಅದಕ್ಕೂ ಒಂದಷ್ಟು ಲೈಕುಗಳು, ಮೆಚ್ಚುಗೆಯ ಮಾತುಗಳು ಗ್ಯಾರಂಟಿ? ವಚನೇಕಾ ದರಿದ್ರತಾ? ಎಂಬ ಮಾತನ್ನು ನಂಬಿ ನಡೆಯುವಂಥದ್ದು ಈ ಸಮಾಜ. ಹಾಗೆಂದು ಇವೇನು ಮುಖಸ್ತುತಿಯಲ್ಲ, ನಿಮ್ಮಿಂದ ಅವರಿಗೆ ಆಗಬೇಕಾದ್ದು ಏನೂ ಇರುವುದಿಲ್ಲ. ಮೆಚ್ಚುಗೆ ಬಹುತೇಕ ನಿಮ್ಮ ಬಗೆಗಿನ ಅಭಿಮಾನದಿಂದಲೇ ಬಂದುದಾಗಿರುತ್ತದೆ; ಅದರಲ್ಲಿ ಎಳ್ಳುಕಾಳಿನಷ್ಟಾದರೂ ಸತ್ಯವಿರುವುದೂ ಹೌದು. ನಿಜ ಜೀವನದಲ್ಲಿದ್ದಂತೆ, ಹೊಗಳಿದರೆ ವ್ಯಕ್ತಿ ತಲೆಯ ಮೇಲೇಕೂರುತ್ತಾನೆ/ಳೆ ಎಂಬ ಭಯ ಫೇಸ್ಬುಕ್ಕಿನಲ್ಲಿಲ್ಲ. ಆದ್ದರಿಂದ ಇಲ್ಲಿ ಎಲ್ಲ ಧಾರಾಳ. ಈ ಗುಣಗ್ರಹಣಶಕ್ತಿ ಎಷ್ಟೋ ವೇಳೆ ನಿಮ್ಮ ನಿಜಜೀವನದಲ್ಲಿ ಮುಕ್ಕಾದ ಮಾನಕ್ಕೆ ಮುಲಾಮಿನಂತೆಕೆಲಸ ಮಾಡುತ್ತದೆ. ಅದಕ್ಕೇ ಈ ಮಾದರಿಯ ಅಭಿಯಾನಗಳು ಫೇಸುºಕ್ಕಿನಲ್ಲಿ ಪ್ರಚಂಡ ಜನಪ್ರಿಯತೆ ಗಳಿಸುತ್ತವೆ. ಆದರೆ ಇದರಲ್ಲಿ ಧಾರಾಳವಾಗಿ ಉಕ್ಕಿ ಹರಿಯುತ್ತಿದ್ದ ಪರಸ್ಪರ ಪ್ರಶಂಸೆಯನ್ನುಕಂಡ ಮಿತ್ರರೊಬ್ಬರಿಗೆ ಈ ಸುಭಾಷಿತ ನೆನಪಾಯಿತಂತೆ: ಉಷ್ಟ್ರಾಣಾಂಚ ವಿವಾಹೇಷು ಗೀತಂ ಗಾಯಂತಿ ಗರ್ದಭಾಃ ಪರಸ್ಪರಂ ಪ್ರಶಂಸಂತಿ ಅಹೋ ರೂಪಮಹೋ ಧ್ವನಿಃ (ಒಂಟೆಗಳ ಮದುವೆಯಲ್ಲಿಕತ್ತೆಗಳು ಹಾಡಿದುವು; ಮತ್ತು ಅವು ಪರಸ್ಪರ ಹೊಗಳಿಕೊಂಡುವು- ಆಹಾ ನಿನ್ನ ರೂಪವೇ! ಆಹಾ ನಿನ್ನ ಧ್ವನಿಯೇ!) ನಾನೂ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದೆನಾದ್ದ ರಿಂದ ನಾನು ಒಂಟೆ- ಕತ್ತೆಗಳ ಪರವಹಿಸಿ ಮಾತಾಡಿದೆ.

ಹಾಗಾದರೆ ಒಂಟೆಗಳು ಮದುವೆ ಮಾಡಿಕೊಳ್ಳೋದೇ ತಪ್ಪೇ? ಕತ್ತೆಗಳು ಮದುವೆಗೆ ಹೋಗೋದೇ ತಪ್ಪೇ? ಹೋದರೂ ಶೋಕಸಭೆಗೆ ಹೋದಂತೆ ಮೌನವಾಗಿ ತಲೆಯಾಡಿಸಿ ಬರಬೇಕೇ? ಅದಕ್ಕವರು ಚೆನ್ನಾಗ್‌ ಹೇಳಿದ್ರಿ ಎಂದು ಉತ್ತರಿಸಿದರು. ನನ್ನ ವಾದವನ್ನವರು ಒಪ್ಪಿದರೆಂದೇ ನನ್ನೆಣಿಕೆ. ನೀವೇನಂತೀರಿ?­

-ಮಂಜುನಾಥ ಕೊಳ್ಳೇಗಾಲ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ, ಪಾರದರ್ಶಕವಾಗಿ ಅಭಿವೃದ್ಧಿಪಡಿಸಲಾಗಿದೆ: ಸರ್ಕಾರ

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ, ಪಾರದರ್ಶಕವಾಗಿ ಅಭಿವೃದ್ಧಿಪಡಿಸಲಾಗಿದೆ: ಸರ್ಕಾರ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

josh-tdy-4

ಕಂಬ್ಳಿ ಹುಳದ ಪುರಾಣ

josh-tdy-3

ಬಾರೋ ಸಾಧಕರ ಕೇರಿಗೆ :ಕಾಫ್ಕನೂ, ಪುಟ್ಟಿಯ ಗೊಂಬೆಯೂ…

josh-tdy-2

ಸೋತುಹೋದೆ ಎಂದು ಮನಸ್ಸಿಗೆ ಹೇಳಬೇಡಿ…

josh-tdy-1

ಫೇಕ್‌ ಇಟ್‌ ಈಸಿ!

josh-tdy-4

ನೆನಪುಗಳ ನೆರಳು ಜೊತೆಗೇ ಇರ್ತದೆ!

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ, ಪಾರದರ್ಶಕವಾಗಿ ಅಭಿವೃದ್ಧಿಪಡಿಸಲಾಗಿದೆ: ಸರ್ಕಾರ

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ, ಪಾರದರ್ಶಕವಾಗಿ ಅಭಿವೃದ್ಧಿಪಡಿಸಲಾಗಿದೆ: ಸರ್ಕಾರ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಮೀನು ಆಯಲು ಬಾಲ ಕಾರ್ಮಿಕರ ಬಳಕೆ: ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಭಾರತ ದಾಳಿ ನಡೆಸುವುದು ಎಂಬ ಭೀತಿಯಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ ಮಾಡಿದ್ದ ಪಾಕ್!

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಕೋವಿಡ್ ಲಸಿಕೆ ವಿತರಣೆ ತಯಾರಿ; ಕೇವಲ ಶೇ.15 ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.