ದಿಕ್ಕು ತೋಚದೆ ಅಳುತ್ತಾ ನಿಂತಿದ್ದೆ ಆಗ ಕೇಳಿತು ದನಿ, “ಕಂದಾ…’


Team Udayavani, Aug 8, 2017, 6:15 AM IST

nenapu2.jpg

ಸುಮಾರು ಏಳು ವರ್ಷದ ಹಿಂದಿನ ಮಾತು. ಆಗಷ್ಟೇ ನಾನು ಪ್ರ$çಮರಿ ಸ್ಕೂಲ್‌ನಿಂದ ಹೈಸ್ಕೂಲ್‌ಗೆ ಬಂದಿದ್ದೆ. ಸ್ವಲ್ಪ ಮಟ್ಟಿಗೆ ನನ್ನದು ಮಾತು ಜಾಸ್ತೀನೇ. ಆಟ ಪಾಠದಲ್ಲೂ ಮುಂದೆ ಇದ್ದೆ. ಅದೇ ವರ್ಷ ನಮ್ಮ ಸ್ಕೂಲ್‌ಗೆ ವೆಂಕಟೇಗೌಡ ಸರ್‌ ಎಂಬ ಹೊಸ ಮುಖ್ಯೋಪಾಧ್ಯಾಯರು ಬಂದರು. ನಮ್ಮ ತರಗತಿಗೆ ಗಣಿತ ವಿಷಯ ಅವರೇ ತೆಗೆದುಕೊಳ್ಳೋದು ಅಂತ ಗೊತ್ತಾಯಿತು. 

ಅಂತೂ ಇಂತೂ ವೆಂಕಟೇಗೌಡ ಸರ್‌ ನಮ್ಮ ಕ್ಲಾಸ್‌ಗೆ ಬಂದೇ ಬಿಟ್ರಾ. ಅದು ನಮ್ಮ ಮತ್ತು ಅವರ ಮೊದಲನೆ ದಿನ. ಅವರು ಗಣಿತ ಪಾಠ ಶುರು ಮಾಡಿದರು. ಮೊದಲಿಗೆ ಒಂದು ಲೆಕ್ಕವನ್ನು ಬೋರ್ಡ್‌ ಮೇಲೆ ಬರೆದು “ಯಾರು ಮಾಡ್ತೀರಾ?’ ಅಂತ ಕೇಳಿದೇ ತಡ, ನಾನು ಕೈ ಎತ್ತಿ “ನಾನು ನಾನು!’ ಅಂತ ಉತ್ಸಾಹದಲ್ಲಿ ಕಿರುಚಿದೆ. ಆಗ ನನ್‌ ಮೇಲೆ ನನಗೆ ಅತಿಯಾದ ನಂಬಿಕೆ ಎಷ್ಟಿತ್ತು ಅಂದ್ರೆ ಆ ಲೆಕ್ಕವನ್ನು ಸರಿಯಾಗಿ ನೋಡೇ ಇರಲಿಲ್ಲ. ಮೊದಲ ದಿನವೇ ಸರ್‌ ಅನ್ನು ಇಂಪ್ರಸ್‌ ಮಾಡುವ ಆತುರದಲ್ಲಿ ಕೈ ಎತ್ತಿ ಬಿಟ್ಟಿದ್ದೆ. 

ಸರ್‌ ನನ್ನನ್ನು ಕರೆದು ಲೆಕ್ಕ ಮಾಡೋಕೆ ಹೇಳಿದ್ರು. ಬೋರ್ಡ್‌ ಬಳಿಗೆ ಹೋದ ಮೇಲೆಯೇ ಗೊತ್ತಾಗಿದ್ದು ನಾನು ಅಂದುಕೊಂಡಿದ್ದ ಲೆಕ್ಕ ಅದಲ್ಲ ಅಂತ. ಆ ಲೆಕ್ಕ ಬಿಡಿಸಲು ನನಗೆ ಗೊತ್ತಿರಲಿಲ್ಲ. ಎದ್ದು ಬಂದಿದ್ದಾಗಿದೆ, ಇನ್ನು ವಾಪಸ್‌ ಹೋಗಲಿಕ್ಕಾಗುವುದಿಲ್ಲವಲ್ಲ? ಎಲ್ಲ ಸ್ನೇಹಿತರು ಮತ್ತು ಮುಖ್ಯವಾಗಿ ಸರ್‌ ಮುಂದೆ ಮರ್ಯಾದೆ ಹೋಯ್ತಲ್ಲ, ಅವರಿಗೆಲ್ಲಾ ಹೇಗಪ್ಪಾ ಈಗ ಮುಖ ತೋರಿಸೋದು ಅಂತ ಗೊತ್ತಾಗದೆ ಕೈಯಲ್ಲಿದ್ದ ಚಾಕ್‌ ಪೀಸ್‌ ಪುಡಿ ಮಾಡುತ್ತ ಹಾಗೆ ನಿಂತುಬಿಟ್ಟೆ. ನಾಲ್ಕು ನಿಮಿಷ ಸುಮ್ಮನಿದ್ದ ಸರ್‌, “ಏನಾಯ್ತಪ್ಪಾ, ಲೆಕ್ಕ ಮಾಡಿ ಆಯ್ತಾ? ಸ್ವಲ್ಪ ಆಚೆ ಸರಿ. ಹೇಗೆ ಮಾಡಿದ್ದೀಯಾ ನೋಡ್ತೇನೆ’ ಅಂತ ಕೇಳ್ತಾ ಇದ್ದಾರೆ, ನಾನು ಅವರತ್ತ ತಿರುಗ್ತಾನೇ ಇಲ್ಲ. ಆಮೇಲೆ ಅವರೇ ಬಂದು ನನ್ನ ಪಕ್ಕ ನಿಂತು ನನ್ನ ಮುಖ ತಿರುಗಿಸಿದರು. ನನ್ನ ಎರಡು ಕಣ್ಣಲ್ಲೂ ಕಣ್ಣೀರ ಧಾರೆ ಹರಿಯುತ್ತಿತ್ತು. ಅದನ್ನು ನೋಡಿ ಸರ್‌ “ಅಯ್ಯೋ ಕಂದಾ…’ ಅಂದರು. ಅಲ್ಲಿಂದ ಹತ್ತನೇ ತರಗತಿಯವರೆಗೂ ಸರ್‌ ನನ್ನನ್ನು ಕಂದ ಅಂತಾನೇ ಕರೀತಿದ್ರು. ಅವರು “ಕಂದಾ’ ಅಂದಾಗ ಒಳಗೊಳಗೇ ಏನೋ ಒಂಥರಾ ಮಾತಲ್ಲಿ ವಿವರಿಸಲಾಗಂಥ ಫೀಲ್‌ ಆಗುತ್ತಿತ್ತು. ನನ್ನ ಸ್ಕೂಲ್‌ ಲೈಫಿನ ಮರೆಯಲಾಗದ ಸಂಗತಿಗಳಲ್ಲಿ ಅದೊಂದು.

– ಸುಮನಾ ಅಮಿತ್‌, ಕೆ.ಆರ್‌. ನಗರ

ಟಾಪ್ ನ್ಯೂಸ್

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

shivamogga news

ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ

ಕೊವಿಡ್‌ 3ನೇ ಡೋಸ್‌ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಶೂಟಿಂಗ್‌ ವೇಳೆ ನಟನ ಗನ್‌ನಿಂದ ಫೈರಿಂಗ್‌; ಸಿನಿಮಾ ಟೋಗ್ರಾಫ‌ರ್‌ ಸಾವು

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

ಎರಡೂ ಡೋಸ್‌ ಲಸಿಕೆ ಪಡೆದವರಿಗಷ್ಟೇ ಹಜ್‌ ಯಾತ್ರೆಗೆ ಅನುಮತಿ

hunasuru news

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

“ಮತಾಂತರ ಮಾಡಿಕೊಳ್ಳಿ, ಇಲ್ಲ ದೇಶ ತೊರೆಯಿರಿ’

dandeli news

ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.