ಅವಸರದಲ್ಲಿ ಏನಾಗುತ್ತೀರಿ?

Team Udayavani, Aug 27, 2019, 5:25 AM IST

ಅವನೊಬ್ಬ ಹೆಸರಾಂತ ಉದ್ಯಮಿ. ಅವನ ಏಕೈಕ ಪುತ್ರನನ್ನು ತುಂಬ ಬೇಗನೆ ಎಲ್ಲ ವಿದ್ಯೆಯನ್ನೂ ಕಲಿಸುವ ಕೋರ್ಸ್‌ಗೆ ಸೇರಿಸಬೇಕು. ಯಶಸ್ವಿ ಉದ್ಯಮಿಯಾಗುವುದು ಹೇಗೆ ಎಂದು ಅವನಿಗೆ ಬೇಗ ಹೇಳಿಕೊಡಬೇಕು. ತಂದೆಗೆ ತಕ್ಕ ಮಗ ಎಂದು ಲೋಕದ ಜನರೆಲ್ಲಾ ಮೆಚ್ಚಿ ಮಾತಾಡುವ ರೀತಿಯಲ್ಲಿ ಮಗನನ್ನು ಬೆಳೆಸಬೇಕು ಎಂಬುದು ಅವನ ಉದ್ದೇಶವಾಗಿತ್ತು. ಈತ ಹೀಗೆ ಹಲವು ಬಗೆಯ ಲೆಕ್ಕಾಚಾರಗಳನ್ನು ಮಾಡಿಕೊಂಡೇ ಒಂದು ಯೂನಿವರ್ಸಿಟಿಗೆ ಬಂದ. ಅಲ್ಲಿ ಪದವಿ ಕೋರ್ಸ್‌ಗಳು ಅದಕ್ಕೆ ವಿಧಿಸಲಾಗುವ ಶುಲ್ಕ, ಕೋರ್ಸ್‌ ಮುಗಿಯಲು ಇದ್ದ ಅವಧಿಯ ಬಗ್ಗೆ ತಿಳಿದು ಅವನಿಗೆ ಅಸಹನೆ ಉಂಟಾಯಿತು.

ಕುಲಪತಿಗಳ ಮುಂದೆ ಕುಳಿತು “ಸಾರ್‌, ಒಂದೊಂದು ಪದವಿ ಕೋರ್ಸ್‌ ಮುಗಿಸಲು ದೀರ್ಘ‌ ಅವಧಿ ತಗಲುತ್ತದೆ. ಬೇಗ ಬೇಗ ಪಾಠ ಮಾಡಿ, ಅತಿ ಬೇಗ ಪದವೀಧರರನ್ನಾಗಿ ರೂಪಿಸಲು ಸಾಧ್ಯವಿಲ್ಲವೇ? ಅಂಥದೊಂದು ಪ್ರಯೋಗವನ್ನು ಈ ವರ್ಷದಿಂದಲೇ ನನ್ನ ಮಗನ ಮೇಲೆ ಏಕೆ ಮಾಡಬಾರದು?’ ಅಂದ.

ಕುಲಪತಿಗಳು ಒಮ್ಮೆ ಆ ಉದ್ಯಮಿಯನ್ನು ಪ್ರೀತಿ ಹಾಗೂ ಮರುಕದಿಂದ ನೋಡಿ
ಹೇಳಿದರು. “ಈ ಲೋಕದ ಚರಾಚರವೂ ಭಗವಂತನ ಸೃಷ್ಟಿ ಎಂದು ಹಿರಿಯರು ಹೇಳಿರುವುದನ್ನು ನೀವೂ ಕೇಳಿಯೇ ಇರುತ್ತೀರಿ. ಒಂದು ಚಿಕ್ಕ ಸಸಿ, ಮರವಾಗಿ ಬೆಳೆದು ಮಾವಿನ ಹಣ್ಣಿನ ಫ‌ಲ ನೀಡಲು ಭರ್ತಿ 12 ವರ್ಷಗಳ ಕಾಲಾಕಾಶಬೇಕು.
ಹಾಗೆಯೇ, ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗುವ ಗ್ಲಾಸ ತಯಾರು ಮಾಡಲು ಕೇವಲ ಎರಡು ತಿಂಗಳ ಸಾಕು. ನಿಮ್ಮ ಮಗ, ನೂರು ಮಂದಿಯ ಹಸಿವು ತಣಿಸುವ ಮಾವಿನ
ಮರ ಆಗಬೇಕೋ ಅಥವಾ ಒಂದು ಗ್ಲಾಸ್‌ ಆಗಿ ಉಳಿದರೆ ಸಾಕೋ ನೀವೇ ನಿರ್ಧರಿಸಿ’ಅಂದರು. ಉದ್ಯಮಿ ಪೆಚ್ಚಾದ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಆಲೂಗಡ್ಡೆ ಎಲ್ಲಿ ಬೆಳೆಯುತ್ತದೆ ? "ಮರದ ಮೇಲೆ ಸಾರ್‌', " ಹಾಲಿನ ಮೂಲ ಎಲ್ಲಿದೆ ?' " ಅಂಗಡಿಯಲ್ಲಿ ಸಾರ್‌' ಎಂದು ಉತ್ತರಿಸುವ ಮಕ್ಕಳು ಇರುವ ಈ ಕಾಲದಲ್ಲಿ. ಶಿರಸಿಯ ಒಂದಷ್ಟು...

  • ಬಹಳ ಹಿಂದೆ, ನನ್ನ ತಂದೆಯವರ ಬಳಿ ಕೆ.ಜಿ ತೂಕದ ಆಗ್ಭಾ ಬೆಲ್ಲೋಸ್‌ಫಿಲಂ ರೋಲ್‌ ಕ್ಯಾಮೆರಾ ಇತ್ತು. 100 ಮಿ.ಮೀ ಅಳತೆಯ ಒಂದೊಂದು ಪ್ರೇಂನಲ್ಲಿ ಚೌಕಾಶಿ ಮಾಡಿ ಒಟ್ಟು...

  • ಪರೀಕ್ಷೆ ಸಂದರ್ಭದಲ್ಲಿ ಸಮಯವೇ ದೇವರು. ಅದನ್ನು ಒಲಿಸಿಕೊಳ್ಳುವುದೂ ಕಲೆ. ಕಷ್ಟದ ಸಬೆjಕ್ಟ್ಗಳು, ಸುಲಭದ ವಿಷಯಗಳಿಗೆ ಇದನ್ನು ಹಂಚುವುದು ನಿಜಕ್ಕೂ ಪ್ರತಿಭೆಯೇ....

  • ಸೇವೆ ಅಂದರೆ ಊಟ, ಬಟ್ಟೆ ಕೊಡೋದು, ಕಷ್ಟದಲ್ಲಿರುವವರಿಗೆ ಹಣ ಸಹಾಯ ಮಾಡೋದು ಮಾತ್ರವಲ್ಲ. ಹೀಗೂ ಮಾಡಬಹುದು ಅಂತ ಕೊಟ್ಟೂರಿನ ಯುವಕರು ತೋರಿಸುತ್ತಿದ್ದಾರೆ. ಅವರು...

  • ಕೈ ಕೆಸರು ಮಾಡಿಕೊಂಡು, ಬಾಯಿಗೆ ಮೊಸರು ಹಾಕಿಕೊಳ್ಳುವುದು ಇವತ್ತು ಎಂಜಿನಿಯರಿಂಗ್‌ ಆಗಿದೆ. ಕೃಷಿ ಎಂದರೆ, ಅಪ್ಪ ಹಾಕಿದ ಆಲದ ಮರದಂತಲ್ಲ. ಅದರ ಸುತ್ತಲೂ ನಮ್ಮ...

ಹೊಸ ಸೇರ್ಪಡೆ